ಗ್ಯಾನೇಶ್‌ ಕುಮಾ‌ರ್ – ಮೇಧಾ ರೂಪಂ: ತಪ್ಪು ಕಾರಣಗಳಿಗಾಗಿ ಸುದ್ದಿಯ ಸುಳಿಯಲ್ಲಿ ಐಎಎಸ್ ಅಪ್ಪ-ಮಗಳ ಜೋಡಿ

Date:

ಉನ್ನತ ಸಾಂವಿಧಾನಿಕ ಹಾಗೂ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಿರುವ ಐಎಎಸ್ ಅಧಿಕಾರಿಗಳಾದ ಅಪ್ಪ–ಮಗಳ ಜೋಡಿಯೊಂದು ಇದೀಗ ತಪ್ಪು ಕಾರಣಗಳಿಗಾಗಿ ದೇಶಾದ್ಯಂತ ಭಾರಿ ಸುದ್ದಿಯಲ್ಲಿದೆ. ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಮತ್ತು ಅವರ ಪುತ್ರಿ, ನೋಯ್ಡಾ ಜಿಲ್ಲಾಧಿಕಾರಿ (ಡಿಎಂ) ಮೇಧಾ ರೂಪಂ ಅವರ ಕಾರ್ಯವೈಖರಿ ತೀವ್ರ ವಿವಾದಕ್ಕೀಡಾಗಿದೆ. ಇಬ್ಬರೂ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಸರ್ವಾಧಿಕಾರಿ ಧೋರಣೆ ಹಾಗೂ ನಿಯಮಗಳ ಉಲ್ಲಂಘನೆ ಆರೋಪಗಳನ್ನು ಎದುರಿಸುತ್ತಿದ್ದು, ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತಂದಿದೆ.

- Advertisement -

​ಚುನಾವಣಾ ಆಯೋಗದಲ್ಲಿ ಗ್ಯಾನೇಶ್ ಕುಮಾರ್ ಅವರ ಏಕಪಕ್ಷೀಯ ನಿರ್ಧಾರಗಳು ತೀವ್ರ ಅಸಮಾಧಾನಕ್ಕೆ ಕಾರಣವಾಗಿವೆ. ಕೇವಲ 10 ತಿಂಗಳ ಅವಧಿಯಲ್ಲಿ ಇತರ ಇಬ್ಬರು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಬರೋಬ್ಬರಿ 14 ಬಾರಿ ಗ್ಯಾನೇಶ್ ಕುಮಾರ್ ಅವರ ಕ್ರಮಗಳಿಗೆ ಅಧಿಕೃತವಾಗಿ ಲಿಖಿತ ರೂಪದಲ್ಲಿಯೇ ಆಕ್ಷೇಪಣೆ (ಡಿಸೆಂಟ್) ವ್ಯಕ್ತಪಡಿಸಿದ್ದಾರೆ ಎಂಬ ಆಘಾತಕಾರಿ ವಿಚಾರ ಇತ್ತೀಚಿನ ತನಿಖಾ ವರದಿಯಿಂದ ಬಹಿರಂಗವಾಗಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತೆಗೆದುಹಾಕುವಿಕೆ ಹಾಗೂ ‘ಫಾರ್ಮ್ 6’ರ ನಿಯಮಾವಳಿಗಳ ಬದಲಾವಣೆ ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಸಿಇಸಿ ಅವರು ಇತರ ಆಯುಕ್ತರನ್ನು ಕತ್ತಲಲ್ಲಿಟ್ಟಿದ್ದರು ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಟ್ರಂಪ್‌ ತಿರಸ್ಕರಿಸಿದ ಯುವಜನರು; 2029ರಲ್ಲಿ ಭಾರತದ ಯುವ ಮತದಾರರ...

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ 18–29 ವರ್ಷದ ಯುವ ಮತದಾರರು ರಿಪಬ್ಲಿಕನ್ ಪಕ್ಷದಿಂದ ದೊಡ್ಡ ಪ್ರಮಾಣದಲ್ಲಿ ದೂರ ಸರಿದಿದ್ದಾರೆ. ಉದ್ಯೋಗದ ಅನಿಶ್ಚಿತತೆ, ದುಬಾರಿ ಜೀವನ, ಭವಿಷ್ಯದ ಆತಂಕ ಹಾಗೂ ಸರ್ಕಾರದ ನೀತಿಗಳ ಕುರಿತ ಅಸಮಾಧಾನ...

ಸಾಮಾಜಿಕ ನ್ಯಾಯ | ಕಾಂಗ್ರೆಸ್ ಸರ್ಕಾರದ ಭರವಸೆಗಳು ಮತ್ತು...

ಅಲ್ಪಸಂಖ್ಯಾತರ ಕಲ್ಯಾಣ ಎಂದರೆ ಕೇವಲ ಮುಸ್ಲಿಂ ಸಮುದಾಯದ ಅಭಿವೃದ್ಧಿಯಲ್ಲ. ಕ್ರೈಸ್ತರು, ಜೈನರು, ಸಿಖ್ಖರು, ಬೌದ್ಧರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣ, ಉದ್ಯೋಗ, ವಸತಿ ಮತ್ತು ಆರ್ಥಿಕ ಅಭಿವೃದ್ಧಿಯ ಅಗತ್ಯಗಳನ್ನೂ ಸಮಾನವಾಗಿ ಪರಿಗಣಿಸಬೇಕು....

ನುಡಿ ನಮನ | ಪಿರಿಯಾಪಟ್ಟಣದ ಮಣ್ಣಿನಿಂದ ಕನ್ನಡ ಜ್ಞಾನಲೋಕದ...

ಕೆಲವರು ಹುಟ್ಟಿದ ಊರಿನ ಹೆಸರನ್ನು ತಮ್ಮೊಂದಿಗೆ ಹೊತ್ತುಕೊಂಡು ಬದುಕುತ್ತಾರೆ. ಇನ್ನು ಕೆಲವರು ತಾವು ಹುಟ್ಟಿದ ನೆಲದ ಹೆಸರನ್ನೇ ತಮ್ಮ ಸಾಧನೆಯ ಮೂಲಕ ನಾಡಿನಾದ್ಯಂತ ಪರಿಚಯಿಸುತ್ತಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರದಲ್ಲಿ ಹುಟ್ಟಿ,...

​ಗ್ಯಾನೇಶ್ ಕುಮಾರ್ ಅವರ ಈ ನಡೆಯು ಸಂವಿಧಾನದ 324ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಚುನಾವಣಾ ಆಯೋಗವನ್ನು ‘ಏಕವ್ಯಕ್ತಿ ಆಯೋಗ’ವನ್ನಾಗಿ (One-Man Election Commission) ಪರಿವರ್ತಿಸಿದ್ದಾರೆ ಎಂದು ತೀವ್ರವಾಗಿ ವಿಶ್ಲೇಷಿಸಲಾಗುತ್ತಿದೆ. ವಿವಾದ ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತ ಚುನಾವಣಾ ಆಯೋಗವು, “ಅಂತಿಮ ನಿರ್ಧಾರಗಳನ್ನು ಮೂವರೂ ಆಯುಕ್ತರು ಸರ್ವಾನುಮತದಿಂದಲೇ ಅನುಮೋದಿಸಿದ್ದರು” ಎಂದು ಸಮರ್ಥನೆ ನೀಡಿದೆ. ಆದರೆ, ದೇಶದ ಚುನಾವಣಾ ಪ್ರಕ್ರಿಯೆಯನ್ನು ಮುನ್ನಡೆಸುವ ಸಾಂವಿಧಾನಿಕ ಸಂಸ್ಥೆಯೊಳಗಿನ ಈ ಆಂತರಿಕ ಭಿನ್ನಮತವು, ಆಯೋಗದ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತ ಕಾರ್ಯವೈಖರಿಯ ಬಗ್ಗೆಯೇ ಅನುಮಾನ ಮೂಡುವಂತೆ ಮಾಡಿದೆ.

​ಇತ್ತ ತಂದೆಯ ಕಾರ್ಯವೈಖರಿ ರಾಷ್ಟ್ರಮಟ್ಟದಲ್ಲಿ ವಿವಾದ ಸೃಷ್ಟಿಸಿದ್ದರೆ, ಅತ್ತ ಮಗಳು ಮೇಧಾ ರೂಪಂ ನೋಯ್ಡಾದಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯ (ಎನ್‌ಎಸ್‌ಎ) ದುರ್ಬಳಕೆಗಾಗಿ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವಿದ್ಯಾರ್ಥಿನಿ ಆಕೃತಿ ಚೌಧರಿ ಎಂಬುವವರ ಮೇಲೆ ವಿನಾಕಾರಣ ಎನ್‌ಎಸ್‌ಎ ಅಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಕ್ಕಾಗಿ ಅಲಹಾಬಾದ್ ಹೈಕೋರ್ಟ್ ನೋಯ್ಡಾ ಜಿಲ್ಲಾಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತ್ತು. ಇದು ಕೇವಲ ಅಧಿಕಾರದ ಅಹಂಕಾರ ಮತ್ತು ತೀವ್ರ ದುರ್ಬಳಕೆ ಎಂದು ಕಟುವಾಗಿ ಟೀಕಿಸಿದ್ದ ಹೈಕೋರ್ಟ್, ಬಂಧನವನ್ನು ರದ್ದುಪಡಿಸಿದ್ದಲ್ಲದೆ ಮೇಧಾ ರೂಪಂ ಅವರಿಗೆ ವೈಯಕ್ತಿಕವಾಗಿ ₹5 ಲಕ್ಷ ದಂಡ (ಪರಿಹಾರ) ವಿಧಿಸಿ ಆದೇಶಿಸಿತ್ತು.

​ಹೈಕೋರ್ಟ್‌ನ ಈ ಛೀಮಾರಿಯಿಂದ ಪಾರಾಗಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಮೇಧಾ ರೂಪಂ, ಸದ್ಯಕ್ಕೆ ತಾತ್ಕಾಲಿಕ ರಿಲೀಫ್ ಪಡೆದಿದ್ದಾರೆ. ಸೆಪ್ಟೆಂಬರ್ 23ರಂದು ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶಕ್ಕೆ ಹಾಗೂ ₹5 ಲಕ್ಷ ದಂಡ ವಸೂಲಾತಿಗೆ ಮಧ್ಯಂತರ ತಡೆ ನೀಡಿದೆ. ಆದರೆ, ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರೀತಿಯೇ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಮೇಧಾ ರೂಪಂ ಅವರ ಈ ಅರ್ಜಿಯನ್ನು ವಿಚಾರಣೆಗೆ ಹಂಚಿಕೆ ಮಾಡಿದ ಪೀಠ ಮತ್ತು ನ್ಯಾಯಾಲಯದ ರೋಸ್ಟರ್ ಪ್ರಕ್ರಿಯೆಯ ಬಗ್ಗೆಯೇ ಗಂಭೀರ ಕಾನೂನು ಪ್ರಶ್ನೆಗಳು ಎದ್ದಿದ್ದು, ಈ ಇಡೀ ಪ್ರಕ್ರಿಯೆಯ ಸುತ್ತ ಈಗ ಮತ್ತಷ್ಟು ಅನುಮಾನದ ಹುತ್ತ ಬೆಳೆಯುವಂತೆ ಮಾಡಿದೆ.

​ಮೇಧಾ ರೂಪಂ ಅವರ ಆಡಳಿತಾತ್ಮಕ ವೈಫಲ್ಯ ಮತ್ತು ಕಾನೂನಿನ ದುರ್ಬಳಕೆಯನ್ನು ಎತ್ತಿತೋರಿಸುವ ಮತ್ತೊಂದು ಪ್ರಕರಣವೂ ಇದೇ ವೇಳೆ ಮುನ್ನೆಲೆಗೆ ಬಂದಿದೆ. ಪತ್ರಕರ್ತ ಸತ್ಯಂ ವರ್ಮಾ ಅವರ ಮೇಲೂ ಇದೇ ರೀತಿ ಎನ್‌ಎಸ್‌ಎ ಪ್ರಯೋಗಿಸಲಾಗಿತ್ತು. ಬಲಪಂಥೀಯ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳನ್ನು ಯಥಾವತ್ತಾಗಿ ನಕಲಿಸಿ ಪೊಲೀಸ್ ಇಲಾಖೆ ಸಿದ್ಧಪಡಿಸಿದ್ದ 170 ಪುಟಗಳ ಆಧಾರರಹಿತ ಪ್ರಸ್ತಾವನೆಗೆ ಡಿಎಂ ಮೇಧಾ ರೂಪಂ ಯಾವುದೇ ಪರಿಶೀಲನೆ ಇಲ್ಲದೆ ಕುರುಡಾಗಿ ಅನುಮೋದನೆ ನೀಡಿದ್ದರು ಎಂಬ ಅಂಶ ತನಿಖಾ ವರದಿಗಳಿಂದ ಬಯಲಾಗಿದೆ. ಇದು ಜಿಲ್ಲಾಡಳಿತವು ಕೇವಲ ರಾಜಕೀಯ ಅಸ್ತ್ರವಾಗಿ ಕಠಿಣ ಕಾನೂನನ್ನು ಹೇಗೆ ಮನಬಂದಂತೆ ಪ್ರಯೋಗಿಸುತ್ತಿದೆ ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿದೆ.

​ಈ ಸರಣಿ ವಿವಾದಗಳು ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, “ಗ್ಯಾನೇಶ್ ಕುಮಾರ್ ಪುತ್ರಿಯ ಕಾರ್ಯವೈಖರಿ ನೋಡಿ” ಎಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ನೇರವಾಗಿ ವಾಗ್ದಾಳಿ ನಡೆಸುತ್ತಿವೆ. ಉನ್ನತ ಹುದ್ದೆಗಳಲ್ಲಿ ಕುಳಿತು ನಿಷ್ಪಕ್ಷಪಾತವಾಗಿ ವರ್ತಿಸಬೇಕಾದ ಅಪ್ಪ–ಮಗಳು, ಅಧಿಕಾರ ದುರ್ಬಳಕೆ ಹಾಗೂ ಸರ್ವಾಧಿಕಾರಿ ಧೋರಣೆಯಿಂದಾಗಿ ಕಳಂಕ ಹೊತ್ತಿದ್ದಾರೆ. ಕಾನೂನು ಮತ್ತು ಸಂವಿಧಾನದ ರಕ್ಷಕರಾಗಬೇಕಿದ್ದ ಅಧಿಕಾರಿಗಳೇ ಅದರ ಉಲ್ಲಂಘನೆಯ ಆರೋಪದಲ್ಲಿ ಸಿಲುಕಿರುವುದು ದೇಶದ ಆಡಳಿತ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಪಾಲಿಗೆ ಅತ್ಯಂತ ಅಪಾಯಕಾರಿ ಹಾಗೂ ಕಳವಳಕಾರಿ ಬೆಳವಣಿಗೆಯಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಂಧ್ರ ಸ್ಥಳೀಯ ಚುನಾವಣೆ: ಎನ್‌ಡಿಎ ಮೈತ್ರಿಗೆ ಗೆಲುವು; ‘ಚುನಾವಣಾ ಅಕ್ರಮ’ ಆರೋಪಿಸಿದ ಜಗನ್ ರೆಡ್ಡಿ

ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಖ್ಯಮಂತ್ರಿ ಎನ್. ಚಂದ್ರಬಾಬು...

ನಕಲಿ ವೈದ್ಯಕೀಯ ಪದವಿಗಳ ವಿವಾದ; 1.1 ಲಕ್ಷ ವೈದ್ಯರ ಪ್ರಮಾಣಪತ್ರಗಳ ಪರಿಶೀಲನೆಗೆ ನಿರ್ಧಾರ

ಪಶ್ಚಿಮ ಬಂಗಾಳ ವೈದ್ಯಕೀಯ ಮಂಡಳಿಯಲ್ಲಿ (WBMC) 1996ರಿಂದ ನೋಂದಾಯಿಸಿಕೊಂಡಿರುವ ಸುಮಾರು 1.1...

ಸಿಇಸಿ ಗ್ಯಾನೇಶ್ ಕುಮಾರ್ ವಜಾಗೊಳ್ಳುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ: ಕೆ ಸಿ ವೇಣುಗೋಪಾಲ್

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸುವವರೆಗೆ...

ಕಾಂಗ್ರೆಸ್‌ ದೇಣಿಗೆಯಲ್ಲಿ 75% ಭಾರಿ ಕುಸಿತ: ದಶಕದಲ್ಲೇ ಅತ್ಯಂತ ದೊಡ್ಡ ಇಳಿಕೆ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಪಕ್ಷಕ್ಕೆ ಬರುವ ದೊಡ್ಡ ಮಟ್ಟದ ದೇಣಿಗೆ...