‘ಕಾಕ್ರೋಚ್’ ಹೇಳಿಕೆ ಯುವಜನರ ಕುರಿತಾಗಿರಲಿಲ್ಲ; ನನ್ನ ಮಾತನ್ನ ತಪ್ಪಾಗಿ ಗ್ರಹಿಸಲಾಗಿದೆ: ಸಿಜೆಐ ಸೂರ್ಯಕಾಂತ್

Date:

ಯುವ ಸಮೂಹದ ಒಂದು ಭಾಗವನ್ನು ‘ಕಾಕ್ರೋಚ್’ಗಳಿಗೆ ಹೋಲಿಸಿದ್ದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೇಳಿಕೆಯು ಬೃಹತ್ ಆಂದೋಲನಕ್ಕೆ ಕಾರಣವಾಗಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನೇ ನೀಡಬೇಕಾಯಿತು. ಇಂತಹ ಬೃಹತ್ ಆಂದೋಲನ ನಡೆದ ಬಳಿಕ, ತಮ್ಮ ಹೇಳಿಕೆಗೆ ಸಿಜೆಐ ಸೂರ್ಯಕಾಂತ್ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ಹೇಳಿದ್ದಾರೆ.

- Advertisement -

ಮೇ 15 ರಂದು, ಪ್ರಕರಣವೊಂದರ ವಿಚಾರಣೆ ವೇಳೆ ವಕೀಲರ ವಿರುದ್ಧ ಗುಡುಗಿದ್ದ ಸಿಜೆಐ ಸೂರ್ಯಕಾಂತ್‌ ಅವರು, “ವ್ಯವಸ್ಥೆಯ ಮೇಲೆ ದಾಳಿ ಮಾಡುವ ಕ್ರಿಮಿಗಳು/ಪರಾವಲಂಬಿಗಳು ಸಮಾಜದಲ್ಲಿ ಈಗಾಗಲೇ ಇದ್ದಾರೆ, ನೀವು ಅವರೊಂದಿಗೆ ಕೈಜೋಡಿಸಲು ಬಯಸುತ್ತೀರಾ? ಯಾವುದೇ ಕೆಲಸವಿಲ್ಲದೆ, ವೃತ್ತಿಯಲ್ಲೂ ಜಾಗ ಸಿಗದ ‘ಕಾಕ್ರೋಚ್‌’ಗಳಂತಿರುವ ಯುವಜನರಿದ್ದಾರೆ. ಅವರಲ್ಲಿ ಕೆಲವರು ಮಾಧ್ಯಮಗಳಾಗುತ್ತಾರೆ, ಕೆಲವರು ಸೋಶಿಯಲ್ ಮೀಡಿಯಾ ಪ್ರಮುಖರಾಗುತ್ತಾರೆ, ಕೆಲವರು ಆರ್‌ಟಿಐ ಕಾರ್ಯಕರ್ತರಾಗುತ್ತಾರೆ, ಕೆಲವರು ಇನ್ಯಾವುದೋ ಆಂದೋಲನಕಾರರಾಗಿ ಎಲ್ಲರ ಮೇಲೆಯೂ ದಾಳಿ ಮಾಡಲು ಶುರು ಮಾಡುತ್ತಾರೆ… ಮತ್ತು ನೀವು ಅಂತವರ ಪರವಾಗಿ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಸಲ್ಲಿಸುತ್ತೀರಾ!” ಎಂದಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಪ್ರಜಾಪ್ರಭುತ್ವದ ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಅವರ ಹೇಳಿಕೆಯಿಂದಾಗಿಯೇ, ಅಭಿಜೀತ್ ದೀಪ್ಕೆ ಅವರು ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಸ್ಥಾಪಿಸಿದ್ದರು.

ಇದೀಗ, ‘ಬಾರ್ ಅಂಡ್ ಬೆಂಚ್’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಹೇಳಿಕೆ ಕುರಿತು ಸೂರ್ಯಕಾಂತ್ ಮಾತನಾಡಿದ್ದಾರೆ “ನನ್ನ ಮಾತುಗಳನ್ನು ಸಂಪೂರ್ಣವಾಗಿ ಸಂದರ್ಭಕ್ಕೆ ಹೊರತಾಗಿ ವಿಶ್ಲೇಷಿಸಲಾಗಿದೆ. ಇದರ ಹಿನ್ನೆಲೆಯನ್ನು ನಾನು ಹಂಚಿಕೊಳ್ಳುತ್ತೇನೆ. ಆ ಸಮಯದಲ್ಲಿ ನಕಲಿ ಅಥವಾ ಹುಸಿಕಾಲೇಜು ಪದವಿಗಳನ್ನು ಇಟ್ಟುಕೊಂಡು ವಕೀಲ ವೃತ್ತಿಗೆ ಬಂದವರ ಬಗ್ಗೆ ಚರ್ಚೆ ನಡೆಯುತ್ತಿತ್ತು. ನಕಲಿ ಪದವಿ ಎಂದರೆ ಮಾನ್ಯತೆ ಇಲ್ಲದ ಪದವಿಗಳು. ಕೆಲವರು ಕಾನೂನು ಕಾಲೇಜುಗಳ ಮುಖವನ್ನೇ ನೋಡಿರಲಿಲ್ಲ, ಮನೆಯಲ್ಲಿ ಕುಳಿತೇ ಹೇಗೋ ಪದವಿಗಳನ್ನು ಪಡೆದುಕೊಂಡಿದ್ದರು. ತಮ್ಮ ಕಾಲೇಜುಗಳಿಂದ ಎಂದಿಗೂ ಅಧಿಕೃತ ಪದವಿ ಪಡೆಯದ ಸುಮಾರು 48,000 ಅಂತಹ ನಕಲಿ ವಕೀಲರು ದೇಶದಲ್ಲಿದ್ದಾರೆ ಎಂಬುದನ್ನು ನನಗೆ ತಿಳಿಸಲಾಯಿತು. ಅವರಿಂದಾಗುವ ಸಮಸ್ಯೆಗಳ ಕುರಿತು ಮಾತನಾಡುತ್ತಾ, ‘ಅವರು ವ್ಯವಸ್ಥೆಯಲ್ಲಿನ ಕಾಕ್ರೋಚ್‌ಗಳಿದ್ದಂತೆ’ ಎಂದಿದ್ದೆನು. ನಮ್ಮ ಕಾಮೆಂಟ್ ಎಂದಿಗೂ ಯುವಜನರ ವಿರುದ್ಧವಾಗಿರಲಿಲ್ಲ. ತಮ್ಮ ಮಾತುಗಳನ್ನು ಸಂಪೂರ್ಣವಾಗಿ ತಪ್ಪಾಗಿ ಉಲ್ಲೇಖಿಸಲಾಗಿದೆ” ಎಂದು ವಿವರಿಸಿದ್ದಾರೆ.  

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರೆಜಿಲ್ ಗಡಿ ದಾಟಿದ ಗೆಲುವು: ಜನತಂತ್ರಕ್ಕೆ ಆಶಾಕಿರಣವಾದ ಲುಲಾ, ಆದರೆ ಅಳಿಸಿಲ್ಲ ಬಲಪಂಥದ ಹೆಜ್ಜೆಗುರುತು

ಲ್ಯಾಟಿನ್ ಅಮೆರಿಕದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಬ್ರೆಜಿಲ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ ಕರೆಘಂಟೆಯೇ?

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ...

ಬೀದರ್‌ | ನ.1ರಂದು ಸಚಿವ ಈಶ್ವರ ಖಂಡ್ರೆಗೆ ಅಭಿನಂದನಾ ಸಮಾರಂಭ

ಬೀದರ್‌ ತಾಲ್ಲೂಕಿನ ಅತಿವಾಳ ಸಮೀಪ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು...