ಈ ವರ್ಷದ (2024) ಮಾನ್ಸೂನ್ (ಮುಂಗಾರು) ಋತುವಿನಲ್ಲಿ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದ್ದು ಲಾ ನಿನಾ ಸ್ಥಿತಿಯು ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಐಎಂಡಿ ಸೋಮವಾರ ತಿಳಿಸಿದೆ.
ಹವಾಮಾನ ವಿಜ್ಞಾನಿಗಳ ಪ್ರಕಾರ ಮಳೆಯ ದಿನಗಳ ಸಂಖ್ಯೆಯು ಕಡಿಮೆಯಾಗುತ್ತಿದೆ. ಹಾಗೆಯೇ ಭಾರೀ ಮಳೆಯ ಘಟನೆಗಳು (ಅಲ್ಪಾವಧಿಯಲ್ಲಿ ಹೆಚ್ಚು ಮಳೆ) ಹೆಚ್ಚಾಗುತ್ತಿದೆ. ಇದು ಆಗಾಗ್ಗೆ ಬರ ಮತ್ತು ಪ್ರವಾಹಗಳಿಗೆ ಕಾರಣವಾಗುತ್ತದೆ ಎಂದು ಹವಾಮಾನ ತಜ್ಞರ ಅಭಿಪ್ರಾಯವಾಗಿದೆ.
IMD predicts 2024 southwest monsoon season (June to September) rainfall over the country as a whole to be above normal (>104% of the Long Period Average (LPA)). Seasonal rainfall is likely to be 106% of LPA with a model error of ± 5%. LPA of monsoon rainfall (1971-2020) is 87 cm. pic.twitter.com/bgBhLX0M2W
— India Meteorological Department (@Indiametdept) April 15, 2024
1951-2023 ರ ನಡುವಿನ ಅಂಕಿಅಂಶಗಳ ಆಧಾರದ ಮೇಲೆ ನಾವು ನೋಡಿದಾಗ ಭಾರತವು ಒಂಬತ್ತು ಸಂದರ್ಭಗಳಲ್ಲಿ ಮಾನ್ಸೂನ್ ಋತುವಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ಕಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುಖ್ಯಸ್ಥ ಮೃತ್ಯುಂಜಯ್ ಮೊಹಾಪಾತ್ರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದನ್ನು ಓದಿದ್ದೀರಾ? ಬಿಸಿಲು ಧಗೆ| ಕಲಬುರಗಿಯಲ್ಲಿ 43.1 ಡಿಗ್ರಿ ಸೆಲ್ಸಿಯಸ್ ದಾಖಲು, ಹಲವು ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ
ನಾಲ್ಕು ತಿಂಗಳ ಮಾನ್ಸೂನ್ ಋತುವಿನಲ್ಲಿ (ಜೂನ್ ನಿಂದ ಸೆಪ್ಟೆಂಬರ್) ಭಾರತವು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ಕಾಣುವ ಸಾಧ್ಯತೆಯಿದೆ. ಜೊತೆಗೆ ದೀರ್ಘಾವಧಿಯ ಸರಾಸರಿ (87 ಸೆಂ.ಮೀ) ಶೇಕಡ 106 ಪ್ರತಿಶತದಷ್ಟು ಮಳೆ ಸುರಿಯುವ ಅಂದಾಜಿದೆ.
ಐಎಂಡಿಯು ಐದು ರೀತಿಯಲ್ಲಿ ಮಳೆ ಪ್ರಮಾಣವನ್ನು ವಿಂಗಡಿಸಿದೆ. ಶೇಕಡ 96 ರಿಂದ 104 ಸಾಮಾನ್ಯ ಮಳೆಯಾಗಿದ್ದರೆ, ಶೇಕಡ 90 ರಿಂದ 96 ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಇನ್ನು, ಶೇಕಡ 90ಕ್ಕಿಂತ ಕಡಿಮೆ ಮಳೆ ಬಿದ್ದರೆ ಮಳೆ ಕೊರತೆ ಎನ್ನಲಾಗುತ್ತದೆ. ಶೇಕಡ104 ರಿಂದ 110 ಅನ್ನು ವಾಡಿಕೆಗಿಂತ ಹೆಚ್ಚು ಮಳೆ ಎಂದರೆ, ಶೇಕಡ 110ಕ್ಕಿಂತ ಹೆಚ್ಚಿದ್ದರೆ ಅಧಿಕ ಮಳೆ ಎಂದು ಕರೆಯಲಾಗುತ್ತದೆ.