EC ಒಳಜಗಳ | ಗ್ಯಾನೇಶ್‌ ಕುಮಾರ್‌ ಎಡವಟ್ಟುಗಳಿಗೆ ಆಕ್ಷೇಪಗಳ ಸರಮಾಲೆ

Date:

SIR ವಿಚಾರದಲ್ಲಿ ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯ ಬಹಿರಂಗಗೊಂಡ ಬೆನ್ನಲ್ಲೇ, ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್‌ ಕುಮಾರ್‌ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ಇಬ್ಬರು ಚುನಾವಣಾ ಆಯುಕ್ತರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಲಿಖಿತ ಆಕ್ಷೇಪ ದಾಖಲಿಸಿರುವುದು ವಿವಾದಕ್ಕೆ ಹೊಸ ತಿರುವು ನೀಡಿದೆ. ಮತದಾರರ ಸೇರ್ಪಡೆ, ಹೆಸರುಗಳ ಅಳಿಸುವಿಕೆ, ಮತದಾರರ ದತ್ತಾಂಶದ ನಿರ್ವಹಣೆ, ಫಾರ್ಮ್‌-6 ಬದಲಾವಣೆ ಹಾಗೂ SIRಗೆ ಸಂಬಂಧಿಸಿದ ಮೇಲ್ಮನವಿಗಳವರೆಗೆ ಈ ಆಕ್ಷೇಪಗಳು ವ್ಯಾಪಿಸಿವೆ.

- Advertisement -

ಚುನಾವಣಾ ಆಯುಕ್ತರಾದ ಸುಖ್ಬೀರ್‌ ಸಿಂಗ್‌ ಸಂಧು ಮತ್ತು ವಿವೇಕ್‌ ಜೋಶಿ ಅವರು ದಾಖಲಿಸಿರುವ ಆಕ್ಷೇಪಗಳ ಪ್ರತಿಯನ್ನು CEC ಗ್ಯಾನೇಶ್‌ ಕುಮಾರ್‌ ಅವರಿಗೂ ಕಳುಹಿಸಲಾಗಿತ್ತು. ಕೆಲವು ಪ್ರಕರಣಗಳಲ್ಲಿ ಆಯೋಗದ ನಿರ್ಧಾರಗಳನ್ನು ತಮ್ಮ ಅರಿವಿಗೆ ಬಾರದೆ ಕೈಗೊಳ್ಳಲಾಗಿದೆ ಎಂದು ಇಬ್ಬರೂ ಪ್ರಶ್ನಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೆ.23 ‘ಭೀಮ ಸಂಕಲ್ಪ ದಿನ’: ಡಾ ಬಿ ಆರ್...

1917ರ ಸೆಪ್ಟೆಂಬರ್ 23ರಂದು ವಡೋದರದ ಆಲದ ಮರದ ಕೆಳಗೆ ಕುಳಿತಿದ್ದ ಯುವ ಅಂಬೇಡ್ಕರ್ ಅವರ ಬಳಿ ಅಧಿಕಾರವಿರಲಿಲ್ಲ, ದೊಡ್ಡ ಸಂಘಟನೆಯಿರಲಿಲ್ಲ. ಆದರೆ ಅನ್ಯಾಯವನ್ನು ಒಪ್ಪಿಕೊಳ್ಳದ ಮನಸ್ಸು ಮತ್ತು ಸಮಾಜವನ್ನು ಬದಲಿಸಬೇಕೆಂಬ ದೃಢ ಸಂಕಲ್ಪವಿತ್ತು....

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ...

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ ನಾಶ ಮಾಡಿ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ...

ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ...

ಉತ್ತರ ಪ್ರದೇಶದ ಯುವಜನತೆಯ (Gen Z) ಅಸಮಾಧಾನ, ನಿರುದ್ಯೋಗ ಸಮಸ್ಯೆ ಮತ್ತು ಬದಲಾಗುತ್ತಿರುವ ಜಾತಿ ಸಮೀಕರಣಗಳು ತಮಗೆ ಪೂರಕವಾಗಿವೆ ಎಂಬುದನ್ನು ಅಖಿಲೇಶ್ ಯಾದವ್ ಅರಿತಿದ್ದಾರೆ. ತಮ್ಮ ಪಕ್ಷ ಕೇವಲ "ಮುಸ್ಲಿಂ ಮತ್ತು ಯಾದವರ...

SIR ವೇಳೆ ಹೊಸ ಮತದಾರರು ಸಲ್ಲಿಸುವ ಫಾರ್ಮ್‌-6ನಲ್ಲಿ, ಅವರ ಹೆಸರು ಅಥವಾ ಅವರ ತಂದೆ-ತಾಯಿ/ಅಜ್ಜ-ಅಜ್ಜಿ ಹಿಂದಿನ SIR ಮತದಾರರ ಪಟ್ಟಿಯಲ್ಲಿ ಇದ್ದಾರೆಯೇ ಎಂಬ ಹೊಸ ಘೋಷಣೆಯನ್ನು ಸೇರಿಸುವುದನ್ನು ಕಡ್ಡಾಯಗೊಳಿಸಲಾಯಿತು.

ಈ ಬದಲಾವಣೆಗೆ ವಿವೇಕ್‌ ಜೋಶಿ ಮೇ ತಿಂಗಳಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದರು. ಸರ್ಕಾರ ನಿಯಮ ತಿದ್ದುಪಡಿ ಮಾಡದೆ ಫಾರ್ಮ್‌-6 ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರೆ, ಸುಖ್ಬೀರ್‌ ಸಿಂಗ್‌ ಸಂಧು ಕೂಡ ಅದಕ್ಕೆ ಸಮ್ಮತಿಸಿದ್ದರು. ಆದರೂ ಬದಲಾವಣೆ ಜಾರಿಗೆ ಬಂದಿತು. ಬಳಿಕ ಆಗಸ್ಟ್‌ 13ರಂದು ಸಂಧು ಅವರು ಈ ಕ್ರಮವನ್ನು “ಅನಧಿಕೃತ ಮತ್ತು ಅಕ್ರಮ” ಎಂದು ದಾಖಲಿಸಿ, ತಕ್ಷಣ ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದರು.

ಮತದಾರರ ಪಟ್ಟಿಯ ನಿರ್ವಹಣೆಯಲ್ಲಿ ಸ್ಥಳೀಯ ಮಟ್ಟದ Electoral Registration Officers (EROs) ಪ್ರಮುಖ ಕಾನೂನುಬದ್ಧ ಅಧಿಕಾರಿಗಳಾಗಿದ್ದಾರೆ. ಆದರೆ ಮತದಾರರ ದತ್ತಾಂಶವನ್ನು ಕ್ರಮೇಣ ಕೇಂದ್ರಿಕೃತಗೊಳಿಸಲಾಗುತ್ತಿದೆ ಎಂಬ ಆತಂಕವನ್ನು ವಿವೇಕ್‌ ಜೋಶಿ ವ್ಯಕ್ತಪಡಿಸಿದ್ದರು. ಮೇ ತಿಂಗಳಲ್ಲಿ ಅವರು ಇದನ್ನು “gradual centralisation of the electoral roll database” ಎಂದು ಉಲ್ಲೇಖಿಸಿ, ಸಂಬಂಧಪಟ್ಟ ಕಾನೂನುಬದ್ಧ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಡೇಟಾಬೇಸ್‌ ಬದಲಾಯಿಸುವ ಅವಕಾಶವಿಲ್ಲ ಎಂಬುದನ್ನು ಖಚಿತಪಡಿಸಲು ಆಡಿಟ್‌ ನಡೆಸಬೇಕು ಎಂದು ಸೂಚಿಸಿದ್ದರು.

ಆಗಸ್ಟ್‌ನಲ್ಲಿ ಸಂಧು ಕೂಡ ರಾಜ್ಯ ಮಟ್ಟದ ಅಧಿಕಾರಿಗಳಿಗೆ ERONetನಲ್ಲಿ ಸಮರ್ಪಕ ಪ್ರವೇಶವಿಲ್ಲ ಎಂಬ ದೂರುಗಳು ಬರುತ್ತಿವೆ ಎಂದು ದಾಖಲಿಸಿದ್ದರು. IT ವಿಭಾಗದ ಅಧಿಕಾರಿಗಳಿಗೆ ಕಾನೂನುಬದ್ಧ ಅಧಿಕಾರಿಗಳ ಪ್ರವೇಶವನ್ನು ನಿರ್ಬಂಧಿಸುವ ಅಧಿಕಾರವಿದೆಯೇ ಎಂಬುದನ್ನೂ ಪ್ರಶ್ನಿಸಿದ್ದರು.

ಪಶ್ಚಿಮ ಬಂಗಾಳದ SIR ಪ್ರಕ್ರಿಯೆಯಲ್ಲಿ ನ್ಯಾಯಾಂಗ ಅಧಿಕಾರಿಗಳು ವಿಚಾರಣೆ ನಡೆಸಿ ಕೆಲವು ಮತದಾರರ ಹೆಸರುಗಳನ್ನು ಪಟ್ಟಿಯಲ್ಲಿ ಉಳಿಸಲು ನಿರ್ಧರಿಸಿದ್ದರು. ಅಂತಹ ಮತದಾರರ ವಿರುದ್ಧ ಚುನಾವಣಾ ಆಯೋಗದ ಪರವಾಗಿ ಮೇಲ್ಮನವಿಗಳು ಸಲ್ಲಿಕೆಯಾಗಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

ಸುಖ್ಬೀರ್‌ ಸಿಂಗ್‌ ಸಂಧು ಅವರು ಆಗಸ್ಟ್‌ನಲ್ಲಿ, ಈ ಮೇಲ್ಮನವಿಗಳನ್ನು ECI ಪರವಾಗಿ ಸಲ್ಲಿಸಲು ಯಾರು ಅನುಮತಿ ನೀಡಿದರು? ಯಾರು ಸಲ್ಲಿಸಿದರು? ಎಂಬ ಪ್ರಶ್ನೆಗಳನ್ನು ಎತ್ತಿದ್ದರು. ಈ ಪ್ರಕ್ರಿಯೆಯ ಬಗ್ಗೆ ತಮಗಾಗಲೀ, ವಿವೇಕ್‌ ಜೋಶಿಗಾಗಲೀ ಅಥವಾ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿಗಾಗಲೀ ಮಾಹಿತಿ ಇರಲಿಲ್ಲ ಎಂದು ಅವರು ದೂರಿದರು. ಈ ಪ್ರಕರಣದಲ್ಲಿ 27.16 ಲಕ್ಷ ಮತದಾರರ ಹೆಸರುಗಳನ್ನು ಅಳಿಸಲಾಗಿದ್ದು, 22 ಲಕ್ಷಕ್ಕೂ ಹೆಚ್ಚು ಮಂದಿ ಮರುಸೇರ್ಪಡೆಗಾಗಿ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ಚುನಾವಣಾ ಆಯೋಗವೇ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಒಟ್ಟು 38.31 ಲಕ್ಷ ಮೇಲ್ಮನವಿಗಳು ದಾಖಲಾಗಿವೆ.

SIR ಸಂದರ್ಭದಲ್ಲಿ ‘logical discrepancy’ ಎಂದು ಗುರುತಿಸಲ್ಪಟ್ಟ ಮತದಾರರಿಗೆ ದಾಖಲೆ ಸಲ್ಲಿಸಿ ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ಸುಪ್ರೀಂ ಕೋರ್ಟ್‌ ಅವಕಾಶ ನೀಡಿತ್ತು. ಗೋವಾದಲ್ಲಿ ವಿಚಾರಣೆ ನಡೆಸಿದ EROಗಳು 97 ಮತದಾರರು ಅರ್ಹರು ಎಂದು ತೀರ್ಮಾನಿಸಿದ್ದರು.

ಆದರೆ ಆ ನಿರ್ಧಾರವನ್ನು ದಾಖಲಿಸಿ ಹಿಂದಿನ deletion ಅನ್ನು ಹಿಂಪಡೆಯುವ ವ್ಯವಸ್ಥೆ ಸಾಫ್ಟ್‌ವೇರ್‌ನಲ್ಲಿ ಇರಲಿಲ್ಲ. ಫೆಬ್ರವರಿ 11ರಿಂದ 17ರವರೆಗೆ ಗೋವಾ ಮುಖ್ಯ ಚುನಾವಣಾಧಿಕಾರಿ ಕಚೇರಿ ಈ ಸಮಸ್ಯೆ ಬಗೆಹರಿಸುವಂತೆ 8 ಬಾರಿ ಮನವಿ ಮಾಡಿದರೂ, ಅಗತ್ಯ ಸೌಲಭ್ಯ ಸಮಯಕ್ಕೆ ಸಕ್ರಿಯವಾಗಲಿಲ್ಲ. ಪರಿಣಾಮವಾಗಿ ಆ 97 ಹೆಸರುಗಳು ಅಂತಿಮ ಪಟ್ಟಿಯಲ್ಲಿ ಉಳಿಯಲಿಲ್ಲ ಎಂದು ವರದಿ ಹೇಳಿದೆ.

ಇನ್ನೊಂದು ಆಕ್ಷೇಪದಲ್ಲಿ ಸಂಧು ಅವರು ಏಪ್ರಿಲ್‌ 16ರಂದು, ಆಯೋಗದ ಅನುಮತಿಯಿಲ್ಲದೆ ECI ಹೆಸರಿನಲ್ಲಿ ಹಲವು ಪತ್ರಗಳು/ಸಂವಹನಗಳು ಹೊರಡುತ್ತಿವೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದರು. 8 ದಿನಗಳ ಬಳಿಕ ಜೋಶಿ ಕೂಡ ಇದೇ ರೀತಿಯ ಆಕ್ಷೇಪ ದಾಖಲಿಸಿ, ಮುಂದಿನ ಎಲ್ಲ ಸಂವಹನಗಳಿಗೂ ಸಂಪೂರ್ಣ ಆಯೋಗದ ಅನುಮತಿ ಅಗತ್ಯ ಎಂದು ಹೇಳಿದ್ದರು. IT ವಿಭಾಗದ ಮೇಲ್ವಿಚಾರಣೆಗೆ ಸಂಬಂಧಿಸಿದ ಕೆಲಸ ಹಂಚಿಕೆ ಬದಲಾವಣೆಗಳಿಗೂ ಜೋಶಿ ಮತ್ತು ಸಂಧು ಆಕ್ಷೇಪ ವ್ಯಕ್ತಪಡಿಸಿ, ಈ ವಿಷಯವನ್ನು ಕ್ಯಾಬಿನೆಟ್‌ ಕಾರ್ಯದರ್ಶಿಗೆ ಪ್ರತ್ಯೇಕವಾಗಿ ಬರೆದಿದ್ದರು. ನಂತರ ಆ ಬದಲಾವಣೆಗಳನ್ನು ಇಬ್ಬರೂ ರದ್ದುಪಡಿಸಿದ್ದರು.

ಈ ಬೆಳವಣಿಗೆಗಳ ಬಳಿಕ ಮಾಜಿ ಮುಖ್ಯ ಚುನಾವಣಾ ಆಯುಕ್ತರಾದ ಒ.ಪಿ. ರಾವತ್‌ ಮತ್ತು ಎಸ್‌.ವೈ. ಖುರೇಷಿ, ಮಾಜಿ ಚುನಾವಣಾ ಆಯುಕ್ತ ಅಶೋಕ್‌ ಲವಾಸಾ ಕೂಡ ಫಾರ್ಮ್‌-6 ಬದಲಾವಣೆ, SIR ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ರಾವತ್‌ ಅವರು ಫಾರ್ಮ್‌-6 ಬದಲಾವಣೆಯನ್ನು ತಪ್ಪು ಮತ್ತು ಅಕ್ರಮ” ಎಂದು ಹೇಳಿದ್ದಾರೆ. ಸಾಫ್ಟ್‌ವೇರ್‌ಗೆ ಕೊಟ್ಟಿರುವ ಅಧಿಕಾರ ಕುರಿತು ಅವರು ಮತ್ತೊಂದು ಪ್ರಮುಖ ಪ್ರಶ್ನೆ ಎತ್ತಿದ್ದಾರೆ. ERO ಒಬ್ಬ ಮತದಾರನ ದಾಖಲೆಗಳನ್ನು ಪರಿಶೀಲಿಸಿ ಹೆಸರು ಸೇರಿಸಬೇಕು ಎಂದು ನಿರ್ಧರಿಸಿದರೂ, ಸಾಫ್ಟ್‌ವೇರ್‌ ಅದನ್ನು ಮಾಡಲು ಅವಕಾಶ ನೀಡದಿದ್ದರೆ, ತಂತ್ರಜ್ಞಾನವು ಕಾನೂನಿನಿಂದ EROಗೆ ನೀಡಿರುವ ಅಧಿಕಾರಕ್ಕಿಂತ ಮೇಲಾದಂತಾಗುತ್ತದೆ ಎಂದು ಅವರು ಹೇಳಿದ್ದಾರೆ. ವಿಶೇಷವಾಗಿ ಗೋವಾದ 97 ಮತದಾರರ ಪ್ರಕರಣವನ್ನು ಉಲ್ಲೇಖಿಸಿ, ಕ್ಷೇತ್ರಮಟ್ಟದ ಅಧಿಕಾರಿಗಳು ಅರ್ಹರೆಂದು ನಿರ್ಧರಿಸಿದರೂ ಸಾಫ್ಟ್‌ವೇರ್‌ನಲ್ಲಿ ಅದನ್ನು ದಾಖಲಿಸಲು ಸಾಧ್ಯವಾಗದಿರುವುದು ಸರಿಯಲ್ಲ. ಸಾಫ್ಟ್‌ವೇರ್‌ ಕ್ಷೇತ್ರಾಧಿಕಾರಿಗಳ ನಿರ್ಧಾರವನ್ನು ಮೀರಬಾರದು ಎಂದು ರಾವತ್‌ ಹೇಳಿದ್ದಾರೆ.

SIR ಪ್ರಕ್ರಿಯೆಯಿಂದ ಮತದಾರರಲ್ಲಿ ಭಯದ ವಾತಾವರಣ ಉಂಟಾಗಿದೆ. ಪಶ್ಚಿಮ ಬಂಗಾಳದ ಮೇಲ್ಮನವಿ ಪ್ರಕ್ರಿಯೆಯಲ್ಲಿ ಅಳಿಸಲ್ಪಟ್ಟ ಮತದಾರರ ಪೈಕಿ ಹೆಚ್ಚಿನವರು ಅರ್ಹರಾಗಿದ್ದರು ಎಂಬುದನ್ನು ಉಲ್ಲೇಖಿಸಿ, ಇಂತಹ ತಪ್ಪುಗಳು ಮರುಕಳಿಸಬಾರದು ಎಂದು ರಾವತ್ ಹೇಳಿದ್ದಾರೆ.

‌ಇನ್ನು ಫಾರ್ಮ್‌-6 ಕಾನೂನಿನಡಿ ನಿಗದಿಯಾಗಿರುವ ನಮೂನೆ. ಅದರಲ್ಲಿ ಹೊಸ ಮಾಹಿತಿಯನ್ನು ಸೇರಿಸಬೇಕಾದರೆ Registration of Electors Rules, 1960ರಲ್ಲಿ ಅಗತ್ಯ ತಿದ್ದುಪಡಿ ಮಾಡಬೇಕು ಎಂಬ ವಿವೇಕ್‌ ಜೋಶಿ ಅವರ ಆಕ್ಷೇಪ ಸರಿಯಾಗಿದೆ ಎಂದು ಖುರೇಷಿ ಹೇಳಿದ್ದಾರೆ.

ಒಟ್ಟಾರೆ SIR ಪ್ರಕ್ರಿಯೆಯೇ ಕಾನೂನುಬದ್ಧವಾಗಿ ದೋಷಪೂರಿತವಾಗಿದೆ ಎಂದು ಸಾಬೀತಾದರೆ, ಅಂತಹ ಮತದಾರರ ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಸುವುದು ಕೂಡ ಪ್ರಶ್ನಾರ್ಹವಾಗುತ್ತದೆ. ತಪ್ಪುಗಳು ನಡೆದಿದ್ದರೆ, ಹಿಂದಿನ ಸ್ಥಿತಿಗೆ ಮರಳುವ ಕಾನೂನುಬದ್ಧ ಅವಕಾಶವಿದೆ ಎಂದೂ ಖುರೇಷಿ ಹೇಳಿದ್ದಾರೆ. ಅಂದರೆ, ಜೂನ್‌ 2025ಕ್ಕೂ ಮುನ್ನ ಇದ್ದ ಮತದಾರರ ಪಟ್ಟಿಗೆ ಮರಳುವ ಸಾಧ್ಯತೆಯನ್ನು ಅವರು ಪ್ರಸ್ತಾಪಿಸಿದ್ದಾರೆ.

“SIRಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳಿಗೆ ಇಬ್ಬರು ಆಯುಕ್ತರು ಒಪ್ಪಿರಲಿಲ್ಲ ಎಂದಾದರೆ, SIR ನಡೆಸುವ ನಿರ್ಧಾರವನ್ನು ತೆಗೆದುಕೊಂಡವರು ಯಾರು? ಅಂದರೆ, ಇದು ಕೇವಲ SIR ಸರಿಯೇ ತಪ್ಪೇ ಎಂಬ ಪ್ರಶ್ನೆಯಲ್ಲ; ಚುನಾವಣಾ ಆಯೋಗದ ನಿರ್ಧಾರ ತೆಗೆದುಕೊಳ್ಳುವ ಸಾಂವಿಧಾನಿಕ ಪ್ರಕ್ರಿಯೆಯೇನು? ಎಂದು ಖುರೇಷಿ ಪ್ರಶ್ನಿಸಿದ್ದಾರೆ.

2023ರ ಕಾನೂನಿನ ಪ್ರಕಾರ ಆಯೋಗದ ಮೂವರು ಸದಸ್ಯರೂ ಸಮಾನ ಸ್ಥಾನಮಾನ ಹೊಂದಿದ್ದು, ಸಾಧ್ಯವಾದಷ್ಟು ನಿರ್ಧಾರಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಬೇಕು; ಭಿನ್ನಾಭಿಪ್ರಾಯವಿದ್ದರೆ ಬಹುಮತದ ನಿರ್ಧಾರ ಅನ್ವಯಿಸುತ್ತದೆ. ಹೀಗಿರುವಾಗ ಮೂವರು ಸದಸ್ಯರ ಪೈಕಿ ಇಬ್ಬರು ನಿರ್ಧಾರದಲ್ಲಿ ಭಾಗಿಯಾಗಿಲ್ಲ ಎಂದು ಹೇಳುತ್ತಿರುವಾಗ ಆ ನಿರ್ಧಾರ ಹೇಗೆ ಅಂತಿಮವಾಯಿತು? ಎಂಬ ಮತ್ತೊಂದು ಅಂಶವನ್ನೂ ಖುರೇಷಿ ಮುಂದಿಟ್ಟಿದ್ದಾರೆ.

ಮಾಜಿ ಚುನಾವಣಾ ಆಯುಕ್ತ ಅಶೋಕ್‌ ಲವಾಸಾ, ಹಾಲಿ ಆಯುಕ್ತರಾದ ಸಂಧು ಮತ್ತು ಜೋಶಿ ಎತ್ತಿರುವ ಪ್ರಶ್ನೆಗಳು ಕಾನೂನುಬದ್ಧ ಸ್ವರೂಪದ್ದಾಗಿವೆ ಎಂದು ಹೇಳಿದ್ದಾರೆ. ಫಾರ್ಮ್‌-6 ಬದಲಾಯಿಸಲು ಅಗತ್ಯ ಕಾನೂನು ಪ್ರಕ್ರಿಯೆ ಅನುಸರಿಸಲಾಗಿದೆಯೇ, EROಗಳ ನಿರ್ಧಾರಕ್ಕೆ ಸಾಫ್ಟ್‌ವೇರ್‌ ಅಡ್ಡಿಯಾಗಬಹುದೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದಿದ್ದಾರೆ. ECI ಎಲ್ಲ ನಿರ್ಧಾರಗಳೂ ಸರ್ವಾನುಮತದಿಂದ ನಡೆದಿವೆ ಎಂದು ಆಯೋಗ ಹೇಳಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಸಭೆಯ ದಾಖಲೆಗಳು ಹಾಗೂ ನಿರ್ಧಾರ ಪ್ರಕ್ರಿಯೆಯನ್ನು ಬಹಿರಂಗಪಡಿಸಬೇಕು ಎಂದು ಲವಾಸಾ ಆಗ್ರಹಿಸಿದ್ದಾರೆ. ಅಲ್ಲದೆ, ಆಯೋಗದ ಆಂತರಿಕ ವಿಚಾರಕ್ಕೆ ಇಬ್ಬರು ಆಯುಕ್ತರು ಕ್ಯಾಬಿನೆಟ್‌ ಕಾರ್ಯದರ್ಶಿಗೆ ಪತ್ರ ಬರೆಯುವ ಪರಿಸ್ಥಿತಿ ಏಕೆ ಎದುರಾಯಿತು ಎಂಬುದಕ್ಕೂ ಸ್ಪಷ್ಟನೆ ಅಗತ್ಯ ಎಂದಿದ್ದಾರೆ.

ಆಯೋಗದೊಳಗಿನ ಈ ಆಕ್ಷೇಪಗಳು ಬಹಿರಂಗವಾದ ಬೆನ್ನಲ್ಲೇ ರಾಜಕೀಯ ವಿರೋಧವೂ ತೀವ್ರಗೊಂಡಿದೆ. ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್, ಆಮ್‌ ಆದ್ಮಿ ಪಕ್ಷದ ಅರವಿಂದ್‌ ಕೇಜ್ರಿವಾಲ್, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರದ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು SIR ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಸತ್ಯ ಬರೆದ ಪತ್ರಕರ್ತನ ಹತ್ಯೆ, ಮಗನ ಒಂಟಿ ಹೋರಾಟ: ಪೆರೋಲ್ ಮೋಜಿನಲ್ಲಿ ಅತ್ಯಾಚಾರಿ ರಾಮ್ ರಹೀಮ್

ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ SIRಗೂ ಮುನ್ನ ಇದ್ದ ಮತದಾರರ ಪಟ್ಟಿಯ ಆಧಾರದಲ್ಲಿ ಮರುಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದು, ಗ್ಯಾನೇಶ್‌ ಕುಮಾರ್‌ ವಿರುದ್ಧ ಕ್ರಮಕ್ಕೆ ಕರೆ ನೀಡಿದ್ದಾರೆ. ತೇಜಸ್ವಿ ಯಾದವ್‌ ಕೂಡ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಮರುಚುನಾವಣೆ ನಡೆಸುವಂತೆ ಆಗ್ರಹಿಸಿದ್ದಾರೆ.

CPI(M) ಸಂಸದ ಜಾನ್‌ ಬ್ರಿಟ್ಟಾಸ್‌, ಗ್ಯಾನೇಶ್‌ ಕುಮಾರ್‌ ಅವರ ನಿರ್ಧಾರಗಳನ್ನು ಟೀಕಿಸಿ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಇತರ ವಿರೋಧ ಪಕ್ಷಗಳೂ SIR ಸ್ಥಗಿತ, ನ್ಯಾಯಾಂಗ ಮೇಲ್ವಿಚಾರಣೆಯ ತನಿಖೆ ಹಾಗೂ ಚುನಾವಣಾ ಆಯೋಗದ ನಿರ್ಧಾರಗಳ ಕುರಿತು ಹೆಚ್ಚಿನ ಪಾರದರ್ಶಕತೆಗೆ ಆಗ್ರಹಿಸಿವೆ. ಈ ನಡುವೆ Cockroach Janta Party (CJP) ಕೂಡ SIR ಮತ್ತು ಗ್ಯಾನೇಶ್‌ ಕುಮಾರ್‌ ವಿರುದ್ಧ ಪ್ರತಿಭಟನೆಗಳನ್ನು ಘೋಷಿಸಿದೆ.

ಫಾರ್ಮ್‌-6 ಬದಲಾವಣೆಯಿಂದ ಹಿಡಿದು ಮತದಾರರ ದತ್ತಾಂಶದ ಕೇಂದ್ರೀಕರಣದವರೆಗೆ, ಗ್ಯಾನೇಶ್‌ ಕುಮಾರ್‌ ನೇತೃತ್ವದ ಆಯೋಗದ ಕ್ರಮಗಳು ಸದ್ಯ ವಿರೋಧಕ್ಕೆ ಗುರಿಯಾಗಿವೆ. ಹಾಲಿ ಆಯುಕ್ತರ ಆಕ್ಷೇಪಗಳ ಬೆನ್ನಲ್ಲೇ ಮಾಜಿ ಸಿಇಸಿಗಳೂ ಧ್ವನಿ ಎತ್ತಿರುವುದು ವಿವಾದದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
SIR ಪ್ರಕ್ರಿಯೆಯ ಕಾನೂನುಬದ್ಧತೆ, ಪಾರದರ್ಶಕತೆ ಮತ್ತು ಆಯೋಗದ ನಿರ್ಧಾರ ಕೈಗೊಳ್ಳುವ ವಿಧಾನದ ಬಗ್ಗೆ ಈಗ ಹಲವರು ಪ್ರಶ್ನಿಸಿದ್ದಾರೆ. ಹೀಗಾಗಿ, ಗ್ಯಾನೇಶ್‌ ಕುಮಾರ್‌ ನೇತೃತ್ವದ ಚುನಾವಣಾ ಆಯೋಗದ ನಡೆಗೆ ಸ್ಪಷ್ಟನೆ ನೀಡಬೇಕೆಂಬ ಒತ್ತಾಯವೂ ತೀವ್ರಗೊಂಡಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

​’ನಿಮ್ಮ ಕಷ್ಟದ ಸಮಯದಲ್ಲಿ ನಾವಿದ್ದೇವೆ’: ಐಐಟಿ ವಿದ್ಯಾರ್ಥಿ ಸಾಹಿಲ್ ಕುಟುಂಬಕ್ಕೆ ರಾಹುಲ್ ಸಾಂತ್ವನ

ಇತ್ತೀಚೆಗೆ ದುರಂತ ಅಂತ್ಯಕಂಡ ಐಐಟಿ-ಬಾಂಬೆ (IIT-B) ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ...

ಬಂಗಾಳ ಗೆಲ್ಲಲು ಬಿಜೆಪಿ ಸುರಿದಿದ್ದು ₹286 ಕೋಟಿ; 4 ಚುನಾವಣೆಗಳ ಒಟ್ಟು ವೆಚ್ಚಕ್ಕಿಂತಲೂ ಹೆಚ್ಚು!

ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಿಗೆ ಬಿಜೆಪಿ ಒಟ್ಟು ₹529.38...

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಕಳವು: ಲಾತೂರ್ ಕೋಚಿಂಗ್ ಉದ್ಯಮಿಯ ಮಗನ ಫಲಿತಾಂಶ ತಡೆ; 2 ವರ್ಷ ಡಿಬಾರ್

ನೀಟ್-ಯುಜಿ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ...

10 ಸಾವಿರ ಸಂಸ್ಥೆಗಳ ಇ-ಮೇಲ್ ಹ್ಯಾಕ್: ಸೈಬರ್ ವಂಚಕರ ‘ಎಐ ಚಾಟ್‌ಬಾಟ್’ ಸ್ಥಗಿತಗೊಳಿಸಿದ ಮೈಕ್ರೋಸಾಫ್ಟ್

ವಿಶ್ವಾದ್ಯಂತ 10,000ಕ್ಕೂ ಹೆಚ್ಚು ಸಂಸ್ಥೆಗಳಿಗೆ ಸೇರಿದ 12,000ಕ್ಕೂ ಅಧಿಕ ಇ-ಮೇಲ್ ಖಾತೆಗಳನ್ನು...