NCERT ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ RSS ನಂಟಿನ ಶಿಕ್ಷಣ ತಜ್ಞರಿಗೆ ಸ್ಥಾನ

Date:

11 ಮತ್ತು 12ನೇ ತರಗತಿಯ ರಾಜಕೀಯ ವಿಜ್ಞಾನ ಪಠ್ಯಪುಸ್ತಕಗಳನ್ನು ರೂಪಿಸುವ ಸಮಿತಿಯನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಪುನರ್‌ರಚಿಸಿದ್ದು, ಸಮಿತಿಯ ಕನಿಷ್ಠ ನಾಲ್ವರು ಸದಸ್ಯರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದೊಂದಿಗೆ ನೇರ ಅಥವಾ ಪರೋಕ್ಷ ನಂಟಿರುವುದು ದಾಖಲೆಗಳಿಂದ ತಿಳಿದುಬಂದಿದೆ ಎಂದು ವರದಿಯಾಗಿದೆ.

- Advertisement -

ಸಾಂಸ್ಕೃತಿಕ ಬೇರುಗಳು, ಭಾರತೀಯ ಜ್ಞಾನ ಪರಂಪರೆ ಹಾಗೂ ಒಳಗೊಳ್ಳುವಿಕೆಗೆ ಒತ್ತು ನೀಡುವಂತೆ ಹೊಸ ಪಠ್ಯಪುಸ್ತಕಗಳನ್ನು ರೂಪಿಸುವ ಜವಾಬ್ದಾರಿಯನ್ನು ಸಮಿತಿಗೆ ನೀಡಲಾಗಿದೆ. 11ನೇ ತರಗತಿಯ ಪಠ್ಯಪುಸ್ತಕವನ್ನು ನವೆಂಬರ್ ವೇಳೆಗೆ ಹಾಗೂ 12ನೇ ತರಗತಿಯ ಪಠ್ಯಪುಸ್ತಕವನ್ನು ಮುಂದಿನ ವರ್ಷದ ಜುಲೈ ವೇಳೆಗೆ ಸಿದ್ಧಪಡಿಸುವ ಗುರಿ ಹೊಂದಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಕರ್ನಾಟಕ ಮೂಲದ ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಉಪಾಧ್ಯಕ್ಷ ಹಾಗೂ ಶಿಕ್ಷಣ ತಜ್ಞ, ರಾಜಕೀಯ ವಿಶ್ಲೇಷಕ ಸಂದೀಪ್ ಶಾಸ್ತ್ರಿ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಸಮಿತಿಯ ಸದಸ್ಯರಲ್ಲಿ ಕನಿಷ್ಠ ನಾಲ್ವರಿಗೆ RSSನ ವಿದ್ಯಾರ್ಥಿ ಘಟಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ABVP) ಅಥವಾ ಬಿಜೆಪಿಯೊಂದಿಗೆ ನೇರ ಅಥವಾ ಪರೋಕ್ಷವಾಗಿ ಗುರುತಿಸಬಹುದಾದ ಹಿನ್ನೆಲೆ ಇದೆ ಎಂದು ವರದಿ ತಿಳಿಸಿದೆ.

ಪ್ರಸ್ತುತ ಶಿಕ್ಷಣ ಸಚಿವಾಲಯದಲ್ಲಿ ಹಿರಿಯ ಸಲಹೆಗಾರರಾಗಿರುವ ಯದುನಾಥ್ ದೇಶಪಾಂಡೆ ಅವರು ಹಿಂದೆ ABVPಯಲ್ಲಿ ಪ್ರಮುಖ ಸಂಘಟನಾ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ABVPಯ ದಾಖಲೆಗಳ ಪ್ರಕಾರ, ಅವರು ಹಿಂದೆ ಮಹಾರಾಷ್ಟ್ರದ ಜಂಟಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಬಳಿಕ ಮುಂಬೈ-ಕೊಂಕಣ ವಿಭಾಗದಲ್ಲೂ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಬಿಜೆಪಿಯ ರಾಜಕೀಯ ಸಲಹೆಗಾರರಾಗಿಯೂ ಕೆಲಸ ಮಾಡಿರುವುದಾಗಿ ಉಲ್ಲೇಖಿಸಲಾಗಿದೆ.

ಪ್ರಶಾಂತ್ ದಿವೇಕರ್ ಅವರು ಪುಣೆಯ ಜ್ಞಾನ ಪ್ರಬೋಧಿನಿ ಸಂಸ್ಥೆಯೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿದ್ದಾರೆ. RSSಗೆ ಸಂಬಂಧಿಸಿದ ಸಂಸ್ಥೆ ಎಂದು ಗುರುತಿಸಲಾಗಿರುವ ಜ್ಞಾನ ಪ್ರಬೋಧಿನಿಯನ್ನು 1962ರಲ್ಲಿ RSS ಸದಸ್ಯ ಹಾಗೂ ಪ್ರಚಾರಕರಾಗಿದ್ದ ವಿನಾಯಕ ವಿಶ್ವನಾಥ್ ಸ್ಥಾಪಿಸಿದ್ದರು.

ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯ ರಾಷ್ಟ್ರೀಯ ಮಾರ್ಗದರ್ಶನ ಮಿಷನ್ ಪೋರ್ಟಲ್‌ನಲ್ಲಿರುವ ತಮ್ಮ ಪ್ರೊಫೈಲ್‌ನಲ್ಲಿ ದಿವೇಕರ್ ಅವರು ತಮ್ಮ ಶಿಕ್ಷಣದ ದೃಷ್ಟಿಕೋನವು ‘ಭಾರತೀಯ ಶೈಕ್ಷಣಿಕ ತತ್ವಶಾಸ್ತ್ರದಲ್ಲಿ ಬೇರೂರಿದೆ’ ಎಂದು ಹೇಳಿಕೊಂಡಿದ್ದಾರೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ರೂಪಿಸುವಿಕೆಯಲ್ಲೂ ಕೊಡುಗೆ ನೀಡಿರುವುದಾಗಿ ಅವರು ಉಲ್ಲೇಖಿಸಿದ್ದಾರೆ. ಜೆಎನ್‌ಯು ರಾಜಕೀಯ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ವಂದನಾ ಮಿಶ್ರಾ ಅವರು ಈ ಹಿಂದೆ ABVPಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದರು.

ಅದೇ ರೀತಿ ಜೆಎನ್‌ಯು ಸೆಂಟರ್ ಫಾರ್ ಕಂಪೇರಿಟೀವ್ ಪಾಲಿಟಿಕ್ಸ್ ಆ್ಯಂಡ್ ಪೊಲಿಟಿಕಲ್ ಥಿಯರಿ ವಿಭಾಗದ ಸಹ ಪ್ರಾಧ್ಯಾಪಕ ರವಿ ರಾಮಚಂದ್ರ ಶುಕ್ಲಾ ಅವರು RSSಗೆ ಸಂಬಂಧಿಸಿದ ಸಂಸ್ಥೆ ಎಂದು ಹೇಳಲಾಗಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಡೆಮಾಕ್ರಟಿಕ್ ಲೀಡರ್‌ಶಿಪ್-ರಂಭಾವು ಮ್ಹಾಳ್ಗಿ ಪ್ರಬೋಧಿನಿ ಪ್ರಕಟಿಸುವ ‘ಇಂಡಿಯನ್ ಜರ್ನಲ್ ಆಫ್ ಡೆಮಾಕ್ರಟಿಕ್ ಗವರ್ನೆನ್ಸ್’ ನಿಯತಕಾಲಿಕದ ಸಂಪಾದಕೀಯ ಮಂಡಳಿಯ ಸದಸ್ಯರಾಗಿದ್ದರು.

2021ರಲ್ಲಿ ದೇವೇಂದ್ರ ಫಡ್ನವೀಸ್ ಈ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಶುಕ್ಲಾ ಅವರು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ರಾಷ್ಟ್ರೀಯತೆಯನ್ನು ಕೇಂದ್ರೀಕರಿಸಿದ ಸಂಶೋಧನೆಯನ್ನೂ ನಡೆಸಿದ್ದಾರೆ. ‘ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ರೂಪಿಸುವಲ್ಲಿ ಉತ್ಸವಗಳ ಪಾತ್ರ’ ಎಂಬ ವಿಷಯದ ಕುಂಭ ಮತ್ತು ಮಾಘ ಮೇಳಗಳ ಕುರಿತ ICSSR ಅನುದಾನಿತ ಜೆಎನ್‌ಯು ಯೋಜನೆಯ ಪ್ರಧಾನ ಸಂಶೋಧಕರಾಗಿದ್ದಾರೆ.

ಸಮಿತಿಯಲ್ಲಿ ಜೆಎನ್‌ಯುದ ಪ್ರಕಾಶ್ ಕಾಂದ್ಪಾಲ್, ನ್ಯಾಷನಲ್ ಲಾ ಯೂನಿವರ್ಸಿಟಿಯ ನೀಧಿ ಗುಪ್ತಾ, ಚಾಣಕ್ಯ ವಿಶ್ವವಿದ್ಯಾಲಯದ ಚೇತನ್ ಸಿಂಘೈ, ದೆಹಲಿ ವಿಶ್ವವಿದ್ಯಾಲಯದ ಸುಕಾಂಶಿಕಾ ವತ್ಸ, IGNOUನ ಸತೀಶ್ ಕುಮಾರ್, ನ್ಯಾಷನಲ್ ಯೂನಿವರ್ಸಿಟಿ ಆಫ್ ಸ್ಟಡಿ ಅಂಡ್ ರಿಸರ್ಚ್ ಇನ್ ಲಾ ಸಂಸ್ಥೆಯ ದೀವಾಂಶು ಶ್ರೀವಾಸ್ತವ, ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್‌ನ ಪ್ರಣವ್ ಗುಪ್ತಾ, ಪಾಂಡಿಚೇರಿ ವಿಶ್ವವಿದ್ಯಾಲಯದ ನಂದ ಕಿಶೋರ್ ಹಾಗೂ ಉತ್ಕಳ ವಿಶ್ವವಿದ್ಯಾಲಯದ ಸ್ವಪ್ನಾ ಪ್ರಭು ಕೂಡ ಇದ್ದಾರೆ.

ಅಲ್ಲದೆ NCERTನ ಸವಿತಾ ಸಾಗರ್, ಬೆಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಎನ್. ಸುರೇಶ್ ಕುಮಾರ್, ನವಿ ಮುಂಬೈ ಮಹಾನಗರ ಪಾಲಿಕೆ ಶಾಲೆಯ ಡಯಾನಾ ಇಸಬೆಲ್ ಹಾಗೂ SHVNM ಸರ್ಕಾರಿ ಪಿಯು ಕಾಲೇಜಿನ ಎನ್. ಭರಣಿ ಸಮಿತಿಯಲ್ಲಿದ್ದಾರೆ. NCERTನ ವಾಂಥಾಂಗ್‌ಪೂಯಿ ಖೋಬಂಗ್ ಮತ್ತು ಸುಭಾಷ್ ಸಿಂಗ್ ಕ್ರಮವಾಗಿ ಸದಸ್ಯ ಸಂಯೋಜಕ ಮತ್ತು ಸಹ ಸಂಯೋಜಕರಾಗಿರುತ್ತಾರೆ.

NCERT ಅಧಿಸೂಚನೆಯ ಪ್ರಕಾರ, ಸಾಮಾಜಿಕ ವಿಜ್ಞಾನ, ಭಾಷೆಗಳು, ಭಾರತೀಯ ಜ್ಞಾನ ವ್ಯವಸ್ಥೆಗಳು, ಪರಿಸರ ಶಿಕ್ಷಣ, ನವೀನ ಬೋಧನಾ ವಿಧಾನಗಳು ಮತ್ತು ಬೋಧನಾ-ಕಲಿಕಾ ಸಾಮಗ್ರಿಗಳಿಗೆ ಸಂಬಂಧಿಸಿದ ಪಠ್ಯಕ್ರಮ ವಿಭಾಗಗಳ ಮಾರ್ಗದರ್ಶನವನ್ನು ಸಮಿತಿ ಪಡೆಯಲಿದೆ. ವಿವಿಧ ತರಗತಿಗಳ ನಡುವಿನ ವಿಷಯ ಸಂಬಂಧ, ವಿಷಯಗಳ ನಡುವಿನ ಅಂತರಶಿಸ್ತೀಯ ಸಂಪರ್ಕ ಹಾಗೂ ಬಹುಭಾಷಾ ದೃಷ್ಟಿಕೋನಗಳನ್ನೂ ಪಠ್ಯಪುಸ್ತಕಗಳಲ್ಲಿ ಅಳವಡಿಸಲು ಇತರ ಪಠ್ಯಕ್ರಮ ವಿಭಾಗಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ.

ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ | ಸಾವರ್ಕರ್ ಮೊಮ್ಮಗನ ತಾಯಿಯ ವಂಶಾವಳಿ ಮಾಹಿತಿ ಕೋರಿದ್ದ ರಾಹುಲ್ ಅರ್ಜಿ ವಜಾ

NCERT ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಪ್ರತಿ ಪಠ್ಯಪುಸ್ತಕದ ಪರಿಶೀಲನೆಯ ಸಂದರ್ಭದಲ್ಲಿ ಸಾಂಸ್ಕೃತಿಕ ಬೇರುಗಳು, ಭಾರತೀಯ ಜ್ಞಾನ ವ್ಯವಸ್ಥೆಗಳು, ಒಳಗೊಳ್ಳುವಿಕೆ, ಶೈಕ್ಷಣಿಕ ತಂತ್ರಜ್ಞಾನ ಮತ್ತು ಮೌಲ್ಯಮಾಪನ ಸೇರಿದಂತೆ ವಿವಿಧ ಅಡ್ಡ-ವಿಷಯಗಳ ಅಂಶಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.

ಈ ಬೆಳವಣಿಗೆ ದೇಶದ ಮುಂದಿನ ಪೀಳಿಗೆಯ ರಾಜಕೀಯ ಅರಿವನ್ನು ಯಾರು ರೂಪಿಸುತ್ತಾರೆ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ. RSS–ಬಿಜೆಪಿಯ ಸೈದ್ಧಾಂತಿಕ ಹಿನ್ನೆಲೆಯೊಂದಿಗೆ ಗುರುತಿಸಿಕೊಂಡಿರುವವರೇ ರಾಜಕೀಯ ವಿಜ್ಞಾನ ಪಠ್ಯಪುಸ್ತಕ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಶಿಕ್ಷಣ ವಲಯದಲ್ಲಿ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ. ನಿರ್ದಿಷ್ಟ ಸೈದ್ಧಾಂತಿಕ ಹಿನ್ನೆಲೆಯ ಪ್ರಭಾವ ಪಠ್ಯಪುಸ್ತಕದ ವಿಷಯದ ಮೇಲೆ ಬಿದ್ದರೆ, ಪ್ರಜಾಪ್ರಭುತ್ವ, ಧರ್ಮನಿರಪೇಕ್ಷತೆ, ಬಹುತ್ವ ಮತ್ತು ಸಂವಿಧಾನಾತ್ಮಕ ಮೌಲ್ಯಗಳಿಗೆ ನ್ಯಾಯ ಸಿಗುತ್ತದೆಯೇ? ಎಂದು ಶಿಕ್ಷಣ ತಜ್ಞರು ಪ್ರಶ್ನಿಸುತ್ತಿದ್ದಾರೆ. ‘ಸಾಂಸ್ಕೃತಿಕ ಬೇರು’ಗಳ ಹೆಸರಿನಲ್ಲಿ ಒಂದು ನಿರ್ದಿಷ್ಟ ವಿಚಾರಧಾರೆಯನ್ನು ವಿದ್ಯಾರ್ಥಿಗಳ ಮೇಲೆ ಹೇರುವಂತಾಗಬಾರದು ಎಂದು ಅವರು ಎಚ್ಚರಿಸಿದ್ದಾರೆ. ಪಠ್ಯಪುಸ್ತಕಗಳು ಯಾವುದೇ ರಾಜಕೀಯ ಸಂಘಟನೆಯ ಸೈದ್ಧಾಂತಿಕ ಪ್ರಚಾರದ ಸಾಧನಗಳಾಗದೆ, ಭಿನ್ನಾಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳುವ, ಪ್ರಶ್ನಿಸುವ ಮತ್ತು ಸಂವಿಧಾನದ ಮೌಲ್ಯಗಳನ್ನು ಗೌರವಿಸುವ ನಾಗರಿಕರನ್ನು ರೂಪಿಸುವ ಸಾಧನಗಳಾಗಬೇಕು ಎಂಬುದು ತಜ್ಞರ ವಲಯದ ಕಾಳಜಿಯಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಮತದಾರರ ಹೆಸರಳಿಸಲು ನಕಲಿ ಮರಣ ಪ್ರಮಾಣಪತ್ರ ಬಳಕೆ; ತನಿಖೆಗೆ ಕಾಂಗ್ರೆಸ್ ಒತ್ತಾಯ

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೀವಂತ ಮತದಾರರನ್ನು ಮೃತಪಟ್ಟಿದ್ದಾರೆಂದು ತೋರಿಸಿ ಮತದಾರರ...

2036ರ ಒಲಿಂಪಿಕ್ಸ್ ಆತಿಥ್ಯ: ಕಣದಲ್ಲಿರುವ 7 ರಾಷ್ಟ್ರಗಳಲ್ಲಿ ಭಾರತವೂ ಭಾಗಿ

2036ರ ಒಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯ ವಹಿಸಲು ಅಧಿಕೃತವಾಗಿ ಆಸಕ್ತಿ ತೋರಿರುವ ಏಳು...

ದೆಹಲಿ ಗಲಭೆ | ದ್ವೇಷ ಭಾಷಣ ಮಾಡಿದ್ದ ಬಿಜೆಪಿ ನಾಯಕರ ವಿರುದ್ಧ ಕ್ರಮಕ್ಕೆ ಕೋರಿದ್ದ ಅರ್ಜಿ ವಜಾ

ಈಶಾನ್ಯ ದೆಹಲಿ ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ ದ್ವೇಷ ಭಾಷಣದ ಆರೋಪ ಹೊತ್ತಿರುವ...