ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ವಿದೇಶಾಂಗ ಸಚಿವ ಕೆ ನಟ್ವರ್ ಸಿಂಗ್ ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಕಳೆದ ಕೆಲವು ವಾರಗಳಿಂದ ಚಿಕಿತ್ಸೆಯನ್ನು ಪಡೆಯುತ್ತಿದ್ದ ದೆಹಲಿ ಸಮೀಪದ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ನಟ್ವರ್ ಸಿಂಗ್ ನಿಧನರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ನಟ್ವರ್ ಸಿಂಗ್ ನಿಧನಕ್ಕೆ ಸಂಪಾತ ವ್ಯಕ್ತಪಡಿಸಿದ್ದಾರೆ.
1931ರಲ್ಲಿ ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ಜನಿಸಿದ ಕೆ ನಟ್ವರ್ ಸಿಂಗ್ ಅವರು ರಾಜಕೀಯಕ್ಕೆ ಸೇರುವ ಮೊದಲು ರಾಜತಾಂತ್ರಿಕರಾಗಿದ್ದರು. ಮಾಜಿ ಕಾಂಗ್ರೆಸ್ ಸಂಸದ ನಟ್ವರ್ ಸಿಂಗ್ ಅವರು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ 2004-05ರ ಯುಪಿಎ-1 ಸರ್ಕಾರದ ಅವಧಿಯಲ್ಲಿ ಭಾರತದ ವಿದೇಶಾಂಗ ಸಚಿವರಾಗಿದ್ದರು.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ ನಿಧನ
ಪಾಕಿಸ್ತಾನದ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದರು. 1966ರಿಂದ 1971ರವರೆಗೆ ಪ್ರಧಾನಿ ಇಂದಿರಾ ಗಾಂಧಿಯವರ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದರು.
1984ರಲ್ಲಿ ನಟ್ವರ್ ಸಿಂಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ. ಹಾಗೆಯೇ ನಟ್ವರ್ ಸಿಂಗ್ ಹಲವಾರು ಪುಸ್ತಕಗಳ ಕರ್ತೃ ಕೂಡಾ ಆಗಿದ್ದಾರೆ.
#WATCH | Delhi: Visuals from outside the residence of former External Affairs Minister Natwar Singh, where his mortal remains have been kept.
— ANI (@ANI) August 11, 2024
He passed away at Medanta Hospital in Gurugram (Haryana) last night, following a prolonged illness. His last rites will be performed at… pic.twitter.com/XbwxQhwTO8