ಸೈಬರ್ ವಂಚನೆ | ಆನ್​ಲೈನ್​ನಲ್ಲಿ ₹82 ಲಕ್ಷ ಕಳೆದುಕೊಂಡ ಟೆಕ್ಕಿ

Date:

  • ಒಂದು ವರ್ಷದೊಳಗೆ ₹700 ಕೋಟಿ ಹಣ ಕಳೆದುಕೊಂಡ ಜನ
  • ಈ ಸೈಬರ್‌ ವಂಚನೆ ಜಾಲಕ್ಕೂ ಭಯೋತ್ಪಾದಕ ಸಂಘಟನೆಗೂ ಸಂಬಂಧ

ದೇಶದಲ್ಲಿ ನಿತ್ಯ ಹಲವಾರು ಸೈಬರ್‌ ವಂಚನೆ ಪ್ರಕರಣಗಳು ವರದಿಯಾಗುತ್ತಿದ್ದು, ಇತ್ತೀಚೆಗೆ ಹೈದರಾಬಾದ್‌ನ ಸಾಫ್ಟ್‌ವೇರ್ ಎಂಜಿನಿಯರ್‌ವೊಬ್ಬರು ಆನ್‌ಲೈನ್‌ನಲ್ಲಿ ₹82 ಲಕ್ಷ ಕಳೆದುಕೊಂಡಿದ್ದರು. ಈ ಬಗ್ಗೆ ತನಿಖೆ ಆರಂಭಿಸಿದ ಹೈದರಾಬಾದ್ ಪೊಲೀಸರು ಇದರಲ್ಲಿ ಚೀನಾದ ವ್ಯಕ್ತಿಗಳ ಕೈವಾಡವಿರುವ ಜಾಲವನ್ನು ಪತ್ತೆ ಮಾಡಿದ್ದಾರೆ.

- Advertisement -

ಚೀನಾದ ವ್ಯಕ್ತಿಗಳ ಕೈವಾಡವಿರುವ ಸೈಬರ್ ವಂಚನೆ ಜಾಲವು ದೇಶ ವಿದೇಶಗಳಲ್ಲಿ ಜನರನ್ನು ಹೂಡಿಕೆ ಹಾಗೂ ಅರೆಕಾಲಿಕ ಉದ್ಯೋಗಗಳನ್ನು ಕೊಡಿಸುವ ನೆಪದಲ್ಲಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ವಂಚನೆಯ ಸುಳಿಗೆ ಒಂದು ವರ್ಷದೊಳಗೆ ಕನಿಷ್ಠ 15 ಸಾವಿರ ಭಾರತೀಯರು ಸಿಲುಕಿ ₹700 ಕೋಟಿಗೂ ಅಧಿಕ ಹಣ ಕಳೆದುಕೊಂಡಿರುವುದಾಗಿ ವರದಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಹೈದರಾಬಾದ್‌ನ ಸಾಪ್ಟ್‌ವೇರ್ ಇಂಜಿನಿಯರ್ ಶಿವು ಎಂಬುವವರು ಆನ್‌ಲೈನ್‌ನಲ್ಲಿ ಬರೋಬ್ಬರಿ ₹82 ಲಕ್ಷ ಕಳೆದುಕೊಡಿದ್ದರು. ಸೈಬರ್ ಕ್ರೈಂ ಜಾಲದೊಳಗೆ ಸಿಲುಕಿದ್ದ ಇವರು ಹೈದರಾಬಾದ್ ಪೊಲೀಸ್‌ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು.

ಶಿವು ದೂರು ನೀಡಿದ ಬೆನ್ನಲ್ಲೇ, ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದರು. ಈ‌ ಪ್ರಕರಣವನ್ನು ಭೇದಿಸಿದ ಸೈಬರ್ ಕ್ರೈಂ ವಿಭಾಗದ ಪೊಲೀಸರು ಚೀನಾ ಸೈಬರ್ ವಂಚನೆ ಜಾಲವನ್ನು ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚನೆಯ ಮಾಸ್ಟರ್​ಮೈಂಡ್ ಅಹಮದಾಬಾದ್​ನ ಪ್ರಕಾಶ್ ಪ್ರಜಾಪತಿ ಹಾಗೂ ಕುಮಾರ್ ಪ್ರಜಾಪತಿ ಸೇರಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಚೀನಾದ ಕೆವಿನ್ ಜುನ್, ಲು ಲಾಂಗ್ಶೋ ಮತ್ತು ಶಾಶಾ ಎಂಬ ಮೂವರನ್ನು ಒಳಗೊಂಡ ಈ ತಂಡ ಭಾರತದಲ್ಲಿ ಕೆಲವರ ಸಹಕಾರದೊಂದಿಗೆ ಸೈಬರ್ ವಂಚನೆಯಲ್ಲಿ ತೊಡಗಿದೆ ಎಂದು ತಿಳಿದುಬಂದಿದೆ.

ಈ ಚೀನಾ ಮೂಲದ ಸೈಬರ್ ವಂಚನೆ ತಂಡವು ಯುಟ್ಯೂಬ್ ಹಾಗೂ ಫೇಸ್‌ಬುಕ್ ಮೂಲಕ ಅಮಾಯಕರನ್ನು ಟಾರ್ಗೆಟ್ ಮಾಡಿ ನಾನಾ ಕಂಪನಿಗಳ ಹೆಸರಿನಲ್ಲಿ 48 ಬ್ಯಾಂಕ್‌ ಖಾತೆಗಳಲ್ಲಿ ಒಟ್ಟು ₹548 ಕೋಟಿ ಜಮಾ ಆಗಿದೆ. ಇನ್ನುಳಿದಂತೆ ₹128 ಕೋಟಿ ಹಣವನ್ನು ಅಕ್ರಮವಾಗಿ ಹೂಡಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಚೀನಾದ ಸೈಬರ್‌ ವಂಚನೆ ಜಾಲಕ್ಕೂ ಭಯೋತ್ಪಾದಕ ಸಂಘಟನೆಗೂ ಸಂಬಂಧವಿದೆ ಎನ್ನಲಾಗಿದೆ. ಖಾತೆಗೆ ಬಂದ ಹಣವನ್ನು ಈ ತಂಡ ದುಬೈ ಮೂಲಕ ಚೀನಾಗೆ ರವಾನಿಸಿದೆ. ಇನ್ನೂ ಕೆಲವು ಹಣವನ್ನು ಲೆಬನಾನ್‌ ಮೂಲದ ಭಯೋತ್ಪಾದಕ ಗುಂಪು ಹೆಜ್ಬುಲ್ಲಾ ನಿರ್ವಹಿಸುತ್ತಿರುವ ಖಾತೆಗೆ ಕಳುಹಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಾಜಸ್ಥಾನ | ಅರೆಕಾಲಿಕ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ವಿಸ್ತರಣೆ ಮಸೂದೆ ಅಂಗೀಕಾರ

ಈ ವಂಚನೆಯ ಬಗ್ಗೆ ಕೇಂದ್ರ ಏಜೆನ್ಸಿಗಳು, ಕೇಂದ್ರ ಗೃಹ ಸಚಿವಾಲಯದ ಸೈಬರ್ ಕ್ರೈಂ ಘಟಕಕ್ಕೂ ವಿವರಗಳನ್ನು ನೀಡಲಾಗಿದೆ. ಈ ಜಾಲವು ಹಣದ ಒಂದು ಭಾಗವನ್ನು ಕ್ರಿಪ್ಟೋ ಕರೆನ್ಸಿಯಾಗಿ ಪರಿವರ್ತಿಸಲಾಗಿದೆ ಹಾಗು ಹಿಜ್ಬುಲ್ಲಾ ನಿರ್ವಹಿಸುವ ವ್ಯಾಲೆಟ್‌ಗೆ ಠೇವಣಿ ಮಾಡಲಾಗಿದೆ ಎಂದು‌ ಪೊಲೀಸರು ಹೇಳಿದ್ದಾರೆ.

ಈ ತಂಡವು ವಾಟ್ಸ್‌ಆಪ್ ಮತ್ತು ಟೆಲಿಗ್ರಾಮ್ ಮೂಲಕ ಅಮಾಯಕರನ್ನು ಸಂಪರ್ಕಿಸಿ ಹೂಡಿಕೆ ಮತ್ತು ಅರೆಕಾಲಿಕ ಉದ್ಯೋಗಗಳ ಹೆಸರಿನಲ್ಲಿ ಅಮಾಯಕ ಜನರನ್ನು ಯಾಮಾರಿಸಿ ಅವರಿಂದ ಕಡಿಮೆ ಹಣ ಹೂಡಿಕೆ ಮಾಡಿಸಿದ್ದಾರೆ. 5-6 ಲಕ್ಷ ಹಣವನ್ನು ಕಳೆದುಕೊಂಡವರನ್ನು ವಾಟ್ಸಾಪ್​ ಹಾಗೂ ಟೆಲಿಗ್ರಾಮ್​ನಲ್ಲಿ ಸಂಪರ್ಕಿಸಿ ಅವರಿಗೆ ₹5 ಸಾವಿರ ಮೊತ್ತದ ಸಣ್ಣ ಮೊತ್ತವನ್ನು ಹೂಡಿಕೆ ಮಾಡಲು ಕೇಳಿದ್ದಾರೆ. ಬಳಿಕ ಈ ಹೂಡಿಕೆಗೆ ದುಪ್ಪಟ್ಟು ಹಣ ನೀಡಿ ವಿಶ್ವಾಸ ಗಳಿಸಿದ್ದಾರೆ. ನಂತರ ಅಧಿಕ ಮೊತ್ತ ಹೂಡಿಕೆ ಮಾಡಲು ಪ್ರೇರೇಪಿಸಿ ಮೋಸ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ವಸತಿ ನಿಲಯದ ಊಟ ಸೇವಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಆಳಂದ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ...

ಕಲಬುರಗಿ | ತಾಂತ್ರಿಕ ದೋಷಕ್ಕೆ ತುರ್ತು ಲ್ಯಾಂಡಿಂಗ್; ತೊಗರಿ ಜಮೀನಿನಲ್ಲಿ ಲಘು ವಿಮಾನದ ತುರ್ತು ಭೂಸ್ಪರ್ಶ

ಹಾರಾಟದ ವೇಳೆ ದಿಢೀರ್‌ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತರಬೇತಿ ಲಘು...

ಪಂಜಾಬ್ ಸಿಎಂ ಭಗವಂತ್ ಮಾನ್ ಕ್ಯಾಂಪ್ ಕಚೇರಿ, ಒಎಸ್‌ಡಿ ಮನೆ ಮೇಲೆ ಸಿಬಿಐ ದಾಳಿ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಚೇರಿಗೆ ಸಂಬಂಧಿಸಿದ ಭ್ರಷ್ಟಾಚಾರ ಆರೋಪಗಳ...