ದೇಶದ ಮೂಲ ಸೌಕರ್ಯ ಅದಾನಿ ಸಮೂಹದ ಕೈಲಿದೆಯೇ ಅಥವಾ ಚೀನಾ ಕೈಲಿದೆಯೇ: ಕಾಂಗ್ರೆಸ್ ಪ್ರಶ್ನೆ

Date:

ಉದ್ಯಮಿ ಅದಾನಿಗೆ ಸಂಬಂಧಿಸಿ ವಿಪಕ್ಷಗಳು ಮತ್ತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿವೆ. ಈ ಬಾರಿ ಕೇಂದ್ರ ಸರ್ಕಾರ ದೇಶದ ಭದ್ರತೆಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುವ ಆರೋಪ ಹೊರಿಸಿವೆ. ಅದಾನಿ ಸಮೂಹ ನಿರ್ವಹಿಸುತ್ತಿರುವ ಭಾರತದ ವಾಯುನೆಲೆ, ಬಂದರುಗಳು ರೈಲ್ವೆ ಜಾಲ ಹಾಗೂ ವಿದ್ಯುತ್ ಸಂಪರ್ಕ ಚೀನಾ ಕಂಪನಿಗಳ ವಶಕ್ಕೆ ಹೋಗಿವೆಯೆ ಎಂದು ವಿಪಕ್ಷಗಳು ಪ್ರಶ್ನಿಸಿವೆ.

ಭಾರತದ ಗಡಿಯಲ್ಲಿ ಚೀನಾ ಸಂಘರ್ಷದ ವಾತಾವರಣವನ್ನು ಸೃಷ್ಟಿಸುತ್ತಿರುವ ಸಂದರ್ಭದಲ್ಲಿಯೇ ಅದಾನಿ ಸಮೂಹ ಹರಾಜು ಕರೆಯದೆಯೇ ಕೈಗೆತ್ತಿಕೊಂಡಿರುವ ಭಾರತದ ಅನೇಕ ನಿರ್ಣಾಯಕ ಮೂಲಸೌಕರ್ಯಗಳ ಅಭಿವೃದ್ಧಿಯ ಜವಾಬ್ದಾರಿಯನ್ನು ಚೀನಾ ಕಂಪನಿಗಳು ಹೊತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಕಾಂಗ್ರೆಸ್ ಗುರುವಾರ (ಏಪ್ರಿಲ್ 6) ಹೇಳಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವೀಟ್‌ ಮೂಲಕ “ಅದಾನಿ ಸಮೂಹದ ಜೊತೆಗೆ ಸಂಬಂಧವಿರುವ ಚೀನಾದ ಕಂಪನಿಯೊಂದು ಭಾರತದಲ್ಲಿ ನಿರ್ಣಾಯಕವಾದ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ತೊಡಗಿರುವುದು ಕಳವಳಕಾರಿ ಸಂಗತಿ” ಎಂದು ಹೇಳಿದ್ದರು. ಅವರು ಟ್ವೀಟ್ ಜೊತೆಗೆ ಲಗತ್ತಿಸಿರುವ ಲೇಖನದಲ್ಲಿ ಈ ಬಗ್ಗೆ ವಿವರಗಳೂ ಇವೆ.

ರಾಹುಲ್ ಟ್ವೀಟ್ ನಂತರ ಕಾಂಗ್ರೆಸ್ ಪಕ್ಷ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತ ವಿವರ ಬಹಿರಂಗಪಡಿಸಿದೆ. “ಅದಾನಿ ಸಮೂಹದ ಪಿಎಂಸಿ ಸಂಸ್ಥೆ ಭಾರತದ ಬಹುತೇಕ ಮೂಲಸೌಕರ್ಯ ಯೋಜನೆಗಳ ನೇತೃತ್ವ ವಹಿಸಿದೆ. ಈ ಪಿಎಂಸಿಯ ಯೋಜನೆಗಳ ನೇತೃತ್ವ ವಹಿಸಿರುವುದು ಚೀನೀ ಕಂಪನಿ. ಪಿಎಂಸಿ ಸಬ್‌ಕಾಂಟ್ರಾಕ್ಟರ್‌ ಆಗಿರುವುದರಿಂದ ವಾರ್ಷಿಕ ರಿಟರ್ನ್ ಫೈಲ್ ಮಾಡಲು ತನ್ನ ನೋಂದಾಯಿತ ಇಮೇಲ್‌ ಕೊಡಬೇಕಿತ್ತು. ಅದರಲ್ಲಿ ‘ಇನ್ಫೋ@ಅದಾನಿಗ್ರೂಪ್.ಕಾಮ್‌’ ಎಂದು ಚೀನಾ ಮಾಲೀಕರು ದಾಖಲಿಸಿದ್ದಾರೆ. ಅದಾನಿಯವರ ಕಚೇರಿಯ ಆವರಣದಿಂದಲೇ ಈ ಕಂಪನಿಯ ವ್ಯವಹಾರ ನಡೆಯುತ್ತಿದೆ” ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥೆ ಪತ್ರಿಕಾಗೋಷ್ಠಿಯಲ್ಲಿ ಸಂಬಂಧಿತ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಅದಾನಿ ವಾಚ್ ಬಹಿರಂಗಪಡಿಸಿದ ವಿವರ

ಪಿಎಂಸಿ ಪ್ರಾಜೆಕ್ಟ್ಸ್‌ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಎನ್ನುವ ಸಂಸ್ಥೆ ಭಾರತದಲ್ಲಿ ಅದಾನಿ ಸಮೂಹದ ತೆಕ್ಕೆಗೆ ನೀಡಲಾಗಿರುವ ಬಂದರುಗಳು, ಕಂಟೇನರ್ ಟರ್ಮಿನಲ್ಸ್, ವಿಮಾನ ನಿಲ್ದಾಣಗಳು, ವಿದ್ಯುತ್ ಪ್ರಸರಣ ಲೈನ್‌ಗಳು ಮತ್ತು ರೈಲ್ವೆ ಹಳಿಗಳು ಮೊದಲಾದ ಸಾರ್ವಜನಿಕ ಮೂಲಸೌಕರ್ಯಗಳನ್ನು ನಿರ್ಮಿಸುವ ಹೊಣೆ ಹೊತ್ತಿದೆ.

ಈ ಕಂಪನಿ ಅದಾನಿ ಸಮೂಹ ಅಡಿಯಲ್ಲಿರುವ ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್‌ನ ಆವರಣದಲ್ಲಿ ಕೆಲಸ ಮಾಡುತ್ತದೆ. ಆದರೆ ಕಂಪನಿಯ ಮುಖ್ಯಸ್ಥರು ಚಾಂಗ್ ಚೆನ್ ಟಿಂಗ್ (ಮೋರಿಸ್ ಚಾಂಗ್). ಈ ಚಾಂಗ್ ಚೆನ್ ಅದಾನಿ ಸಮೂಹದ ಅನೇಕ ಕಂಪನಿಗಳಲ್ಲಿ ವರ್ಷಗಳಿಂದ ನಿರ್ದೇಶಕರಾಗಿರುವ ಚಾಂಗ್ ಚಂಗ್ ಲಿಂಗ್ ಅವರ ಮಗ. ಅಲ್ಲದೆ ಚಾಂಗ್ ಚೆನ್ ಅವರು ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಅವರ ಆಪ್ತ ಉದ್ಯಮ ಸಹಭಾಗಿ.

ಭಾರತದ ನಿರ್ಣಾಯಕ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಚೀನೀ ಕಂಪನಿಗಳು ತೊಡಗಿಸಿಕೊಂಡಿರುವುದು ರಾಷ್ಟ್ರೀಯ ಭದ್ರತೆಯ ಕುರಿತ ಪ್ರಶ್ನೆಗಳನ್ನು ಎತ್ತಿದೆ. ಈ ಬಗ್ಗೆ ವಿಪಕ್ಷಗಳು ಪದೇ ಪದೆ ಪ್ರಶ್ನೆಗಳನ್ನು ಮಾಡುತ್ತಿದ್ದರೂ ‘ರಾಷ್ಟ್ರವಾದಿ’ ಸರ್ಕಾರ ನಡೆಸುತ್ತಿರುವುದಾಗಿ ಹೇಳಿಕೊಳ್ಳುತ್ತಿರುವ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸದೆ ಮೌನವಾಗಿದ್ದಾರೆ.

ಪಿಎಂಸಿ ಸಂಸ್ಥೆ ಅದಾನಿ ಸಮೂಹಕ್ಕೆ ಲಾಭವಾಗಲು ಸರಕುಗಳಿಗೆ ಬೇಡಿಕೆ ಇರುವಂತೆ ತೋರಿಸಿ ಅತಿಯಾದ ಶುಲ್ಕವನ್ನು ಸರ್ಕಾರಿ ಯೋಜನೆಗಳಲ್ಲಿ ತೋರಿಸುತ್ತಿರುವ ಬಗ್ಗೆ ಭಾರತ ಸರ್ಕಾರದ ತನಿಖಾ ಸಂಸ್ಥೆಯೊಂದು ಆರೋಪಿಸಿತ್ತು. ಅದಾನಿ ಪವರ್ ಮಹಾರಾಷ್ಟ್ರ ಲಿಮಿಟೆಡ್‌ (ಎಪಿಎಂಎಲ್‌), ಅದಾನಿ ಪವರ್ ರಾಜಸ್ಥಾನ ಲಿಮಿಟೆಡ್ (ಎಪಿಆರ್‌ಎಲ್‌) ಹಾಗೂ ಮಹಾರಾಷ್ಟ್ರ ಈಸ್ಟರ್ನ್ ಗ್ರಿಡ್ ಪವರ್ ಟ್ರಾನ್ಸ್‌ಮಿಶನ್ ಕಂಪನಿ ಲಿಮಿಟೆಡ್ (ಎಂಇಜಿಪಿಟಿಸಿಎಲ್‌) ಮೊದಲಾದ ಮೂರು ಕಂಪನಿಗಳು ಆಮದು ಮಾಡಿಕೊಂಡಿರುವ ಸಾಧನಗಳ ಮೇಲೆ ಅತಿಯಾದ ಶುಲ್ಕ ವಿಧಿಸಿರುವ ಬಗ್ಗೆ ಆರೋಪ ವ್ಯಕ್ತವಾಗಿದೆ.

ಆರ್ಥಿಕ ಸಚಿವಾಲಯದ (ಡಿಆರ್‌ಐ) ಗುಪ್ತಚರ ಶಾಖೆ ಈ ಬಗ್ಗೆ ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದೆ. ಅದಾನಿ ಸಮೂಹದ ಕೆಲವು ಕಂಪನಿಗಳಿಗೆ ಮತ್ತು ವಿನೋದ್ ಅದಾನಿಗೆ ಈಗಾಗಲೇ ಡಿಆರ್‌ಐ ಶೋಕಾಸ್ ನೋಟಿಸ್ ಕಳುಹಿಸಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನೋಂದಣಿಯಾಗಿರುವ, ವಿನೋದ್ ಅದಾನಿ ನೇತೃತ್ವದಲ್ಲಿರುವ ಎಲೆಕ್ಟ್ರೋಜೆನ್ ಇನ್‌ಫ್ರಾ ಎಫ್‌ಜೆಡ್‌ಇ (ಇಐಎಫ್‌) ಎನ್ನುವ ಸಂಸ್ಥೆಯೊಂದು ಪಿಎಂಸಿ ಪ್ರಾಜೆಕ್ಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಮತ್ತು ಎಂಇಜಿಪಿಟಿಸಿಎಲ್‌ಗಳಿಗೆ ಇನ್‌ವಾಯ್ಸ್ ಸಿದ್ಧಪಡಿಸುವ ಏಜೆಂಟ್ ಆಗಿರುತ್ತದೆ. ವಿದ್ಯುತ್ ಪ್ರಸರಣ ಲೈನ್‌ಗಳನ್ನು ಸ್ಥಾಪಿಸಲು ಮಷಿನರಿ ಆಮದು ಮಾಡಿಕೊಳ್ಳುವ ಕೆಲಸವೂ ಇಐಎಫ್‌ ಮಾಡುತ್ತದೆ. ಡಿಆರ್‌ಐ ಆರೋಪಿಸಿರುವ ಪ್ರಕಾರ, ಚೀನಾ ಮತ್ತು ದಕ್ಷಿಣ ಕೊರಿಯದಿಂದ ನೇರವಾಗಿ ಬಂದಿರುವ ಸಾಧನಗಳಿಗೆ, ವಾಸ್ತವ ಸರಬರಾಜು ಬೆಲೆಗಿಂತ 400%ರಷ್ಟು ಅತಿಯಾದ ಬೆಲೆ ತೋರಿಸಿ ಇನ್‌ವಾಯ್ಸ್ ತಯಾರಿಸಲಾಗಿದೆ.

ಈ ಸುದ್ದಿ ಓದಿದ್ದೀರಾ?: ನಕಲಿ ಬಿಡ್ಡರ್‌ಗಳ ಮೂಲಕ ಕಲ್ಲಿದ್ದಲು ಹರಾಜಿನಲ್ಲಿ ಏಕಸ್ವಾಮ್ಯ ಮೆರೆದ ಅದಾನಿ ಸಮೂಹ

ಭಾರತ ಸರ್ಕಾರದ ವಾಣಿಜ್ಯ ವ್ಯವಹಾರಗಳ ಸಚಿವಾಲಯದಲ್ಲಿ ಪಿಎಂಸಿ ಪ್ರಾಜೆಕ್ಟ್ಸ್‌ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಕೊನೆಯ ಬಾರಿ ಸಲ್ಲಿಸಿದ ವಿವರಗಳ ಪ್ರಕಾರ ಸಂಸ್ಥೆ ಈಗಲೂ ಮಾರಿಷಸ್‌ನಲ್ಲಿ ನೋಂದಣಿ ಮಾಡಲಾದ ಕಂಪನಿ ಪಿಎಂಸಿ ಇನ್‌ಫ್ರಾ ಲಿಮಿಟೆಡ್ ಮಾಲೀಕತ್ವದಲ್ಲಿದೆ.

2006 ಜುಲೈ 1ರಂದು ಪಿಎಂಸಿ ಸಲ್ಲಿಸಿದ ವಿವರಗಳ ಪ್ರಕಾರ ಸಂಸ್ಥೆ ತನ್ನ ಶೇ 100ರಷ್ಟು ಹೋಲ್ಡಿಂಗ್‌ಗಳನ್ನು ಪಿಎಂಸಿಯಿಂದ ಗುದಾಮಿ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್‌ಗೆ (ಜಿಐಪಿಎಲ್‌) ವರ್ಗಾಯಿಸಿದೆ. ಈ ಸಂಸ್ಥೆಯ ಮೇಲೂ ಡಿಆರ್‌ಐ ಶುಲ್ಕ ಏರಿಸಿದ ಆರೋಪ ಹೊರಿಸಿರುವುದು. ಜಿಐಪಿಸಿಎಲ್ ನೇರವಾಗಿ ಅದಾನಿ ಸಮೂಹ ಮತ್ತು ಚಾಂಗ್ ಚುಂಗ್ ಲಿಂಗ್ ಜೊತೆಗೆ ಸಂಪರ್ಕ ಹೊಂದಿದೆ ಎಂದು ಡಿಆರ್‌ಐ ಹೇಳಿದೆ.

Adani 1

2019 ಫೆಬ್ರವರಿ 8ರಂದು ಭಾರತ ಸರ್ಕಾರ ಕಂಪನಿಗಳ ಕಾಯ್ದೆ 2013ಕ್ಕೆ ತಿದ್ದುಪಡಿ ಮಾಡಿ ತಮ್ಮ ಪ್ರಮುಖ ಲಾಭದ ಮಾಲೀಕರ ವಿವರ ನೀಡುವುದನ್ನು ಕಡ್ಡಾಯಗೊಳಿಸಿತ್ತು. ಈ ತಿದ್ದುಪಡಿಯ ನಂತರ ಪಿಎಂಸಿ ಇನ್‌ಫ್ರಾ ಲಿಮಿಟೆಡ್ ಲಾಭದ ಮಾಲೀಕರನ್ನು ಬಹಿರಂಗಪಡಿಸುವ ಒತ್ತಡ ಸೃಷ್ಟಿಯಾಯಿತು.

2020 ಸೆಪ್ಟೆಂಬರ್ 28ರಂದು ಪಿಎಂಸಿ ಪಾಜೆಕ್ಟ್ಸ್‌ (ಇಂಡಿಯಾ) ಲಿಮಿಟೆಡ್‌ನ ಮಾಲೀಕರಾದ ಚಾಂಗ್ ಚೆನ್ ಟಿಂಗ್ (ಮೋರಿಸ್ ಚಾಂಗ್) ಅವರು ಪಿಎಂಸಿ ಇನ್‌ಫ್ರಾ ಲಿಮಿಟೆಡ್‌ ಮೂಲಕ ಶೇ 100 ಲಾಭ ಪಡೆಯುವ ಮಾಲೀಕರು ಎನ್ನುವುದನ್ನು ಘೋಷಿಸಿಕೊಂಡಿತು. ಅವರು ಸಲ್ಲಿಸಿದ ವಿವರಗಳ ಪ್ರಕಾರ ಅದಾನಿ ಸಮೂಹದ ಅನೇಕ ಕಂಪನಿಗಳಲ್ಲಿ ನಿರ್ದೇಶಕರಾಗಿರುವ ಚಾಂಗ್ ಚುಂಗ್‌-ಲಿಂಗ್ ಅವರ ಮಗ ಚಾಂಗ್ ಚೆನ್ ಟಿಂಗ್ ಎನ್ನುವ ಮಾಹಿತಿಯನ್ನೂ ನೀಡಲಾಗಿದೆ.

ಚಾಂಗ್ ಚುಂಗ್ ಲಿಂಗ್ ಅವರ ಹೆಸರು ಕಲ್ಲಿದ್ದಲು ಸಂಗ್ರಹ ತನಿಖೆಯಲ್ಲೂ ಕೇಳಿಬಂದಿತ್ತು. ಅಲ್ಲದೆ, ಉತ್ತರ ಕೊರಿಯದ ಜೊತೆಗಿನ ಅದಾನಿ ಸಮೂಹದ ವ್ಯಾಪಾರದಲ್ಲೂ ಚುಂಗ್ ಲಿಂಗ್ ಹೆಸರು ಕೇಳಿಬಂದಿದೆ. ಚುಂಗ್ ಲಿಂಗ್  ತಮ್ಮ ಪಾಸ್‌ಪೋರ್ಟ್ ಮತ್ತು ಬೇರೆ ಖಾಸಗಿ ವಿವರಗಳಲ್ಲಿ ರಿಪಬ್ಲಿಕ್ ಆಫ್ ಚೀನಾದ ಪ್ರಜೆ ಎನ್ನುವ ವಿವರವನ್ನು ಕೊಟ್ಟಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

Air India A1-171 ವಿಮಾನ ಪತನದಲ್ಲಿ 117 ಮಂದಿ ಮೃತ : ದುರಂತಕ್ಕೆ ಟಾಟಾ ಗ್ರೂಪ್‌ ಸಂತಾಪ

ಗುಜರಾತಿನ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ A1- 171 ವಿಮಾನ...

ಜಾತಿಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ಒಪ್ಪಿಗೆ

ರಾಜ್ಯದಲ್ಲಿ ಜಾತಿಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ಶೀಘ್ರವೇ...

ಶಕ್ತಿ ಯೋಜನೆಗೆ 2 ವರ್ಷ: 474.82 ಕೋಟಿ ಮಹಿಳೆಯರ ಉಚಿತ ಪ್ರಯಾಣ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಶಕ್ತಿ ಯೊಜನೆ'...

ಪತ್ನಿಗೆ ವಿವಾಹೇತರ ಸಂಬಂಧವಿದೆ ಎಂಬ ಶಂಕೆ; ನಾಲ್ವರು ಮಕ್ಕಳೊಂದಿಗೆ ಪತಿ ಆತ್ಮಹತ್ಯೆ

ತನ್ನ ಪತ್ನಿಯು ವಿವಾಹೇತರ ಸಂಬಂಧ ಹೊಂದಿರಬಹುದು ಎಂದು ಅನುಮಾನಗೊಂಡಿದ್ದ ವ್ಯಕ್ತಿಯೊಬ್ಬ ತಮ್ಮ...

Download Eedina App Android / iOS

X