ಚಹಾ, ಬಿಸ್ಕತ್ತುಗಳೊಂದಿಗೆ ಕಾಯುತ್ತಿದ್ದೇನೆ; ಇ.ಡಿ ಬಂಧನದ ಬಗ್ಗೆ ರಾಹುಲ್ ಗಾಂಧಿ ಸುಳಿವು

Date:

ನನ್ನನ್ನು ಬಂಧಿಸಲು ಬರುವ ಇ.ಡಿ ಅಧಿಕಾರಿಗಳಿಗೆ ನಾನು ಚಹಾ ಮತ್ತು ಬಿಸ್ಕತ್ ಇಟ್ಟುಕೊಂಡು ತೆರೆದ ತೋಳುಗಳೊಂದಿಗೆ ಸ್ವಾಗತಿಸಲು ಕಾಯುತ್ತಿದ್ದೇನೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.

- Advertisement -

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ರಾಹುಲ್ ಗಾಂಧಿ, ಸಂಸತ್ತಿನಲ್ಲಿ ‘ಚಕ್ರವ್ಯೂಹ’ದ ಹೇಳಿಕೆ ನೀಡಿದ ನಂತರ ತಮ್ಮ ವಿರುದ್ಧ ಇ.ಡಿ(ಜಾರಿ ನಿರ್ದೇಶನಾಲಯ) ದಾಳಿ ನಡೆಸಲು ಯೋಜನೆ ರೂಪಿಸಿದೆ. ಸ್ಪಷ್ಟವಾಗಿ ಹೇಳುತ್ತೇನೆ, ಇಬ್ಬರಲ್ಲಿ ಒಬ್ಬರಿಗೆ ನನ್ನ ಚಕ್ರವ್ಯೂಹದ ಭಾಷಣ ಇಷ್ಟವಾಗಿಲ್ಲ. ನನ್ನ ವಿರುದ್ಧ ಇ.ಡಿ ದಾಳಿ ನಡೆಸಲು ಯೋಜಿಸಲಾಗುತ್ತಿದೆ ಎಂದು ಇಡಿ ಒಳಗಿನವರೇ ನನಗೆ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಕುರುಕ್ಷೇತ್ರದಲ್ಲಿ ಅಭಿಮನ್ಯುವನ್ನು ಮಣಿಸಲು ಕೌರವರು ‘ಚಕ್ರವ್ಯೂಹ’ ನಿರ್ಮಿಸಿದ ಹಾಗೆ ಬಿಜೆಪಿಯು ದೇಶದಲ್ಲಿ ರೈತರು ಮತ್ತು ಯುವಕರ ಸುತ್ತ ‘ಚಕ್ರವ್ಯೂಹ’ ಹೆಣೆದು, ಭಯದ ವಾತಾವರಣ ನಿರ್ಮಿಸಿದೆ ಎಂದು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಟೀಕಿಸಿದ್ದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಯನಾಡಿಗಾದದ್ದು ನಮ್ಮಲ್ಲೂ ಆಗಬಹುದಲ್ಲವೇ?

ಲೋಕಸಭೆಯಲ್ಲಿ ಸೋಮವಾರ(ಜುಲೈ 29) ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಅವರು, ‘ರೈತರು, ಕಾರ್ಮಿಕರು ಮಾತ್ರವಲ್ಲದೆ ಬಿಜೆಪಿಯ ಸಂಸದರು ಕೂಡಾ ಈ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ’ ಎಂದಿದ್ದರು.

ಮಹಾಭಾರತದ ಸಂದರ್ಭವನ್ನು ಉಲ್ಲೇಖಿಸುತ್ತಾ ರಾಹುಲ್ ಅವರು, ‘ಸಾವಿರಾರು ವರ್ಷಗಳ ಹಿಂದೆ ಹರಿಯಾಣದ ಕುರುಕ್ಷೇತ್ರದಲ್ಲಿ ಕೌರವರು ‘ಚಕ್ರವ್ಯೂಹ‘ ನಿರ್ಮಿಸಿ ಅಭಿಮನ್ಯುವನ್ನು ಕೊಂದರು. ‘ಚಕ್ರವ್ಯೂಹ’ವನ್ನು ‘ಪದ್ಮವ್ಯೂಹ’ ಎಂದೂ ಕರೆಯುತ್ತಾರೆ. ಅದು ಕಮಲದಂತೆ (ಬಿಜೆಪಿಯ ಚಿಹ್ನೆ) ಬಹು-ಹಂತದ ರಚನೆಯಾಗಿದೆ’ ಎಂದು ಹೇಳಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಜಾ, ಕ್ಷಮೆ, ಮರುನೇಮಕ: ಸೋದರಳಿಯ ಆಕಾಶ್ ಆನಂದ್’ಗೆ ಮೂರನೇ ಬಾರಿಗೆ ಮಣೆಹಾಕಿದ ಮಾಯಾವತಿ

ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ರಾಷ್ಟ್ರೀಯ ಸಂಚಾಲಕ ಹುದ್ದೆಯಿಂದ ಸೋದರಳಿಯ ಆಕಾಶ್...

SIR ನಲ್ಲಿ ದೊಡ್ಡ ಪ್ರಮಾಣದ Form 7 ಅರ್ಜಿಗಳ ಸಲ್ಲಿಕೆ  ಆರೋಪ; ಕ್ರಮಕ್ಕೆ ತೆಲಂಗಾಣ ಚುನಾವಣಾ ಆಯುಕ್ತರ ಆದೇಶ

ಹೈದರಾಬಾದ್: ಪ್ರಸ್ತುತ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ  ದೊಡ್ಡ ಪ್ರಮಾಣದಲ್ಲಿ ನಕಲಿ Form...

Form 6 ಬದಲಾಯಿಸಿದ್ದು ಯಾರು, ದಾಖಲೆ ಕೊಡಿ; ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಹೊಸ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಬಳಸುವ Form 6ನಲ್ಲಿ...

ಬಂಗಾಳ SIR | ನೋಟಿಸ್ ನೀಡಲು, ಹೆಸರು ಮರು ಸೇರಿಸಲು ಸಾಧ್ಯವಿಲ್ಲ: EC ಪೋರ್ಟಲ್ ವಿರುದ್ಧ ನ್ಯಾಯಾಧೀಶರ ದೂರು

ಪಶ್ಚಿಮ ಬಂಗಾಳದಲ್ಲಿ SIR ವೇಳೆ ಮತದಾರರ ಪಟ್ಟಿಯಿಂದ ಹೊರಗಿಡಲಾದವರ ಮೇಲ್ಮನವಿಗಳ ವಿಚಾರಣೆ...