ಸತ್ಯ ಬರೆದ ಪತ್ರಕರ್ತನ ಹತ್ಯೆ, ಮಗನ ಒಂಟಿ ಹೋರಾಟ: ಪೆರೋಲ್ ಮೋಜಿನಲ್ಲಿ ಅತ್ಯಾಚಾರಿ ರಾಮ್ ರಹೀಮ್

Date:

ಸಾಧ್ವಿಗಳ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್, ಸಮಾಜದಲ್ಲಿ ಮತ್ತು ಕಾನೂನು ವ್ಯವಸ್ಥೆಯಲ್ಲಿ ಸೃಷ್ಟಿಸಿರುವ ಪ್ರಶ್ನೆಗಳು ಒಂದೆರಡಲ್ಲ. ಪದೇ ಪದೇ ಆತನಿಗೆ ಸಿಗುತ್ತಿರುವ ಪೆರೋಲ್ ಮತ್ತು ಫರ್ಲೋ ಜೈಲಿನಿಂದ ಹೊರಬಂದ ತಕ್ಷಣ ಆತ ನಡೆಸುವ ವೈಭವೋಪೇತ ಕಾರ್ಯಕ್ರಮಗಳು ದೇಶವನ್ನೇ ಬೆಚ್ಚಿಬೀಳಿಸುವಂತಿವೆ.

- Advertisement -

2017 ದೋಷಿ ಎಂದು ಸಾಬೀತಾಗಿ ಜೈಲು ಪಾಲಾಗಿದ್ದರೂ, ರಾಮ್ ರಹೀಮ್‌ಗೆ ಹರಿಯಾಣ ಸರ್ಕಾರ ಮತ್ತು ಕಾರಾಗೃಹ ಇಲಾಖೆಯಿಂದ ನಿರಂತರವಾಗಿ ಪೆರೋಲ್ ಸಿಗುತ್ತಲೇ ಬಂದಿದೆ. ಇತ್ತೀಚೆಗೆ ಆತನಿಗೆ ದೊರೆತ ತಾತ್ಕಾಲಿಕ ಜೈಲು ಮುಕ್ತಿಯ ಸಮಯದಲ್ಲಿ ತನ್ನ ಆಶ್ರಮದಲ್ಲಿ ಲಕ್ಷಾಂತರ ಭಕ್ತಾದಿಗಳ ಮುಂದೆ ಸಂಗೀತ ಕಾರ್ಯಕ್ರಮಗಳು, ಡ್ಯಾನ್ಸ್ ಹಾಗೂ ಸತ್ಸಂಗಗಳನ್ನು ನಡೆಸಿ, ಮತ್ತೆ ಸಾರ್ವಜನಿಕವಾಗಿ ತನ್ನ ಶಕ್ತಿ ಪ್ರದರ್ಶನ ಮಾಡಿದ್ದ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೆ.23 ‘ಭೀಮ ಸಂಕಲ್ಪ ದಿನ’: ಡಾ ಬಿ ಆರ್...

1917ರ ಸೆಪ್ಟೆಂಬರ್ 23ರಂದು ವಡೋದರದ ಆಲದ ಮರದ ಕೆಳಗೆ ಕುಳಿತಿದ್ದ ಯುವ ಅಂಬೇಡ್ಕರ್ ಅವರ ಬಳಿ ಅಧಿಕಾರವಿರಲಿಲ್ಲ, ದೊಡ್ಡ ಸಂಘಟನೆಯಿರಲಿಲ್ಲ. ಆದರೆ ಅನ್ಯಾಯವನ್ನು ಒಪ್ಪಿಕೊಳ್ಳದ ಮನಸ್ಸು ಮತ್ತು ಸಮಾಜವನ್ನು ಬದಲಿಸಬೇಕೆಂಬ ದೃಢ ಸಂಕಲ್ಪವಿತ್ತು....

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ...

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ ನಾಶ ಮಾಡಿ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ...

ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ...

ಉತ್ತರ ಪ್ರದೇಶದ ಯುವಜನತೆಯ (Gen Z) ಅಸಮಾಧಾನ, ನಿರುದ್ಯೋಗ ಸಮಸ್ಯೆ ಮತ್ತು ಬದಲಾಗುತ್ತಿರುವ ಜಾತಿ ಸಮೀಕರಣಗಳು ತಮಗೆ ಪೂರಕವಾಗಿವೆ ಎಂಬುದನ್ನು ಅಖಿಲೇಶ್ ಯಾದವ್ ಅರಿತಿದ್ದಾರೆ. ತಮ್ಮ ಪಕ್ಷ ಕೇವಲ "ಮುಸ್ಲಿಂ ಮತ್ತು ಯಾದವರ...

ಇದನ್ನೂ ಓದಿ: ಅತ್ಯಾಚಾರ ಪ್ರಕರಣ | ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ಸಿಂಗ್‌ಗೆ ಮತ್ತೆ ಪೆರೋಲ್: ಇದು 15ನೇ ಬಾರಿ

ಈತನ ಪೆರೋಲ್ ಅವಧಿ ಮುಗಿದು ಮರಳಿ ಸುನಾರಿಯಾ ಜೈಲಿಗೆ ತೆರಳುವ ಮುನ್ನಿನ ರಾತ್ರಿಯೂ ಭಕ್ತರೊಡನೆ ರಾತ್ರಿಯಿಡೀ ಕುಣಿದು ಕುಪ್ಪಳಿಸಿ ಜೈಲಿಗೆ ಮರಳಿದ್ದ. ಶಿಕ್ಷೆ ಅನುಭವಿಸುತ್ತಿರುವ ಒಬ್ಬ ಕೈದಿಗೆ ಇಷ್ಟೊಂದು ಸೌಲಭ್ಯಗಳು ಮತ್ತು ರಾಜಕೀಯ ಕೃಪಾಕಟಾಕ್ಷ ಸಿಗುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Advertisements

ಈ ಇಡೀ ಪ್ರಕರಣದ ಹಿನ್ನೆಲೆಯಲ್ಲಿ ಒಬ್ಬ ಧೈರ್ಯವಂತ ಪತ್ರಕರ್ತನ ಬಲಿಯಾಗಿದೆ. ಸಿರ್ಸಾದಿಂದ ಹೊರಬರುತ್ತಿದ್ದ ‘ಪೂರಾ ಸಚ್’ ಎಂಬ ಸಣ್ಣ ಸ್ಥಳೀಯ ಪತ್ರಿಕೆಯ ಸಂಪಾದಕರಾಗಿದ್ದ ರಾಮ್ ಚಂದರ್ ಛತ್ರಪತಿ. 2002ರಲ್ಲಿ ರಾಮ್ ರಹೀಮ್ ತನ್ನ ಆಶ್ರಮದ ಸಾಧ್ವಿಗಳ ಮೇಲೆ ಮಾಡುತ್ತಿದ್ದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಅನಾಮಧೇಯ ಪತ್ರವೊಂದನ್ನು ಆಧರಿಸಿ ‘ಪೂರಾ ಸಚ್’ ಪತ್ರಿಕೆಯಲ್ಲಿ ಸರಣಿ ತನಿಖಾ ವರದಿಗಳನ್ನು ಪ್ರಕಟಿಸಿದ್ದರು. ಈ ಸತ್ಯ ಬಹಿರಂಗ ಮಾಡಿದ ಕಾರಣಕ್ಕೆ 2002ರ ಅಕ್ಟೋಬರ್‌ನಲ್ಲಿ ಛತ್ರಪತಿಯವರನ್ನು ಅವರ ಮನೆಯ ಮುಂಭಾಗದಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ತಂದೆ ಹತ್ಯೆಯಾದಾಗ ಮಗ ಅನ್ಶುಲ್ ಛತ್ರಪತಿ ಇನ್ನು ಯುವಕ. ಧರ್ಮಗುರು ಹಾಗೂ ಆತನ ಅಗಾಧ ರಾಜಕೀಯ ಮತ್ತು ಹಣಬಲದ ಮುಂದೆ ಅಂಜದ ಅನ್ಶುಲ್, ತನ್ನ ತಂದೆ ನಡೆಸುತ್ತಿದ್ದ ‘ಪೂರಾ ಸಚ್’ ಪತ್ರಿಕೆಯನ್ನು ನಿಲ್ಲಿಸದೇ ಮುಂದುವರಿಸಿದ್ದಲ್ಲದೆ, ಕಾನೂನು ಹೋರಾಟವನ್ನೂ ಕೈಗೆತ್ತಿಕೊಂಡರು. ಸಿಬಿಐ ತನಿಖೆಗೆ ಆಗ್ರಹಿಸಿ ಸುದೀರ್ಘ ಹೋರಾಟ ನಡೆಸಿದರು.

ವಿಶೇಷ ಸಿಬಿಐ ನ್ಯಾಯಾಲಯವು 2019ರಲ್ಲಿ ರಾಮ್ ರಹೀಮ್‌ನನ್ನು ಛತ್ರಪತಿ ಹತ್ಯೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ, 2026ರ ಮಾರ್ಚ್‌ನಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸಾಕ್ಷ್ಯಾಧಾರಗಳ ಕೊರತೆಯ ನೆಪವೊಡ್ಡಿ ರಾಮ್ ರಹೀಮ್‌ನನ್ನು ಈ ಹತ್ಯೆ ಪ್ರಕರಣದಿಂದ ಖುಲಾಸೆಗೊಳಿಸಿತು.

ಹೈಕೋರ್ಟ್‌ನ ಈ ತೀರ್ಪಿನಿಂದ ಅನ್ಶುಲ್ ಛತ್ರಪತಿ ಧೃತಿಗೆಡಲಿಲ್ಲ. “ಮುಖ್ಯ ಸಂಚುಕೋರನನ್ನೇ ಖುಲಾಸೆಗೊಳಿಸಿರುವುದು ನ್ಯಾಯಕ್ಕೆ ಆದ ಹಿನ್ನಡೆ, ನಾವು ಕೊನೆಯವರೆಗೂ ಹೋರಾಡುತ್ತೇವೆ” ಎಂದು ಹೇಳಿದ ಅನ್ಶುಲ್, ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಪ್ರಸ್ತುತ ಈ ಮೇಲ್ಮನವಿ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ.

ಒಂದೆಡೆ ಪೆರೋಲ್ ಮೇಲೆ ಮೆರೆಯುತ್ತಿರುವ ಧರ್ಮಗುರು, ಇನ್ನೊಂದೆಡೆ ತಂದೆಯ ಸತ್ಯದ ಹಾದಿಗಾಗಿ ಮತ್ತು ನ್ಯಾಯಕ್ಕಾಗಿ ಎರಡು ದಶಕಗಳಿಂದ ಏಕಾಂಗಿಯಾಗಿ ಸವಾಲು ಒಡ್ಡುತ್ತಿರುವ ಮಗ — ಈ ಸುದೀರ್ಘ ಸಮರ ಈಗ ದೇಶದ ಅತ್ಯುನ್ನತ ನ್ಯಾಯಾಲಯದ ಅಂಗಳದಲ್ಲಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

11 ವರ್ಷಗಳ ಬಳಿಕ ಅಮೆರಿಕಕ್ಕೆ ಜಿನ್‌ಪಿಂಗ್; ಭೇಟಿಯ ನಿರೀಕ್ಷೆ ಏನು?

ಚೀನಾದ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ 11 ವರ್ಷಗಳ ಬಳಿಕ ಅಮೆರಿಕಕ್ಕೆ ಅಧಿಕೃತ...

ಆಕೃತಿ ಚೌಧರಿ ಪ್ರಕರಣ: IAS ಅಧಿಕಾರಿ ಮೇಧಾರೂಪಂ ವೇತನದಿಂದ 5 ಲಕ್ಷ ರೂ. ದಂಡ ವಸೂಲಿಗೆ ಸುಪ್ರೀಂ ತಡೆಯಾಜ್ಞೆ

ದೆಹಲಿ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ವಿದ್ಯಾರ್ಥಿನಿ ಮತ್ತು ಹೋರಾಟಗಾರ್ತಿ ಆಕೃತಿ ಚೌಧರಿ...

CEC ಜ್ಞಾನೇಶ್ ಕುಮಾರ್ ವಿರುದ್ಧ ಕ್ರಿಮಿನಲ್ ಕೇಸ್: ಸುಪ್ರೀಂ ವಕೀಲರಿಂದ ‘AG’ಗೆ ಪತ್ರ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್‌ ಕುಮಾರ್ ವಿರುದ್ಧ ಉಳಿದಿಬ್ಬರು ಆಯುಕ್ತರು...

ಬಾದಾಮಿ | ಸೆ.27ರಂದು ‘ಬಸವ-ಭೀಮ ಸಂಗಮ’ ಕಾರ್ಯಕ್ರಮ

ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಶೋಷಣೆಮುಕ್ತ ಸಮಾಜದ ಆಶಯಗಳನ್ನು ಮುನ್ನೆಲೆಗೆ ತರುವ...