ಕಡಲುಗಳ್ಳರಿಂದ 23 ಪಾಕ್ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ನೌಕಾಪಡೆ

Date:

ಅರಬ್ಬಿ ಸಮುದ್ರದಲ್ಲಿ ಕಡಲುಗಳ್ಳರ ದಾಳಿಯಿಂದ 23 ಪಾಕಿಸ್ತಾನಿ ಪ್ರಜೆಗಳನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ಕಡಲುಗಳ್ಳರ ವಿರುದ್ಧ ಭಾರತೀಯ ನೌಕಾಪಡೆಯು ಸುಮಾರು 12 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದು, ಇರಾನ್ ಮೀನುಗಾರಿಕಾ ಹಡಗು ಮತ್ತು 23 ಪಾಕಿಸ್ತಾನಿ ಪ್ರಜೆಗಳ ಸಿಬ್ಬಂದಿಯನ್ನು ರಕ್ಷಿಸಿದೆ.

“ಮಾರ್ಚ್ 28 ರಂದು ತಡರಾತ್ರಿ ಇರಾನಿನ ಮೀನುಗಾರಿಕಾ ನೌಕೆ ”ಅಲ್-ಕಂಬಾರ್ 786’ನಲ್ಲಿ ಕಡಲ್ಗಳ್ಳತನ ನಡೆಯುವ ಸಾಧ್ಯತೆ ಬಗ್ಗೆ ಮಾಹಿತಿ ಆಧಾರದಲ್ಲಿ ಎರಡು ಭಾರತೀಯ ನೌಕಾಪಡೆಯ ಹಡಗುಗಳು ಕಡಲ ಭದ್ರತಾ ಕಾರ್ಯಾಚರಣೆಯನ್ನು ಅರಬ್ಬಿ ಸಮುದ್ರದಲ್ಲಿ ನಡೆಸಿದೆ. ಈ ಸಂದರ್ಭದಲ್ಲಿ ಅಪಹರಣಕ್ಕೊಳಗಾದ ಮೀನುಗಾರಿಕಾ ಹಡಗನ್ನು ರಕ್ಷಿಸಲಾಗಿದೆ” ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನು ಓದಿದ್ದೀರಾ?  ಸೊಮಾಲಿ ಕಡಲ್ಗಳ್ಳರಿಂದ 19 ಪಾಕ್ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ನೌಕಾ ಪಡೆ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಸುಮಾರು 12 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಅಪಹರಿಸಲಾದ ಮೀನುಗಾರಿಕಾ ಹಡಗಿನಲ್ಲಿದ್ದ ಕಡಲ್ಗಳ್ಳರು ಶರಣಾಗುವಂತೆ ಮಾಡಲಾಗಿದೆ. 23 ಪಾಕಿಸ್ತಾನಿ ಪ್ರಜೆಗಳನ್ನು ಒಳಗೊಂಡಿರುವ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಬಳಿಕ ಹಡಗಿನ ಪರಿಶೀಲನೆ ನಡೆಸಿ, ಶುಚಿಗೊಳಿಸಲಾಗಿದೆ. ಸಾಮಾನ್ಯ ಮೀನುಗಾರಿಕೆ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುವ ಸ್ಥಿತಿಯಲ್ಲಿ ಹಡಗು ಇದೆಯೇ ಎಂದು ಪರಿಶೀಲಿಸಲಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಾರ್ಚ್ 29 ರಂದು, ಐಎನ್‌ಎಸ್ ಸುಮೇಧಾ ಮೀನುಗಾರಿಕಾ ಹಡಗು ಅಲ್-ಕಂಬಾರ್ ಅನ್ನು ಮುಂಜಾನೆ ತಡೆಯಲಾಗಿದೆ. ಒಂಬತ್ತು ಶಸ್ತ್ರಸಜ್ಜಿತ ಕಡಲ್ಗಳ್ಳರು ಹಡಗಿಗೆ ದಾಳಿ ಮಾಡಿದ್ದಾರೆ. ಇನ್ನು ಈ ತಿಂಗಳ ಆರಂಭದಲ್ಲಿ ಭಾರತೀಯ ನೌಕಾಪಡೆಯು ಕಡಲ್ಗಳ್ಳರ ದಾಳಿಗೆ ಒಳಗಾದ ರುಯೆನ್ ಎಂಬ ಹಡಗನ್ನು ತಡೆದಿದ್ದರು. ಸುಮಾರು 40 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ 35 ಕಡಲ್ಗಳ್ಳರು ಶರಣಾಗುವಂತೆ ಮಾಡಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2019ರಲ್ಲಿ ಮೋದಿ ಕೊಟ್ಟ ಆಶ್ವಾಸನೆಗಳ ಕತೆ ಏನಾಯಿತು?

2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರಮೋದಿಯವರ ಮುಖ ಹೊತ್ತ ಬಿಜೆಪಿ ಪ್ರಣಾಳಿಕೆ ಸಾಲು...

ಪಂಜಾಬ್‌| ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ರೈತರ ಪ್ರತಿಭಟನೆಯ ಬಿಸಿ

ಪಂಜಾಬ್‌ನಲ್ಲಿ ರೈತರ ಪ್ರತಿಭಟನೆ ನಿರಂತರವಾಗಿ ಮುಂದುವರೆದಿದ್ದು, ಲೋಕಸಭೆ ಚುನಾವಣೆಯ ಪ್ರಚಾರ ನಡೆಸುತ್ತಿರುವ...

ಸ್ನೇಹಿತೆ ಮೇಲೆ ಹಲ್ಲೆ, ಅತ್ಯಾಚಾರ; ಆರೋಪಿ ಬಂಧನ – ಮನೆಯ ಅಕ್ರಮ ಭಾಗ ನೆಲಸಮ

ತನ್ನ ಸ್ನೇಹಿತೆ ಮೇಲೆಯೇ ಹಲ್ಲೆಗೈದು ಅತ್ಯಾಚಾರ ಎದಗಿದ್ದ ಆರೋಪದ ಮೇಲೆ 20...

ಅನಾರೋಗ್ಯ ಹಿನ್ನೆಲೆ; ರಾಹುಲ್ ಗಾಂಧಿ ಕೇರಳ ಚುನಾವಣಾ ಪ್ರಚಾರ ರದ್ದು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಏಪ್ರಿಲ್ 22...