ಹಾಸನ ಮಣ್ಣಿನ ಹೆಣ್ಣು ದನಿಗಳು | ಜಿಲ್ಲಾ ಲೇಖಕಿಯರ ಬಳಗ ನಡೆದು ಬಂದ ಹಾದಿ

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…

ಈ ನೆಲದ ಮೇಲೆ ಸ್ತ್ರೀ ಅಸ್ಮಿತೆ ಉಳಿಯಬೇಕಾದರೆ ವಿಭಿನ್ನ ಕ್ಷೇತ್ರದ ಕುರಿತ ಲೇಖಕಿಯರ ಅಭಿವ್ಯಕ್ತಿಗಳು ಬರಹ ರೂಪದಲ್ಲಿ ದಾಖಲೆ ಆಗಬೇಕು. ಆಗ ಮಾತ್ರ ಮಹಿಳಾ ಸಾಹಿತ್ಯ ಉಳಿಯಲು, ಬೆಳೆಯಲು ಸಾಧ್ಯ. 1500 ವರ್ಷಗಳ ಸಾಹಿತ್ಯ ಚರಿತ್ರೆ ಗಮನಿಸಿದರೆ ಮಹಿಳೆಯರಿಂದ ರಚಿಸಿದ ಯಾವುದೇ ಪ್ರಕಾರಗಳ ಸಾಹಿತ್ಯ ಹೆಚ್ಚು ಸಿಗುವುದಿಲ್ಲ. ಇದನ್ನು ಹಲವಾರು ಸಂಶೋಧನೆಗಳಿಂದ ಸಾಬೀತು ಪಡಿಸಲಾಗುತ್ತಾ ಬಂದಿದೆಯೆಂದು ಸ್ತ್ರೀವಾದಿ ಚಿಂತಕಿಯರು ಅಭಿಪ್ರಾಯಪಡುತ್ತಾರೆ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಬಹುತೇಕ ಸ್ತ್ರೀಯರು ವಿದ್ಯೆಯಿಂದ ವಂಚಿತರಾಗಿರುವುದು, ಪುರುಷ ಪ್ರಧಾನ ವ್ಯವಸ್ಥೆ, ವೈವಾಹಿಕ ಬದುಕು, ಆಳವಾದ ಅಧ್ಯಯನದ ಕೊರತೆ, ಸಾಮಾಜಿಕ ವ್ಯವಸ್ಥೆ/ವಿನ್ಯಾಸ, ಮೌಢ್ಯತೆ, ಸಂಪ್ರದಾಯ ಹೇರಿಕೆ, ಕುಟುಂಬ ನಿರ್ವಹಣೆಯ ಒತ್ತಡ, ಪ್ರೋತ್ಸಾಹದ-ಅವಕಾಶಗಳ-ಮಾರ್ಗದರ್ಶನದ-ಮಾಹಿತಿಯ ಕೊರತೆ… ಹೀಗೆ ಹತ್ತು ಹಲವಾರು ಕಾರಣಗಳಿವೆ.

- Advertisement -

ಪುರುಷ ಪ್ರಧಾನ ಸಮಾಜದಲ್ಲಿ ಪ್ರಶ್ನಿಸುವ ಮೂಲಕ ಅನೇಕ ಮಹಿಳೆಯರು ಬಂಡಾಯದ ಧ್ವನಿ ಎತ್ತಿದರು. ಅವರ ಹೋರಾಟಗಳ ಪ್ರಭಾವ, ಸ್ತ್ರೀವಾದಿ ಸಂವೇದನೆಯ ಪ್ರಭಾವ, ಬಂಡಾಯ ಕಾಲದ ತೀವ್ರತೆ, ಕನ್ನಡದ ಕೆಲವು ಸಂಘಟನೆಗಳ ಮೂಲಕ- ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬಂದರು. ಅವರ ಸಾಹಿತ್ಯ ಕೃಷಿಯಿಂದಾಗಿ ಸೃಜನಶೀಲ ಸಾಹಿತ್ಯ ಮಾತ್ರವಲ್ಲದೇ, ಕಾನೂನು, ವೈದ್ಯಕೀಯ, ವಿಜ್ಞಾನ, ಆರೋಗ್ಯ, ಕೃಷಿ, ಜಾನಪದ, ಸಂಶೋಧನೆ ಮುಂತಾದ ಕ್ಷೇತ್ರಗಳ ಹೆಣ್ಣು ನೋಟಗಳು ಮುನ್ನೆಲೆಗೆ ಬರಲಾರಂಭಿಸಿದವು. ಆಗೀಗ ಒಂದಷ್ಟು ಮಹಿಳೆಯರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಕೂಡ ದೊರೆಯಿತು. ಸಮ್ಮೇಳನಗಳಲ್ಲಿ ಬರುಬರುತ್ತ ಮಹಿಳಾ ಸದಸ್ಯರಿಗೆ ಪ್ರತ್ಯೇಕ ವೇದಿಕೆಗಳನ್ನು ಕಲ್ಪಿಸಿ ವಿಚಾರಗೋಷ್ಠಿ ಪ್ರಾರಂಭಿಸಿದರು. ಅಷ್ಟೇ…

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಇದನ್ನು ಓದಿದ್ದೀರಾ?: ಜಿಲ್ಲೆಯ ಸಂಗೀತ ಲೋಕದ ಮಿಂಚುಗಳು

ಇದಕ್ಕಾಗಿಯೆ ಅಂಬೇಡ್ಕರ್ ಅವರು ಮಹಿಳಾ ಮೀಸಲಾತಿಯನ್ನು ಪ್ರತಿಪಾದಿಸಿದರು. ವೀರಾಂಗನೆ ಸಾವಿತ್ರಿಬಾಯಿ ಫುಲೆ ಅವರ ಹೋರಾಟದ ಫಲಾನುಭವಿಗಳಾದ ನಾವಿಂದು ವಿದ್ಯಾವಂತರಾಗಲು, ವಿವೇಚಿಸಲು, ಪ್ರಶ್ನಿಸಲು ಅವಕಾಶವಾಗಿದೆ. ಈ ರೀತಿಯ ಪ್ರಭಾವದಿಂದಾಗಿ ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಲೇಖಕಿಯರ ಸಂಘ, ಸಂಘಟನೆ, ಸಂಸ್ಥೆಗಳು ತಲೆ ಎತ್ತಲು ಸಾಧ್ಯವಾಯಿತು. ಅದರ ಒಂದು ಫಲವೇ ಹಾಸನ ಜಿಲ್ಲಾ ಲೇಖಕಿಯರ ಬಳಗ.

ಮೂರು ದಶಕಗಳ ಹಿಂದೆ ಹಾಸನದಂತಹ ಜಿಲ್ಲಾ ಕೇಂದ್ರದಲ್ಲಿಯೂ ಸಾಹಿತ್ಯಕ ವಾತಾವರಣವೇನು ಇರಲಿಲ್ಲ. ಓದುವ ಬರೆಯುವ ಆಸಕ್ತಿ ಇದ್ದವರಿಗೆ ಹೇಗೆ ಬರೆಯಬೇಕು? ಏನು ಬರೆಯಬೇಕು? ಪತ್ರಿಕೆಗಳಿಗೆ ಹೇಗೆ ಕಳಿಸಬೇಕು? ಪುಸ್ತಕ ಹೇಗೆ ಮಾಡಬೇಕು?… ಎನ್ನುವ ಮಾಹಿತಿಯಾಗಲಿ, ಮಾರ್ಗದರ್ಶನವಾಗಲಿ ಸಮರ್ಪಕವಾಗಿ ಇರಲಿಲ್ಲ. ಹೆಣ್ಣುಮಕ್ಕಳ ಬರಹಗಳಿಗೆ ಸ್ಪಂದನೆ ದೊರೆಯದೇ ಇದ್ದ ಸಮಯ ಅದು. ಈಗಿನಂತೆ ಫೇಸ್‌ಬುಕ್, ಅಂತರ್ಜಾಲ, ಸಾಮಾಜಿಕ ಜಾಲತಾಣ… ಯಾವುದೂ ಇಲ್ಲದ ಆ ಕಾಲಘಟ್ಟದಲ್ಲಿ, ತಮ್ಮ ಬರಹಗಳಿಗೆ ತಾವೇ ಮೊದಲು ಓದುಗರಾಗಿ, ಸಾಧ್ಯವಿದ್ದಲ್ಲಿ ಸ್ನೇಹವಲಯದಲ್ಲಿ ಓದಿಸಿ ಅಭಿಪ್ರಾಯ ಪಡೆದು ಬರಹದಲ್ಲಿ ತೊಡಗಿಸಿಕೊಳ್ಳಬೇಕಿತ್ತು.

ಇದನ್ನು ಓದಿದ್ದೀರಾ?: ಸಮಾಜ ಸ್ಪಂದನಶೀಲೆ- ಸೌಭಾಗ್ಯ ಸಿ. 

ಅದೇ ಸಂದರ್ಭದಲ್ಲಿ ಖ್ಯಾತ ಸಾಹಿತಿ ಅನುಪಮ ನಿರಂಜನರವರು ತಮ್ಮದೊಂದು ಬರಹದಲ್ಲಿ ‘ಲೇಖಕಿಯರು ಮುಕ್ತವಾಗಿ ಬೆರೆಯಲು, ಸ್ಪಂದಿಸಲು, ಬರೆಯಲು, ಬೆಳೆಯಲು- ಲೇಖಕಿಯರದ್ದೆ ಆದ ಪ್ರತ್ಯೇಕ ವೇದಿಕೆ ಮಾಡಿಕೊಂಡು ತಿಂಗಳಿಗೊಮ್ಮೆ ಸೇರಿ, ಓದು, ಬರಹ, ಭಾಷಣ ಮುಂತಾದವುಗಳಲ್ಲಿ ತೊಡಗಿಸಿಕೊಂಡಿದ್ದೆವು’ ಎಂದು ಬರೆದಿದ್ದನ್ನು ಓದಿ ಪ್ರೇರಿತರಾಗಿ, ಸ್ಫೂರ್ತಿಗೊಂಡು, ಹಾಸನದಲ್ಲಿ ಪ್ರತ್ಯೇಕ ಮಹಿಳೆಯರದ್ದೆ ಆದ ವೇದಿಕೆ ಮಾಡಿಕೊಳ್ಳಲು ಅಂದಾಜು ಮೂವತ್ತು ವರ್ಷಗಳ ಹಿಂದೆ ಸಣ್ಣ ಪ್ರಯತ್ನ ನಡೆಯಿತು. ಹಾಸನದಂತಹ ಪ್ರದೇಶದಲ್ಲಿ ಸಾಹಿತ್ಯಕ ಚಟುವಟಿಕೆಗಳು ಹೊಯ್ಸಳರ ಕಾಲದಿಂದಲೂ ಸಮೃದ್ಧವಾಗಿದ್ದರೂ, ಆಧುನಿಕ ಕಾಲದಲ್ಲಿ ಲೇಖಕಿಯರು ವೇದಿಕೆ ನಿರ್ಮಿಸಿಕೊಳ್ಳುವ, ಇತರರಿಗೂ ಅವಕಾಶ ಒದಗಿಸುವ ಅಗತ್ಯ ಬಹಳವೇ ಇತ್ತು. ಮೊದಲಿಗೆ ಕೆಲ ಆಸಕ್ತ ಬರಹಗಾರ್ತಿಯರು ಒಗ್ಗೂಡಿ ಈ ಕುರಿತು ಚಿಂತಿಸಿದ್ದರ ಫಲವಾಗಿ ‘ಗೆಳತಿಯರ ಬಳಗ’ ರೂಪುಗೊಂಡಿತು. ನಂತರ ಕ್ರಮೇಣ ಹಲವು ಪಲ್ಲಟಗಳಿಗೆ ಒಳಗಾಗುತ್ತಾ ಗಟ್ಟಿಯಾಗುತ್ತಾ ಅಧಿಕೃತವಾಗಿ ಲೇಖಕಿಯರ ಬಳಗವಾಗಿ ಮಾರ್ಪಾಡಾಯಿತು.

ಹಾಸನದಲ್ಲಿ ಲೇಖಕಿಯರ ಬಳಗ- ಬರಹಗಾರ್ತಿಯರ ಸಾಹಿತ್ಯ ಸಂಘಟನೆಯಾಗಿದ್ದು, ಹಾಸನದ ಬರಹಗಾರ್ತಿಯರನ್ನು ಒಗ್ಗೂಡಿಸಿ, ಅವರ ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹಂತಹಂತವಾಗಿ ರೂಪುಗೊಳ್ಳುತ್ತಾ ಹೋಯ್ತು. ಬರಹಗಾರ್ತಿಯರೆಲ್ಲ ಒಂದೆಡೆ ಸೇರಿ ಪರಸ್ಪರ ಪ್ರೋತ್ಸಾಹ, ಸಹಕಾರ ಪಡೆದುಕೊಳ್ಳುವ ಅಗತ್ಯವಷ್ಟೇ ಆದ್ಯತೆಯಾಗಿತ್ತು. ಮುಖ್ಯವಾಗಿ- ಸ್ಥಳೀಯ ಮಟ್ಟದಲ್ಲಿ ಮಹಿಳಾ ಸಾಹಿತ್ಯದ ಅರಿವು ಪಡೆಯುವ, ಕೊರತೆಯ ತೀವ್ರತೆ ನೀಗಿಕೊಳ್ಳುವ ಭಾಗವಾಗಿ, ತಮ್ಮ ಪ್ರೋತ್ಸಾಹಕ್ಕೆ ಇದ್ದ ಅಡೆತಡೆಗಳನ್ನು ಮೀರಿ, ಮಹಿಳೆಯರು ಪ್ರತ್ಯೇಕವಾಗಿ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುವ ನಿಮಿತ್ತವಾಗಿ ಬಳಗ ಹಂತಹಂತವಾಗಿ ರೂಪುಗೊಳ್ಳುತ್ತಾ ಹೋಯಿತು.

ಇದನ್ನು ಓದಿದ್ದೀರಾ?: ಉದ್ದಿಮೆ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಪ್ರಮುಖ ಬರಹಗಾರ್ತಿಯರ ಮಾಹಿತಿ ಮತ್ತು ಇತಿಹಾಸದ ಸ್ಪಷ್ಟ ಸೂಚನೆಗಳು, ಅವರ ಚಿಂತನೆ, ನಿಲುವುಗಳನ್ನು ಆಧರಿಸಿ ಚಟುವಟಿಕೆಗಳು ನಡೆದವು. ಬಳಗವು- ಲೇಖಕಿಯರ ಸಭೆಗಳು, ಕವಿಗೋಷ್ಠಿಗಳು, ಸಾಹಿತ್ಯ ಚರ್ಚೆಗಳು, ಪುಸ್ತಕ ಬಿಡುಗಡೆಗಳು ಮತ್ತು ಸಾಹಿತ್ಯಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿತ್ತು. ಮೊದಲಿಗೆ ಒಂದೆರಡು ವರ್ಷ ಪ್ರತಿ ತಿಂಗಳೂ ಕೆಲ ಲೇಖಕಿಯರ ಮನೆಗಳಲ್ಲೇ ಕಾರ್ಯಕ್ರಮಗಳು ನಡೆದವು. ಮುಂದೆ ಕೆಂಪು ಚೆಲುವಾಜಮ್ಮಣ್ಣಿ ಮಹಿಳಾ ಸಮಾಜ, ಹಾಸನ ನಗರ ಕೇಂದ್ರ ಗ್ರಂಥಾಲಯ ಮತ್ತು ಇತರ ಸಾಂಸ್ಥಿಕ ಸಹಯೋಗದೊಂದಿಗೆ ಬಳಗ ಕಾರ್ಯನಿರ್ವಹಿಸಿತು. ಹಾಸನ ಲೇಖಕಿಯರ ಬಳಗವು ರಾಜ್ಯಮಟ್ಟದ ಲೇಖಕಿಯರ ಸಂಘ ಅಥವಾ ಸಂಘಟನೆಗಳ ಘಟಕವಾಗಿ ಅಲ್ಲದೇ ಪ್ರತ್ಯೇಕವಾಗಿ, ಸ್ಥಳೀಯವಾಗಿ, ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ.

ಪ್ರಾರಂಭದಲ್ಲಿ ಎಂಟು-ಹತ್ತು ಮಂದಿ ಗೆಳತಿಯರಿಂದ ಪ್ರಾರಂಭವಾಗಿ ಇನ್ನಷ್ಟು, ಮತ್ತಷ್ಟು ಬರಹಗಾರ್ತಿ ಗೆಳತಿಯರು ಬಳಗಕ್ಕೆ ಸೇರಿದರು. ಸಂಘಟನೆ ಬಲವಾಯಿತು. ಸಾಹಿತ್ಯಕವಾಗಿ ಗೆಳತಿಯರು ವೇಗವಾಗಿ ಬೆಳೆಯುವಲ್ಲಿ ಸಂಘಟನೆಯ ಪಾತ್ರ ಹೆಚ್ಚಾಗಿತ್ತು. ಹಲವಾರು ಯುವ ಲೇಖಕಿಯರು ಇಲ್ಲಿಂದ ಹುಟ್ಟಿ ಬೆಳೆದಿದ್ದಾರೆ. ರಾಜ್ಯ ಮಟ್ಟದಲ್ಲಿಯೂ ಕೂಡ ಹಾಸನದ ಲೇಖಕಿಯರು ಗುರುತಿಸಿಕೊಂಡು ಅನೇಕ ಪ್ರಶಸ್ತಿ, ಸನ್ಮಾನ, ಗೌರವಕ್ಕೆ ಪುರಸ್ಕೃತರಾದರು. ಅವಕಾಶಗಳು ಹಾಸನ ಲೇಖಕಿಯರನ್ನು ಹುಡುಕಿ ಬಂತು. ಒಂದಿಷ್ಟು ರೂಪುರೇಷೆಗಳನ್ನು ಅಳವಡಿಸಿಕೊಂಡು ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಸ್ಥಾನಕ್ಕೆ ಆಯ್ಕೆಗಳು ನಡೆದವು. ಕಥಾ ಕಮ್ಮಟ, ಕಾವ್ಯ ಕಮ್ಮಟ, ವಿಚಾರಗೋಷ್ಠಿ, ವಾರ್ಷಿಕೋತ್ಸವ, ಪುಸ್ತಕ ಬಿಡುಗಡೆ, ಆಕಾಶವಾಣಿ ಕಾರ್ಯಕ್ರಮ, ಜಾನಪದ ಮೇಳ, ಸಮಾರಂಭ… ಹೀಗೆ ಯಶಸ್ವಿಯಾಗಿ ಅನೇಕ ಕಾರ್ಯಕ್ರಮ ನಡೆಸಿ ಜಿಲ್ಲೆಯಲ್ಲಿ ಲೇಖಕಿಯರ ಬಳಗ ತನ್ನದೆ ಛಾಪು ಮೂಡಿಸಿ ರಾಜ್ಯಮಟ್ಟದಲ್ಲಿಯೂ ಗಮನ ಸೆಳೆಯಿತು.

ಇದನ್ನು ಓದಿದ್ದೀರಾ?: ಮರೆಯಬಾರದ ಮೊದಲ ಶಾಸಕಿ-ದ್ಯಾವಮ್ಮ ಮಂಜಪ್ಪ

ಲೇಖಕಿಯರ ಬಳಗದ ಮೂಲಕ ಕಥೆ, ಕವಿತೆ, ಪ್ರಬಂಧ, ನಾಟಕ, ಹಾಸ್ಯ ಹೀಗೆ ಹಲವು ಪ್ರಕಾರಗಳಲ್ಲಿ ಸ್ಪರ್ಧೆ ನಡೆಸಿ ವಾರ್ಷಿಕೋತ್ಸವದಲ್ಲಿ ಬಹುಮಾನ ಕೊಡಲು ಪ್ರಾರಂಭಿಸಲಾಯ್ತು. ಕೆಲವು ವರ್ಷದ ನಂತರ ಒಂದೊಂದು ವರ್ಷ ಒಂದೊಂದು ಪ್ರಕಾರದ ಕೃತಿಗೆ ರಾಜ್ಯ ಮಟ್ಟದ ‘ಲೇಖಕಿ’ ಎಂಬ ಪ್ರತಿಷ್ಠಿತ ಪ್ರಶಸ್ತಿ ಕೊಡಲು ಯೋಜಿಸಲಾಯ್ತು. ಸಮಾಜಸೇವಕರಾದ ವೀರಭದ್ರಪ್ಪ ಅವರು ತಮ್ಮ ತಾಯಿ ‘ಬಂದಮ್ಮ’ ಅವರ ಹೆಸರಿನಲ್ಲಿ ಜಿಲ್ಲೆಯ ಲೇಖಕಿಯರಿಗೆ ಬಳಗದ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಕೊಡುತ್ತಾ ಲೇಖಕಿಯರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಲೇಖಕಿಯರ ಬಳಗದ ಮೂಲಕ ಅನೇಕ ಹಿರಿಕಿರಿಯ ಲೇಖಕಿಯರು ಸಾಕಷ್ಟು ಸಾಹಿತ್ಯಕ, ಸಂವೇದನಾತ್ಮಕ ಕಾರ್ಯಕ್ರಮಗಳನ್ನು ನಡೆಸಿ ಬಳಗವನ್ನು ಬೆಳೆಸಿದ್ದಾರೆ. ತನ್ಮೂಲಕ ಬರಹಗಾರ್ತಿಯರನ್ನು ಬೆಳೆಸಿದ್ದಾರೆ.

ಜಾಗತಿಕ ಜಗುಲಿಯ ಮೇಲೆ ಕೊರೊನಾ ರುದ್ರ ನರ್ತನ ಮಾಡುತ್ತಾ ಇಡೀ ವಿಶ್ವವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ ಕಾಲಘಟ್ಟದಲ್ಲಿ ಹಾಸನದ ಲೇಖಕಿಯರು ಮಾತ್ರ ಧೈರ್ಯವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿದರು. ಲಾಕ್ ಡೌನ್ ವೇಳೆ ಸಮಯವನ್ನು ಸಾಹಿತ್ಯ ಕೃಷಿಗೆ ಉಪಯೋಗಿಸಿಕೊಂಡರು. ಅದರ ಫಲವಾಗಿ ಲೇಖಕಿಯರ ಬಳಗದ ಚಟುವಟಿಕೆ ಪೂರ್ಣ ಪ್ರಮಾಣದಲ್ಲಿ ನಡೆಸಲು ಸಾಧ್ಯವಾಯಿತು. ಇಂದು ಕೂಡ ತಿಂಗಳ ತಿರುಳು ಹೆಸರಿನಡಿ ಸಾಹಿತ್ಯ ಕಾರ್ಯಕ್ರಮಗಳು ನಡೆಯುತ್ತಿವೆ. ಇದಕ್ಕೆ ಪೂರಕವಾಗಿ ಹಾಸನದ ಜಿಲ್ಲಾ ಲೇಖಕಿಯರ ಬಳಗದಲ್ಲಿ ಮೊಟ್ಟ ಮೊದಲಿಗೆ ‘ಸಾಹಿತ್ಯದ ನಡಿಗೆ ಸಮುದಾಯದೆಡೆಗೆ’ ಮತ್ತು ‘ಕಥಾ ಸಂಗಮ’ ಎಂಬ ಎರಡು ಕೃತಿಗಳು ಹೊರಬಂದವು.

ಇದನ್ನು ಓದಿದ್ದೀರಾ?: ಕಲ್ಲರಳಿ ಹೂವಾದ ಕ್ರೀಡಾಪಟು- ಕೆ.ವಿಜಯಕುಮಾರಿ

ಹಾಸನದ ಹಿರಿಯ ಲೇಖಕಿಯರು ತಾವಷ್ಟೇ ಬೆಳೆಯದೇ, ಇತರ ಯುವ ಬರಹಗಾರ್ತಿಯರನ್ನೂ ಬೆಳೆಸುತ್ತಾ, ಕನ್ನಡ ಸ್ತ್ರೀ ಸಂವೇದನೆಯ ಆಯಾಮಗಳನ್ನು ಪರಿಚಯಿಸುತ್ತಾ, ವಿಸ್ತರಿಸುತ್ತಾ, ತಮ್ಮ ಸುತ್ತಮುತ್ತಲಿನವರನ್ನು ಪ್ರಭಾವಿಸುತ್ತ, ಬದುಕಿನ ಸಾಮಾಜಿಕ ಸವಾಲುಗಳನ್ನು ಎದುರಿಸುವಲ್ಲಿ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಮಾರ್ಗದರ್ಶನದ ಜೊತೆಗೆ ವಿಮರ್ಶೆ ಮಾಡಿ, ವಿಜೇತರಿಗೆ ಪುಸ್ತಕ ಬಹುಮಾನ ಕೊಡಲು ಹಲವಾರು ಲೇಖಕಿಯರು ಮುಂದೆ ಬಂದು ತಮ್ಮ ಕೃತಿಗಳನ್ನು ಉದಾರವಾಗಿ ದಾನ ನೀಡಿದ್ದಾರೆ. ಲೇಖಕಿಯರು ಸಾಹಿತ್ಯ ಪರಂಪರೆಯ ಜಾಡಿನಲ್ಲಿ ಹೀಗೆ ಮುಂದೆ ನಡೆದಲ್ಲಿ ಸಾಹಿತ್ಯ ಲೋಕದಲ್ಲಿ ಮೈಲುಗಲ್ಲುಗಳಾಗಿ ಉಳಿಯಬಲ್ಲರು ಎಂಬುದಕ್ಕೆ ಈ ಬಳಗವೆ ಸಾಕ್ಷಿ. ಲೇಖಕಿಯರ ಬಳಗದ ಮೂಲಕ ಲೆಕ್ಕವಿಡಲಾಗದಷ್ಟು ಬರಹಗಾರ್ತಿಯರು ಬೆಳೆದಿದ್ದಾರೆ, ಬೆಳೆಯುತ್ತಿದ್ದಾರೆ, ಮುಂದೆಯೂ ಬೆಳೆಯುತ್ತಾ ಹೋಗುತ್ತಾರೆ… ಬಳಗವೊಂದು ದೊಡ್ಡ ಆಲದ ಮರ. ಇಲ್ಲಿ ಹಕ್ಕಿಗಳು ಬರುತ್ತವೆ, ವಾಸಿಸುತ್ತವೆ, ಗೂಡು ಕಟ್ಟಿ ಮೊಟ್ಟೆಯಿಟ್ಟು ಸಂತತಿ ಬೆಳೆಸುತ್ತಾ ಹೋಗುತ್ತವೆ. ಸಂತಸ ಮತ್ತು ಹೆಮ್ಮೆ ನಮ್ಮದು.

-ಡಾ.ಶಾಂತ ಅತ್ನಿ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುತ್ತಿಗೆಗಳು ಸುತ್ತುವರೆದಿರುವ ಗ್ಯಾನೇಶ್ ರಾಜೀನಾಮೆ ಸನ್ನಿಹಿತವೇ?

ದಿಲ್ಲಿ- ಮುಂಬಯಿಯಲ್ಲಿ‌ ಯುವಜನರು ಮತ್ತು  ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್ ಮತ್ತಿತರೆ ...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಕಮಲನಗರ | ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ: ಕ್ಲಿನಿಕ್ ಸೀಜ್

ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ...