ಬೆಳೆ ನಷ್ಟ ಪರಿಹಾರವಾಗಿ ಕೇವಲ 2 ರೂ. ಕೊಟ್ಟ ಸರ್ಕಾರ; ರೈತ ಆರೋಪ

Date:

ಅಕಾಲಿಕ ಮಳೆಯಿಂದ ಉಂಟಾದ ಬೆಳೆ ನಷ್ಟಕ್ಕೆ ಪರಿಹಾರವಾಗಿ ಸರ್ಕಾರವು ಕೇವಲ 2.30 ರೂ.ಗಳನ್ನು ತಮ್ಮ ಖಾತೆಗೆ ಜಮಾ ಮಾಡಿದೆ ಎಂದು ಮಹಾರಾಷ್ಟ್ರದ ರೈತರೊಬ್ಬರು ಆರೋಪಿಸಿದ್ದಾರೆ. ಆದಾಗ್ಯೂ, ಅಧಿಕಾರಿಗಳು ತಾಂತ್ರಿಕ ದೋಷದಿಂದ ಈ ಸಮಸ್ಯೆ ಉಂಟಾಗಿದೆ ಎಂದು ಹೇಳಿದ್ದಾರೆ.

- Advertisement -

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಾಡಾ ತಾಲೂಕಿನ ಶಿಲೋತ್ತರ್ ಗ್ರಾಮದ ನಿವಾಸಿ ಮಧುಕರ್ ಬಾಬುರಾವ್ ಪಾಟೀಲ್ ಅವರು ತಮಗೆ 1.5 ಲಕ್ಷ ರೂ. ಪರಿಹಾರ ಬರಬೇಕಿತ್ತು. ಆದರೆ, 2 ರೂ.ಗಳು ಮಾತ್ರವೇ ತಮ್ಮ ಖಾತೆಗೆ ಜಮಾ ಆಗಿದೆ ಎಂದು ಹೇಳಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

ರೈತ ಮಧುಕರ್ ಅವರು ತಮ್ಮ 2.51 ಹೆಕ್ಟೇರ್ ಭೂಮಿಯಲ್ಲಿ ಕೃಷಿ ಮಾಡಿದ್ದರು. ಆದರೆ, ಮಳೆಯಿಂದಾಗಿ ಎಲ್ಲವೂ ನಾಶವಾಗಿತ್ತು. ಬೆಳೆ ನಷ್ಟಕ್ಕೆ ಪರಿಹಾರವಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 1,53,110 ರೂ. ಪರಿಹಾರ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ, ಇತ್ತೀಚೆಗೆ ಹಣಪಾವತಿ ಕುರಿತು ಮಧುಕರ್ ಪಾಟೀಲ್ ಅವರಿಗೆ ಸಂದೇಶ ಬಂದಿದ್ದು, ಅದರಲ್ಲಿ, ರೈತನ ಖಾತೆಗೆ ಕೇವಲ 2.30 ರೂ. ಮಾತ್ರ ಜಮಾ ಆಗಿದೆ ಎಂದು ತೋರಿಸಿದೆ ಎಂಬುದಾಗಿ ವರದಿಯಾಗಿದೆ.

“ನಿರಂತರ ಮಳೆಯಿಂದಾಗಿ ಭತ್ತದ ಕೊಯ್ಲು ಸಂಪೂರ್ಣ ನಾಶವಾಗಿತ್ತು. ಗದ್ದೆಯಲ್ಲಿ ನೀರು ನಿಂತು ಬೆಳೆ ಕೊಳೆತು ಹೋಗಿತ್ತು. ಹುಲ್ಲು ಕೂಡ ಕಪ್ಪು ಬಣ್ಣಕ್ಕೆ ತಿರುಗಿತು, ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿ ಬಿಕ್ಕಟ್ಟು ಇನ್ನಷ್ಟು ಹದಗೆಟ್ಟಿತು. ಆದರೆ, ನಮ್ಮ ಖಾತೆಗೆ ಪರಿಹಾರದ ಮೊತ್ತವೆಂದು ಜಮಾ ಆಗಿರುವ 2.30 ರೂ. ನೋಡಿ ಆಘಾತಕ್ಕೊಳಗಾಗಿದ್ದೇವೆ” ಎಂದು ರೈತ ಮಧುಕರ್ ಹೇಳಿಕೊಂಡಿದ್ದಾರೆ.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಬಿಜೆಪಿ 1 ಕೋಟಿ ಉದ್ಯೋಗದ ಭರವಸೆ; 20 ವರ್ಷದಲ್ಲಿ ಆಗದ್ದು ಈಗ ಸಾಧ್ಯವೇ?

ಪಾಲ್ಘರ್ ಜಿಲ್ಲಾ ಕೃಷಿ ಅಧಿಕಾರಿ ನೀಲೇಶ್ ಭಾಗೇಶ್ವರ್ ಅವರು ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ಹೇಳಿದ್ದಾರೆ. “ಸಮಸ್ಯೆ ಕುರಿತು ತನಿಖೆ ಮಾಡಿದ್ದೇವೆ. ಆ ರೈತನಿಗೆ ಜಮಾ ಮಾಡಿದ ಮೊತ್ತವು 2023ರ ಖಾರಿಫ್ ಋತುವಿನಲ್ಲಿ ಉಂಟಾಗಿದ್ದ ನಷ್ಟಕ್ಕೆ ಪರಿಹಾರವಾಗಿ ನೀಡಲಾಗಿತ್ತು. ಅವರಿಗೆ, ಆ ವರ್ಷ ಒಟ್ಟು 72,466 ರೂ. ಪರಿಹಾರ ಘೋಷಿಸಲಾಗಿತ್ತು. 2024ರ ಮೇನಲ್ಲಿ ಅವರಿಗೆ 72,464 ರೂ. ಪಾವತಿಯಾಗಿತ್ತು. ಉಳಿಕೆ 2.30 ರೂ.ಗಳನ್ನು ಈ ವರ್ಷದ ಅಕ್ಟೋಬರ್ 31ರಂದು ಪಾವತಿಸಲಾಗಿದೆ. ಈ ಬಗ್ಗೆ ನಾವು ರೈತನಿಗೆ ಮಾಹಿತಿ ನೀಡಿದ್ದೇವೆ. ಅಲ್ಲದೆ, ಪರಿಹಾರ ಗೊಂದಲದ ಸಂಬಂಧ ಯಾವುದೇ ದೂರುಗಳು ಇಲ್ಲವೆಂದು ಅವರಿಂದ ಲಿಖಿತವಾಗಿ ಬೆರೆಯಿಸಿಕೊಳ್ಳಲಿದ್ದೇವೆ” ಎಂದು ಅವರು ಹೇಳಿದ್ದಾರೆ.

ಮಧುಕರ್ ಪಾಟೀಲ್ ಅವರು ದುಃಸ್ಥಿತಿಯ ಬಗ್ಗೆ ಮಾತನಾಡಿರುವ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, “ಪಾಲ್ಘರ್‌ನ ರೈತ ಬೆಳೆ ವಿಮಾ ಪರಿಹಾರವಾಗಿ ಕೇವಲ 2 ರೂ. ಮತ್ತು 30 ಪೈಸೆಗಳನ್ನು ಪಡೆದಿದ್ದಾರೆ ಎಂಬುದು ತಮಾಷೆಯಾಗಿದೆ” ಎಂದು ಹೇಳಿದ್ದಾರೆ. ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಾಲೆಗಳಲ್ಲಿ ರ‍್ಯಾಗಿಂಗ್ ತಡೆಗೆ ಕೇಂದ್ರದ ಹೊಸ ಕಾನೂನು ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

ದೇಶದ ಶಾಲೆಗಳು ಹಾಗೂ ಕಾಲೇಜುಗಳಲ್ಲಿ ರ‍್ಯಾಗಿಂಗ್ ಮತ್ತು ಕಿರುಕುಳವನ್ನು ತಡೆಯಲು ಕೇಂದ್ರ...

SIR ಅಕ್ರಮ | ಕೂಡಲೇ ಗ್ಯಾನೇಶ್‌ ಕುಮಾರ್‌, ಮೋದಿ ರಾಜೀನಾಮೆಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳಾಗಿವೆ ಎಂದು...

ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಖಿನ್ನತೆ, ಆತ್ಮಹತ್ಯೆಯ ಆಲೋಚನೆ: NTF ವರದಿ ಹೊರತಂದ ಆಘಾತಕಾರಿ ಸತ್ಯ!

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಕುರಿತು ಸುಪ್ರೀಂ ಕೋರ್ಟ್...