ನವದೆಹಲಿಯಲ್ಲಿ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್ಜಿ) ದರದಲ್ಲಿ ಪ್ರತಿ ಕಿಲೋಗ್ರಾಂಗೆ 2 ರೂಪಾಯಿ ಹೆಚ್ಚಳ ಮಾಡಲಾಗಿದೆ. ಈ ಪರಿಷ್ಕೃತ ದರದೊಂದಿಗೆ, ರಾಜಧಾನಿಯಲ್ಲಿ ಒಂದು ಕೆ.ಜಿ ಸಿಎನ್ಜಿ ಬೆಲೆ ಈಗ 83.09 ರೂಪಾಯಿಗಳಿಗೆ ತಲುಪಿದೆ. ಇದು ವಾಹನ ಸವಾರರಿಗೆ, ಅದರಲ್ಲೂ ವಿಶೇಷವಾಗಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ.
ಕಳೆದ 15 ದಿನಗಳ ಅಂತರದಲ್ಲಿ ಇದು ನಾಲ್ಕನೇ ಬಾರಿ ಆಗಿರುವ ಸಿಎನ್ಜಿ ಬೆಲೆ ಏರಿಕೆಯಾಗಿದೆ. ಇದಕ್ಕೂ ಕೇವಲ ಮೂರು ದಿನಗಳ ಹಿಂದಷ್ಟೇ ಸಿಎನ್ಜಿ ದರದಲ್ಲಿ 1 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಸತತವಾಗಿ ಏರಿಕೆಯಾಗುತ್ತಿರುವ ಈ ಬೆಲೆಗಳು ಜನಸಾಮಾನ್ಯರ ದೈನಂದಿನ ಜೀವನದ ಮೇಲೆ, ಮುಖ್ಯವಾಗಿ ಸಾರಿಗೆ ವೆಚ್ಚದ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ.
ಇದನ್ನು ಓದಿದ್ದೀರಾ? ‘ಸ್ಮಾರ್ಟ್ ಬಾರ್ಡರ್’ಯೋಜನೆ : ಕೇಂದ್ರದ ಸರಣಿ ಯೋಜನೆಗಳ ನಡುವೆಯೂ ನಿಲ್ಲದ ನುಸುಳುವಿಕೆ
ಈ ಸತತ ಬೆಲೆ ಹೆಚ್ಚಳವು ವಾಣಿಜ್ಯ ವಾಹನಗಳ ಚಾಲಕರಲ್ಲಿ ಆತಂಕ ಮೂಡಿಸಿದೆ. ದಿನನಿತ್ಯದ ಸಂಪಾದನೆಯಲ್ಲಿ ಬಹುಪಾಲು ಇಂಧನಕ್ಕೇ ಖರ್ಚಾಗುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಪ್ರಯಾಣ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ.
ಜಾಗತಿಕ ವಿದ್ಯಮಾನಗಳ ಪರಿಣಾಮವಾಗಿ ದೇಶೀಯವಾಗಿ ಇಂಧನ ದರಗಳು ಸತತವಾಗಿ ಏರಿಕೆಯಾಗುತ್ತಿರುವುದು ಆರ್ಥಿಕತೆಯ ಮೇಲೆ ಹಾಗೂ ಸಾಮಾನ್ಯ ಜನರ ಕೊಳ್ಳುವ ಶಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳನ್ನು ದಟ್ಟವಾಗಿಸಿದೆ.




