ಕೋಮುದ್ವೇಷ | 2026ರ ಮೊದಲ 4 ತಿಂಗಳಲ್ಲೇ 13 ಮುಸ್ಲಿಮರ ಹತ್ಯೆ

Date:

2026ರ ಮೊದಲ ನಾಲ್ಕು ತಿಂಗಳುಗಳಲ್ಲಿ, ಎಂಟು ರಾಜ್ಯಗಳಲ್ಲಿ ಕೋಮುದ್ವೇಷದ ಅಪರಾಧಗಳಲ್ಲಿ ಕನಿಷ್ಠ 13 ಮುಸ್ಲಿಮರನ್ನು ಹಿಂದುತ್ವ ಉಗ್ರಗಾಮಿ ಸಂಘಟನೆಗಳು ಕೊಂದಿವೆ ಎಂದು ‘ಇಂಡಿಯಾ ಪರ್ಸಿಕ್ಯೂಷನ್ ಟ್ರ್ಯಾಕರ್’ (IPT) ದತ್ತಾಂಶಗಳು ತೋರಿಸಿವೆ. ಹತ್ಯೆಯಾದವರಲ್ಲಿ ಇಬ್ಬರು ಮಹಿಳೆಯರು, ಓರ್ವ ಬಾಲಕ ಹಾಗೂ ಒಬ್ಬ ವೃದ್ಧ ಸೇರಿದ್ದಾರೆ.

- Advertisement -

‘ಸೌತ್ ಏಷ್ಯಾ ಜಸ್ಟಿಸ್ ಕ್ಯಾಂಪೇನ್’ ನಡೆಸುತ್ತಿರುವ ಈ ಟ್ರ್ಯಾಕರ್, ಗುಂಪು ಹತ್ಯೆಗೆ ಬಲಿಯಾದ ವ್ಯಕ್ತಿಯೊಬ್ಬರ ಪತ್ನಿಯ ಆತ್ಮಹತ್ಯೆಯನ್ನೂ ದಾಖಲಿಸಿದೆ. ಸಾವುಗಳ ಸಂಖ್ಯೆಯಲ್ಲಿ ಬಿಹಾರ (4 ಕೊಲೆ ಮತ್ತು ಒಂದು ಸಂಬಂಧಿತ ಆತ್ಮಹತ್ಯೆ) ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಜಾರ್ಖಂಡ್ ಮತ್ತು ಉತ್ತರ ಪ್ರದೇಶ ಇವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಇದೇ ಅವಧಿಯಲ್ಲಿ ಕನಿಷ್ಠ ನಾಲ್ವರು ಮುಸ್ಲಿಮರು ಸರ್ಕಾರಿ ಅಧಿಕಾರಿಗಳಿಂದಲೇ ಕೊಲ್ಲಲ್ಪಟ್ಟಿದ್ದಾರೆ. ಇದರಲ್ಲಿ, ಉತ್ತರ ಪ್ರದೇಶದಲ್ಲಿ ಪೊಲೀಸ್ ‘ಎನ್‌ಕೌಂಟರ್’ ಹೆಸರಿನಲ್ಲಿ ಇಬ್ಬರು ಮುಸ್ಲಿಂ ಸಹೋದರರ ಹತ್ಯೆಯಾಗಿದೆ. ಪ್ರಕರಣವೊಂದರಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅವರು ‘ಕಠಿಣ ಕ್ರಮ’ಕ್ಕೆ ಆದೇಶಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ ಎಂದು ವರದಿ ವಿವರಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಭಾರತೀಯ ಸೇನೆಯು ವಿವಾದಾತ್ಮಕ ‘ಎನ್‌ಕೌಂಟರ್’ನಲ್ಲಿ ಕೊಂದಿದೆ. ದೆಹಲಿಯಲ್ಲಿ, ಪೊಲೀಸ್ ವಶದಲ್ಲಿದ್ದ ಮುಸ್ಲಿಂ ವ್ಯಕ್ತಿಯೊಬ್ಬರು ಪೊಲೀಸರ ಚಿತ್ರಹಿಂಸೆಯಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.

ಧಾರ್ಮಿಕ ಆಚರಣೆಗಳ ಅಪರಾಧೀಕರಣ

ಮುಸ್ಲಿಂ ನಂಬಿಕೆಯ ಶಾಂತಿಯುತ ಆಚರಣೆಗಳನ್ನು ಅಪರಾಧವೆಂದು ಪರಿಗಣಿಸುವ ಪ್ರವೃತ್ತಿ ಮುಂದುವರಿದಿದೆ ಎಂದು ಐಪಿಟಿ ಗಮನಿಸಿದೆ. ಪ್ರಾರ್ಥನೆ ಸಲ್ಲಿಸುವುದು ಮತ್ತು ರಂಜಾನ್ ಉಪವಾಸ ಬಿಡುವುದು ಮುಂತಾದ ದೈನಂದಿನ ಧಾರ್ಮಿಕ ಆಚರಣೆಗಳಿಗಾಗಿ ಮುಸ್ಲಿಮರನ್ನು ಬಂಧಿಸಲಾಗಿದೆ. ರಂಜಾನ್ ಮತ್ತು ಇತರ ಧಾರ್ಮಿಕ ಆಚರಣೆಗಳ ಸಮಯದಲ್ಲಿ 40ಕ್ಕೂ ಹೆಚ್ಚು ಮುಸ್ಲಿಮರನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶದ ಮೊಹಮ್ಮದ್‌ಗಂಜ್ ಗ್ರಾಮದಲ್ಲಿ ಖಾಲಿ ಮನೆಯೊಂದರಲ್ಲಿ ಶುಕ್ರವಾರದ ನಮಾಜ್ ಸಲ್ಲಿಸಿದ್ದಕ್ಕಾಗಿ 12 ಜನರನ್ನು ಬಂಧಿಸಲಾಗಿದೆ. ರಂಜಾನ್ ಸಮಯದಲ್ಲಿ, ಗಂಗಾನದಿಯ ದೋಣಿಯೊಂದರಲ್ಲಿ ಉಪವಾಸ ಬಿಟ್ಟಿದ್ದಕ್ಕಾಗಿ 14 ಮುಸ್ಲಿಂ ಯುವಕರನ್ನು ಬಂಧಿಸಲಾಯಿತು. ಅವರು ಚಿಕನ್ ಬಿರಿಯಾನಿ ಸೇವಿಸಿ, ಉಳಿದ ತ್ಯಾಜ್ಯವನ್ನು ನದಿಗೆ ಎಸೆದಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ನೀಡಿದ ದೂರಿನ ಆಧಾರದಲ್ಲಿ ಅವರನ್ನು ಬಂಧಿಸಲಾಗಿತ್ತು.

ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವಿಕೆ

‘ವಿಶೇಷ ತೀವ್ರ ಪರಿಷ್ಕರಣೆ’ (SIR) ಮೂಲಕ 13 ರಾಜ್ಯಗಳಲ್ಲಿ 5.6 ಕೋಟಿಗೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದರಲ್ಲಿ ಮುಸ್ಲಿಮರನ್ನೇ ಹೆಚ್ಚಾಗಿ ಹೊರಹಾಕಲಾಗಿದೆ. ಪಶ್ಚಿಮ ಬಂಗಾಳದಲ್ಲಿ ತೆಗೆದುಹಾಕಲಾದ ಹೆಸರುಗಳಲ್ಲಿ 34% ಮುಸ್ಲಿಮರಾಗಿದ್ದು, ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಈ ಪ್ರಮಾಣ 95% ರಷ್ಟಿದೆ ಎಂದು ಟ್ರ್ಯಾಕರ್ ವರದಿ ಮಾಡಿದೆ.

ಹೆಚ್ಚುತ್ತಿರುವ ದ್ವೇಷ ಭಾಷಣ

2026ರ ಜನವರಿ ಮತ್ತು ಫೆಬ್ರವರಿ ನಡುವೆ ಕನಿಷ್ಠ ಆರು ಭಾಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಮರನ್ನು ಉಲ್ಲೇಖಿಸಲು ‘ನುಸುಳುಕೋರ’ ಎಂಬ ಪದವನ್ನು ಬಳಸಿದ್ದಾರೆ ಎಂದು ವರದಿ ಹೇಳಿದೆ. ಗೃಹ ಸಚಿವ ಅಮಿತ್ ಶಾ ಅವರು ಕೂಡ ಇದೇ ರೀತಿಯ ಭಾಷಣಗಳನ್ನು ಮಾಡಿದ್ದು, ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ದೈಹಿಕವಾಗಿ ಹೊರಹಾಕುವಿಕೆಯ ಮೊದಲ ಹಂತ ಎಂಬಂತೆ ಬಿಂಬಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ತಮಿಳುನಾಡು | ವಿಜಯ್‌ ಸರ್ಕಾರಕ್ಕೆ AIADMK ಬಂಡಾಯ ಬಣ ಬೆಂಬಲ; ಮೋದಿ-ಶಾ ಕುತಂತ್ರವೇ?

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ಮತದಾರರ ಪಟ್ಟಿ ಪರಿಷ್ಕರಣೆಯು “ಕೇವಲ ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ. ಅವರಿಗೆ ತೊಂದರೆ ಕೊಡುವ ಉದ್ದೇಶ ಹೊಂದಿದೆ” ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಫೆಬ್ರವರಿ 7 ರಂದು, ಅಸ್ಸಾಂ ಬಿಜೆಪಿಯ ಅಧಿಕೃತ ಖಾತೆಯು ಎಐ ಮೂಲಕ ತಯಾರಿಸಿದ ವಿಡಿಯೋವೊಂದನ್ನು ಹಂಚಿಕೊಂಡಿತ್ತು. ಅದರಲ್ಲಿ ಶರ್ಮಾ ಅವರು ಮುಸ್ಲಿಮರ ಮೇಲೆ ಗುಂಡು ಹಾರಿಸುವ ದೃಶ್ಯವಿತ್ತು ಮತ್ತು ‘ವಿದೇಶಿ ಮುಕ್ತ ಅಸ್ಸಾಂ’, ‘ನೀವು ಪಾಕಿಸ್ತಾನಕ್ಕೆ ಏಕೆ ಹೋಗಲಿಲ್ಲ?’ ಎಂಬ ಶೀರ್ಷಿಕೆಗಳಿದ್ದವು.

ವ್ಯವಸ್ಥಿತ ವೈಫಲ್ಯ

ಬೆಲ್ಲಿಂಗ್‌ಕ್ಯಾಟ್ ಸಂಸ್ಥೆಯು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ 499 ಬಿಜೆಪಿ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳನ್ನು ವಿಶ್ಲೇಷಿಸಿದೆ. ಪ್ರತಿ ಐದರಲ್ಲಿ ಎರಡು ಪೋಸ್ಟ್‌ಗಳು ವಿಶ್ವಸಂಸ್ಥೆಯ ‘ದ್ವೇಷ ಭಾಷಣ’ದ ವ್ಯಾಖ್ಯಾನಕ್ಕೆ ಸರಿಹೊಂದುತ್ತವೆ ಎಂಬುದನ್ನು ಕಂಡುಕೊಂಡಿದೆ.

ಮುಸ್ಲಿಂ ಸಂತ್ರಸ್ತರಿಗೆ ಪೊಲೀಸ್ ಠಾಣೆಗಳು ನ್ಯಾಯದ ಬಾಗಿಲಾಗುವ ಬದಲು ಅಡೆತಡೆಗಳಾಗಿ ಪರಿಣಮಿಸಿವೆ ಎಂದು ದತ್ತಾಂಶದ ಅವಲೋಕನ ಹೇಳಿದೆ. ಅನೇಕ ಸಂದರ್ಭಗಳಲ್ಲಿ, ಎಫ್‌ಐಆರ್‌ನಲ್ಲಿ ಮೂಲ ಅಪರಾಧವನ್ನೇ ಕೈಬಿಡಲಾಗಿದೆ ಅಥವಾ ಅಪರಾಧಿಗಳ ಬದಲಿಗೆ ಸಂತ್ರಸ್ತರ ಮೇಲೆಯೇ ಕೇಸ್ ದಾಖಲಿಸಲಾಗಿದೆ.

ಫೆಬ್ರವರಿಯಲ್ಲಿ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಗಳು, ಭಾರತದಲ್ಲಿನ ಪೊಲೀಸ್ ವ್ಯವಸ್ಥೆಯು ‘ವ್ಯವಸ್ಥಿತವಾಗಿ’ ವಿಫಲವಾಗಿದೆ ಎಂದು ಎಚ್ಚರಿಸಿದ್ದಾರೆ. ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಅಸ್ಸಾಂನಲ್ಲಿ ಮುಸ್ಲಿಮರು, ದಲಿತರು ಮತ್ತು ಆದಿವಾಸಿಗಳ ಮೇಲೆ ಪೊಲೀಸರು ಅತಿಯಾದ ಮತ್ತು ಮಾರಕ ಬಲವನ್ನು ಬಳಸುತ್ತಿದ್ದಾರೆ ಎಂದು ಅವರು ವರದಿ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಜನವರಿಯಲ್ಲಿ ಅಗ್ನಿವೀರ ಸೇನಾ ಭರ್ತಿ ರ‍್ಯಾಲಿ

ಬೀದರ್‌ ನಗರದಲ್ಲಿ 2027ರ ಜನವರಿ ತಿಂಗಳಲ್ಲಿ 15 ದಿನಗಳ ಕಾಲ ಅಗ್ನಿವೀರ...

ದೇವಿಯಿಂದ ಕತ್ತಿ ಪಡೆದ ರಾಜರ ಕಥೆಗಳು ಶಾಲಾ ಪಠ್ಯದಲ್ಲಿ; NCERTಯಿಂದ ಮತ್ತೊಂದು ವಿವಾದ?

"ಭಾರತದಲ್ಲಿ ದೇವಿಯರ ಆರಾಧನೆಗೂ, ಯುದ್ಧಕ್ಕೂ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಪ್ರಾಚೀನ...

‘INDIA’ ಮೈತ್ರಿಕೂಟದ ಸಭೆಗಾಗಿ ದೆಹಲಿಗೆ ಮಮತಾ ಪ್ರಯಾಣ: ‘ದಿಮಾಗಿ ನಕ್ಸಲರ’ ಜತೆ ಸಮಾಲೋಚನೆ ಎಂದ ಸುವೇಂದು ಅಧಿಕಾರಿ

ಬುಧವಾರ ನಡೆಯಲಿರುವ 'INDIA' ಮೈತ್ರಿಕೂಟದ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ಪಶ್ಚಿಮ ಬಂಗಾಳದ...

ಮೋದಿ ಪ್ರಮಾಣಪತ್ರ ವಿವಾದ: ಕೇಜ್ರಿವಾಲ್ ಮೇಲ್ಮನವಿ ವಜಾಗೊಳಿಸಿದ ಗುಜರಾತ್ ಹೈಕೋರ್ಟ್

ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿ ಪ್ರಮಾಣಪತ್ರವನ್ನು ಬಹಿರಂಗಪಡಿಸುವಂತೆ ಗುಜರಾತ್...