ವರದಕ್ಷಿಣೆ ಘೋರ | ಪತಿಗೆ ಕಿಡ್ನಿ ದಾನ ಮಾಡು, ಇಲ್ಲವೇ 30 ಲಕ್ಷ ರೂ. ಕೊಡು; ಮಹಿಳೆಗೆ ಗಂಡನ ಕುಟುಂಬದ ದೌರ್ಜನ್ಯ

Date:

“ಪತಿಗೆ ಕಿಡ್ನಿ ದಾನ ಮಾಡು ಇಲ್ಲವೇ 30 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ” — ಇದು ಉತ್ತರ ಪ್ರದೇಶದ ಕಾನ್ಪುರದ ಮಹಿಳೆಯೊಬ್ಬರು ತಮ್ಮ ಗಂಡನ ಮನೆಯವರಿಂದ ಎದುರಿಸಿದ ವಿಚಿತ್ರ ಮತ್ತು ವಿಕೃತ ಬೇಡಿಕೆ. ಪತಿ ಮತ್ತು ಅತ್ತೆ-ಮಾವನ ಈ ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಮಹಿಳೆ ಇದೀಗ, ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಗಂಡನ ಮನೆಯವರ ವಿರುದ್ಧ ದೂರು ದಖಲಿಸಿದ್ದಾರೆ.

- Advertisement -

ಕಾನ್ಪುರದ ಚಕೇರಿ ಪೊಲೀಸ್‌ ಠಾಣೆಯ ಪೊಲೀಸರು ಮಹಿಳೆಯ ದೂರನ್ನು ದಾಖಲಿಸಿಕೊಂಡಿದ್ದು, ಆಕೆಯ ಪತಿ ಮತ್ತು ಅತ್ತೆ-ಮಾವನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಮಹಿಳೆಯ ದೂರಿನಲ್ಲಿ; “2023ರ ಜೂನ್‌ನನ್ನು ನನಗೂ – ನಿಶಾಂತ್ ಕುಮಾರ್‌ಗೂ ಮದುವೆಯಾಗಿದೆ. ಮದುವೆಗೂ ಮುನ್ನವೇ ನಿಶಾಂತ್‌ಗೆ ಎರಡೂ ಕಿಡ್ನಿಗಳು ವೈಫಲ್ಯಗೊಂಡಿದ್ದವು. ಆದರೆ, ಆ ವಿಷಯವನ್ನು ಮುಚ್ಚಿಟ್ಟು ಮದುವೆ ಮಾಡಿದ್ದಾರೆ. ಮದುವೆಯ ಸಮದಯಲ್ಲಿ ಚಿನ್ನಾಭರಣ, 8 ಲಕ್ಷ ರೂ. ನಗದು ಹಾಗೂ ಮಹಿಂದ್ರಾ ಥಾರ್ ಕಾರನ್ನು ವರದಕ್ಷಿಣೆಯಾಗಿ ನನ್ನ ಮನೆಯವರು ಕೊಟ್ಟಿದ್ದಾರೆ. ಈಗ, ವಿವಾದ ಬಳಿಕ, ವರದಕ್ಷಿಣೆಯಾಗಿ ಪತಿಗೆ ನನ್ನದೊಂದು ಕಿಡ್ನಿ ದಾನ ಮಾಡಬೇಕು. ಇಲ್ಲವೇ, ಆತನ ಶಸ್ತ್ರಚಿಕಿತ್ಸೆಗಾಗಿ 30 ಲಕ್ಷ ರೂ. ಹೊಂದಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಕಿರುಕುಳ ನೀಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

“ಪತಿಯು ದೈಹಿಕ ಸಂಬಂಧದಲ್ಲಿ ಆಸಕ್ತಿ ತೋರಿಸುತ್ತಿರಲಿಲ್ಲ. ಸಂಬಂಧಕ್ಕೆ ಒತ್ತಾಯಿಸಿದಾಗ ಬೇರೆಯವರನ್ನು ಮದುವೆಯಾಗುವಂತೆ ಹೇಳುತ್ತಿದ್ದನು. ಮಲಗುವ ಕೋಣೆಯಲ್ಲಿ ನಮ್ಮ ನಡುವೆ ಅತ್ತೆ ಮಲಗುತ್ತಿದ್ದರು. ಮಾವ ಅನುಮತಿ ಇಲ್ಲದೆ ಕೋಣೆಗೆ ನುಗ್ಗಿ ಫೋಟೋಗಳನ್ನು ತೆಗೆಯುತ್ತಿದ್ದರು. ಪತಿ ಪ್ರತಿದಿನ 10 ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದನು. ಕೇಳಿದರೆ ಅಧಿಕ ರಕ್ತದೊತ್ತಡ ಎಂದು ಸುಳ್ಳು ಹೇಳುತ್ತಿದ್ದರು” ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ರಷ್ಯಾದಿಂದ ತೈಲ, ಅನಿಲ ಪೂರೈಕೆಗೆ ಸಮ್ಮತಿ: ಭಾರತದ ಇಂಧನದ ಕೊರತೆ ಎಷ್ಟರ ಮಟ್ಟಿಗೆ ನೀಗಲಿದೆ?

“2024ರ ಏಪ್ರಿಲ್‌ನಲ್ಲಿ ನಾನು ನನ್ನ ಪತಿಯ ವೈದ್ಯಕೀಯ ಕಡತವನ್ನು ಪತ್ತೆಹಚ್ಚಿ, ನೋಡಿದಾಗ, ಆಘಾತಕಾರಿ ಸತ್ಯ ಹೊರಬಂದಿತು. ಆತನಿಗೆ ಎರಡೂ ಕಿಡ್ನಿಗಳು 2022ರಲ್ಲೇ ವೈಫಲ್ಯಗೊಂಡಿದ್ದವು. ಆತ ಡಯಾಲಿಸಿಸ್‌ ಪಡೆಯುತ್ತಿದ್ದನು. ಈ ಬಗ್ಗೆ ಪ್ರಶ್ನಿಸಿದಾಗ, ಅತ್ತೆ-ಮಾವಂದಿರು ನನಗೆ ಎರಡು ಆಯ್ಕೆಗಳನ್ನು ನೀಡಿದರು: ನನ್ನ ತವರು ಮನೆಯಿಂದ 30 ಲಕ್ಷ ರೂಪಾಯಿ ತರು ಅಥವಾ ನಿನ್ನ ಒಂದು ಕಿಡ್ನಿಯನ್ನು ಪತಿಗೆ ದಾನ ಮಾಡಬೇಕು ಎಂಬುದು ಅವರ ಬೇಡಿಕೆಯಾಗಿತ್ತು” ಎಂದು ಆರೋಪಿಸಿದ್ದಾರೆ.

ಮಹಿಳೆಯು ಗಂಡನ ಮನೆ ತೊರೆದು, ತಂದೆಯ ಮನೆಗೆ ಮರಳಿದ್ದಾರೆ. ಪ್ರಸ್ತುತ, ಅವರು ಕಾನ್ಪುರದಲ್ಲಿ ನೆಲೆಸಿದ್ದಾರೆ. ತಾನು ಪತಿಯ ಮನೆಯಿಂದ ಬರುವಾಗ ತನ್ನೆಲ್ಲ ಒಡವೆಗಳನ್ನು ಅತ್ತೆ-ಮಾವ ಕಿತ್ತುಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

“ನಾವು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು,” ಎಂದು ಕಾನ್ಪುರ ಹಿರಿಯ ಪೊಲೀಸ್ ಅಧಿಕಾರಿ ಅಭಿಷೇಕ್ ಪಾಂಡೆ ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...