ನಗರದ ಜಿಲ್ಲಾ ಆಸ್ವತ್ರೆಯಲ್ಲಿ ಸೋಮವಾರ ಶಾಸಕ ಕೊತ್ತೂರು ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಯಿತು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಗದೀಶ್ ಸಭೆಗೆ ಮಾಹಿತಿ ನೀಡಿ ಜಿಲ್ಲಾ ಆಸ್ಪತ್ರೆಯಲ್ಲಿ ಮೆಡಿಕಲ್ ಕಾಲೇಜು ಮಾದರಿಯಲ್ಲೇ ವಿವಿಧ ವಿಭಾಗದ ಕೋರ್ಸ್ ಗಳನ್ನು ಪ್ರಾರಂಭಿಸಲು ಕ್ರಮ ವಹಿಸಲಾಗಿದೆ ಪ್ಯಾರಾ ಮೆಡಿಕಲ್ ನಲ್ಲಿ ಈಗಾಗಲೇ ಏಳು ವಿಭಾಗಗಳನ್ನು ಪ್ರಾರಂಭಿಸಿದ್ದಾರೆ ಆಸ್ಪತ್ರೆಯಲ್ಲಿ 5 ಅಂಬುಲೈನ್ಸ್ ಇದ್ದು ಅದರಲ್ಲಿ 3 ಅಂಬುಲೈನ್ಸ್ ಕೆಟ್ಟು ನಿಂತಿವೆ ಉಳಿಕೆ ಎರಡು ಮಾತ್ರ ಇವೆ, ಸಿಟಿ ಮತ್ತು ಎಂಆರ್‌ಐ ಸ್ಕ್ಯಾನ್ ಬಿಪಿಎಲ್ ಕಾರ್ಡ್ ಇದ್ದರೆ ಉಚಿತವಾಗಿ ಮಾಡಲಾಗುತ್ತದೆ ಎಪಿಎಲ್ ಇದ್ದರೆ 30% ಹಣ ಕೊಡಬೇಕು ಸರ್ಕಾರ 70% ಹಣ ಬರಿಸುತ್ತದೆ, ರಕ್ತ ನಿಧಿ ಕೇಂದ್ರದಿಂದ ಅವಶ್ಯಕತೆ ಇದ್ದಷ್ಟು ರಕ್ತ ಸಂಗ್ರಹಣೆ ಮಾಡಲಾಗಿದೆ ಹಂತಹಂತವಾಗಿ ಸಾರ್ವಜನಿಕರಿಗೆ ಉಚಿತವಾದ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಸಭೆಗೆ ವಿವರಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ ಮನುಷ್ಯ ಯಾವತ್ತೂ ಕೂಡ ಜೈಲಿಗೆ ಮತ್ತು ಆಸ್ಪತ್ರೆಗೆ ಹೋಗಬಾರದು ಯಾಕೆಂದರೆ ಹೋದರೆ ಮಾನಸಿಕವಾಗಿ ಕುಗ್ಗುತ್ತಾನೆ ಈ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ಮಾಹಿತಿ ಮತ್ತು ಸೇವೆ ಕೊಟ್ಟರೆ ಅದರಷ್ಟು ನೆಮ್ಮದಿ ಬೇರೆ ಯಾವ ಜಾಗದಲ್ಲೂ ಸಿಗುವುದಿಲ್ಲ ಈ ಆಸ್ಪತ್ರೆಗೆ ಹೊಸದಾಗಿ ಆರೋಗ್ಯ ರಕ್ಣಾ ಸಮಿತಿ ರಚನೆ ಮಾಡಲಾಗಿದೆ ಸಮಿತಿ ಸದಸ್ಯರು ಆಸ್ಪತ್ರೆಯ ವೈದ್ಯರು ಸಿಬ್ಬಂದಿ ಸಹಕಾರದೊಂದಿಗೆ ಸಾರ್ವಜನಿಕರಿಗೆ ಉಚಿತವಾದ ಸೇವೆ ನೀಡುವ ಜೊತೆಗೆ ಅಭಿವೃದ್ಧಿಯ ಬಗ್ಗೆ ನಿರಂತರವಾಗಿ ಚರ್ಚೆಗಳು ಮಾಡಬೇಕು ಎಂದು ತಿಳಿಸಿದರು.
ಶಿಕ್ಷಣ ಮತ್ತು ಆರೋಗ್ಯ ವಿಚಾರದಲ್ಲಿ ಯಾವತ್ತೂ ವಿಳಂಬ ಮಾಡುವುದಿಲ್ಲ ನೀವು ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ನೀಡಿದರೆ ಸರ್ಕಾರದಿಂದ ಅನುಮೋದನೆ ಮಾಡಿ ಅನುದಾನ ತರುವುದಕ್ಕೆ ನಾವು ಸಿದ್ದವಿದ್ದೇವೆ ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಮಾಡಿ ಸಮಸ್ಯೆ ಚರ್ಚೆ ಮಾಡಿಕೊಳ್ಳಿ ಜೊತೆಗೆ ಸಮಿತಿ ಸದಸ್ಯರು ಪ್ರತಿನಿತ್ಯ ಒಬ್ಬರು ಬಂದು ಆಸ್ಪತ್ರೆಯ ಹಾದುಹೋಗುಗಳ ಬಗ್ಗೆ ಗಮನ ಹರಿಸಬೇಕು ಆಸ್ಪತ್ರೆ ಬಡವರದು ಅವರಿಗೆ ಆರೋಗ್ಯ ಸೇವೆ ಜೊತೆಗೆ ಸ್ವಚ್ಚತೆ ಕಾಪಾಡುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ಆರೋಗ್ಯವೇ ಭಾಗ್ಯ ಎಂಬುದನ್ನು ಅರ್ಥ ಮಾಡಿಕೊಂಡು ಕೋಲಾರ ವಿಧಾನಸಭಾ ಕ್ಷೇತ್ರದಲ್ಲ ಆರೋಗ್ಯ ಸೇವೆಗಾಗಿಯೇ ಸುಮಾರು 42 ಕೋಟಿ ಅನುದಾನ ನೀಡಲಾಗಿದೆ ಸರ್ಕಾರಿ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಎಷ್ಟೇ ಅಡೆತಡೆಗಳು ಇದ್ದರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮನವರಿಕೆ ಮಾಡಿ ಮಂಜೂರು ಮಾಡಿಸಲಾಗಿದೆ ಬಡವರ ಸೇವೆ ಮಾಡಲು ಒಳ್ಳೆಯ ಅವಕಾಶ ಸಮಿತಿ ಸದಸ್ಯರಿಗೆ ಇದೆ ಎಂದರು.
ಸಭೆಯಲ್ಲಿ ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಅಧಿಕಾರೇತರ ಸದಸ್ಯರಾದ ಮಾಲಾ, ನದೀಂ ಬೇಗ್, ನಾರಾಯಣಸ್ವಾಮಿ, ಪದ್ಮ, ರೂಪಕುಮಾರ್, ವಾಸೀಂ, ನಾಗೇಂದ್ರ ಸೇರಿದಂತೆ ಆಸ್ಪತ್ರೆಯ ವೈದ್ಯರು ಸಿಬ್ಬಂದಿ ಇದ್ದರು.
ಕೋಲಾರ: ನಗರದ ಜಿಲ್ಲಾ ಆಸ್ವತ್ರೆಯಲ್ಲಿ ಸೋಮವಾರ ಶಾಸಕ ಕೊತ್ತೂರು ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಯಿತು.

ಇದನ್ನು ಓದಿದ್ದೀರಾ..? ಚಿಂತಾಮಣಿ | ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ