ಡಾಬರ್ ಉತ್ಪನ್ನಗಳು 100% ಪರಿಶುದ್ಧವೇ? FSSAI ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆ!

Date:

ತಮ್ಮ ಉತ್ಪನ್ನಗಳ ಮೇಲೆ ‘100% ಪರಿಶುದ್ಧ’, ‘100% ನೈಸರ್ಗಿಕ’ (100% Natural), 100% ಆರ್ಗಾನಿಕ್ (100% Organic) ಹಾಗೂ ‘100% ಪರಿಶುದ್ಧತೆಯ ಖಾತರಿ’ ಎಂಬ ಲೇಬಲ್‌ಗಳನ್ನು ತಕ್ಷಣವೇ ತೆಗೆಯುವಂತೆ ‘ಡಾಬರ್ ಇಂಡಿಯಾ’ ಸಂಸ್ಥೆಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಆದೇಶಿಸಿತ್ತು. ಆದರೆ, ಎಫ್‌ಎಸ್‌ಎಸ್‌ಎಐ ಹೊರಡಿಸಿದ್ದ ಈ ಆದೇಶಕ್ಕೆ  ದೆಹಲಿ ಹೈಕೋರ್ಟ್ ತಡೆ ನೀಡಿದೆ. ಡಾಬರ್ ಸಂಸ್ಥೆಗೆ ದೊಡ್ಡ ಮಧ್ಯಂತರ ರಿಲೀಫ್‌ ಕೊಟ್ಟಿದೆ.

- Advertisement -

ಎಫ್‌ಎಸ್‌ಎಸ್‌ಎಐ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಡಾಬರ್ ಸಂಸ್ಥೆಯು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಡಾಬರ್ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಮಿತ್ ಮಹಾಜನ್ ಅವರಿದ್ದ ಪೀಠ ವಿಚಾರಣೆ ನಡೆಸಿದೆ. “ಡಾಬರ್ ಸಂಸ್ಥೆಯು ಕಳೆದ ಹಲವು ದಶಕಗಳಿಂದಲೂ ಈ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾ ಬಂದಿದೆ. ಆದರೆ, ಪ್ರಾಧಿಕಾರವು ಸಂಸ್ಥೆಗೆ ತನ್ನ ವಾದವನ್ನು ಮಂಡಿಸಲು ಯಾವುದೇ ಅವಕಾಶ ಅಥವಾ ವಿಚಾರಣೆಯ ಸಮಯವನ್ನು ನೀಡದೆ ಏಕಪಕ್ಷೀಯವಾಗಿ ನಿಷೇಧ ಹೇರಿರುವುದು ಪ್ರಾಥಮಿಕ ದೃಷ್ಟಿಯಲ್ಲಿ ಸರಿಯಲ್ಲ” ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಜರ್ಮನಿಯಲ್ಲಿ ತೀವ್ರಗಾಮಿಗಳ ಅಬ್ಬರ: ದಿಕ್ಕುತಪ್ಪಿದ ಮಧ್ಯಮಾರ್ಗ, ಮರುಜೀವ ಪಡೆಯುತ್ತಿದೆಯೇ...

ಜರ್ಮನಿಯಲ್ಲಿ ತೀವ್ರ ಬಲಪಂಥೀಯರ ಈ ಮಟ್ಟದ ಏರಿಕೆ ಕೇವಲ ರಾಜಕೀಯ ಪೈಪೋಟಿಯಲ್ಲ, ಬದಲಾಗಿ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಜರ್ಮನಿ ಮತ್ತು ಬಲಪಂಥ ಎಂದಾಕ್ಷಣ ಇಡೀ ವಿಶ್ವಕ್ಕೆ ಅಡಾಲ್ಫ್ ಹಿಟ್ಲರ್ ಮತ್ತು ಆತನ ನಾಜಿ...

ಸೌಜನ್ಯಳನ್ನು ಕೊಂದವರು ಯಾರು? ಹೊಸ ತನಿಖೆಯಲ್ಲಿ ಉತ್ತರ ಸಿಗುವ...

14 ವರ್ಷಗಳು... 3 ತನಿಖಾ ಸಂಸ್ಥೆಗಳಾದ ಪೊಲೀಸ್, ಸಿಐಡಿ, ಸಿಬಿಐ ತನಿಖೆಗಳು... ಅಮಾಯಕನಾದ ಒಬ್ಬನೇ ಆರೋಪಿಯ ಸುತ್ತಲಿನ ತನಿಖೆ-... ಕೊನೆಗೆ ಆತ ನಿರಪರಾಧಿ ಎಂದು ಸಾಬೀತು, ಆತನ ಖುಲಾಸೆ. ಹಾಗಾದರೆ 17 ವರ್ಷದ...

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಚಾರಣೆ ವೇಳೆ ಎಫ್‌ಎಸ್‌ಎಸ್‌ಎಐ ಆದೇಶವನ್ನು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರದ ಪರ ವಕೀಲರು, “ಡಾಬರ್ ಸಂಸ್ಥೆಗೆ ಈ ಹಿಂದೆ ಹಲವು ಬಾರಿ ಸುಧಾರಣಾ ನೋಟಿಸ್‌ಗಳು ಮತ್ತು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿತ್ತು. ಆಹಾರ ಉತ್ಪನ್ನಗಳ ಮೇಲೆ ‘100% ಪರಿಶುದ್ಧತೆ’ ಎಂದು ಮುದ್ರಿಸುವುದು ಗ್ರಾಹಕರನ್ನು ಸ್ಪಷ್ಟವಾಗಿ ದಾರಿತಪ್ಪಿಸುವ ತಂತ್ರವಾಗಿದೆ. ಈ ಹಂತದಲ್ಲಿ ಮಧ್ಯಂತರ ಪರಿಹಾರ ನೀಡಬಾರದು” ಎಂದು ವಾದಿಸಿದರು.

ಆದರೆ, ಕೇಂದ್ರ ಸರ್ಕಾರದ ವಾದವನ್ನು ತಿರಸ್ಕರಿಸಿದ ಹೈಕೋರ್ಟ್, “ದಶಕಗಳಿಂದ ಮಾರಾಟವಾಗುತ್ತಿರುವ ಉತ್ಪನ್ನಗಳನ್ನು ದಿಢೀರನೆ ತಡೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದು, ಎರಡು ವಾರಗಳ ನಂತರ ನಡೆಯಲಿರುವ ಮುಂದಿನ ವಿಚಾರಣೆಯವರೆಗೆ ಎಫ್‌ಎಸ್‌ಎಸ್‌ಎಐ ಆದೇಶದ ಜಾರಿಗೆ ತಡೆ ನೀಡಿದೆ.

ಎಫ್‌ಎಸ್‌ಎಸ್‌ಎಐ ಪ್ರಕಾರ, ಡಾಬರ್ ಜೇನುತುಪ್ಪ, ಸುಂದರಬನ್ಸ್ ಜೇನುತುಪ್ಪ, ವರ್ಜಿನ್ ಕೊಬ್ಬರಿ ಎಣ್ಣೆ, ಹಸುವಿನ ತುಪ್ಪ, ಹಿಮಾಲಯನ್ ಆ್ಯಪಲ್ ಸೈಡರ್ ವಿನೆಗರ್, ರಿಯಲ್ ಆಕ್ಟಿವ್ ಎಳೆನೀರು, ತೆಂಗಿನ ಹಾಲು ಹಾಗೂ ಎಳ್ಳಿನ ಎಣ್ಣೆಯಂತಹ ಉತ್ಪನ್ನಗಳ ಮೇಲೆ ‘100% ಶುದ್ಧ, ನೈಸರ್ಗಿಕ’ ಎಂದು ಹಕ್ಕು ಸಾಧಿಸುವುದು ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಜಾಹೀರಾತು ಮತ್ತು ಹಕ್ಕುಗಳು) ನಿಯಮಾವಳಿಗಳು-2018’ಕ್ಕೆ ವಿರುದ್ಧವಾಗಿದೆ. ಇಂತಹ ಹೇಳಿಕೆಗಳು ಅಸ್ಪಷ್ಟ, ಪರಿಶೀಲಿಸಲಾಗದ ಹಾಗೂ ಗ್ರಾಹಕರನ್ನು ದಾರಿತಪ್ಪಿಸುವ ಸಾಧ್ಯತೆಯನ್ನು ಹೊಂದಿರುತ್ತವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಬರಗಾಲ ಪ್ಯಾಕೇಜ್ 1000 ಕೋಟಿ ರೂ. ಘೋಷಣೆ ಸೇರಿ ಇತರೆ ಬೇಡಿಕೆ ಈಡೇರಿಕೆಗೆ ಕೆಪಿಆರ್‌ಎಸ್‌ ಆಗ್ರಹ

ರಾಜ್ಯ ಸರ್ಕಾರ ವಿಶೇಷ ಅಧಿವೇಶನದಲ್ಲಿ ಕಲಬುರಗಿ ಸಂಪೂರ್ಣ ಬರ ಪೀಡಿತ ಪ್ರದೇಶವೆಂದು...

ಮರಾಠಾ ಸಮುದಾಯದ ಸಮಗ್ರ ಸಮೀಕ್ಷೆಗೆ ಡಿಜಿಟಲ್ ಆ್ಯಪ್

ಕರ್ನಾಟಕದಲ್ಲಿರುವ ಮರಾಠಾ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಿತಿಗತಿಗಳನ್ನು...

ಬಿಡದಿ ಟೌನ್‌ಶಿಪ್ ವಿರುದ್ಧ ಹೋರಾಟ: ಉಪವಾಸನಿರತ ಮೂವರು ರೈತರು ತೀವ್ರ ಅಸ್ವಸ್ಥ

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ – ಬಿಡದಿ ಟೌನ್‌ಶಿಪ್‌) ಯೋಜನೆ...

ದೆಹಲಿಯಲ್ಲಿ ನಿಲ್ಲದ ಅತ್ಯಾಚಾರ ಕೃತ್ಯ; ಪೊಲೀಸ್‌ ಹೆಸರಿನಲ್ಲಿ ಬಾಲಕಿ ಮೇಲೆ ಮೂವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು/ಹೆಣ್ಣು ಮಕ್ಕಳ ಮೇಲಿನ ಅಪರಾಧಗಳ ಸರಣಿ ಮುಂದುವರಿದಿದೆ....