ಅಮುಲ್ ಹಾಲಿನಲ್ಲಿ 98 ಪಟ್ಟು, ಮೊಸರಿನಲ್ಲಿ 2,100 ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳಿವೆ: ವರದಿ

Date:

ಕನ್ನಡಿಗರ ಮೇಲೆ ಹೇರಲು ಉದ್ದೇಶಿಸಿದ್ದ ಗುಜರಾತ್‌ ಮೂಲದ ‘ಅಮುಲ್‌’ ಸಂಸ್ಥೆ ಉತ್ಪನ್ನಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ. ಅಮುಲ್ ಹಾಲು ಮತ್ತು ಮೊಸರು ಉತ್ಪನ್ನಗಳ ಸುರಕ್ಷತೆ ಕುರಿತು ಗಂಭೀರ ಆತಂಕ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ವರದಿಯೊಂದು ಅಮುಲ್ ಹಾಲು ಮತ್ತು ಮೊಸರು ಬಳಸಲು ಜನರು ಭಯಪಡುವಂತೆ ಮಾಡಿದೆ.

- Advertisement -

‘ಲ್ಯಾಬ್ ಟೆಸ್ಟಿಂಗ್ ಪ್ಲಾಟ್‌ಫಾರ್ಮ್ ಟ್ರಸ್ಟಿಫೈಡ್’ ಎಂಬ ಸ್ವತಂತ್ರ ಸಂಸ್ಥೆಯು ಅಮುಲ್ ಹಾಲು ಮತ್ತು ಮೊಸರನ್ನು ಬ್ಲೈಂಡ್ ಟೆಸ್ಟ್‌ಗೆ ಒಳಪಡಿಸಿದೆ. ಈ ವೇಳೆ, ಅಮುಲ್ ಪೌಚ್ ಹಾಲಿನಲ್ಲಿ ‘ಕಾಲಿಫಾರ್ಮ್ ಬ್ಯಾಕ್ಟೀರಿಯಾ’ಗಳ ಸಂಖ್ಯೆ ‘ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ’ (FSSAI) ನಿಗದಿಪಡಿಸಿದ ಮಿತಿಗಿಂತ 98 ಪಟ್ಟು ಹೆಚ್ಚು ಇದೆ. ಅಂತೆಯೇ, ಅಮುಲ್ ಮಸ್ತಿ ಮೊಸರಿನಲ್ಲಿಯೂ 2,100 ಪಟ್ಟು ಹೆಚ್ಚಿವೆ ಎಂಬುದು ಕಂಡುಬಂದಿದೆ ಎಂದು ಹೇಳಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

FSSAI ಮಾನದಂಡಗಳ ಪ್ರಕಾರ, ಪ್ರತಿ ಮಿಲಿ ಲೀಟರ್‌ ಹಾಲಿನಲ್ಲಿ 10 ‘ಕಾಲಿಫಾರ್ಮ್ ಬ್ಯಾಕ್ಟೀರಿಯಾ’ ಪ್ರಮಾಣವು 10 CFU (ಕಾಲೊನಿ ಫಾರ್ಮಿಂಗ್ ಯೂನಿಟ್) ಮಾತ್ರವೇ ಇರಬೇಕು. ಅದಕ್ಕಿಂತ ಹೆಚ್ಚು ಇರಬಾರದು. ಆದರೆ, ಅಮುಲ್ ತಾಜಾ ಮತ್ತು ಅಮುಲ್ ಗೋಲ್ಡ್ ಪೌಚ್ ಹಾಲಿನಲ್ಲಿ ಪ್ರತಿ ಮಿಲಿ ಲೀಟರ್‌ಗೆ ‘ಕಾಲಿಫಾರ್ಮ್ ಬ್ಯಾಕ್ಟೀರಿಯಾ’ ಪ್ರಮಾಣವು 980 CFUರಷ್ಟಿದೆ. ಇದು, ನಿಗದಿಗಿಂತ ಬರೋಬ್ಬರಿ 98 ಪಟ್ಟು ಹೆಚ್ಚಿದೆ ಎಂದು ತಿಳಿದುಬಂದಿದೆ.

ಅಂತೆಯೇ, ಪ್ರತಿ ಗ್ರಾಂ ಮೊಸರಿನಲ್ಲಿ ‘ಕಾಲಿಫಾರ್ಮ್ ಬ್ಯಾಕ್ಟೀರಿಯಾ’ ಪ್ರಮಾಣವು 10 CFUರಷ್ಟಿರಬೇಕು. ಆದರೆ, ಅಮುಲ್ ಮಸ್ತಿ ಮೊಸರಿನಲ್ಲಿ ಪ್ರತಿ ಗ್ರಾಂಗೆ ‘ಕಾಲಿಫಾರ್ಮ್ ಬ್ಯಾಕ್ಟೀರಿಯಾ’ ಪ್ರಮಾಣ 21,000 CFUಗೆ ತಲುಪಿದೆ. ಅಂದರೆ, 2100 ಪಟ್ಟು ಹೆಚ್ಚಾಗಿದೆ. ಇದಲ್ಲದೆ ಯೀಸ್ಟ್ ಮತ್ತು ಮೋಲ್ಡ್‌ ಮೊಸರಿನಲ್ಲಿ 60 ಪಟ್ಟು ಹೆಚ್ಚು ಇದೆ ಎಂಬುದು ಪರೀಕ್ಷೆಯಲ್ಲಿ ಕಂಡುಬಂದಿರುವುದಾಗಿ ವರದಿಯಾಗಿದೆ.

ಗಮನಾರ್ಹವಾಗಿ, ಕಾಲಿಫಾರ್ಮ್ ಬ್ಯಾಕ್ಟೀರಿಯಾ ಮನುಷ್ಯರು ಮತ್ತು ಪ್ರಾಣಿಗಳ ಕರುಳಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಬ್ಯಾಕ್ಟೀರಿಯಾಗಳ ಗುಂಪಾಗಿದೆ. ಇವು ಸ್ವತಃ ತೀವ್ರ ಕಾಯಿಲೆಗಳನ್ನು ಉಂಟುಮಾಡದಿದ್ದರೂ, ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ ಮಲದಿಂದ ಮಾಲಿನ್ಯ (ಫೀಕಲ್ ಕಂಟ್ಯಾಮಿನೇಷನ್) ಆಗಿರುವ ಸಾಧ್ಯತೆಯನ್ನು ಸೂಚಿಸುತ್ತದೆ.

ಪ್ಯಾಕ್ ಮಾಡಲಾದ ಹಾಲಿನಲ್ಲಿ ಈ ಬ್ಯಾಕ್ಟೀರಿಯಾಗಳ ಸಂಖ್ಯೆ ಕಡಿಮೆ ಇರಬೇಕು. ಏಕೆಂದರೆ, ಪಾರ್ಶ್ವೀಕರಣದ ವೇಳೆ ಉಷ್ಣ ಚಿಕಿತ್ಸೆಯಿಂದಾಗಿ ಈ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಒಂದು ವೇಳೆ, ಈ ಬ್ಯಾಕ್ಟೀಕರಿಯಾಗಳ ಸಂಖ್ಯೆ ಹೆಚ್ಚಿದ್ದರೆ, ಪೌಚ್ ಪ್ಯಾಕೇಜಿಂಗ್, ಹ್ಯಾಂಡಲಿಂಗ್ ಅಥವಾ ಪಾಸ್ಚರೈಸೇಷನ್ ಪ್ರಕ್ರಿಯೆಯಲ್ಲಿ ಸಮಸ್ಯೆಗಳಾಗಿರುತ್ತವೆ. ಅಥವಾ, ಪ್ಯಾಕೇಜಿಂಗ್‌ ಬಳಿಕ, ಹಾಲು ಅಥವಾ ಮೊಸಲು ಮಲಿನಗೊಂಡಿರುತ್ತವೆ ಎಂದು ಸೂಚಿಸಿದೆ.

ಕಾಲಿಫಾರ್ಮ್ ಬ್ಯಾಕ್ಟೀರಿಯಾ ಸಂಖ್ಯೆ ಹೆಚ್ಚಿದ್ದಲ್ಲಿ, ಇತರ ಹಾನಿಕರ ಬ್ಯಾಕ್ಟೀರಿಯಾ ಅಥವಾ ಪ್ಯಾಥೋಜನ್‌ಗಳು (ಸಾಲ್ಮೊನೆಲ್ಲಾ, ಶಿಗೆಲ್ಲಾ ರೀತಿಯವರು) ಹೆಚ್ಚಾಗಬಹುದು ಎಂಬ ಭಯ ಉಂಟಾಗುತ್ತದೆ. ಅಲ್ಲದೆ, ಇದರಿಂದಾಗಿ, ಹೊಟ್ಟೆ ಉಬ್ಬರ, ತೀವ್ರ ಡೈರಿಯಾ, ವಾಂತಿ, ತಲೆನೋವು, ಜ್ವರ ಹಾಗೂ ಫುಡ್‌ ಪಾಯಿಸನ್‌ ಲಕ್ಷಣಗಳು ಕಂಡುಬರುತ್ತವೆ. ಮಕ್ಕಳು, ವೃದ್ಧರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರನ್ನು ತೀವ್ರವಾಗಿ ಬಾಧಿಸುತ್ತದೆ. ದೀರ್ಘಕಾಲದಲ್ಲಿ ಕಿಡ್ನಿ ಸಮಸ್ಯೆಗಳು ಅಥವಾ ಇತರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದರೆ ಇದು ಎಲ್ಲರಲ್ಲೂ ತೀವ್ರ ಕಾಯಿಲೆ ಉಂಟುಮಾಡುವುದಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಆದಾಗ್ಯು, ಅಮುಲ್‌ನ ಟೆಟ್ರಾ ಪ್ಯಾಕ್ (UHT) ಹಾಲು ಮತ್ತು ಕಪ್ ದಹಿ ಸುರಕ್ಷಿತವಾಗಿವೆ ಎಂದು ಟ್ರಸ್ಟಿಫೈಡ್ ವರದಿ ಹೇಳಿದೆ. ಹಾಲು ಮತ್ತು ಮೊಸರಿನಲ್ಲಿ ಪ್ರಯೋಗಾಲಯ ಪರೀಕ್ಷೆಗಳನ್ನು ‘ಟ್ರಸ್ಟಿಫೈಡ್’ ಸಂಸ್ಥೆಯು ಬ್ಲೈಂಡ್ ವಿಧಾನದಲ್ಲಿ ನಡೆಸಿದ್ದು, ಬ್ರ್ಯಾಂಡ್ ಹೆಸರುಗಳನ್ನು ಮರೆಮಾಚಿ ಮಾಡಲಾಗಿತ್ತು ಎಂದು ಹೇಳಿಕೊಂಡಿದೆ.

ತಮ್ಮ ಉತ್ಪನ್ನಗಳ ಮೇಲಿನ ಆರೋಪವನ್ನು ಅಮುಲ್ ಕಂಪನಿ ತಿರಸ್ಕರಿಸಿದೆ. ತಮ್ಮ ಉತ್ಪನ್ನಗಳು 50ಕ್ಕೂ ಹೆಚ್ಚು ಕಟ್ಟುನಿಟ್ಟಾದ ಗುಣಮಟ್ಟ ಟೆಸ್ಟ್‌ಗಳನ್ನು ಪಾಸ್ ಮಾಡಿವೆ. FSSAI ಮಾನದಂಡಗಳನ್ನು ಪೂರೈಸುತ್ತವೆ ಎಂದು ಹೇಳಿಕೊಂಡಿದೆ. FSSAI ಇನ್ನೂ ಅಧಿಕೃತ ತನಿಖೆ ಅಥವಾ ದೃಢೀಕರಣ ನೀಡಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಖಿನ್ನತೆ, ಆತ್ಮಹತ್ಯೆಯ ಆಲೋಚನೆ: NTF ವರದಿ ಹೊರತಂದ ಆಘಾತಕಾರಿ ಸತ್ಯ!

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಕುರಿತು ಸುಪ್ರೀಂ ಕೋರ್ಟ್...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು...

ಪರ್ವತದಷ್ಟು ಹಗರಣ, ಸಾಸಿವೆಯಷ್ಟು ದಂಡ: ₹1.48 ಕೋಟಿಗೆ ಅದಾನಿ ಸಮೂಹದ ಅಕ್ರಮಗಳಿಗೆ ಸೆಬಿ ‘ಕ್ಲೀನ್ ಚಿಟ್’

ಅದಾನಿ ಸಮೂಹದ ಬೃಹತ್ ಆರ್ಥಿಕ ಅವ್ಯವಹಾರಗಳ ಆರೋಪಗಳೆದುರು ಭಾರತದ ಷೇರುಪೇಟೆ ನಿಯಂತ್ರಕ...