ಶತಮಾನದ ಬಳಿಕ ಅತ್ಯಂತ ಒಣ ಜೂನ್‌, ಜುಲೈನಲ್ಲೂ ಮಳೆ ಮುನಿಸು: IMD ಎಚ್ಚರಿಕೆ

Date:

ಜೂನ್ ತಿಂಗಳಲ್ಲಿ ವಾಡಿಕೆಗಿಂತ ಶೇ. 40ರಷ್ಟು ಕಡಿಮೆ ಮಳೆಯಾಗುವ ಮೂಲಕ ಈ ಬಾರಿಯ ಮುಂಗಾರು ಐತಿಹಾಸಿಕ ಕೊರತೆ ದಾಖಲಿಸಿದೆ. ಶತಮಾನದಲ್ಲೇ ಇದು ಅತ್ಯಂತ ಒಣ ಜೂನ್‌ ಎಂದು ಕರೆಯಲ್ಪಡುತ್ತಿದೆ. ಜುಲೈನಲ್ಲಿಯೂ ಕೂಡ ಸಾಮಾನ್ಯ ಮಟ್ಟಕ್ಕಿಂತಲೂ ಕಡಿಮೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

- Advertisement -

ದೇಶದ ಅರ್ಧಕ್ಕೂ ಹೆಚ್ಚು ಜನಸಂಖ್ಯೆಯ ಬದುಕು ಕೃಷಿಯನ್ನೇ ಅವಲಂಬಿಸಿದೆ. ದೇಶದ ಒಟ್ಟು ಕೃಷಿ ಭೂಮಿಯಲ್ಲಿ ಬಹುತೇಕ ಅರ್ಧದಷ್ಟು ಭಾಗ ಸಂಪೂರ್ಣವಾಗಿ ಮಳೆಯಾಧಾರಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂಗಾರು ಮಳೆಯ ಸಕಾಲಿಕ ಮತ್ತು ಸಮರ್ಪಕ ಆಗಮನವು ಕೋಟ್ಯಂತರ ರೈತರ ಪಾಲಿಗೆ ಜೀವನಾಡಿ. ಆದರೆ, ಈಗ ಅಂದಾಜಿಸಿರುವ ಮಳೆ ಕೊರತೆಯು ಕೃಷಿಗೆ ಮಾತ್ರವಲ್ಲ, ದೈನಂದಿನ ಕುಡಿಯುವ ನೀರಿನ ಪೂರೈಕೆ, ಕೈಗಾರಿಕೆಗಳ ಕಾರ್ಯಾಚರಣೆ ಮತ್ತು ಜಲವಿದ್ಯುತ್ ಉತ್ಪಾದನೆಯಂತಹ ಪ್ರತಿಯೊಂದು ಪ್ರಮುಖ ಕ್ಷೇತ್ರಕ್ಕೂ ಪೆಟ್ಟು ಕೊಡಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೊಳಗಿಸಿದ್ದ ಮತ ಹಕ್ಕಿನ ಕೂಗಿಗೆ...

ಮತದಾನ ಕೇವಲ ಹಕ್ಕಲ್ಲ, ಅದು ಪ್ರಜೆಯೊಬ್ಬನ ಘನತೆ ಹಾಗೂ ಅಸ್ತಿತ್ವದ ಸಂಕೇತ. 131 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಇದೇ ಮತಾಧಿಕಾರಕ್ಕಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಇಂದು ಸ್ವತಂತ್ರ ಭಾರತದಲ್ಲಿ...

ಜೂನ್ ತಿಂಗಳಲ್ಲಿ ಮಳೆಯ ಕೊರತೆಗೆ ಮುಖ್ಯ ಕಾರಣಗಳೆಂದರೆ ವಾಯುಭಾರ ಕುಸಿತದ ಕೊರತೆ, ಮಾರುತಗಳ ದುರ್ಬಲ ಹರಿವು ಮತ್ತು ಮಳೆಯನ್ನು ಉತ್ತೇಜಿಸುವ ‘ಮ್ಯಾಡನ್ ಜೂಲಿಯನ್ ಆಸಿಲೇಷನ್’ನಂತಹ ವ್ಯವಸ್ಥೆಗಳು ಪೂರಕವಾಗಿರದಿರುವುದು. ಇದೀಗ ಪೆಸಿಫಿಕ್ ಸಾಗರದಲ್ಲಿ ಉಂಟಾಗಿರುವ ‘ಎಲ್ ನಿನೋ’ ಪ್ರಭಾವವು ಜುಲೈನಲ್ಲಿ ಇನ್ನಷ್ಟು ಬಲಗೊಳ್ಳುವ ಸಾಧ್ಯತೆಯಿದ್ದು, ಇದು ಮಳೆಯ ಪ್ರಮಾಣವನ್ನು ತಗ್ಗಿಸುವುದರ ಜೊತೆಗೆ ತಾಪಮಾನದಲ್ಲಿಯೂ ಏರಿಕೆಗೆ ಕಾರಣವಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಇದನ್ನೂ ಓದಿ: ಯುರೋಪ್‌ನಲ್ಲಿ ಬಿಸಿಗಾಳಿ: ಫ್ರಾನ್ಸ್‌ನಲ್ಲಿ 1000ಕ್ಕೂ ಹೆಚ್ಚು ಸಾವು

ಜೂನ್ ತಿಂಗಳು ಕಳೆದ 1901ರಿಂದೀಚೆಗೆ 5ನೇ ಅತಿ ಒಣಗಿದ ತಿಂಗಳಾಗಿ ದಾಖಲಾಗಿದೆ. ಜುಲೈ ತಿಂಗಳು ಮಳೆಗಾಲದ ಅತ್ಯಂತ ಪ್ರಮುಖ ತಿಂಗಳಾಗಿದ್ದು, ಇಡೀ ಹಂಗಾಮಿನ ಶೇ. 32ರಷ್ಟು ಮಳೆಯನ್ನು ತಂದುಕೊಡುತ್ತದೆ. ಈಗಿನ ಅಂದಾಜಿನಂತೆ ಜುಲೈನಲ್ಲೂ ಕೊರತೆ ಕಂಡುಬರುತ್ತಿರುವುದು ಕೃಷಿ ವಲಯದ ಆತಂಕ ಹೆಚ್ಚಿಸಿದೆ. ಆದಾಗ್ಯೂ, ಜೂನ್ ಅಂತ್ಯದಲ್ಲಿ ಕಂಡುಬಂದ ಅಲ್ಪ ಸುಧಾರಣೆಯು ಜುಲೈನ ಮೊದಲ ವಾರದಲ್ಲೂ ಮುಂದುವರಿಯಬಹುದು ಎಂಬುದು ಸಣ್ಣ ಆಶಾದಾಯಕ ಸಂಗತಿ. ಇಂತಹ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಲ್ಲಿ ನೀರಿನ ಮಿತಬಳಕೆ ಮತ್ತು ಜಲ ಸಂರಕ್ಷಣೆಯತ್ತ ಹೆಚ್ಚಿನ ಗಮನ ಹರಿಸುವುದು ಅಗತ್ಯವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳದ ಸಾವಿನ ಪ್ರಮಾಣದಲ್ಲಿ ವ್ಯತ್ಯಾಸ; ನಿಜ ಪತ್ತೆಗೆ ಎಸ್‌ಐಟಿಗೆ ಸರ್ಕಾರದಿಂದ ಪೂರಕ ಬೆಂಬಲ ಅಗತ್ಯ: ಮಹಿಳಾ ಆಯೋಗದ ಅಧ್ಯಕ್ಷೆ

ಧರ್ಮಸ್ಥಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾವುಗಳು...

ಅಮೆರಿಕದ ಗುಪ್ತಚರರಿಗೇ ಸುಳಿವು ನೀಡದೆ ಉಪಗ್ರಹ ಹೊಡೆದುರುಳಿಸಿದ್ದ ಭಾರತದ ಕ್ಷಿಪಣಿ

ದಶಕಗಳ ಬಳಿಕ, 2019ರಲ್ಲಿ 'ಮಿಷನ್ ಶಕ್ತಿ' ಕಾರ್ಯಾಚರಣೆಯ ಮೂಲಕ ಉಪಗ್ರಹ...

ಈ ದಿನ ಸಂಪಾದಕೀಯ | ಡಿಕೆಶಿ ಪ್ರತಿರೋಧಕ್ಕೆ ಮಣಿದ ಚುನಾವಣಾ ಆಯೋಗ; ಈವರೆಗಿನ ಅಕ್ರಮಗಳಿಗೆ ಹೊಣೆ ಯಾರು?

ಕರ್ನಾಟಕದಲ್ಲಿ ಎಸ್‌ಐಆರ್‌ ಆರಂಭವಾಗುವ ಮೊದಲೇ ನಾಗರಿಕ ಸಂಘಟನೆಗಳು ಕಾಂಗ್ರೆಸ್‌ ಗೆ ಎಸ್‌ಐಆರ್‌...