‘ಕದನ ವಿರಾಮ ಎಂಬುದು ಬರಿ ಕಣ್ಣೊರೆಸುವ ತಂತ್ರ’; ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆ ಆಕ್ರೋಶ

Date:

ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದಲ್ಲಿ ಇಸ್ರೇಲ್ ಪಡೆಗಳು ನಡೆಸುತ್ತಿರುವ ಹಿಂಸಾಚಾರ ಮತ್ತು ಮಾನವಹಕ್ಕುಗಳ ಉಲ್ಲಂಘನೆ ಕದನ ವಿರಾಮದ ನಂತರವೂ ಶಮನಗೊಂಡಿಲ್ಲ. ಇಸ್ರೇಲ್ ಪಡೆಗಳು ಯುದ್ಧಾಪರಾಧ ಮತ್ತು ನರಮೇಧವನ್ನು ತಡೆರಹಿತವಾಗಿ ಮುಂದುವರಿಸಿವೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ತನಿಖಾ ಸಮಿತಿ ಆತಂಕಕಾರಿ ಮಾಹಿತಿ ಹೊರಹಾಕಿದೆ.

- Advertisement -

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶ್ರೀನಿವಾಸನ್ ಮುರಳೀಧರ್ ನೇತೃತ್ವದ ಸಮಿತಿಯು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಗೆ ತನ್ನ ಮೂರನೇ ಸಮಗ್ರ ವರದಿಯನ್ನು ಸಲ್ಲಿಸಿದ್ದು, ಕದನ ವಿರಾಮದ ಹೆಸರಿನಲ್ಲೂ ನಡೆಯುತ್ತಿರುವ ಭೀಕರ ದೌರ್ಜನ್ಯಗಳನ್ನು ಜಗತ್ತಿನ ಮುಂದಿಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ವರದಿಯಲ್ಲಿರುವ ಪ್ರಮುಖಾಂಶಗಳು:

2023ರ ಅಕ್ಟೋಬರ್ 7ರ ದಾಳಿಯ ನಂತರ ಆಕ್ರಮಿತ ಪ್ಯಾಲೆಸ್ಟೀನ್ ಪ್ರದೇಶದಲ್ಲಿ ಒಟ್ಟು 75,000ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಜೀವ ಕಳೆದುಕೊಂಡಿದ್ದಾರೆ. ಬಲಿಯಾದವರಲ್ಲಿ ಕನಿಷ್ಠ 21,500 ಮಕ್ಕಳು ಹಾಗೂ 11,000 ಮಹಿಳೆಯರು ಸೇರಿದ್ದಾರೆ. ಭದ್ರತಾ ಪಡೆಗಳ ನಿರಂತರ ದಾಳಿಯಿಂದಾಗಿ ಗಾಜಾದ ಒಟ್ಟು ಮಕ್ಕಳ ಸಂಖ್ಯೆಯಲ್ಲಿ ಶೇಕಡಾ 2ರಷ್ಟು ಮಕ್ಕಳು ಸಾವನ್ನಪ್ಪಿದ್ದಾರೆ.

ಇತ್ತೀಚೆಗೆ ಜಾರಿಯಾದ ಕದನ ವಿರಾಮದಿಂದ ನಾಗರಿಕರಿಗೆ ಶಾಂತಿ ಸಿಕ್ಕಿದೆ ಎಂಬ ವಾದವನ್ನು ಸಮಿತಿ ಸಂಪೂರ್ಣವಾಗಿ ತಳ್ಳಿಹಾಕಿದೆ. ಗಾಜಾದಲ್ಲಿ ಇಸ್ರೇಲ್ ಸೇನೆಯ ನಿಯಂತ್ರಣದಲ್ಲಿರುವ ‘ಯೆಲ್ಲೋ ಲೈನ್‌ʼಅನ್ನು ಸಮೀಪಿಸುವ ಅಥವಾ ದಾಟಲು ಯತ್ನಿಸುವ ಅಮಾಯಕ ನಾಗರಿಕರು ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ವೆಸ್ಟ್ ಬ್ಯಾಂಕ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ಹಾಗೂ ವಸಾಹತುಶಾಹಿಗಳ ಹಿಂಸಾಚಾರ ತೀವ್ರಗೊಂಡಿದೆ. ಪ್ಯಾಲೆಸ್ಟೀನ್ ಜನರನ್ನು ಸ್ವಂತ ಭೂಮಿಯಿಂದ ಒಕ್ಕಲೆಬ್ಬಿಸಿ,  ಆ ಪ್ರದೇಶವನ್ನು ಇಸ್ರೇಲ್‌ಗೆ ಸೇರ್ಪಡೆಗೊಳಿಸುವುದೇ ಈ ದಾಳಿಗಳ ಮುಖ್ಯ ಉದ್ದೇಶವಾಗಿದೆ. 2025ರ ಆರಂಭದಿಂದ ನಡೆದ ಮಿಲಿಟರಿ ಕಾರ್ಯಾಚರಣೆಯಿಂದಾಗಿ 1967ರ ನಂತರದ ಅತಿ ದೊಡ್ಡ ಮಟ್ಟದ ಜನಸಂಖ್ಯಾ ಸ್ಥಳಾಂತರ ಸಂಭವಿಸಿದ್ದು, 34,176ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.

ಲೈಂಗಿಕ ಕಿರುಕುಳ, ಅತ್ಯಾಚಾರ ಮತ್ತು ಹಿಂಸೆಯ ಮೂಲಕ ಪ್ಯಾಲೆಸ್ಟೀನಿಯನ್ನರನ್ನು ಹತ್ತಿಕ್ಕಲಾಗುತ್ತಿದೆ. 1947-48ರ ಯುದ್ಧದ ಸಮಯದಿಂದಲೂ ಗರಿಷ್ಠ ಭೂಮಿಯನ್ನು ವಶಪಡಿಸಿಕೊಂಡು ಪ್ಯಾಲೆಸ್ಟೀನ್ ಜನಸಂಖ್ಯೆಯನ್ನು ಕಡಿತಗೊಳಿಸುವ ನೀತಿಯನ್ನೇ ಇಸ್ರೇಲ್ ಮುಂದುವರಿಸಿಕೊಂಡು ಬಂದಿದೆ ಎಂದು ವರದಿ ಬೆಟ್ಟುಮಾಡಿದೆ. ಇದೇ ವೇಳೆ ವೆಸ್ಟ್ ಬ್ಯಾಂಕ್‌ನಲ್ಲಿ ಪ್ಯಾಲೆಸ್ಟೀನಿಯನ್ ಭದ್ರತಾ ಪಡೆಗಳೂ ಕೂಡ ತಮ್ಮದೇ ಜನರ ವಿರುದ್ಧ ಅನಗತ್ಯ ಮತ್ತು ಅತಿಯಾದ ಬಲಪ್ರಯೋಗ ಮಾಡಿವೆ ಎಂದು ಸಮಿತಿ ಖಂಡಿಸಿದೆ. ಇಂತಹ ಕೊಲೆಗಳ ಬಗ್ಗೆ ಯಾವುದೇ ನಿಷ್ಪಕ್ಷಪಾತ ತನಿಖೆ ನಡೆಸಲು ಪ್ಯಾಲೆಸ್ಟೀನ್ ಅಥಾರಿಟಿ ವಿಫಲವಾಗಿದೆ ಎಂದು ಹೇಳಿದೆ.

ಅಮೆರಿಕ ಸರ್ಕಾರ ಸೂಕ್ತ ಸಮಯಕ್ಕೆ ವೀಸಾ ನೀಡದ ಕಾರಣಕ್ಕಾಗಿ ಜಸ್ಟಿಸ್ ಶ್ರೀನಿವಾಸನ್ ಮುರಳೀಧರ್ ಅವರಿಗೆ ಜನರಲ್ ಅಸೆಂಬ್ಲಿ ಸಭೆಯಲ್ಲಿ ಖುದ್ದಾಗಿ ಭಾಗವಹಿಸಲು ಸಾಧ್ಯವಾಗಲಿಲ್ಲ. ವೀಡಿಯೊ ಸಂಪರ್ಕದ ಮೂಲಕ ಮಾತನಾಡಿದ ಅವರು, “ವಿಶ್ವಸಂಸ್ಥೆ ಮತ್ತು ಸದಸ್ಯ ರಾಷ್ಟ್ರಗಳು ಈ ದೌರ್ಜನ್ಯ ತಡೆಯಲು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಇಸ್ರೇಲ್‌ಗೆ ನೀಡುತ್ತಿರುವ ಸೇನಾ, ಆರ್ಥಿಕ ಮತ್ತು ರಾಜಕೀಯ ಬೆಂಬಲವನ್ನು ವಿಶ್ವದ ದೇಶಗಳು ತಕ್ಷಣವೇ ಹಿಂಪಡೆಯಬೇಕು,” ಎಂದು ಆಗ್ರಹಿಸಿದರು.

ವಿಶ್ವಸಂಸ್ಥೆಗೆ ಇಸ್ರೇಲ್‌ನ ಖಾಯಂ ಪ್ರತಿನಿಧಿ ಡ್ಯಾನಿ ಡಾನನ್ ಈ ವರದಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, “ಇದೊಂದು ಕಾಲ್ಪನಿಕ ಐತಿಹಾಸಿಕ ಕಥೆ” ಎಂದು ಬಣ್ಣಿಸಿದ್ದಾರೆ. ಭೀಕರ ಉಗ್ರಗಾಮಿಗಳ ವಾದವನ್ನೇ ಯುಎನ್ ಅಧಿಕೃತ ದಾಖಲೆಯಾಗಿ ಪರಿವರ್ತಿಸಿದೆ ಎಂದು ಅವರು ಆರೋಪಿಸಿದರು. ಆದರೆ ಈ ಆರೋಪಕ್ಕೆ ಸ್ಪಷ್ಟ ಪ್ರತ್ಯುತ್ತರ ನೀಡಿದ ನ್ಯಾ. ಮುರಳೀಧರ್, ಸಮಿತಿಯ ಸಾಕ್ಷ್ಯಾಧಾರಗಳು ಅಂತರರಾಷ್ಟ್ರೀಯ ನ್ಯಾಯಾಲಯದ ಕಾನೂನು ಮಾನದಂಡಗಳಿಗೆ ಅನುಗುಣವಾಗಿವೆ. ಇಸ್ರೇಲ್ ತನಿಖೆಗೆ ಸಹಕರಿಸದಿದ್ದರೂ ಸೂಕ್ತ ಹಾಗೂ ಕಟ್ಟುನಿಟ್ಟಾದ ಪುರಾವೆಗಳನ್ನು ಸಂಗ್ರಹಿಸಿಯೇ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಸ್ಪಷ್ಟಪಡಿಸಿದರು.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

18 ತಿಂಗಳಿಂದ ಶವಾಗಾರದಲ್ಲೇ ಉಳಿದಿದ್ದ ಭಾರತೀಯನ ಮೃತದೇಹ; ಘನತೆಯ ಅಂತ್ಯಕ್ರಿಯೆಗೆ ಕೇರಳ ಹೈಕೋರ್ಟ್ ಆದೇಶ

ಸಂಬಂಧಿಕರ ನಡುವಿನ ಆಸ್ತಿ ಮತ್ತು ಅಂತ್ಯಕ್ರಿಯೆ ಸ್ಥಳದ ವಿವಾದಕ್ಕೆ ಬರೋಬ್ಬರಿ 18...

ಈ ದಿನ ಸಂಪಾದಕೀಯ | ಲೈಂಗಿಕ ಹಗರಣದ ಆರೋಪಿಗಳಿಗೆ ಸ್ಥಾನಮಾನ; ನಗೆಪಾಟಲಿಗೀಡಾದ ಮೋದಿಯ ʼಬೇಟಿ ಬಚಾವೋʼ ಘೋಷಣೆ

ಅಮೆರಿಕದ ಕುಖ್ಯಾತ ಲೈಂಗಿಕ ಹಗರಣದ ಅಪರಾಧಿ ಎಪ್ಸ್ಟೀನ್‌ ಜೊತೆಗೆ ಸಂಪರ್ಕದಲ್ಲಿದ್ದ ಕೇಂದ್ರ...

SIR | ಕಲ್ಯಾಣ ಕರ್ನಾಟಕದಲ್ಲಿ 16.23 ಲಕ್ಷ ಮತದಾರರು ಔಟ್!

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡಿದ್ದು,...