ಶಿವಮೊಗ್ಗ | ಸಹ್ಯಾದ್ರಿ ಕಾಲೇಜಿನ ಹಳೆಯ ಕೀರ್ತಿಗೆ ಮಸಿ! ಬದಲಾದ ವಿದ್ಯಾನಗರದ ಛಾಯೆ

Date:

ಒಂದು ಕಾಲದಲ್ಲಿ ಶಿವಮೊಗ್ಗದ ಶೈಕ್ಷಣಿಕ ವಲಯದಲ್ಲಿ ಸಹ್ಯಾದ್ರಿ ಕಾಲೇಜಿನ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿತ್ತು. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಈ ಪ್ರದೇಶ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಮೂಲಕ ಗುರುತನ್ನು ತಂದುಕೊಟ್ಟಿತ್ತು. ಆದರೆ ಕಾಲ ಬದಲಾದಂತೆ ವಿದ್ಯಾನಗರದ ಪರಿಸ್ಥಿತಿಯೂ ಬದಲಾಗುತ್ತಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.

ಶೈಕ್ಷಣಿಕ ಚಟುವಟಿಕೆಗಳಿಂದ ಗುರುತಿಸಿಕೊಂಡಿದ್ದ ವಿದ್ಯಾನಗರ ಇಂದು ಕೆಲವು ಅಹಿತಕರ ಘಟನೆಗಳು, ಸಂಚಾರದ ಸಮಸ್ಯೆಗಳು, ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳು ಹಾಗೂ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಚರ್ಚೆಗಳ ಕಾರಣದಿಂದ ಸುದ್ದಿಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.

- Advertisement -

ವೇಶ್ಯಾವಾಟಿಕೆ ಚಟುವಟಿಕೆ ಆರೋಪ: ಪೊಲೀಸ್ ದಾಳಿ…!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಾಂಧಿ ಹತ್ಯೆಯನ್ನು ಸಮರ್ಥಿಸುವ ದುರುಳರಿಗೆ ಸರ್ದಾರ್ ಪಟೇಲರ ಪತ್ರಗಳೇ...

ಗಾಂಧಿ ಹತ್ಯೆಯ ಕುರಿತು ಅಡ್ಡಂಡ ಕಾರ್ಯಪ್ಪ ರಚಿಸಿರುವ ನಾಟಕ ಬೆಂಗಳೂರಿನಲ್ಲಿ ತೀವ್ರ ವಿವಾದ ಸೃಷ್ಟಿಸಿದೆ. ನಾಟಕದಲ್ಲಿ ಗಾಂಧೀಜಿಯನ್ನು ದೇಶವಿರೋಧಿಯಂತೆ ಬಿಂಬಿಸಿ, ಅವರ ಹಂತಕ ನಾಥುರಾಮ್ ಗೋಡ್ಸೆಯನ್ನು ಸಮರ್ಥಿಸುವ ಪ್ರಯತ್ನ ನಡೆದಿದೆ. ಗಾಂಧಿ ಹತ್ಯೆಯ...

ʼಈ ದಿನʼ ಸುದ್ದಿ ವಿಶ್ಲೇಷಣೆ | ಇಂದಿರಾ ಅವರನ್ನು...

ಗುಜರಾತ್ ವಿದ್ಯಾರ್ಥಿಗಳು ಹೊತ್ತಿಸಿದ ಹೋರಾಟದ ಕಿಡಿ, ಬಿಹಾರದ ‘ಸಂಪೂರ್ಣ ಕ್ರಾಂತಿ’ ಮೂಲಕ ರಾಷ್ಟ್ರ ರಾಜಕಾರಣವನ್ನೇ ವ್ಯಾಪಿಸಿತು. ಭಾರತದ ಪ್ರಜಾಸತ್ತಾತ್ಮಕ ಇತಿಹಾಸದಲ್ಲಿ ವಿದ್ಯಾರ್ಥಿ ಶಕ್ತಿಯ ಸಾಮರ್ಥ್ಯ ಮತ್ತು ಜನಾಂದೋಲನಗಳ ಸಂಕೀರ್ಣತೆಯನ್ನು ನೆನಪಿಸುವ ಬೆಳಕಿನ ಅಧ್ಯಾಯ ದೆಹಲಿಯಲ್ಲಿ...

ಮೋದಿಗೆ ರಾಹುಲ್‌ ಬಹಿರಂಗ ಸವಾಲು; ಕುತಂತ್ರಗಳಿಗೆ ವಿರುದ್ಧವಾಗಿ ಹೋರಾಟ...

ಭಾರತೀಯ ರಾಜಕಾರಣದಲ್ಲಿ ಕಳೆದ ಒಂದು ದಶಕದಿಂದ ನಿರಂತರವಾಗಿ ಚರ್ಚೆಯಾಗುತ್ತಿರುವ ಪ್ರಮುಖ ಕೇಂದ್ರಬಿಂದು ರಾಹುಲ್ ಗಾಂಧಿ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಧಿಕಾರಾವಧಿಯಲ್ಲಿ ಪ್ರತಿಪಕ್ಷಗಳನ್ನು ದಮನ ಮಾಡಲು, ಹತ್ತಿಕ್ಕಲು ಮತ್ತು ನಾಯಕರ ವ್ಯಕ್ತಿತ್ವವನ್ನು ಹನನ...

ಕೆಲವು ತಿಂಗಳ ಹಿಂದೆ ವಿದ್ಯಾನಗರದ ವ್ಯಾಪ್ತಿಯಲ್ಲಿ ವೇಶ್ಯಾವಾಟಿಕೆ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ ಘಟನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಶೈಕ್ಷಣಿಕ ಸಂಸ್ಥೆಗಳು ಇರುವ ಪ್ರದೇಶದಲ್ಲಿ ಇಂತಹ ಅಕ್ರಮ ಚಟುವಟಿಕೆಗಳ ಆರೋಪ ಕೇಳಿಬರುವುದು ಸಹಜವಾಗಿಯೇ ಪೋಷಕರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸುತ್ತದೆ.ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ಪ್ರದೇಶಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶವಾಗದಂತೆ ಪೊಲೀಸ್ ಇಲಾಖೆ ನಿರಂತರ ನಿಗಾ ವಹಿಸುವ ಅಗತ್ಯವಿದೆ.

ಕರ್ಕಶ ಶಬ್ದದ ಬೈಕ್‌ ಹಾಗೂ ಪೋಲಿ ಪಟಾಲಂ ಹಾವಳಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕಿರಿಕಿರಿ

ವಿದ್ಯಾನಗರದಲ್ಲಿ ಕಾಲೇಜುಗಳು ಹಾಗೂ ಶಿಕ್ಷಣ ಸಂಸ್ಥೆಗಳಿರುವ ಹಿನ್ನೆಲೆಯಲ್ಲಿ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಆದರೆ ಕೆಲವು ಯುವಕರು ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡು ವಾಹನಗಳನ್ನು ವೇಗವಾಗಿ ಚಲಾಯಿಸುವುದು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದೆ ಎಂಬ ದೂರುಗಳಿವೆ. ಹಾಗೂ ಇಲ್ಲಿಯ ಕಾಲೇಜು ಇರುವ ಕಾರಣ ಪೋಲಿ ಪಟಾಲಂ ಉಪದ್ರವ ನೀಡುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿದೆ. ಇದರಿಂದ ಹೆಣ್ಣುಮಕ್ಕಳು ವಿದ್ಯಾಭ್ಯಾಸಕ್ಕೆ ಬಂದಿರುವವರು ಹೇಳಿಕೊಳ್ಳಲು ಆಗದೆ ಸಮಸ್ಯೆ ಎದುರಿಸುತ್ತಿದ್ದಾರೆ ಇದನ್ನ ಕೂಡ ಬಗೆಹರಿಸಿಕೊಡಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.

ವಿಶೇಷವಾಗಿ ವಿದ್ಯಾರ್ಥಿನಿಯರು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಸ್ಥಳೀಯ ನಿವಾಸಿಗಳಿಗೆ ಇಂತಹ ವಾಹನಗಳ ಶಬ್ದ ಮತ್ತು ಅಜಾಗರೂಕ ಚಾಲನೆ ಆತಂಕ ಉಂಟುಮಾಡುವ ಸಾಧ್ಯತೆಯಿದೆ.ಇಂತಹ ವಾಹನಗಳ ವಿರುದ್ಧ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ತಿಂಗಳಿಗೊಮ್ಮೆ ರಸ್ತೆ ಕಾರ್ಯಕ್ರಮ; ಸಾರ್ವಜನಿಕರಿಗೆ ಸಂಚಾರ ಸಂಕಷ್ಟ :

ವಿದ್ಯಾನಗರದ ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ಗಣೇಶ್ ಭವನ್ ವಿರೇಶ್ ಮೆಡಿಕಲ್ ಎದುರಿನ ರಸ್ತೆಯಲ್ಲೇ ಆಗಾಗ್ಗೆ ನಡೆಯುವ ಕಾರ್ಯಕ್ರಮಗಳು. ತಿಂಗಳಿಗೊಮ್ಮೆ ನಡೆಯುವ ಇಂತಹ ಕಾರ್ಯಕ್ರಮಗಳಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು, ಮಹಿಳೆಯರು, ವಿದ್ಯಾರ್ಥಿಗಳು, ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂಬ ದೂರುಗಳಿವೆ.

ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ತಪ್ಪಲ್ಲ. ಆದರೆ ಸಾರ್ವಜನಿಕ ರಸ್ತೆಗಳ ಬಳಕೆ ಮಾಡುವಾಗ ಇತರರ ಹಕ್ಕುಗಳು ಹಾಗೂ ಸಂಚಾರದ ಅಗತ್ಯಗಳನ್ನೂ ಪರಿಗಣಿಸಬೇಕು.

ವಿಶೇಷವಾಗಿ ಮಹಿಳೆಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಕ್ಕೆ ತೆರಳುವವರು, ತುರ್ತು ಸೇವೆಯ ವಾಹನಗಳು ಹಾಗೂ ದಿನನಿತ್ಯದ ಕೆಲಸಗಳಿಗೆ ಸಂಚರಿಸುವ ಜನರಿಗೆ ಅನಗತ್ಯ ವಿಳಂಬವಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಅಗತ್ಯವಾಗಿದೆ ಯಾಕಂದ್ರೆ ಇದೊಂದು ರಾಷ್ಟ್ರೀಯ ಹೆದ್ದಾರಿ ಕೂಡ ಹೌದು.

797950

ಟ್ರಾಫಿಕ್ ಇನ್ಸ್‌ಪೆಕ್ಟರ್ ದೇವರಾಜ್ ಅವರ ಗಮನಕ್ಕೆ ಬಂದಿರುವ ಪ್ರಮುಖ ಅಂಶ:

ಈ ಪ್ರದೇಶದ ಸಂಚಾರ ಸಮಸ್ಯೆ ಹಾಗೂ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳ ಕುರಿತು ಟ್ರಾಫಿಕ್ ಇನ್ಸ್‌ಪೆಕ್ಟರ್ ದೇವರಾಜ್ ಅವರು ಸಂಬಂಧಪಟ್ಟ ಇಲಾಖೆಗಳ ಗಮನ ಸೆಳೆದಿದ್ದು, ಲೋಕೋಪಯೋಗಿ ಇಲಾಖೆ (PWD), ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳು ಈ ಸಂಬಂಧ ಸೂಕ್ತ ಕ್ರಮ ಕೈಗೊಂಡಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಸ್ತೆಯ ವಿನ್ಯಾಸ, ವಾಹನಗಳ ಸುಗಮ ಸಂಚಾರ, ಕಾರ್ಯಕ್ರಮಗಳ ಸಂದರ್ಭದಲ್ಲಿ ಪರ್ಯಾಯ ಸಂಚಾರ ವ್ಯವಸ್ಥೆ ಹಾಗೂ ಅಗತ್ಯ ಸಂಚಾರ ನಿಯಂತ್ರಣ ಕ್ರಮಗಳನ್ನು ಸಂಬಂಧಪಟ್ಟ ಇಲಾಖೆಗಳು ಪರಿಶೀಲಿಸುವುದು ಇಂದಿನ ಅಗತ್ಯವಾಗಿದೆ ಎಂದು ಇನ್ಸ್ಪೆಕ್ಟರ್ ದೇವರಾಜ್ ನಮ್ಮ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಕೈಗೊಳ್ಳಬೇಕಾದ ಕ್ರಮಗಳೇನು?

ವಿದ್ಯಾನಗರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕಿದೆ.

281876

ಜಿಲ್ಲಾಧಿಕಾರಿಗಳು: ವಿದ್ಯಾನಗರದ ಸಮಸ್ಯೆಗಳ ಕುರಿತು ಸ್ಥಳ ಪರಿಶೀಲನೆ ನಡೆಸಿ ಸಂಬಂಧಪಟ್ಟ ಇಲಾಖೆಗಳ ಸಭೆ ಕರೆದು ಪರಿಹಾರಕ್ಕೆ ಮುಂದಾಗಬೇಕು. ರೈಲ್ವೆ ನಿಲ್ದಾಣದಲ್ಲೂ ಸುರಕ್ಷತೆಯ ಆತಂಕ ಪ್ರಯಾಣಿಕರಿಂದ ದೂರು

ವಿದ್ಯಾನಗರದ ವ್ಯಾಪ್ತಿಯಲ್ಲಿರುವ ರೈಲ್ವೆ ನಿಲ್ದಾಣದ ಸುತ್ತಮುತ್ತಲಿನ ಪರಿಸ್ಥಿತಿಯ ಬಗ್ಗೆಯೂ ಪ್ರಯಾಣಿಕರಿಂದ ಸುರಕ್ಷತೆಯ ಕುರಿತಾದ ದೂರುಗಳು ಕೇಳಿಬರುತ್ತಿವೆ. ರೈಲಿನಲ್ಲಿ ಪ್ರಯಾಣಿಸುವ ಸಾರ್ವಜನಿಕರು, ವಿಶೇಷವಾಗಿ ರಾತ್ರಿ ಸಮಯದಲ್ಲಿ ಸಂಚರಿಸುವ ಪ್ರಯಾಣಿಕರು ನಿಲ್ದಾಣದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸೂಕ್ತ ಸುರಕ್ಷತಾ ವ್ಯವಸ್ಥೆ ಇರಬೇಕೆಂದು ಒತ್ತಾಯಿಸುತ್ತಿದ್ದಾರೆ.

ರೈಲ್ವೆ ನಿಲ್ದಾಣವೆಂದರೆ ಪ್ರತಿದಿನ ಸಾವಿರಾರು ಪ್ರಯಾಣಿಕರು ಆಗಮಿಸುವ ಹಾಗೂ ನಿರ್ಗಮಿಸುವ ಪ್ರಮುಖ ಸಾರ್ವಜನಿಕ ಸ್ಥಳ. ಇಂತಹ ಪ್ರದೇಶದಲ್ಲಿ ಪ್ರಯಾಣಿಕರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ರೈಲ್ವೆ ಇಲಾಖೆಯ ಜವಾಬ್ದಾರಿಯಾಗಿದೆ. ಮಹಿಳಾ ಪ್ರಯಾಣಿಕರು, ಹಿರಿಯ ನಾಗರಿಕರು ಹಾಗೂ ಒಬ್ಬರೇ ಪ್ರಯಾಣಿಸುವವರಿಗೆ ಯಾವುದೇ ರೀತಿಯ ಆತಂಕವಿಲ್ಲದೆ ಸಂಚರಿಸುವಂತಿರಬೇಕು.ನಿಲ್ದಾಣದ ಆವರಣದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾಗಳ ನಿರ್ವಹಣೆ, ಅಗತ್ಯ ಭದ್ರತಾ ಸಿಬ್ಬಂದಿಯ ನಿಯೋಜನೆ ಹಾಗೂ ರಾತ್ರಿ ವೇಳೆಯ ಪೊಲೀಸ್ ಗಸ್ತು ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂಬುದು ಪ್ರಯಾಣಿಕರ ಅಭಿಪ್ರಾಯವಾಗಿದೆ.

792820

ಈ ಕುರಿತು ರೈಲ್ವೆ ಇಲಾಖೆ ಹಾಗೂ ರೈಲ್ವೆ ಪೊಲೀಸ್ ಇಲಾಖೆ ಪ್ರಯಾಣಿಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಸ್ಥಳ ಪರಿಶೀಲನೆ ನಡೆಸಬೇಕು. ಸುರಕ್ಷತೆಯಲ್ಲಿ ಯಾವುದೇ ಲೋಪಗಳನ್ನು ಸರಿಪಡಿಸಿ ಪ್ರಯಾಣಿಕರಿಗೆ ವಿಶ್ವಾಸ ಮೂಡಿಸುವ ಕ್ರಮ ಕೈಗೊಳ್ಳಬೇಕು.

ಒಂದೆಡೆ ವಿದ್ಯಾನಗರದ ರಸ್ತೆ ಸಂಚಾರ ಸಮಸ್ಯೆಗಳು, ಮತ್ತೊಂದೆಡೆ ಸಾರ್ವಜನಿಕ ಸುರಕ್ಷತೆ ಕುರಿತ ಆತಂಕಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ರೈಲ್ವೆ ನಿಲ್ದಾಣದ ಭದ್ರತೆಯೂ ಆದ್ಯತೆಯ ವಿಷಯವಾಗಬೇಕಿದೆ.

ಲೋಕೋಪಯೋಗಿ ಇಲಾಖೆ (PWD):

ರಸ್ತೆಗಳ ಸ್ಥಿತಿಗತಿ, ಪಾದಚಾರಿ ಮಾರ್ಗ, ರಸ್ತೆ ಅತಿಕ್ರಮಣ ಹಾಗೂ ಸುಗಮ ಸಂಚಾರಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಪರಿಶೀಲಿಸಬೇಕು

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ:

ಸಂಬಂಧಪಟ್ಟ ಹೆದ್ದಾರಿ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸ್ಥಳಗಳನ್ನು ಗುರುತಿಸಿ ಸೂಕ್ತ ತಾಂತ್ರಿಕ ಪರಿಹಾರಗಳನ್ನು ಕೈಗೊಳ್ಳಬೇಕು.

ಸಂಚಾರಿ ಪೊಲೀಸ್ ಇಲಾಖೆ: ಕರ್ಕಶ ಶಬ್ದದ ಸೈಲೆನ್ಸರ್‌ಗಳು, ಅತಿವೇಗದ ಚಾಲನೆ ಹಾಗೂ ಸಂಚಾರ ನಿಯಮ ಉಲ್ಲಂಘನೆಗಳ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಬೇಕು.

ಕಾರ್ಯಕ್ರಮ ಆಯೋಜಕರು:

ಸಾರ್ವಜನಿಕ ರಸ್ತೆಯಲ್ಲಿ ಕಾರ್ಯಕ್ರಮ ನಡೆಸುವ ಮೊದಲು ಅಗತ್ಯ ಅನುಮತಿ ಪಡೆದು, ಪರ್ಯಾಯ ಸಂಚಾರ ವ್ಯವಸ್ಥೆ ಹಾಗೂ ಸಾರ್ವಜನಿಕರ ಅನುಕೂಲಕ್ಕೆ ಆದ್ಯತೆ ನೀಡಬೇಕು.

ಶಿಕ್ಷಣ ಸಂಸ್ಥೆಗಳು:

ವಿದ್ಯಾರ್ಥಿಗಳ ಸುರಕ್ಷತೆ, ಶಿಸ್ತು ಹಾಗೂ ಕ್ಯಾಂಪಸ್‌ನ ಗೌರವ ಕಾಪಾಡಲು ಸೂಕ್ತ ಮುನ್ನೆಚ್ಚರಿಕೆ ಮತ್ತು ದೂರು ನಿರ್ವಹಣಾ ವ್ಯವಸ್ಥೆ ರೂಪಿಸಬೇಕು.

ಸಹ್ಯಾದ್ರಿಯ ಹಳೆಯ ಗೌರವ ಮರಳಿ ಬರಲಿ!

ಒಂದು ಕಾಲದಲ್ಲಿ ಸಹ್ಯಾದ್ರಿ ಕಾಲೇಜು ಹಾಗೂ ವಿದ್ಯಾನಗರ ಎಂದರೆ ಶಿಕ್ಷಣ, ಶಿಸ್ತು ಮತ್ತು ವಿದ್ಯಾರ್ಥಿಗಳ ಸಾಧನೆಯ ನೆನಪು ಮೂಡುತ್ತಿತ್ತು. ಆದರೆ ಇಂದು ಈ ಪ್ರದೇಶದ ಕುರಿತು ಅಹಿತಕರ ಘಟನೆಗಳು ಹಾಗೂ ಸಾರ್ವಜನಿಕ ಸಮಸ್ಯೆಗಳ ಚರ್ಚೆ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ.ವಿದ್ಯಾನಗರ ಕೇವಲ ಒಂದು ಬಡಾವಣೆ ಅಥವಾ ಕಾಲೇಜು ಪ್ರದೇಶವಲ್ಲ.

ಇದು ಸಾವಿರಾರು ವಿದ್ಯಾರ್ಥಿಗಳ ಕನಸುಗಳಿಗೆ ಸಾಕ್ಷಿಯಾದ ಶೈಕ್ಷಣಿಕ ವಲಯ. ಇಲ್ಲಿನ ವಾತಾವರಣ ಸುರಕ್ಷಿತವಾಗಿರಬೇಕು, ರಸ್ತೆಗಳು ಸುಗಮವಾಗಿರಬೇಕು, ಮಹಿಳೆಯರು ನಿರ್ಭೀತಿಯಿಂದ ಸಂಚರಿಸುವಂತಿರಬೇಕು ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ದೊರೆಯಬೇಕು.ಇದಕ್ಕಾಗಿ ಪೊಲೀಸ್ ಇಲಾಖೆ, ಜಿಲ್ಲಾಡಳಿತ, PWD, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಶಿಕ್ಷಣ ಸಂಸ್ಥೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕಿದೆ.

792842

ವಿದ್ಯಾನಗರದ ಹಳೆಯ ಶೈಕ್ಷಣಿಕ ಗೌರವ ಉಳಿಸುವುದು ಯಾರೊಬ್ಬರ ಜವಾಬ್ದಾರಿಯಲ್ಲ; ಅದು ಇಡೀ ಸಮಾಜದ ಜವಾಬ್ದಾರಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸುವ ಮೂಲಕ ವಿದ್ಯಾನಗರವನ್ನು ಮತ್ತೆ ಶಿಕ್ಷಣ ಮತ್ತು ಸುಸಂಸ್ಕೃತ ವಾತಾವರಣದ ಹೆಗ್ಗುರುತಾಗಿ ರೂಪಿಸಬೇಕಿದೆ.

ಸಾರ್ವಜನಿಕರ ಪ್ರಶ್ನೆ ಒಂದೇ: ವಿದ್ಯಾನಗರದ ಸಮಸ್ಯೆಗಳಿಗೆ ಜಿಲ್ಲಾಡಳಿತ ಯಾವಾಗ ಶಾಶ್ವತ ಪರಿಹಾರ ಕಲ್ಪಿಸಲಿದೆ?

WhatsApp Image 2025 11 17 at 5.17.05 PM
ರಾಘವೇಂದ್ರ, ಶಿವಮೊಗ್ಗ
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ ಕವಿಗಳು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅನನ್ಯ: ತೋಂಟದ ಸಿದ್ದರಾಮ ಸ್ವಾಮೀಜಿ

"ಸುಪ್ರಸಿದ್ಧ ಕವಿಗಳಾದ ಚಾಮರಸ, ಕುಮಾರವ್ಯಾಸ ಮುಂತಾದವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ...

ಬೀದರ್‌ | ಕಬ್ಬಿನ ದರ ನಿಗದಿ, ಬರಪೀಡಿತ ರೈತರಿಗೆ ₹50 ಸಾವಿರ ಪರಿಹಾರಕ್ಕೆ ʼಆಪ್‌ʼ ಆಗ್ರಹ

ಕಬ್ಬಿಗೆ ₹5,500 ಬೆಲೆ ನಿಗದಿಪಡಿಸಬೇಕು, ಬರಗಾಲದಿಂದ ಸಂಕಷ್ಟಕ್ಕೀಡಾದ ರೈತರಿಗೆ ಪ್ರತಿ ಹೆಕ್ಟೇರ್‌ಗೆ...

ಬೀದರ್‌ | ಅಂಬೇಡ್ಕರ್ ಭವನಕ್ಕೆ ನಿವೇಶನ ಮಂಜೂರು ಮಾಡಿ

ಬೀದರ್ ಜಿಲ್ಲಾ ಕೇಂದ್ರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಿವೇಶನ...

ಕಲಬುರಗಿ | ವಕೀಲರ ಮೇಲಿನ ಹಲ್ಲೆ, ಕೊಲೆ ಪ್ರಕರಣಗಳಿಗೆ ಕಡಿವಾಣ ಹಾಕಿ: ಸಂರಕ್ಷಣಾ ಕಾಯ್ದೆ ಬಲಪಡಿಸಲು ಆಗ್ರಹ

ವಕೀಲರ ಮೇಲಿನ ಹಲ್ಲೆ, ದೌರ್ಜನ್ಯ, ಬೆದರಿಕೆ ಹಾಗೂ ಕೊಲೆ ಪ್ರಕರಣಗಳನ್ನು ತಡೆಗಟ್ಟುವಂತೆ...