ಜಾಗತಿಕ ಪಾಸ್‌ಪೋರ್ಟ್ ಸೂಚ್ಯಂಕ 2026: 125ನೇ ಸ್ಥಾನಕ್ಕೆ ಕುಸಿದ ಭಾರತ

Date:

ಹೊಸ ‘ಜಾಗತಿಕ ಪಾಸ್‌ಪೋರ್ಟ್ ಸೂಚ್ಯಂಕ 2026’ರ ವರದಿಯು ಪ್ರಕಟವಾಗಿದ್ದು, ಭಾರತದ ಪಾಸ್‌ಪೋರ್ಟ್ ಸ್ಥಾನಮಾನವು ಮತ್ತೆ ಕುಸಿತ ಕಂಡಿದೆ. ಪ್ರಸ್ತುತ ಭಾರತ 125ನೇ ರ‍್ಯಾಂಕಿಂಗ್‌ಗೆ ತಲುಪಿದೆ. ಕಳೆದ ವರ್ಷ ಕೊಂಚ ಸುಧಾರಣೆ ಕಂಡಿದ್ದರೂ, ದೇಶವು ಜಗತ್ತಿನ ಟಾಪ್ 100 ಬಲಿಷ್ಠ ಪಾಸ್‌ಪೋರ್ಟ್‌ಗಳ ಪಟ್ಟಿಯ ಹೊರಗೇ ಉಳಿದಿದೆ. ವೀಸಾ ಮುಕ್ತ ಪ್ರವೇಶದ ಆಧಾರದ ಮೇಲೆ ನೀಡಲಾಗುವ ಈ ಜಾಗತಿಕ ರ‍್ಯಾಂಕಿಂಗ್‌ನಲ್ಲಿ ಭಾರತದ ಹಿನ್ನಡೆಯು, ವಿಶ್ವದಾದ್ಯಂತ ಸರಾಗವಾಗಿ ಪ್ರಯಾಣಿಸಲು ಬಯಸುವ ಭಾರತೀಯ ಪ್ರಯಾಣಿಕರಿಗೆ ಕೊಂಚ ನಿರಾಸೆ ಮೂಡಿಸಿದೆ.

- Advertisement -

ಹಿಂದಿನ ವರ್ಷಗಳ ಇತಿಹಾಸ ಗಮನಿಸಿದರೆ, 2021 ರಿಂದ 2023 ರವರೆಗೆ 127ನೇ ಸ್ಥಾನದಲ್ಲಿದ್ದ ಭಾರತ, 2025ರಲ್ಲಿ 124ನೇ ಸ್ಥಾನಕ್ಕೆ ಏರಿಕೆ ಕಂಡು ಚೇತರಿಸಿಕೊಂಡಿತ್ತು. ಆದರೆ, ಈ ವರ್ಷ ಮತ್ತೆ ಒಂದು ಸ್ಥಾನ ಕೆಳಗೆ ಜಾರಿ 125ನೇ ರ‍್ಯಾಂಕ್ ಪಡೆದಿದೆ. ಪ್ರಸ್ತುತ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ಜಗತ್ತಿನ ಕೇವಲ 26 ದೇಶಗಳಿಗೆ ಮಾತ್ರ ವೀಸಾ ರಹಿತವಾಗಿ ಅಥವಾ ‘ಆಗಮನದ ವೀಸಾ’ (ವೀಸಾ-ಆನ್-ಅರೈವಲ್) ಸೌಲಭ್ಯದೊಂದಿಗೆ ಪ್ರವಾಸ ಮಾಡಬಹುದಾಗಿದೆ ಎಂದು ವರದಿ ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಜಾಗತಿಕ ರ‍್ಯಾಂಕಿಂಗ್‌ ವಿವರಗಳ ಪ್ರಕಾರ, ಭಾರತವು ಈಗ ನಮೀಬಿಯಾ, ಫಿಲಿಪೈನ್ಸ್, ಮೊರೊಕೊ ಮತ್ತು ಉಜ್ಬೇಕಿಸ್ತಾನ್ ದೇಶಗಳಿಗಿಂತಲೂ ಕೆಳಗಿನ ಸ್ಥಾನದಲ್ಲಿದೆ. ಆದರೆ, ಅಜೆರ್ಬೈಜಾನ್ ಮತ್ತು ಕಿರ್ಗಿಸ್ತಾನ್ ದೇಶಗಳಿಗಿಂತ ಮೇಲ್ಮಟ್ಟದಲ್ಲಿದೆ. ನೆರೆಯ ದೇಶಗಳ ಪೈಕಿ ಚೀನಾ 104ನೇ ಸ್ಥಾನದಲ್ಲಿದ್ದು ಭಾರತಕ್ಕಿಂತ ಮುಂದಿದೆ. ಆದಾಗ್ಯೂ, ಇತರ ದಕ್ಷಿಣ ಏಷ್ಯಾ ದೇಶಗಳಾದ ಬಾಂಗ್ಲಾದೇಶ (166), ನೇಪಾಳ (164) ಹಾಗೂ ಪಾಕಿಸ್ತಾನ (188) ದೇಶಗಳಿಗೆ ಹೋಲಿಸಿದರೆ ಭಾರತದ ಸ್ಥಿತಿ ಕೊಂಚ ಉತ್ತಮವಾಗಿದೆ.

ಭಾರತೀಯರು ಪ್ರಸ್ತುತ ಭೂತಾನ್, ನೇಪಾಳ, ಜಮೈಕಾ, ಮಕಾವು, ಪ್ಯಾಲೆಸ್ಟೈನ್, ಟುನೀಶಿಯಾ, ಅಂಗೋಲಾ ಮತ್ತು ಬಾರ್ಬಡೋಸ್ ಸೇರಿದಂತೆ 26 ದೇಶಗಳಿಗೆ ಸುಲಭವಾಗಿ ಪ್ರಯಾಣಿಸಬಹುದು. ಆದರೆ, ಇನ್ನುಳಿದ ಸುಮಾರು 88 ದೇಶಗಳಿಗೆ ಭೇಟಿ ನೀಡಲು ಮುಂಚಿತವಾಗಿ ವೀಸಾ ಪಡೆಯುವುದು ಕಡ್ಡಾಯವಾಗಿದೆ. ಇದರಲ್ಲಿ ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್, ಚೀನಾ ಮತ್ತು ಯುಎಇ ನಂತಹ ಜಗತ್ತಿನ ಪ್ರಮುಖ ಹಾಗೂ ಆರ್ಥಿಕವಾಗಿ ಬಲಿಷ್ಠವಾಗಿರುವ ದೇಶಗಳು ಸೇರಿವೆ.

ಇನ್ನು ಜಗತ್ತಿನ ಅತ್ಯಂತ ಶಕ್ತಿಶಾಲಿ ಟಾಪ್ 10 ದೇಶಗಳ ರ‍್ಯಾಂಕಿಂಗ್‌ನಲ್ಲಿ ಯುರೋಪ್ ದೇಶಗಳು ಪೂರ್ಣ ಪಾರಮ್ಯ ಸಾಧಿಸಿವೆ. ಈ ಪಟ್ಟಿಯಲ್ಲಿ ಸ್ವೀಡನ್ ಮೊದಲ ರ‍್ಯಾಂಕ್ ಪಡೆದರೆ, ಸ್ವಿಟ್ಜರ್ಲೆಂಡ್ ಎರಡನೇ, ಫಿನ್‌ಲ್ಯಾಂಡ್ ಮೂರನೇ ಮತ್ತು ಜರ್ಮನಿ ನಾಲ್ಕನೇ ಸ್ಥಾನದಲ್ಲಿವೆ. ಇನ್ನುಳಿದಂತೆ ಡೆನ್ಮಾರ್ಕ್ ಮತ್ತು ನೆದರ್ಲ್ಯಾಂಡ್ಸ್ ಜಂಟಿಯಾಗಿ ಐದನೇ ಸ್ಥಾನ ಹಂಚಿಕೊಂಡಿದ್ದು, ಐರ್ಲೆಂಡ್ ಏಳನೇ, ಯುನೈಟೆಡ್ ಕಿಂಗ್‌ಡಮ್ ಎಂಟನೇ, ನಾರ್ವೆ ಒಂಬತ್ತನೇ ಹಾಗೂ ಸಿಂಗಾಪುರ ಹತ್ತನೇ ರ‍್ಯಾಂಕ್ ಪಡೆದಿವೆ. ಅಮೆರಿಕ ಮತ್ತು ಫ್ರಾನ್ಸ್ 11ನೇ ಸ್ಥಾನ ಪಡೆದು ಟಾಪ್ 10ರಿಂದ ಸ್ವಲ್ಪದರಲ್ಲೇ ಹೊರಗುಳಿದಿವೆ.

ಇದನ್ನು ಗಮನಿಸಿದರೆ ಮೋದಿ ಸರ್ಕಾರ ತನ್ನ ಆಡಳಿತದಲ್ಲಿ ಭಾರತ ಎಂತಹ ಎತ್ತರವನ್ನು ಮುಟ್ಟಿದೆ ಎಂದು ಬಾರಿಸುತ್ತಿದ್ದ ಡಂಗುರವನ್ನು ಹರಿಯುವ ಮತ್ತು ಊದಿರುವ ಬಲೂನನ್ನು ಒಡೆಯುವಂತಹ ಬೆಳವಣಿಗೆಯೊಂದು ಈಗ ನಡೆದಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ದೇಶದ ಸ್ಥಾನಮಾನದ ವಾಸ್ತವವೇನು ಎಂಬುದನ್ನು 2026ರ ‘ಗ್ಲೋಬಲ್ ಪಾಸ್‌ಪೋರ್ಟ್ ಇಂಡೆಕ್ಸ್’ ಬಯಲು ಮಾಡಿದೆ. ಈ ವರದಿಯ ಪ್ರಕಾರ ಭಾರತದ ಪಾಸ್‌ಪೋರ್ಟ್ ಶ್ರೇಯಾಂಕ 125ನೇ ಸ್ಥಾನಕ್ಕೆ ಕುಸಿದಿದ್ದು, ಸರ್ಕಾರದ ‘ವಿಶ್ವಗುರು’ ಮಾತುಗಳಿಗೂ ವಾಸ್ತವದ ಅಂಕಿ-ಅಂಶಗಳಿಗೂ ಇರುವ ವಿರೋಧಾಭಾಸವನ್ನು ಇದು ಸ್ಪಷ್ಟವಾಗಿ ಎತ್ತಿ ತೋರಿಸುತ್ತಿದೆ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಲಸೂರ | ಗಡಿಭಾಗದ ಸರ್ಕಾರಿ ಶಾಲೆಗಳಿಗೆ ಕನ್ನಡ ಶಿಕ್ಷಕರ ನೇಮಕಕ್ಕೆ ಕಸಾಪ ಮನವಿ

ಮಹಾರಾಷ್ಟ್ರದ ಗಡಿಯೊಂದಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ಉರ್ದು ಹಾಗೂ...

ಬೀದರ್‌ | ಅ.24ರಿಂದ ಕಲ್ಯಾಣ ಪರ್ವ: ಭಿತ್ತಿ ಪತ್ರ ಬಿಡುಗಡೆ

ಬಸವಕಲ್ಯಾಣದ ಮಹಾ ಮಠದ ಮಹಾಮನೆ ಆವರಣದಲ್ಲಿ ಬಸವ ಧರ್ಮ ಪೀಠದ ವತಿಯಿಂದ...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್ ದೀಪ್ಕೆ ಕುರಿತು ನಡೆದಿದೆ ಚರ್ಚೆ!

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ...

ಅಸ್ಸಾಂ ಉಪಚುನಾವಣೆ ಅಖಾಡ: ಸಿಎಂ ಶರ್ಮಾ ಮತ್ತು ಕಾಂಗ್ರೆಸ್ ಸಂಸದರ ನಡುವೆ ‘ಬಿರಿಯಾನಿ vs ರಸ್ಕ್’ ವಾಕ್ಸಮರ!

ಅಸ್ಸಾಂನ ನಗಾಂವ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಪ್ರಚಾರ ಕಣದಲ್ಲಿ ರಾಜಕೀಯ...