ತಾಪಮಾನ ಏರಿಕೆ | ಹೆಚ್ಚುತ್ತಿರುವ ಅವಧಿಪೂರ್ವ ಹೆರಿಗೆ!

Date:

ಬಿಸಿಲು ಹೆಚ್ಚಾಗುವುದು ಎಂದರೆ ಕೇವಲ ಸೆಕೆ ಅಥವಾ ಬೆವರುವುದಷ್ಟೇ ಅಲ್ಲ, ಅದು ನಮ್ಮ ಮನೆಗಳಲ್ಲಿ ಹುಟ್ಟುವ ಕಂದಮ್ಮಗಳ ಜೀವಕ್ಕೂ ಕಂಟಕವಾಗುತ್ತಿದೆ ಎಂಬ ಕಹಿ ಸತ್ಯವೊಂದು ಇತ್ತೀಚಿನ ಅಧ್ಯಯನದಿಂದ ಹೊರಬಿದ್ದಿದೆ. ‘ಝೀರೋ ಕಾರ್ಬನ್ ಅನಾಲಿಟಿಕ್ಸ್’ (ZCA) ಬಿಡುಗಡೆ ಮಾಡಿರುವ ವರದಿಯ ಪ್ರಕಾರ, 2024ರ ಏಪ್ರಿಲ್ ತಿಂಗಳಲ್ಲಿ ಭಾರತದಲ್ಲಿ ಕಾಣಿಸಿಕೊಂಡ ತೀವ್ರತರದ ಬಿಸಿಗಾಳಿ ಮತ್ತು ತಾಪಮಾನ ಏರಿಕೆಯಿಂದಾಗಿ ಕನಿಷ್ಠ 8,830 ಅವಧಿಪೂರ್ವ ಹೆರಿಗೆಗಳು ಸಂಭವಿಸಿವೆ. 

- Advertisement -

ಮಾನವನ ಅತಿಯಾದ ಹಸ್ತಕ್ಷೇಪ ಹಾಗೂ ಕೈಗಾರಿಕಾ ಚಟುವಟಿಕೆಗಳಿಂದ ಉಂಟಾದ ಜಾಗತಿಕ ತಾಪಮಾನ ವೈಪರೀತ್ಯವೇ ಈ ದುರಂತಕ್ಕೆ ಮುಖ್ಯ ಕಾರಣ. ದಕ್ಷಿಣ ಏಷ್ಯಾದಲ್ಲಿ ಇಂತಹ ಅತಿಯಾದ ತಾಪಮಾನ ಹೆಚ್ಚಾಗುವ ಸಾಧ್ಯತೆಯನ್ನು ಪ್ರಕೃತಿಯ ವಿಕೋಪಕ್ಕಿಂತ ಹೆಚ್ಚಾಗಿ ಮಾನವನಿರ್ಮಿತ ಹವಾಮಾನ ಬದಲಾವಣೆಯೇ ಸುಮಾರು 45 ಪಟ್ಟು ಹೆಚ್ಚಿಸಿದೆ ಎಂದು ಈ ವರದಿ ಎಚ್ಚರಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಾಂಧಿ ಹತ್ಯೆಯನ್ನು ಸಮರ್ಥಿಸುವ ದುರುಳರಿಗೆ ಸರ್ದಾರ್ ಪಟೇಲರ ಪತ್ರಗಳೇ...

ಗಾಂಧಿ ಹತ್ಯೆಯ ಕುರಿತು ಅಡ್ಡಂಡ ಕಾರ್ಯಪ್ಪ ರಚಿಸಿರುವ ನಾಟಕ ಬೆಂಗಳೂರಿನಲ್ಲಿ ತೀವ್ರ ವಿವಾದ ಸೃಷ್ಟಿಸಿದೆ. ನಾಟಕದಲ್ಲಿ ಗಾಂಧೀಜಿಯನ್ನು ದೇಶವಿರೋಧಿಯಂತೆ ಬಿಂಬಿಸಿ, ಅವರ ಹಂತಕ ನಾಥುರಾಮ್ ಗೋಡ್ಸೆಯನ್ನು ಸಮರ್ಥಿಸುವ ಪ್ರಯತ್ನ ನಡೆದಿದೆ. ಗಾಂಧಿ ಹತ್ಯೆಯ...

ʼಈ ದಿನʼ ಸುದ್ದಿ ವಿಶ್ಲೇಷಣೆ | ಇಂದಿರಾ ಅವರನ್ನು...

ಗುಜರಾತ್ ವಿದ್ಯಾರ್ಥಿಗಳು ಹೊತ್ತಿಸಿದ ಹೋರಾಟದ ಕಿಡಿ, ಬಿಹಾರದ ‘ಸಂಪೂರ್ಣ ಕ್ರಾಂತಿ’ ಮೂಲಕ ರಾಷ್ಟ್ರ ರಾಜಕಾರಣವನ್ನೇ ವ್ಯಾಪಿಸಿತು. ಭಾರತದ ಪ್ರಜಾಸತ್ತಾತ್ಮಕ ಇತಿಹಾಸದಲ್ಲಿ ವಿದ್ಯಾರ್ಥಿ ಶಕ್ತಿಯ ಸಾಮರ್ಥ್ಯ ಮತ್ತು ಜನಾಂದೋಲನಗಳ ಸಂಕೀರ್ಣತೆಯನ್ನು ನೆನಪಿಸುವ ಬೆಳಕಿನ ಅಧ್ಯಾಯ ದೆಹಲಿಯಲ್ಲಿ...

ಮೋದಿಗೆ ರಾಹುಲ್‌ ಬಹಿರಂಗ ಸವಾಲು; ಕುತಂತ್ರಗಳಿಗೆ ವಿರುದ್ಧವಾಗಿ ಹೋರಾಟ...

ಭಾರತೀಯ ರಾಜಕಾರಣದಲ್ಲಿ ಕಳೆದ ಒಂದು ದಶಕದಿಂದ ನಿರಂತರವಾಗಿ ಚರ್ಚೆಯಾಗುತ್ತಿರುವ ಪ್ರಮುಖ ಕೇಂದ್ರಬಿಂದು ರಾಹುಲ್ ಗಾಂಧಿ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಧಿಕಾರಾವಧಿಯಲ್ಲಿ ಪ್ರತಿಪಕ್ಷಗಳನ್ನು ದಮನ ಮಾಡಲು, ಹತ್ತಿಕ್ಕಲು ಮತ್ತು ನಾಯಕರ ವ್ಯಕ್ತಿತ್ವವನ್ನು ಹನನ...

ಏನಿದು ‘ಅವಧಿಪೂರ್ವ ಹೆರಿಗೆ’? ಆರೋಗ್ಯದ ಮೇಲಾಗುವ ಪರಿಣಾಮಗಳೇನು?

ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ, ಗರ್ಭಧಾರಣೆಯ 37 ವಾರಗಳು ಪೂರ್ಣಗೊಳ್ಳುವ ಮುನ್ನವೇ ಮಗು ಜನಿಸುವುದನ್ನು ‘ಅವಧಿಪೂರ್ವ ಹೆರಿಗೆ’ ಅಥವಾ ಪ್ರಿಟರ್ಮ್ ಬರ್ತ್ ಎನ್ನಲಾಗುತ್ತದೆ.

‘ದಿ ಲ್ಯಾನ್ಸೆಟ್’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಂತೆ, ನವಜಾತ ಶಿಶುಗಳ ಸಾವಿಗೆ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಕಾರಣವೆಂದರೆ ಈ ಅವಧಿಪೂರ್ವ ಹೆರಿಗೆ. ಹೀಗೆ ಜನಿಸುವ ಮಗು ಜೀವನಪೂರ್ತಿ ದೈಹಿಕ, ನರಸಂಬಂಧಿ ಹಾಗೂ ಬೆಳವಣಿಗೆಯ ಕೊರತೆಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ತಾಪಮಾನವು ಸೌಮ್ಯವಾಗಿ 1°C ನಷ್ಟು ಹೆಚ್ಚಾದರೂ ಅವಧಿಪೂರ್ವ ಹೆರಿಗೆಯ ಅಪಾಯ ಶೇ. 4 ರಷ್ಟು ಹೆಚ್ಚಾಗುತ್ತದೆ. ಅದೇ ಬಿಸಿಗಾಳಿಯ ಸಂದರ್ಭಗಳಲ್ಲಿ ಈ ಅಪಾಯ ಬಾರೀ ಅಂದರೆ ಶೇ. 26 ರಷ್ಟು ಏರಿಕೆಯಾಗುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು, ಗರ್ಭಕೋಶಕ್ಕೆ ರಕ್ತಸಂಚಾರ ಕಡಿಮೆಯಾಗುವುದು ಹಾಗೂ ಅವಧಿಗೆ ಮುನ್ನವೇ ಹೆರಿಗೆ ನೋವು ಕಾಣಿಸಿಕೊಳ್ಳುವುದು ಇದಕ್ಕೆ ಪ್ರಮುಖ ಕಾರಣಗಳು.

ಏಪ್ರಿಲ್ 2024ರ ಈ ತಾಪಮಾನದ ಹೊಡೆತ ಇಡೀ ಭಾರತದಾದ್ಯಂತ ಒಂದೇ ಸಮನಾಗಿರಲಿಲ್ಲ. ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್—ಈ ನಾಲ್ಕು ರಾಜ್ಯಗಳಲ್ಲೇ ದೇಶದ ಒಟ್ಟು ಹೆಚ್ಚುವರಿ ಅವಧಿಪೂರ್ವ ಹೆರಿಗೆಗಳ ಶೇ. 65 ಭಾಗ ದಾಖಲಾಗಿವೆ. ಉತ್ತರ ಪ್ರದೇಶದಲ್ಲಿ ತಾಪಮಾನ ಸಾಮಾನ್ಯಕ್ಕಿಂತ 0.74°C ನಷ್ಟು ಮಾತ್ರ ಹೆಚ್ಚಾಗಿದ್ದರೂ, ಅಲ್ಲಿನ ಬೃಹತ್ ಜನಸಂಖ್ಯೆಯ ಕಾರಣದಿಂದಾಗಿ ಮಗು ಬೇಗ ಜನಿಸಿದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಶೇ. 10 ಮತ್ತು ಬಿಹಾರದಲ್ಲಿ ಶೇ. 7 ರಷ್ಟು ಅಪಾಯದ ಪ್ರಮಾಣ ಹೆಚ್ಚಾಗಿತ್ತು.

ಶೇಕಡಾವಾರು ದರಕ್ಕೆ ಬಂದರೆ ಕರ್ನಾಟಕದಲ್ಲಿ ಸ್ಥಿತಿ ಆತಂಕಕಾರಿಯಾಗಿತ್ತು. ಇಲ್ಲಿ ತಾಪಮಾನವು ವಾಡಿಕೆಗಿಂತ 2°C ನಷ್ಟು ಹೆಚ್ಚಿದ್ದರಿಂದ, ಪ್ರತಿ 1,000 ಹೆರಿಗೆಗಳಲ್ಲಿ 12 ಹೆಚ್ಚುವರಿ ಅವಧಿಪೂರ್ವ ಹೆರಿಗೆಗಳು ಸಂಭವಿಸಿವೆ.  ಮನೆಗಳಲ್ಲಿ ಸರಿಯಾದ ಗಾಳಿ-ಬೆಳಕಿನ ವ್ಯವಸ್ಥೆ ಇಲ್ಲದಿರುವುದು, ಉರಿಯುವ ಬಿಸಿಲಿನಲ್ಲಿ ಸುದೀರ್ಘ ಅವಧಿಗೆ ಹೊಲ-ಗದ್ದೆ ಅಥವಾ ಕೂಲಿ ಕೆಲಸ ಮಾಡುವುದು, ಅಪೌಷ್ಟಿಕತೆ ಹಾಗೂ ರಕ್ತಹೀನತೆಯಂತಹ ಸಮಸ್ಯೆಗಳು ಬಡ ಮತ್ತು ಮಧ್ಯಮ ವರ್ಗದ ಗರ್ಭಿಣಿಯರ ಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿವೆ.

ವರದಿಯ ಪ್ರಕಾರ, ಈಗಿನಂತೆ ತಾಪಮಾನ ಏರಿಕೆಯಾಗುತ್ತಲೇ ಸಾಗಿದರೆ, 2050ರ ವೇಳೆಗೆ ಪ್ರತಿಯೊಂದು ಸಾಧಾರಣ ಏಪ್ರಿಲ್ ತಿಂಗಳಿನಲ್ಲೂ ಭಾರತದಲ್ಲಿ 15,000ಕ್ಕೂ ಹೆಚ್ಚು ಹೆಚ್ಚುವರಿ ಅವಧಿಪೂರ್ವ ಹೆರಿಗೆಗಳು ಸಂಭವಿಸುವ ಭೀತಿಯಿದೆ. ಅಂದರೆ 2024ರಂತಹ ಅತಿ ಕೆಟ್ಟ ಬಿಸಿಲಿನ ವರ್ಷಕ್ಕಿಂತಲೂ, 2050ರ ಸಾಮಾನ್ಯ ವರ್ಷವೇ ಹೆಚ್ಚು ಭೀಕರವಾಗಿರಲಿದೆ. ಈಗಾಗಲೇ ಪ್ರಪಂಚದ ಒಟ್ಟು ಅವಧಿಪೂರ್ವ ಹೆರಿಗೆಗಳಲ್ಲಿ ಶೇ. 20ರಷ್ಟು ಭಾಗ ಭಾರತದಲ್ಲೇ (2020ರ ದತ್ತಾಂಶದಂತೆ ಶೇ. 13ರ ದರದಲ್ಲಿ) ನಡೆಯುತ್ತಿರುವುದು ನಮ್ಮ ಆರೋಗ್ಯ ವ್ಯವಸ್ಥೆಯ ಮುಂದಿರುವ ಸವಾಲನ್ನು ತೋರಿಸುತ್ತದೆ.

ಎಐಐಎಂಎಸ್ (AIIMS) ಗುವಾಹಟಿಯ ಕಮ್ಯುನಿಟಿ ಮತ್ತು ಫ್ಯಾಮಿಲಿ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ರಶ್ಮಿ ಅಗರ್ವಾಲಾ ಅವರು ಹೇಳುವಂತೆ, “ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ಬಿಸಿಗಾಳಿಯನ್ನು ಗರ್ಭಿಣಿಯರ ಮತ್ತು ನವಜಾತ ಶಿಶುಗಳ ಆರೋಗ್ಯಕ್ಕೆ ಮಾರಕ ಎಂದು ಗುರುತಿಸುವುದೇ ಅಪರೂಪವಾಗಿದೆ. ಇದನ್ನು ತಕ್ಷಣವೇ ಬದಲಾಯಿಸಬೇಕಿದೆ.”

ಗರ್ಭಿಣಿಯರ ತಪಾಸಣೆ ಮತ್ತು ಸಮುದಾಯ ಆರೋಗ್ಯ ಸೇವೆಗಳಲ್ಲಿ ‘ಬಿಸಿಲ ನಿವಾರಣೆ ಹಾಗೂ ಜಾಗೃತಿ’ಯನ್ನು ಕಡ್ಡಾಯ ಮಾಡಬೇಕು. 

 ಗ್ರಾಮೀಣ ಹಾಗೂ ಬಡತನ ಭಾಗಗಳಲ್ಲಿ ಸಾರ್ವಜನಿಕ ಕೂಲಿಂಗ್ ಸೆಂಟರ್‌ಗಳು ಮತ್ತು ಮುನ್ನೆಚ್ಚರಿಕಾ ತಂತ್ರಜ್ಞಾನ ಲಭ್ಯವಾಗಬೇಕು.

ಗರ್ಭಿಣಿಯರು ಬಿಸಿಲಿನ ಅವಧಿಯಲ್ಲಿ ಹೊರಗಡೆ ಕೆಲಸ ಮಾಡುವುದನ್ನು ತಪ್ಪಿಸುವುದು, ವಿಪುಲವಾಗಿ ನೀರು/ದ್ರವಾಹಾರ ಸೇವಿಸುವುದು ಹಾಗೂ ದೇಹದ ತಾಪಮಾನ ಹೆಚ್ಚಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ.

ಹವಾಮಾನ ಬದಲಾವಣೆ ಎಂಬುದು ಕೇವಲ ಮಂಜುಗಡ್ಡೆ ಕರಗುವ ಅಥವಾ ಸಮುದ್ರದ ಮಟ್ಟ ಏರುವ ಸಮಸ್ಯೆಯಲ್ಲ,  ಅದು ನಮ್ಮ ಮುಂಬರುವ ಪೀಳಿಗೆಯ ಆರೋಗ್ಯಪೂರ್ಣ ಜನನದ ಮೇಲೆಯೇ ನೇರ ದಾಳಿ ಮಾಡುತ್ತಿದೆ ಎಂಬುದಕ್ಕೆ ಈ ವರದಿ ಕಣ್ಣು ತೆರೆಸುವಂತಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಟನ್‌ ಕಬ್ಬಿಗೆ ₹5,500 ದರ ನಿಗದಿಗೆ ಆಗ್ರಹಿಸಿ ಪ್ರತಿಭಟನೆ

ಕಬ್ಬಿಗೆ ಪ್ರತಿ ಟನ್‌ಗೆ ₹5,500 ದರ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ...

ಕೆನಡಾದಿಂದ 4,526 ಭಾರತೀಯರ ಗಡೀಪಾರು: ವರ್ಷವೊಂದರಲ್ಲಿ ಸಾರ್ವಕಾಲಿಕ ದಾಖಲೆ ಎಂದ CBSA

ಕೆನಡಾ ಸರ್ಕಾರವು ತನ್ನ ವಲಸೆ ನಿಯಮಗಳನ್ನು ಬಿಗಿಗೊಳಿಸುತ್ತಿದ್ದು, ದೇಶದಲ್ಲಿ ಕಾನೂನುಬಾಹಿರವಾಗಿ ನೆಲೆಸಿದ್ದವರ...

ಔರಾದ್ | ರಾಷ್ಟ್ರೀಯ ಬಸವದಳದ ಅಧ್ಯಕ್ಷರಾಗಿ ಶರಣಪ್ಪ ನಾಗಲಗಿದ್ದೆ ಆಯ್ಕೆ

ಔರಾದ್ ತಾಲೂಕಿನ ರಾಷ್ಟ್ರೀಯ ಬಸವದಳದ ಅಧ್ಯಕ್ಷರಾಗಿ ಶೆಂಬೆಳ್ಳಿ ಗ್ರಾಮದ ಶರಣಪ್ಪ ನಾಗಲಗಿದ್ದೆ...