ಜಂತರ್ ಮಂತರ್‌ಗಾಗಿ ಪ್ರತಿಭಟನೆ; 150ಕ್ಕೂ ಹೆಚ್ಚು ಜನರ ಬಂಧನ! 

Date:

ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳದ ಪಟ್ಟಿಯಿಂದ ತೆರವುಗೊಳಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಭಾನುವಾರ (ನವೆಂಬರ್ 1) ರಾಮ್‌ಲೀಲಾ ಮೈದಾನದಿಂದ ಜಂತರ್ ಮಂತರ್‌ಗೆ ಹೊರಟಿದ್ದ 150ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಸ್ಟಡಿಯಲ್ಲಿದ್ದಾಗ ಪೊಲೀಸರು ನಡೆಸಿದ ದಬ್ಬಾಳಿಕೆಯಿಂದಾಗಿ ತಮಗೆ ಗಾಯಗಳಾಗಿವೆ ಎಂದು ಹಲವು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

- Advertisement -

ವಿಶೇಷವೆಂದರೆ, ಅದೇ ದಿನ ರಾಮ್‌ಲೀಲಾ ಮೈದಾನದಲ್ಲಿ ‘ಇಂಡಿಯಾ’ (INDIA) ಮೈತ್ರಿಕೂಟದ ಬೃಹತ್ ರ‍್ಯಾಲಿ ಯಾವುದೇ ಅಡೆತಡೆಯಿಲ್ಲದೆ ಶಾಂತಿಯುತವಾಗಿ ಮುಕ್ತಾಯವಾಗಿತ್ತು. ಆದರೆ ಜಂತರ್ ಮಂತರ್ ಚಳವಳಿಗಾರರ ಮೇಲೆ ಮಾತ್ರ ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಾಂಧಿ ಹತ್ಯೆಯನ್ನು ಸಮರ್ಥಿಸುವ ದುರುಳರಿಗೆ ಸರ್ದಾರ್ ಪಟೇಲರ ಪತ್ರಗಳೇ...

ಗಾಂಧಿ ಹತ್ಯೆಯ ಕುರಿತು ಅಡ್ಡಂಡ ಕಾರ್ಯಪ್ಪ ರಚಿಸಿರುವ ನಾಟಕ ಬೆಂಗಳೂರಿನಲ್ಲಿ ತೀವ್ರ ವಿವಾದ ಸೃಷ್ಟಿಸಿದೆ. ನಾಟಕದಲ್ಲಿ ಗಾಂಧೀಜಿಯನ್ನು ದೇಶವಿರೋಧಿಯಂತೆ ಬಿಂಬಿಸಿ, ಅವರ ಹಂತಕ ನಾಥುರಾಮ್ ಗೋಡ್ಸೆಯನ್ನು ಸಮರ್ಥಿಸುವ ಪ್ರಯತ್ನ ನಡೆದಿದೆ. ಗಾಂಧಿ ಹತ್ಯೆಯ...

ʼಈ ದಿನʼ ಸುದ್ದಿ ವಿಶ್ಲೇಷಣೆ | ಇಂದಿರಾ ಅವರನ್ನು...

ಗುಜರಾತ್ ವಿದ್ಯಾರ್ಥಿಗಳು ಹೊತ್ತಿಸಿದ ಹೋರಾಟದ ಕಿಡಿ, ಬಿಹಾರದ ‘ಸಂಪೂರ್ಣ ಕ್ರಾಂತಿ’ ಮೂಲಕ ರಾಷ್ಟ್ರ ರಾಜಕಾರಣವನ್ನೇ ವ್ಯಾಪಿಸಿತು. ಭಾರತದ ಪ್ರಜಾಸತ್ತಾತ್ಮಕ ಇತಿಹಾಸದಲ್ಲಿ ವಿದ್ಯಾರ್ಥಿ ಶಕ್ತಿಯ ಸಾಮರ್ಥ್ಯ ಮತ್ತು ಜನಾಂದೋಲನಗಳ ಸಂಕೀರ್ಣತೆಯನ್ನು ನೆನಪಿಸುವ ಬೆಳಕಿನ ಅಧ್ಯಾಯ ದೆಹಲಿಯಲ್ಲಿ...

ಮೋದಿಗೆ ರಾಹುಲ್‌ ಬಹಿರಂಗ ಸವಾಲು; ಕುತಂತ್ರಗಳಿಗೆ ವಿರುದ್ಧವಾಗಿ ಹೋರಾಟ...

ಭಾರತೀಯ ರಾಜಕಾರಣದಲ್ಲಿ ಕಳೆದ ಒಂದು ದಶಕದಿಂದ ನಿರಂತರವಾಗಿ ಚರ್ಚೆಯಾಗುತ್ತಿರುವ ಪ್ರಮುಖ ಕೇಂದ್ರಬಿಂದು ರಾಹುಲ್ ಗಾಂಧಿ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಧಿಕಾರಾವಧಿಯಲ್ಲಿ ಪ್ರತಿಪಕ್ಷಗಳನ್ನು ದಮನ ಮಾಡಲು, ಹತ್ತಿಕ್ಕಲು ಮತ್ತು ನಾಯಕರ ವ್ಯಕ್ತಿತ್ವವನ್ನು ಹನನ...

ಪ್ರತಿಭಟನೆಯಲ್ಲಿದ್ದ ‘ರೆವಲ್ಯೂಷನರಿ ವರ್ಕರ್ಸ್ ಪಾರ್ಟಿ ಆಫ್ ಇಂಡಿಯಾ’ದ ಕಾರ್ಯಕರ್ತ ವಿಶಾಲ್ ಅವರನ್ನು ಪೊಲೀಸರು ಬಲವಂತವಾಗಿ ಎತ್ತಿಕೊಂಡು ಹೋಗಿ ಬಂಧಿಸಿದರು. ಒಟ್ಟು 50ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ಜಾಫರ್‌ಪುರ್ ಕಲಾನ್ ಹಾಗೂ ದ್ವಾರಕಾ ಸೆಕ್ಟರ್ 23 ಪೊಲೀಸ್ ಠಾಣೆಗಳಿಗೆ ಕರೆದೊಯ್ಯಲಾಯಿತು.

ಅವರಲ್ಲಿ 24 ಪ್ರತಿಭಟನಾಕಾರರ ಮೇಲೆ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ಕಲಂ 223(a): ಸರ್ಕಾರಿ ಅಧಿಕಾರಿಯ ಆದೇಶ ಉಲ್ಲಂಘನೆ, ಕಲಂ 132: ಸಮನ್ಸ್ ಇದ್ದರೂ ಗೈರಾಗುವುದು, ಕಲಂ 221: ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ, ಕಲಂ 121(1): ಸರ್ಕಾರಿ ನೌಕರನ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಕಲಂ 3(5): ಕಾನೂನುಬಾಹಿರವಾಗಿ ಗುಂಪು ಸೇರಿ ಅಪರಾಧ ಎಸಗುವುದು, ಕಲಂ 61(2): ಅಪರಾಧದ ಸಂಚು/ಪಿತೂರಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಬಂಧಿತರನ್ನು ಮಧ್ಯರಾತ್ರಿ 2 ಗಂಟೆಯವರೆಗೆ ಠಾಣೆಯಲ್ಲೇ ಇರಿಸಲಾಗಿತ್ತು.

ವಿಶಾಲ್ ಅವರನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಕಲಂ 126 (ಶಾಂತಿ ಭಂಗ ತಡೆಯುವ ನೋಟಿಸ್) ಮತ್ತು 170 (ಮುನ್ನೆಚ್ಚರಿಕೆ ಬಂಧನ) ಅಡಿಯಲ್ಲಿ ಕನ್ನಾಟ್ ಪ್ಲೇಸ್ ಠಾಣೆಗೆ ಕರೆದೊಯ್ಯಲಾಯಿತು. ನವೆಂಬರ್ 2 ರಂದು ಅವರನ್ನು ವಿಶೇಷ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು.

ಅಧಿಕಾರಿಗಳು ವಿಶಾಲ್ ಅವರಿಂದ ‘ಶಾಂತಿ ಪತ್ರ’ಕ್ಕೆ ಸಹಿ ಪಡೆಯಲು ಯತ್ನಿಸಿದರು. ಆದರೆ “ಶಾಂತಿಯುತ ಪ್ರತಿಭಟನೆಯು ಎಂದಿಗೂ ಶಾಂತಿ ಭಂಗ ಉಂಟುಮಾಡುವುದಿಲ್ಲ” ಎಂದು ವಿಶಾಲ್ ಸಹಿ ಹಾಕಲು ಸ್ಪಷ್ಟವಾಗಿ ನಿರಾಕರಿಸಿದರು. ವಾದ-ಪ್ರತಿವಾದ ಆಲಿಸಿದ ಮ್ಯಾಜಿಸ್ಟ್ರೇಟ್, ಆರೋಪಿಯ ಬಿಡುಗಡೆಗೆ ಇಂತಹ ಶಾಂತಿ ಪತ್ರದ ಅಗತ್ಯವಿಲ್ಲ ಎಂದು ವಕೀಲರ ವಾದವನ್ನು ಎತ್ತಿಹಿಡಿದು ವಿಶಾಲ್ ಅವರನ್ನು ಬಿಡುಗಡೆ ಮಾಡಿದರು.

ವಿಶಾಲ್ ಪರ ವಾದ ಮಂಡಿಸಿದ ವಕೀಲೆ ಶಾರೂಖ್ ಆಲಂ, “ಇನ್ನೂ ಪ್ರಕರಣದ ವಿಚಾರಣೆಯೇ ಆರಂಭವಾಗದಿರುವಾಗ ಇಂತಹ ಪತ್ರಕ್ಕೆ ಸಹಿ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ. ಪೊಲೀಸರು ಸೂಕ್ತ ಆಧಾರಗಳನ್ನು ಸಲ್ಲಿಸಿದ ನಂತರವಷ್ಟೇ ಮ್ಯಾಜಿಸ್ಟ್ರೇಟ್ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು” ಎಂದಿದ್ದಾರೆ.

ತೀವ್ರ ಸ್ವರೂಪದ ಅಪರಾಧಿಗಳಿಗೆ ಬಳಸುವ ಕಠಿಣ ನಿಯಮಗಳನ್ನು (ಕಲಂ 135(3)) ಸಾಮಾನ್ಯ ಪ್ರತಿಭಟನಾಕಾರರ ಮೇಲೆ ಹೇರಲು ಪೊಲೀಸರು ಯತ್ನಿಸಿದ್ದರು. ಆದರೆ ಮ್ಯಾಜಿಸ್ಟ್ರೇಟ್ ಈ ವಾದವನ್ನು ಪುರಸ್ಕರಿಸಲಿಲ್ಲ. ಅಂತಿಮವಾಗಿ ವಿಶಾಲ್ ಅವರನ್ನು ವೈಯಕ್ತಿಕ ಬಾಂಡ್ ಹಾಗೂ ಜಾಮೀನಿನ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು.

ಪೋಲೀಸರ ಧೋರಣೆಯನ್ನು ಖಂಡಿಸಿದ ಆಲಂ, “ಪ್ರತಿಯೊಬ್ಬ ಪ್ರತಿಭಟನಾಕಾರರನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸುವುದು ಮತ್ತು ಶಾಂತಿ ಪತ್ರಕ್ಕೆ ಬಲವಂತವಾಗಿ ಸಹಿ ಪಡೆಯುವುದು ಪೊಲೀಸರ ದಿನನಿತ್ಯದ ರೂಢಿಯಾಗಿಬಿಟ್ಟಿದೆ. ಇದು ಸಂಪೂರ್ಣ ಕಾನೂನುಬಾಹಿರ. ಇತ್ತೀಚೆಗೆ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಪ್ರತಿಭಟನೆಯಲ್ಲಿದ್ದ ಎನ್‌ಎಸ್‌ಯುಐ (NSUI) ವಿದ್ಯಾರ್ಥಿಗಳನ್ನು ಕೂಡ ಮೂರು ದಿನ ಕಸ್ಟಡಿಯಲ್ಲಿಸಿ, ಶಾಂತಿ ಪತ್ರಕ್ಕೆ ಸಹಿ ಪಡೆದ ನಂತರವೇ ಅಕ್ಟೋಬರ್ 28 ರಂದು ಬಿಡುಗಡೆ ಮಾಡಲಾಗಿತ್ತು” ಎಂದು ಬೆಟ್ಟು ಮಾಡಿದರು.

ಕಸ್ಟಡಿಯಲ್ಲಿದ್ದಾಗ ತಮಗೆ ಕನಿಷ್ಠ ಔಷಧ ನೀಡಲೂ ಪೊಲೀಸರು ನಿರಾಕರಿಸಿದರು ಎಂದು ವಿಶಾಲ್ ಆರೋಪಿಸಿದ್ದಾರೆ. ತೀವ್ರ ಜ್ವರ ಮತ್ತು ಶೀತದಿಂದ ಬಳಲುತ್ತಿದ್ದರೂ ಹೊದಿಕೆಯನ್ನೂ ಕಸಿದುಕೊಳ್ಳಲಾಗಿತ್ತು ಎಂದು ಅವರು ಬೇಸರ ವ್ಯಕ್ತಪಡಿಸಿದರು.

“ಸತ್ಯಾಗ್ರಹ ಮತ್ತು ಶಾಂತಿಯುತ ಹೋರಾಟಗಳನ್ನು ಜೈಲಿನ ಭಯ ತೋರಿಸಿ ಹತೋಟಿಗೆ ತರಲು ಸಾಧ್ಯವಿಲ್ಲ. ರಾಮ್‌ಲೀಲಾ ಮೈದಾನ ಅಥವಾ ಬುರಾರಿಯಂತಹ ದೂರದ ಸ್ಥಳಗಳಲ್ಲಿ ಸಣ್ಣ ಗುಂಪುಗಳು ಪ್ರತಿಭಟನೆ ನಡೆಸಿದರೆ ಸಾರ್ವಜನಿಕರಿಗೆ ಪ್ರತಿಭಟನಾಕಾರರ ಧ್ವನಿ ತಲುಪುವುದಿಲ್ಲ. ಹೀಗಾಗಿ ಜಂತರ್ ಮಂತರ್‌ನಂತಹ ಐತಿಹಾಸಿಕ ಚಳವಳಿ ಕೇಂದ್ರವನ್ನು ಉಳಿಸಿಕೊಳ್ಳಲು ನಮ್ಮ ಹೋರಾಟ ಮುಂದುವರಿಯಲಿದೆ. ‘ಇಂಡಿಯಾ’ ಮೈತ್ರಿಕೂಟದ ನಾಯಕರು ಸಹ ಈ ವಿಷಯದಲ್ಲಿ ನಮಗೆ ಬೆಂಬಲ ನೀಡಬೇಕು” ಎಂದು ವಿಶಾಲ್ ಮನವಿ ಮಾಡಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್ | ರಾಷ್ಟ್ರೀಯ ಬಸವದಳದ ಅಧ್ಯಕ್ಷರಾಗಿ ಶರಣಪ್ಪ ನಾಗಲಗಿದ್ದೆ ಆಯ್ಕೆ

ಔರಾದ್ ತಾಲೂಕಿನ ರಾಷ್ಟ್ರೀಯ ಬಸವದಳದ ಅಧ್ಯಕ್ಷರಾಗಿ ಶೆಂಬೆಳ್ಳಿ ಗ್ರಾಮದ ಶರಣಪ್ಪ ನಾಗಲಗಿದ್ದೆ...

KPSC ಅಕ್ರಮ | 35 ಕೋಟಿ ರೂ. ವೆಚ್ಚದ ‘ಡ್ರೀಮ್ ಪ್ರಾಜೆಕ್ಟ್’ ನಿರ್ಮಿಸಲು ಬಂಧಿತ ಸಾಹುಕಾರ್ ಸಂಚು: ಇಡಿ ಸ್ಫೋಟಕ ಮಾಹಿತಿ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ...

ಕಮಲನಗರ | ಪಾಲಿಟೆಕ್ನಿಕ್ ಕಾಲೇಜಿನ 77 ವಿದ್ಯಾರ್ಥಿಗಳಿಗೆ ಉದ್ಯೋಗ

ಕಮಲನಗರ ತಾಲ್ಲೂಕಿನ ಠಾಣಾಕುಶನೂರದ ಶ್ರೀ ಮಾಣಿಕರಾವ್ ಪಾಟೀಲ ರೂರಲ್ ಪಾಲಿಟೆಕ್ನಿಕ್‍ನಲ್ಲಿ ಈಚೆಗೆ...