‘ನಿಂಬೆಹಣ್ಣು ಕತ್ತರಿಸಿ ಮಳೆ ನಿಲ್ಲಿಸಿದೆ’ ಎಂದ ಬಿಜೆಪಿ ಸಂಸದ: ಬೆಲೆ ಏರಿಕೆ ಇಳಿಸಲೂ ನಿಂಬೆ ಕತ್ತರಿಸಿ ಎಂದು ಕಾಂಗ್ರೆಸ್ ಲೇವಡಿ

Date:

“ನಿಂಬೆಹಣ್ಣು ಕತ್ತರಿಸಿ, ಪ್ರಾರ್ಥನೆ ಮಾಡುವ ಮೂಲಕ ನಾನು ಮಳೆಯನ್ನು ನಿಲ್ಲಿಸಿದೆ” ಎಂದು ಛತ್ತೀಸ್‌ಗಢದ ಕಂಕೇರ್ ಕ್ಷೇತ್ರದ ಬಿಜೆಪಿ ಸಂಸದ ಭೋಜರಾಜ್ ನಾಗ್ ನೀಡಿದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.

- Advertisement -

ಸಂಸದರ ಈ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿರುವ ಕಾಂಗ್ರೆಸ್, ಬಿಜೆಪಿಯನ್ನು ‘ಮೂಢನಂಬಿಕೆಗಳ ಪಕ್ಷ’ ಎಂದು ಜರಿದಿದ್ದು, “ನಿಂಬೆಹಣ್ಣು ಕತ್ತರಿಸುವುದರಿಂದಲೇ ಎಲ್ಲವೂ ಆಗುವುದಾದರೆ, ಅದೇ ನಿಂಬೆಯನ್ನು ಕತ್ತರಿಸಿ ಗಗನಕ್ಕೇರಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಿ” ಎಂದು ಲೇವಡಿ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

​ಬಾಲೋದ್‌ನಲ್ಲಿ ಇತ್ತೀಚೆಗೆ ನಡೆದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರ ‘ಮಹತಾರಿ ವಂದನ್ ಯೋಜನೆ’ಯ ಹಣ ವರ್ಗಾವಣೆ ಕಾರ್ಯಕ್ರಮದಲ್ಲಿ ಸಂಸದರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಮುಖ್ಯಮಂತ್ರಿಯವರ ಆಗಮನದ ಪ್ರೋಟೋಕಾಲ್ ಮಧ್ಯರಾತ್ರಿ 12 ಗಂಟೆಗೆ ಬಿಡುಗಡೆಯಾಯಿತು. ಹವಾಮಾನ ವೈಪರೀತ್ಯದ ನಡುವೆಯೂ ಅವರು ಬಾಲೋದ್‌ಗೆ ಬರಲು ಸಿದ್ಧರಾದರು. ಈ ವೇಳೆ ಮಳೆ ಅಡ್ಡಿಯಾಗಬಾರದೆಂದು ನಾನು ಬೂಢಾದೇವ್ ಮಹಾದೇವನಿಗೆ ಪ್ರಾರ್ಥನೆ ಸಲ್ಲಿಸಿ, ಒಂದು ನಿಂಬೆಹಣ್ಣನ್ನು ಕತ್ತರಿಸಿದೆ. ತಕ್ಷಣವೇ ಮಳೆ ನಿಂತುಹೋಯಿತು” ಎಂದು ಭೋಜರಾಜ್ ನಾಗ್ ವೇದಿಕೆ ಮೇಲೆಯೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ತೀವ್ರ ವಾಕ್ಸಮರ ಶುರುವಾಗಿದೆ.

​ಸಂಸದರ ಹೇಳಿಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಅಧ್ಯಕ್ಷ ದೀಪಕ್ ಬೈಜ್, ಕರೋನಾ ಸಮಯದಲ್ಲಿ ಚಪ್ಪಾಳೆ ತಟ್ಟಿದ ಮತ್ತು ಮೇಣದಬತ್ತಿ ಹಚ್ಚಿದ ಜನರಿಂದ ಇಂಥದ್ದೇ ಮಾತುಗಳು ಬರುತ್ತವೆ ಎಂದು ಲೇವಡಿ ಮಾಡಿದ್ದಾರೆ. ನಿಂಬೆಹಣ್ಣು ಕತ್ತರಿಸುವುದರಿಂದ ಮಳೆ ನಿಲ್ಲುತ್ತದೆ ಎಂದಾದರೆ, ಅದೇ ತಂತ್ರವನ್ನು ಬಳಸಿ ಹಣದುಬ್ಬರವನ್ನು ನಿಲ್ಲಿಸಲಿ. ಇಂದು ಸಕ್ಕರೆ ಕೆ.ಜಿ.ಗೆ 70 ರೂಪಾಯಿಗೆ ಮಾರಾಟವಾಗುತ್ತಿದೆ, ಪೆಟ್ರೋಲ್-ಡೀಸೆಲ್ ದರ ಲೀಟರ್‌ಗೆ 111 ರೂಪಾಯಿ ದಾಟಿದೆ, ಬೇಳೆಕಾಳು ಮತ್ತು ಅಡುಗೆ ಎಣ್ಣೆ ಬೆಲೆಗಳು ಆಕಾಶ ಮುಟ್ಟುತ್ತಿವೆ, ವಿದ್ಯುತ್ ಬಿಲ್ ಕೂಡ ಮಿತಿಮೀರುತ್ತಿದೆ. ಇವೆಲ್ಲವನ್ನೂ ಕಡಿಮೆ ಮಾಡಲು ಸಂಸದರು ನಿಂಬೆಹಣ್ಣು ಕತ್ತರಿಸಲಿ. ಇದ್ಯಾವುದೂ ಆಗದಿದ್ದರೆ ಮುಖ್ಯಮಂತ್ರಿಗೆ ಸದ್ಬುದ್ಧಿ ನೀಡುವಂತೆ ಪ್ರಾರ್ಥಿಸಿ ಒಂದು ನಿಂಬೆಹಣ್ಣು ಕತ್ತರಿಸಲಿ ಎಂದು ವ್ಯಂಗ್ಯವಾಡಿದ್ದಾರೆ.

​ಈ ವಿಚಾರವಾಗಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮಾಜಿ ಸಚಿವ ಹಾಗೂ ಪಿಸಿಸಿ ಮಾಜಿ ಅಧ್ಯಕ್ಷ ಮೋಹನ್ ಮರ್ಕಾಮ್, ನಿಂಬೆಹಣ್ಣಿನಿಂದ ಮಳೆ ನಿಲ್ಲಿಸಲು ಸಾಧ್ಯವಾದರೆ ಮಾನ್ಯ ಸಂಸದರು ದಯವಿಟ್ಟು ಬಸ್ತಾರ್‌ನಲ್ಲಿ ಮಳೆ ಸುರಿಸುವಂತೆಯೂ ಮಾಡಬೇಕು ಎಂದು ಸವಾಲು ಹಾಕಿದ್ದಾರೆ. ಅಲ್ಲಿನ ರೈತರು ಮಳೆಗಾಗಿ ಪರಿತಪಿಸುತ್ತಿದ್ದಾರೆ, ನಿಮ್ಮ ಪ್ರಾರ್ಥನೆಯಲ್ಲಿ ಅಷ್ಟೊಂದು ಶಕ್ತಿ ಇದ್ದರೆ ಆ ಕೃಪಾದೃಷ್ಟಿಯನ್ನು ಬಸ್ತಾರ್ ಮೇಲೂ ಬೀರಿ ಎಂದು ಆಗ್ರಹಿಸಿದ್ದಾರೆ. ಇದರ ಜೊತೆಗೆ ಛತ್ತೀಸ್‌ಗಢ ಕಾಂಗ್ರೆಸ್ ತನ್ನ ಅಧಿಕೃತ ಖಾತೆಯಲ್ಲಿ, “ಮಳೆ ಹೆಚ್ಚಾದಾಗ ಹವಾಮಾನ ಇಲಾಖೆಗೆ ಕರೆ ಮಾಡಬೇಡಿ, ಬದಲಾಗಿ ಬಿಜೆಪಿ ಸಂಸದರ ಕೈಗೊಂದು ನಿಂಬೆಹಣ್ಣು ಕೊಡಿ. ಇದು ಬಿಜೆಪಿಯ ಹೊಸ ವಿಪತ್ತು ನಿರ್ವಹಣಾ ಮಾದರಿ: ನಿಂಬೆ ಕತ್ತರಿಸಿ, ಮಳೆ ಓಡಿಸಿ” ಎಂದು ಲೇವಡಿ ಮಾಡಿ ಪೋಸ್ಟ್ ಮಾಡಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುಪ್ರೀಂ ಆದೇಶ ಉಲ್ಲಂಘನೆ: ಕಾನೂನುಬಾಹಿರ ವಶಕ್ಕೆ ತಡೆ ಇದ್ದರೂ 100ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ!

ರಾಜಧಾನಿ ದೆಹಲಿಯಲ್ಲಿ ಕನ್ಹಾಟ್ ಪ್ಲೇಸ್ ಹಾಗೂ ಜಂತರ್ ಮಂತರ್ ಸುತ್ತಮುತ್ತ ನಡೆಯುತ್ತಿರುವ...

ಗ್ಯಾನೂ ವಿರುದ್ಧ ಪ್ರತಿಭಟನೆ: ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಬಂಧನ

ದೆಹಲಿಯಲ್ಲಿ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಭಾನುವಾರವೂ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿ, ಯುವತಿಯರ ಮೇಲೆ ಹಲ್ಲೆ; ನಾಲ್ವರು RSS ಗೂಂಡಾಗಳ ಬಂಧನ

ದೆಹಲಿಯಲ್ಲಿ ನಡೆದ 'ಕಾಕ್ರೋಚ್ ಜನತಾ ಪಾರ್ಟಿ' (CJP) ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು...