ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ: ಡಿಪಿಡಿಪಿ ಕಾಯ್ದೆ ಪ್ರಶ್ನಿಸಿ ಕೇಂದ್ರಕ್ಕೆ ಸುಪ್ರೀಂ ನೋಟಿಸ್

Date:

ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ (ಡಿಪಿಡಿಪಿ) ಕಾಯ್ದೆ ಮತ್ತು ನಿಯಮಗಳು ಮಾಧ್ಯಮ ಸ್ವಾತಂತ್ರ್ಯ ಹಾಗೂ ಮಾಹಿತಿ ಹಕ್ಕನ್ನು (ಆರ್‌ಟಿಐ) ಉಲ್ಲಂಘಿಸುತ್ತವೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

- Advertisement -

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ನೋಟಿಸ್ ನೀಡಿದೆ. ‘ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್’ (DNPA) ಪರವಾಗಿ ಹಾಜರಿದ್ದ ಹಿರಿಯ ವಕೀಲೆ ಮಾಧವಿ ದಿವಾನ್ ಅವರ ವಾದವನ್ನು ಆಲಿಸಿದ ನ್ಯಾಯಾಲಯವು, ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಬಾಕಿ ಇರುವ ಇತರ ಅರ್ಜಿಗಳೊಂದಿಗೆ ನವೆಂಬರ್ 17ಕ್ಕೆ ಮುಂದೂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚಿಕ್ಕಮಗಳೂರು | ಉದ್ಯಾನವನಕ್ಕೆ ಮೀಸಲಿಟ್ಟ ಜಾಗದಲ್ಲಿ ಸಂತೆ ನಡೆಸಲು...

ಉದ್ಯಾನವನ ಮಾನವನ ಮಾನಸಿಕ ನೆಮ್ಮದಿ, ವಿನೋದ, ವಿಶ್ರಾಂತಿ ಹಾಗೂ ವನ್ಯಜೀವಿ ಹಾಗೂ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಲು ಮೀಸಲಿಟ್ಟ ಒಂದು ಹಸಿರು ತಾಣ ಎಂದೇ ಹೇಳಬಹುದು. ಆಧುನಿಕ ವ್ಯವಸ್ಥೆಯಲ್ಲಿ ನಗರ ಜೀವನದ ಜಂಜಾಟದ ನಡುವೆ...

ವಿಜಯಪುರ | 80ರ ಗಡಿ ದಾಟಿದ ಬಿಳಿ ಜೋಳ,...

ವಿಜಯಪುರ ಎಂದಾಕ್ಷಣ ನೆನಪಾಗುವುದು ಬಿಳಿ ಜೋಳದ ರೊಟ್ಟಿ. ಉತ್ತರ ಕರ್ನಾಟಕದ ಜನರ ಬದುಕು, ಆಹಾರ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿರುವ ಜೋಳವೇ ಈಗ ಸಾಮಾನ್ಯ ಜನರ ಕೈಗೆಟುಕದ ವಸ್ತುವಾಗುತ್ತಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ...

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ, ಜನರ ಬದುಕನ್ನು ಸುಡುತ್ತಿರುವ ಬೆಂಕಿ ಕಾಣುವುದಿಲ್ಲವೇ? ರಾಜಕಾರಣಿಯೊಬ್ಬರ ಖಾಸಗಿ ಬದುಕಿನ ಬಗ್ಗೆ ಸುದ್ದಿ ಹೊರಬಿದ್ದರೆ ಸಾಕು; ಮಾಧ್ಯಮಗಳಲ್ಲಿ ಚರ್ಚೆಗಳ ಮಹಾಪೂರ. ಯಾರು...

ದತ್ತಾಂಶ ಸಂರಕ್ಷಣಾ ಕಾಯ್ದೆ ಮತ್ತು ಅದರ ನಿಯಮಗಳ ಹಲವು ನಿಬಂಧನೆಗಳು ಅಸಂವಿಧಾನಿಕವಾಗಿದ್ದು, ಅವುಗಳನ್ನು ರದ್ದುಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಈ ಕಾಯ್ದೆಯಲ್ಲಿ ಪತ್ರಿಕೋದ್ಯಮದ ಚಟುವಟಿಕೆಗಳಿಗೆ ಯಾವುದೇ ವಿನಾಯಿತಿ ನೀಡಿಲ್ಲ; ಇದರಿಂದಾಗಿ ದೈನಂದಿನ ಸುದ್ದಿ ವರದಿಗಾರಿಕೆಗೆ ತೀವ್ರ ಅಡ್ಡಿಯಾಗಲಿದ್ದು, ತನಿಖಾ ಪತ್ರಿಕೋದ್ಯಮಕ್ಕೆ ಹೊಡೆತ ಬೀಳಲಿದೆ ಮತ್ತು ಸುದ್ದಿಯ ಮೂಲಗಳ ಗೌಪ್ಯತೆಗೆ ಧಕ್ಕೆಯಾಗಲಿದೆ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ವಿಚಾರಣೆ ವೇಳೆ ವಾದ ಮಂಡಿಸಿದ ಮಾಧವಿ ದಿವಾನ್, “ಇದು ಸಾಂಪ್ರದಾಯಿಕ ಮಾಧ್ಯಮಗಳು (Legacy Media) ಒಟ್ಟಾಗಿ ಸೇರಿ ಪ್ರಶ್ನಿಸಿರುವ ಮೊದಲ ಸಮಗ್ರ ಅರ್ಜಿಯಾಗಿದೆ” ಎಂದರು. ಕಾಯ್ದೆಯಲ್ಲಿರುವ ‘ಸಮ್ಮತಿ’ (Consent) ಪಡೆಯುವ ನಿಯಮವು ಸುದ್ದಿ ಸಂಗ್ರಹಣೆಯನ್ನು ಅಸಾಧ್ಯವಾಗಿಸುತ್ತದೆ ಎಂದು ವಿವರಿಸಿದ ಅವರು, “ಒಬ್ಬ ವ್ಯಕ್ತಿಯು ತನ್ನ ದತ್ತಾಂಶ ಬಳಕೆಗೆ ಸಮ್ಮತಿ ನೀಡುವ ಅಥವಾ ಬಿಡುವ ನಿರ್ಧಾರದ ಮೇಲೆಯೇ ನಾವು ಅವಲಂಬಿತರಾದರೆ, ಸುದ್ದಿಯನ್ನು ಪ್ರಸಾರ ಮಾಡುವುದಾದರೂ ಹೇಗೆ?” ಎಂದು ಪ್ರಶ್ನಿಸಿದರು.

ಈ ನಿಯಮಗಳು ಟೆಲಿವಿಷನ್ ಪತ್ರಿಕೋದ್ಯಮ ಮತ್ತು ತ್ವರಿತಗತಿಯ ವರದಿಗಾರಿಕೆಯ ಮೇಲೆ ಗಂಭೀರ ಪರಿಣಾಮ ಬೀರಲಿವೆ ಎಂದು ಹಿರಿಯ ವಕೀಲರು ಒತ್ತಿ ಹೇಳಿದರು. “ಟಿವಿಗಳಲ್ಲಿ ಸುದ್ದಿಗಳು ನೇರಪ್ರಸಾರವಾಗುತ್ತವೆ. ಕಾಯ್ದೆಯನ್ವಯ ಪ್ರತಿಯೊಂದಕ್ಕೂ ಅನುಮತಿ ಮತ್ತು ಸಮ್ಮತಿ ಕೇಳಬೇಕೆಂದರೆ ಸುದ್ದಿಮನೆಗಳನ್ನು ಮುಚ್ಚುವುದೊಂದೇ ದಾರಿ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ, ವಿವಾದಾತ್ಮಕ ನಿಬಂಧನೆಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡುವಂತೆಯೂ ಪೀಠವನ್ನು ಕೋರಿದರು.

ಮಾಹಿತಿ ಹಕ್ಕು (RTI) ಕಾಯ್ದೆಯ ಸೆಕ್ಷನ್ 8(1)(j)ಗೆ ತಂದಿರುವ ತಿದ್ದುಪಡಿಯನ್ನೂ ಈ ಸಂಘಟನೆಯು ಪ್ರಶ್ನಿಸಿದೆ. ಈ ಬದಲಾವಣೆಯಿಂದಾಗಿ ಸಾರ್ವಜನಿಕ ಅಧಿಕಾರಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯುವುದು ಕಷ್ಟವಾಗಲಿದ್ದು, ಸಾರ್ವಜನಿಕ ಪರಿಶೀಲನೆಯ ವ್ಯಾಪ್ತಿಯೇ ಸೀಮಿತವಾಗಲಿದೆ ಎಂದು ಆರೋಪಿಸಲಾಗಿದೆ. “ಸೆಕ್ಷನ್ 8(1)(j) ಅನ್ನು ತೆಗೆದುಹಾಕಿರುವುದರಿಂದ ಸುದ್ದಿ ಎಂಬ ಪರಿಕಲ್ಪನೆಯೇ ಸಂಪೂರ್ಣವಾಗಿ ಬದಲಾಗಲಿದೆ” ಎಂದು ದಿವಾನ್ ನ್ಯಾಯಾಲಯದ ಗಮನಕ್ಕೆ ತಂದರು.

ಇದಲ್ಲದೆ, ಡಿಪಿಡಿಪಿ ಕಾಯ್ದೆಯಡಿ ಮಾಹಿತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ನೀಡಿರುವ ಅಧಿಕಾರಗಳ ಬಗ್ಗೆಯೂ ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಈ ನಿಬಂಧನೆಗಳು ಮಾಧ್ಯಮ ಸಂಸ್ಥೆಗಳ ದೈನಂದಿನ ಕಾರ್ಯನಿರ್ವಹಣೆಯ ಮೇಲೆ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ನಿರ್ಭೀತಿಯಿಂದ ವರದಿ ಮಾಡುವ ಅವುಗಳ ಸಾಮರ್ಥ್ಯದ ಮೇಲೆ ವ್ಯಾಪಕವಾದ ದುಷ್ಪರಿಣಾಮ ಬೀರಲಿವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದಲ್ಲಿ ಗ್ಯಾನೇಶ್‌ ಕುಮಾರ್ ಏಕಪಕ್ಷೀಯ ನಿರ್ಧಾರ; ಅರ್ಜಿ ವಿಚಾರಣೆಯನ್ನು ನ.17ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್‌

ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಕಾರ್ಯವೈಖರಿಯನ್ನು ಪ್ರಶ್ನಿಸಿ...

ವಿಜಯಪುರ ಪೊಲೀಸರ ಕಾರ್ಯಾಚರಣೆ: ರೂ. 1.07 ಕೋಟಿ ಮೌಲ್ಯದ 537 ಮೊಬೈಲ್ ಪತ್ತೆ!

ಸಾರ್ವಜನಿಕರು ಕಳೆದುಕೊಂಡಿದ್ದ, ಕಳ್ಳತನವಾಗಿದ್ದ ಮೊಬೈಲ್‌ಗಳನ್ನು ಪತ್ತೆಹಚ್ಚುವಲ್ಲಿ ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ...

ಕಿವೀಸ್ ಬಗ್ಗುಬಡಿದ ಭಾರತ: ಅಭಿಷೇಕ್ ಶರ್ಮಾ ಸಿಡಿಲಬ್ಬರದ ಶತಕ, 3-0 ಅಂತರದಲ್ಲಿ ಸರಣಿ ಕೈವಶ

ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿರುವ ಹೆನ್ರಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 27ರಂದು ನಡೆದ ಆತಿಥೇಯ ನ್ಯೂಜಿಲೆಂಡ್...

ಬೀದರ್‌ | ಬಿಸಿಲಿನ ತಾಪ ಹೆಚ್ಚಳ: ಆರೋಗ್ಯ ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಲು ಸಿಇಒ ಸಲಹೆ

ಬೀದರ್ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಆರೋಗ್ಯದ...