ಅಮೆರಿಕದಿಂದ ‘ಜ್ಯಾವೆಲಿನ್’ ಕ್ಷಿಪಣಿ ಖರೀದಿಗೆ ಭಾರತ ಒಪ್ಪಂದ

Date:

ಅಮೆರಿಕ ನಿರ್ಮಿತ ಟ್ಯಾಂಕ್‌ ವಿರೋಧಿ ಜ್ಯಾವೆಲಿನ್ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ಭಾರತ ಅಂತಿಮ ಒಪ್ಪಂದ ಮಾಡಿಕೊಂಡಿದೆ. ಈ ಸಂಬಂಧ ಭಾರತೀಯ ಸೇನೆ ಶುಕ್ರವಾರ ‘ಲೆಟರ್ ಆಫ್ ಆಫರ್ ಅಂಡ್ ಅಕ್ಸೆಪ್ಟನ್ಸ್’ಗೆ ಸಹಿ ಹಾಕಿದೆ. ಅಮೆರಿಕದ ಫಾರಿನ್ ಮಿಲಿಟರಿ ಸೇಲ್ಸ್ ಪ್ರಕ್ರಿಯೆಯ ಮೂಲಕ ಭಾರತವು ಶಸ್ತ್ರಾಸ್ತ್ರ ಖರೀದಿ ಮಾಡಲಿದೆ.

- Advertisement -

ಜ್ಯಾವೆಲಿನ್ ಖರೀದಿಗೆ ಸಂಬಂಧಿಸಿದ ಚರ್ಚೆಗಳು ಹಲವು ವರ್ಷಗಳಿಂದ ನಡೆಯುತ್ತಿದ್ದು, ಈಗ ಭಾರತೀಯ ಸೇನೆ ಅಧಿಕೃತವಾಗಿ ಖರೀದಿ ಪ್ರಕ್ರಿಯೆ ಆರಂಭಿಸಿದೆ. ಈ ಒಪ್ಪಂದವನ್ನು ಭಾರತ–ಅಮೆರಿಕ ರಕ್ಷಣಾ ಸಹಕಾರದ ಮತ್ತೊಂದು ಪ್ರಮುಖ ಹೆಜ್ಜೆಯೆಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಭಾರತದ ಈ ನಿರ್ಧಾರವನ್ನು ಅಮೆರಿಕ ಸ್ವಾಗತಿಸಿದ್ದು, ಎರಡೂ ದೇಶಗಳ ಸೈನಿಕ ಸಹಕಾರ ಮತ್ತಷ್ಟು ಬಲವಾಗುತ್ತಿರುವುದಕ್ಕೆ ಇದು ಉದಾಹರಣೆ ಎಂದು ಹೇಳಿದೆ. ಅಮೆರಿಕದ ರಾಯಭಾರಿ ಸರ್ಜಿಯೋ ಗೋರ್, “ಈ ಒಪ್ಪಂದವು ಅಮೆರಿಕ ಮತ್ತು ಭಾರತದ ರಕ್ಷಣಾ ಪಾಲುದಾರಿಕೆ ಇನ್ನಷ್ಟು ಬಲವಾಗಿ ಮತ್ತು ಪರಿಣಾಮಕಾರಿಯಾಗಿ ಬೆಳೆಯುತ್ತಿರುವುದನ್ನು ತೋರಿಸುತ್ತದೆ” ಎಂದು ಹೇಳಿದ್ದಾರೆ.

ಎರಡೂ ದೇಶಗಳ ರಕ್ಷಣಾ ಕೈಗಾರಿಕೆಗಳ ನಡುವೆ ಭವಿಷ್ಯದಲ್ಲಿ ಜಂಟಿ ಉತ್ಪಾದನೆ ಮತ್ತು ತಂತ್ರಜ್ಞಾನ ಸಹಕಾರಕ್ಕೆ ಹೊಸ ಅವಕಾಶಗಳನ್ನು ತೆರೆದಿಡಬಹುದು ಎಂದು ಅಮೆರಿಕದ ರಾಯಭಾರ ಕಚೇರಿ ತಿಳಿಸಿದೆ.

ಕಳೆದ ನವೆಂಬರ್‌ನಲ್ಲಿ ಅಮೆರಿಕ ಭಾರತಕ್ಕೆ ಜ್ಯಾವೆಲಿನ್ ಶಸ್ತ್ರಾಸ್ತ್ರ ವ್ಯವಸ್ಥೆ ಮಾರಾಟ ಮಾಡುವ ಸಂಭವನೀಯ ಒಪ್ಪಂದಕ್ಕೆ ಅನುಮೋದನೆ ನೀಡಿತ್ತು. ಅದರಡಿ 100 ಎಫ್‌ಜಿಎಂ-148 ಜ್ಯಾವೆಲಿನ್ ಕ್ಷಿಪಣಿಗಳು, ಒಂದು ಹೆಚ್ಚುವರಿ ಪರೀಕ್ಷಾ ಅಥವಾ ‘ಫ್ಲೈ-ಟು-ಬಯ್’ ಕ್ಷಿಪಣಿ, 25 ಲೈಟ್‌ವೇಟ್ ಕಮಾಂಡ್ ಲಾಂಚ್ ಯುನಿಟ್‌ಗಳು ಅಥವಾ ಬ್ಲಾಕ್-1 ಕಮಾಂಡ್ ಲಾಂಚ್ ಯುನಿಟ್‌ಗಳು ಮತ್ತು ಸಂಬಂಧಿತ ಉಪಕರಣಗಳನ್ನು ಪೂರೈಸುವ ಯೋಜನೆ ಇತ್ತು. ಇದರ ಅಂದಾಜು ವೆಚ್ಚ ಸುಮಾರು 45.7 ಮಿಲಿಯನ್ ಅಮೆರಿಕನ್ ಡಾಲರ್ (436.07 ಕೋಟಿ ರೂ.) ಎಂದು ಹೇಳಲಾಗಿತ್ತು. ಈಗ ಭಾರತ ಖರೀದಿಗೆ ಒಪ್ಪಿಗೆ ಸೂಚಿಸಿದೆ.

ಜ್ಯಾವೆಲಿನ್ ಕ್ಷಿಪಣಿಯನ್ನು ಅಮೆರಿಕದ RTX ಮತ್ತು ಲಾಕ್ಹೀಡ್ ಮಾರ್ಟಿನ್ ಕಂಪನಿಗಳ ಜಂಟಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ. ಇದು ಒಬ್ಬ ಸೈನಿಕನೇ ಹೊತ್ತುಕೊಂಡು ಹೋಗಬಹುದಾದ, ಮಧ್ಯಮ ವ್ಯಾಪ್ತಿಯ, ಅತ್ಯಾಧುನಿಕ ಟ್ಯಾಂಕ್‌ ವಿರೋಧಿ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿದೆ ಎಂದು ಹೇಳಲಾಗಿದೆ.

ಈ ಲೇಖನ ಓದಿದ್ದೀರಾ?: ನಾಗೇಂದ್ರ ಪ್ರಕರಣ | ಬಿಜೆಪಿ-ಕಾಂಗ್ರೆಸ್‌ ರಾಜಕೀಯ ಲೆಕ್ಕಾಚಾರವೇನು? ಒಂದೇ ಏಟಿಗೆ ಎರಡು ಹಕ್ಕಿ ಹೊಡೆವುದೇ

ಜ್ಯಾವೆಲಿನ್‌ನ ಪ್ರಮುಖ ವೈಶಿಷ್ಟ್ಯವೇ ‘ಫೈರ್ ಅಂಡ್ ಫರ್ಗೆಟ್’ ತಂತ್ರಜ್ಞಾನ. ಅಂದರೆ ಗುರಿಯನ್ನು ಗುರುತಿಸಿ ಕ್ಷಿಪಣಿಯನ್ನು ಉಡಾಯಿಸಿದ ಬಳಿಕ ಅದನ್ನು ನಿರಂತರವಾಗಿ ನಿಯಂತ್ರಿಸುವ ಅಗತ್ಯವಿಲ್ಲ. ಕ್ಷಿಪಣಿ ತನ್ನ ಗುರಿಯನ್ನು ಸ್ವತಃ ಹಿಂಬಾಲಿಸಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ ಎಂದು ಅಮೆರಿಕ ಹೇಳಿಕೊಂಡಿದೆ.

ಇದನ್ನು ಮುಖ್ಯವಾಗಿ ಶತ್ರುಪಕ್ಷದ ಟ್ಯಾಂಕ್‌ಗಳು, ವಾಹನಗಳು ಹಾಗೂ ಬಲಪಡಿಸಲಾದ ರಕ್ಷಣಾ ನೆಲೆಗಳನ್ನು ಧ್ವಂಸ ಮಾಡಲು ವಿನ್ಯಾಸಗೊಳಿಸಲಾಗಿದೆ. ಕವಚವುಳ್ಳ ವಾಹನಗಳ ದುರ್ಬಲ ಮೇಲ್ಭಾಗವನ್ನು ಗುರಿಯಾಗಿಸಿ ದಾಳಿ ಮಾಡುವ ಸಾಮರ್ಥ್ಯವೂ ಜ್ಯಾವೆಲಿನ್‌ಗೆ ಇದೆ. ಇದರಿಂದಾಗಿ ಸಾಂಪ್ರದಾಯಿಕ ಟ್ಯಾಂಕ್‌ ವಿರೋಧಿ ಶಸ್ತ್ರಾಸ್ತ್ರಗಳಿಗಿಂತ ಇದು ಹೆಚ್ಚು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

ಅಮೆರಿಕದ ಸೇನೆ ಮತ್ತು ಮೆರೈನ್ ಪಡೆಗಳು ಈಗಾಗಲೇ ಈ ಕ್ಷಿಪಣಿ ವ್ಯವಸ್ಥೆಯನ್ನು ಬಳಸುತ್ತಿವೆ. ಹಲವು ದೇಶಗಳೂ ಜ್ಯಾವೆಲಿನ್ ಖರೀದಿಸಿದ್ದು, ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್ ಕೂಡ ಈ ಕ್ಷಿಪಣಿಗಳನ್ನು ಬಳಸುತ್ತಿದೆ.

ಭಾರತಕ್ಕೆ ಈ ಶಸ್ತ್ರಾಸ್ತ್ರ ಸೇರ್ಪಡೆಯಾದರೆ ಗಡಿಭಾಗದ ಭೂಸೇನೆ ಘಟಕಗಳಿಗೆ, ವಿಶೇಷವಾಗಿ ಶತ್ರು ಟ್ಯಾಂಕ್‌ಗಳು ಮತ್ತು ಕವಚಿತ ಪಡೆಗಳನ್ನು ಎದುರಿಸುವ ಸಾಮರ್ಥ್ಯಕ್ಕೆ ಹೆಚ್ಚುವರಿ ಬಲ ಸಿಗಲಿದೆ. ಪರ್ವತ ಪ್ರದೇಶಗಳು, ಮುಂಚೂಣಿ ನೆಲೆಗಳು ಮತ್ತು ವೇಗವಾಗಿ ಸ್ಥಳಾಂತರಗೊಳ್ಳಬೇಕಾದ ಯುದ್ಧ ಪರಿಸ್ಥಿತಿಗಳಲ್ಲೂ ಒಬ್ಬ ಸೈನಿಕ ಹೊತ್ತುಕೊಂಡು ಕಾರ್ಯಾಚರಣೆ ನಡೆಸಬಹುದಾದ ವ್ಯವಸ್ಥೆಯಾಗಿರುವುದು ಇದರ ಪ್ರಮುಖ ಪ್ರಯೋಜನವಾಗಿದೆ ಎಂದು ಭಾರತೀಯ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...

ಪತಿಯನ್ನು ಕೊಂದು ಕಾಂಕ್ರೀಟ್ ಡ್ರಮ್‌ನಲ್ಲಿ ಹೂತಿಟ್ಟ ಪ್ರಕರಣ: ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ

ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು...