ಬಂಗಾಳ ಗೆಲ್ಲಲು ಬಿಜೆಪಿ ಸುರಿದಿದ್ದು ₹286 ಕೋಟಿ; 4 ಚುನಾವಣೆಗಳ ಒಟ್ಟು ವೆಚ್ಚಕ್ಕಿಂತಲೂ ಹೆಚ್ಚು!

Date:

ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಿಗೆ ಬಿಜೆಪಿ ಒಟ್ಟು ₹529.38 ಕೋಟಿ ಖರ್ಚು ಮಾಡಿದೆ. ಚುನಾವಣಾ ಆಯೋಗಕ್ಕೆ (ECI) ಬಿಜೆಪಿ ಸಲ್ಲಿಸಿರುವ ಚುನಾವಣಾ ವೆಚ್ಚದ ವಿವರಗಳಿಂದ ಈ ಮಾಹಿತಿ ಬಹಿರಂಗವಾಗಿದೆ.

- Advertisement -

ಈ ಪೈಕಿ ₹286 ಕೋಟಿಗೂ ಹೆಚ್ಚು ಹಣವನ್ನು ಪಶ್ಚಿಮ ಬಂಗಾಳದಲ್ಲೇ ಬಿಜೆಪಿ ಖರ್ಚು ಮಾಡಿದೆ. ಇದು ಪಕ್ಷವು ಅಸ್ಸಾಂ, ಕೇರಳ, ತಮಿಳುನಾಡು ಹಾಗೂ ಪುದುಚೇರಿ ಸೇರಿದಂತೆ ಮೂರು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಖರ್ಚು ಮಾಡಿದ ಒಟ್ಟು ಮೊತ್ತಕ್ಕಿಂತಲೂ ಹೆಚ್ಚಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೆ.23 ‘ಭೀಮ ಸಂಕಲ್ಪ ದಿನ’: ಡಾ ಬಿ ಆರ್...

1917ರ ಸೆಪ್ಟೆಂಬರ್ 23ರಂದು ವಡೋದರದ ಆಲದ ಮರದ ಕೆಳಗೆ ಕುಳಿತಿದ್ದ ಯುವ ಅಂಬೇಡ್ಕರ್ ಅವರ ಬಳಿ ಅಧಿಕಾರವಿರಲಿಲ್ಲ, ದೊಡ್ಡ ಸಂಘಟನೆಯಿರಲಿಲ್ಲ. ಆದರೆ ಅನ್ಯಾಯವನ್ನು ಒಪ್ಪಿಕೊಳ್ಳದ ಮನಸ್ಸು ಮತ್ತು ಸಮಾಜವನ್ನು ಬದಲಿಸಬೇಕೆಂಬ ದೃಢ ಸಂಕಲ್ಪವಿತ್ತು....

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ...

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ ನಾಶ ಮಾಡಿ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ...

ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ...

ಉತ್ತರ ಪ್ರದೇಶದ ಯುವಜನತೆಯ (Gen Z) ಅಸಮಾಧಾನ, ನಿರುದ್ಯೋಗ ಸಮಸ್ಯೆ ಮತ್ತು ಬದಲಾಗುತ್ತಿರುವ ಜಾತಿ ಸಮೀಕರಣಗಳು ತಮಗೆ ಪೂರಕವಾಗಿವೆ ಎಂಬುದನ್ನು ಅಖಿಲೇಶ್ ಯಾದವ್ ಅರಿತಿದ್ದಾರೆ. ತಮ್ಮ ಪಕ್ಷ ಕೇವಲ "ಮುಸ್ಲಿಂ ಮತ್ತು ಯಾದವರ...

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ₹217.16 ಕೋಟಿಯನ್ನು ಸಾಮಾನ್ಯ ಪಕ್ಷದ ಪ್ರಚಾರಕ್ಕೆ ಹಾಗೂ ₹69.83 ಕೋಟಿಯನ್ನು ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಖರ್ಚು ಮಾಡಿದೆ. ಇದರಲ್ಲಿ ₹58.80 ಕೋಟಿಯನ್ನು ಅಭ್ಯರ್ಥಿಗಳಿಗೆ ನೀಡಲಾಗಿದೆ.

ಇನ್ನು ಅಸ್ಸಾಂನಲ್ಲಿ ₹96.26 ಕೋಟಿ, ಕೇರಳದಲ್ಲಿ ₹82.67 ಕೋಟಿ, ತಮಿಳುನಾಡಿನಲ್ಲಿ ₹51.56 ಕೋಟಿ ಹಾಗೂ ಪುದುಚೇರಿಯಲ್ಲಿ ₹11.89 ಕೋಟಿ ಖರ್ಚು ಮಾಡಿದೆ. ಈ ನಾಲ್ಕು ಪ್ರದೇಶಗಳ ಒಟ್ಟು ವೆಚ್ಚ ₹242.38 ಕೋಟಿಯಾಗಿದ್ದು, ಇದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಖರ್ಚು ಮಾಡಿದ ಮೊತ್ತಕ್ಕಿಂತಲೂ ಕಡಿಮೆಯಾಗಿದೆ.

ಚುನಾವಣಾ ಅವಧಿಯ ಸಂದರ್ಭದಲ್ಲಿ ಬಿಜೆಪಿಗೆ ₹1,494 ಕೋಟಿ ಆದಾಯ ಬಂದಿದ್ದು, ಚುನಾವಣಾ ಪ್ರಕ್ರಿಯೆ ಮುಕ್ತಾಯದ ವೇಳೆಗೆ ಪಕ್ಷದ ಬ್ಯಾಂಕ್ ಖಾತೆ ಹಾಗೂ ಕೈಯಲ್ಲಿದ್ದ ನಗದು ಸೇರಿ ₹7,689.06 ಕೋಟಿ ಮೊತ್ತದ ಶಿಲ್ಕು ಇತ್ತು ಎಂದು ವರದಿ ತಿಳಿಸಿದೆ.

ಪ್ರಸ್ತುತ ಚುನಾವಣೆಯಲ್ಲಿ ಅಭ್ಯರ್ಥಿಗಳು ಖರ್ಚು ಮಾಡಬಹುದಾದ ಮೊತ್ತಕ್ಕೆ ಮಿತಿ ಇದೆ. ಆದರೆ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಖರ್ಚು ಮಾಡಬಹುದಾದ ಮೊತ್ತಕ್ಕೆ ಯಾವುದೇ ಗರಿಷ್ಠ ಮಿತಿ ಇಲ್ಲ.

ಇದನ್ನೂ ಓದಿ: ಆಕೃತಿ ಚೌಧರಿ ಪ್ರಕರಣ: IAS ಅಧಿಕಾರಿ ಮೇಧಾರೂಪಂ ವೇತನದಿಂದ 5 ಲಕ್ಷ ರೂ. ದಂಡ ವಸೂಲಿಗೆ ಸುಪ್ರೀಂ ತಡೆಯಾಜ್ಞೆ

ಚುನಾವಣೆ ಮುಗಿದ ಬಳಿಕ ರಾಜಕೀಯ ಪಕ್ಷಗಳು ಪ್ರಯಾಣ, ರ‍್ಯಾಲಿಗಳು, ಜಾಹೀರಾತುಗಳು ಹಾಗೂ ಪ್ರಚಾರ ಸಾಮಗ್ರಿಗಳಿಗೆ ಮಾಡಿದ ವೆಚ್ಚ ಸೇರಿದಂತೆ ಚುನಾವಣಾ ಖರ್ಚಿನ ವಿವರವಾದ ಲೆಕ್ಕವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ. 2026ರ ವಿಧಾನಸಭಾ ಚುನಾವಣೆಯ ಬಳಿಕ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ.

ಈ ನಡುವೆ, ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಬಿಜೆಪಿಯ ನಿವ್ವಳ ಆದಾಯವು ಕಾಂಗ್ರೆಸ್‌ಗಿಂತ ಏಳು ಪಟ್ಟು ಹೆಚ್ಚಾಗಿತ್ತು ಎಂದು ದಿ ವೈರ್ ಈ ಹಿಂದೆ ವರದಿ ಮಾಡಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶರಣಾಗುವ ಪ್ರಶ್ನೆಯೇ ಇಲ್ಲ; ಟ್ರಂಪ್‌ನ ‘ಸರ್ವನಾಶ’ದ ಬೆದರಿಕೆಗೆ ಜಗ್ಗದೆ ಎದೆ ಸೆಟೆಸಿದ ಇರಾನ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ "ಇರಾನ್ ಅನ್ನು ಸಂಪೂರ್ಣವಾಗಿ ಸರ್ವನಾಶ ಮಾಡುತ್ತೇವೆ"...

ವಿಜಯಪುರ | ನವೋದ್ಯಮ ಪರಿಸರ ಬಲಪಡಿಸಲು ಕೆಡಿಇಎಂ ಬೆಂಬಲ

ವಿಜಯಪುರ ಜಿಲ್ಲೆಯ ಸ್ಟಾರ್ಟ್‌ಅಪ್‌ಗಳು, ವಿದ್ಯಾರ್ಥಿ ನವೋದ್ಯಮಿಗಳು ಹಾಗೂ ಉದ್ಯಮಿಗಳಿಗೆ ಉತ್ತೇಜನ ನೀಡುತ್ತಿರುವ...

ಗರ್ಬಾ ವೇಳೆ 4.5 ಲಕ್ಷ ಹಿಂದೂ ಯುವತಿಯರು ಪರಾರಿ ಎಂದ ಬಿಜೆಪಿ ಶಾಸಕಿ; ಉಷಾ ಠಾಕೂರ್ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು

ನವರಾತ್ರಿ ಆಚರಣೆಯ ಭಾಗವಾದ ಗರ್ಬಾ ನೃತ್ಯೋತ್ಸವದ ಸಂದರ್ಭದಲ್ಲಿ ಪ್ರತಿವರ್ಷ ದೇಶದಲ್ಲಿ ಸುಮಾರು...

4 ರಾಜ್ಯ, 1 ಕೇಂದ್ರಾಡಳಿತ ಪ್ರದೇಶ ಚುನಾವಣೆ: ಬಿಜೆಪಿಯಿಂದ ₹529 ಕೋಟಿ ವೆಚ್ಚ, ಬಂಗಾಳದಲ್ಲೇ ಶೇ.54ರಷ್ಟು ಖರ್ಚು!

ಕಳೆದ ಚುನಾವಣಾ ಚಕ್ರದಲ್ಲಿ ನಡೆದ ನಾಲ್ಕು ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶದ...