ಜಾತಿ ದೌರ್ಜನ್ಯ | ಮಂಟಪದಲ್ಲಿ ಮದುವೆ ನಡೆಸಿದ್ದಕ್ಕೆ ದಲಿತ ಕುಟುಂಬದ ಮೇಲೆ ಹಲ್ಲೆ ನಡೆಸಿದ ದುರುಳರು; ಇಬ್ಬರಿಗೆ ಗಂಭೀರ ಗಾಯ

Date:

ವಿವಾಹ ಮಂಟಪದಲ್ಲಿ ಮದುವೆ ಸಮಾರಂಭವನ್ನು ನಡೆಸಿದ್ದಕ್ಕಾಗಿ ದಲಿತ ಕುಟುಂಬವೊಂದಕ್ಕೆ ಸವರ್ಣಿಯರ ಗುಂಪೊಂದು ಅಮಾನುಷವಾಗಿ ಕೋಲು ಮತ್ತು ರಾಡ್‌ಗಳಿಂದ ಥಳಿಸಿದ ಘಟನೆ ಉತ್ತರ ಪ್ರದೇಶದ ರಾಸ್ರಾದಲ್ಲಿ ನಡೆದಿದೆ.

- Advertisement -

ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ದಾಳಿಯಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಪೊಲೀಸರು ಭಾನುವಾರ ತಿಳಿಸಿದ್ದಾರೆ. ದಾಳಿ ನಡೆಸುವ ಮುನ್ನ ಗುಂಪು, “ದಲಿತ ಸಮುದಾಯದವರಾಗಿದ್ದು, ನೀವು ಹಾಲ್‌ನಲ್ಲಿ(ಮದುವೆ ಮಂಟಪ) ಮದುವೆಯನ್ನು ಹೇಗೆ ನಡೆಸುತ್ತಿದ್ದೀರಿ” ಎಂದು ಪ್ರಶ್ನಿಸಿದ್ದಾರೆ. ಬಳಿಕ ಅಮಾನುಷವಾಗಿ ಥಳಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಇದನ್ನು ಓದಿದ್ದೀರಾ? ಜಾತಿ ದೌರ್ಜನ್ಯ | ಕುದುರೆ ಮೇಲೆ ಮೆರವಣಿಗೆ: ದಲಿತ ವರನ ಮೇಲೆ 40 ಮಂದಿ ಪ್ರಬಲ ಜಾತಿಯ ದುರುಳರಿಂದ ಹಲ್ಲೆ

ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯೊಬ್ಬರ ಸಹೋದರ ರಾಘವೇಂದ್ರ ಗೌತಮ್ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಸುಮಾರು 20ಕ್ಕೂ ಅಧಿಕ ಜನರ ಗುಂಪು ರಾತ್ರಿ 10:30 ರ ಸುಮಾರಿಗೆ ಸ್ವಯಂವರ ಮದುವೆ ಮಂಟಪಕ್ಕೆ ನುಗ್ಗಿ ಕೋಲು ಮತ್ತು ರಾಡ್‌ಗಳಿಂದ ಎಲ್ಲರ ಮೇಲೆ ದಾಳಿ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಾಗೆಯೇ ಮಲ್ಲಾಹ್ ಟೋಲಿ ಪ್ರದೇಶದ ಅಮನ್ ಸಾಹ್ನಿ, ದೀಪಕ್ ಸಾಹ್ನಿ, ರಾಹುಲ್ ಮತ್ತು ಅಖಿಲೇಶ್ ಮತ್ತು 15-20 ಅಪರಿಚಿತ ವ್ಯಕ್ತಿಗಳು ಈ ಗುಂಪಿನಲ್ಲಿದ್ದರು ಎಂದು ದೂರುದಾರರು ತಿಳಿಸಿದ್ದಾರೆ. ಶುಕ್ರವಾರ ಘಟನೆ ನಡೆದಿದ್ದರೂ ಈ ಘಟನೆಗೆ ಸಂಬಂಧಿಸಿ ಈವರೆಗೂ ಯಾರನ್ನೂ ಬಂಧಿಸಲಾಗಿಲ್ಲ.

ಇದನ್ನು ಓದಿದ್ದೀರಾ? ಗುಜರಾತ್‌ | ಪ್ರಬಲ ಜಾತಿ ಮಗುವನ್ನು ‘ಬೇಟಾ’ ಎಂದಿದ್ದಕ್ಕೆ ದಲಿತನ ಹತ್ಯೆ

ಗೌತಮ್ ಅವರ ಸಂಬಂಧಿಕರಾದ ಅಜಯ್ ಕುಮಾರ್ ಮತ್ತು ಮನನ್ ಕಾಂತ್ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ರಾಸ್ರಾ ಪೊಲೀಸ್ ಠಾಣೆಯ ಉಸ್ತುವಾರಿ ವಿಪಿನ್ ಸಿಂಗ್ ದೃಢಪಡಿಸಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ಜಾತಿ ದೌರ್ಜನ್ಯ

ದೇಶ ಎಷ್ಟು ಅಭಿವೃದ್ಧಿಯಾದರೂ ಜಾತಿ ದೌರ್ಜನ್ಯ ಇಂದಿಗೂ ಜೀವಂತವಾಗಿ ಉಳಿದಿದೆ. ಸಾಂವಿಧಾನಿಕ ರಕ್ಷಣೆ, ಕಾನೂನು ರಕ್ಷಣೆ ಇದ್ದರೂ ದೇಶದಲ್ಲಿ ದಲಿತರ ಮೇಲೆ ವ್ಯವಸ್ಥಿತ ಹಿಂಸೆ, ತಾರತಮ್ಯ ಮುಂದುವರೆದಿದೆ. ಅಲ್ಲಲ್ಲಿ ದಲಿತರು ಸಾಮಾಜಿಕ ಬಹಿಷ್ಕಾರವನ್ನು ಎದುರಿಸುತ್ತಲೇ ಇದ್ದಾರೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ಕುಟುಂಬ ಕೊಂಚ ಸಂಭ್ರಮದಿಂದ ವಿವಾಹ ನಡೆಸಿದರೆ, ದೇವಾಲಯಕ್ಕೆ ಪ್ರವೇಶಿಸಿದರೆ ಅದಕ್ಕೆ ಸವರ್ಣಿಯರ ವಿರೋಧ, ದಾಳಿ ಇಂದಿಗೂ ನಿಂತಿಲ್ಲ. ಜಾತಿ ದೌರ್ಜನ್ಯ ಹಲ್ಲೆಗೆ ಕೊನೆಯಾಗಿಲ್ಲ, ಹತ್ಯೆಯೂ ನಡೆಯುತ್ತಿದೆ. ಇತ್ತೀಚೆಗೆ ಗುಜರಾತ್‌ನಲ್ಲಿ ಪ್ರಬಲ ಜಾತಿಯ ಮಗುವನ್ನು ‘ಮಗು’ ಎಂದು ಕರೆದಿದ್ದಕ್ಕೆ ಹತ್ಯೆ ಮಾಡಲಾಗಿದೆ. ಅನ್ಯ ಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ, ಬಾವಿಯಿಂದ ನೀರು ತೆಗೆದಿದ್ದಕ್ಕೆ ಹೀಗೆ ದಲಿತ ಎಂಬ ಕಾರಣಕ್ಕೆ ಹತ್ಯೆ, ಹಲ್ಲೆ ಕೃತ್ಯಗಳು ಅಲ್ಲಲ್ಲಿ ವರದಿಯಾಗುತ್ತಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಜಾ, ಕ್ಷಮೆ, ಮರುನೇಮಕ: ಸೋದರಳಿಯ ಆಕಾಶ್ ಆನಂದ್’ಗೆ ಮೂರನೇ ಬಾರಿಗೆ ಮಣೆಹಾಕಿದ ಮಾಯಾವತಿ

ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ರಾಷ್ಟ್ರೀಯ ಸಂಚಾಲಕ ಹುದ್ದೆಯಿಂದ ಸೋದರಳಿಯ ಆಕಾಶ್...

SIR ನಲ್ಲಿ ದೊಡ್ಡ ಪ್ರಮಾಣದ Form 7 ಅರ್ಜಿಗಳ ಸಲ್ಲಿಕೆ  ಆರೋಪ; ಕ್ರಮಕ್ಕೆ ತೆಲಂಗಾಣ ಚುನಾವಣಾ ಆಯುಕ್ತರ ಆದೇಶ

ಹೈದರಾಬಾದ್: ಪ್ರಸ್ತುತ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ  ದೊಡ್ಡ ಪ್ರಮಾಣದಲ್ಲಿ ನಕಲಿ Form...

Form 6 ಬದಲಾಯಿಸಿದ್ದು ಯಾರು, ದಾಖಲೆ ಕೊಡಿ; ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಹೊಸ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಬಳಸುವ Form 6ನಲ್ಲಿ...

ಬಂಗಾಳ SIR | ನೋಟಿಸ್ ನೀಡಲು, ಹೆಸರು ಮರು ಸೇರಿಸಲು ಸಾಧ್ಯವಿಲ್ಲ: EC ಪೋರ್ಟಲ್ ವಿರುದ್ಧ ನ್ಯಾಯಾಧೀಶರ ದೂರು

ಪಶ್ಚಿಮ ಬಂಗಾಳದಲ್ಲಿ SIR ವೇಳೆ ಮತದಾರರ ಪಟ್ಟಿಯಿಂದ ಹೊರಗಿಡಲಾದವರ ಮೇಲ್ಮನವಿಗಳ ವಿಚಾರಣೆ...