ಶ್ರೀಕೃಷ್ಣನಿಗೆ ಅವಮಾನ: ಬಾಬಾ ಬಾಗೇಶ್ವರ ವಿರುದ್ಧ ತೀವ್ರಗೊಂಡ ಯಾದವರ ಪ್ರತಿಭಟನೆ!

Date:

ಶ್ರೀರಾಮ ಮತ್ತು ಶ್ರೀಕೃಷ್ಣನ ನಡುವೆ ತುಲನೆ ಮಾಡಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಾಗೇಶ್ವರ ಧಾಮದ ಪೀಠಾಧಿಪತಿ ಧೀರೇಂದ್ರ ಕೃಷ್ಣ ಶಾಸ್ತ್ರಿ (ಬಾಬಾ ಬಾಗೇಶ್ವರ) ವಿರುದ್ಧ ಭುಗಿಲೆದ್ದ ಆಕ್ರೋಶ ಈಗ ಬೀದಿಗಿಳಿದಿದೆ. ಮಧ್ಯಪ್ರದೇಶದ ಛತರ್‌ಪುರ ಜಿಲ್ಲೆಯಲ್ಲಿ ಶುಕ್ರವಾರ ಬಾಗೇಶ್ವರ ಧಾಮದ ಬೆಂಬಲಿಗರು ಮತ್ತು ಯಾದವ ಮಹಾಸಭಾ ಕಾರ್ಯಕರ್ತರ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.

- Advertisement -

ಬಾಬಾ ಬಾಗೇಶ್ವರ ಹೇಳಿಕೆಯನ್ನು ಖಂಡಿಸಿ ಹಾಗೂ ಬಾಗೇಶ್ವರ ಧಾಮಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿ ಯಾದವ ಮಹಾಸಭಾ ಪ್ರತಿಭಟನೆಗೆ ಕರೆ ನೀಡಿತ್ತು. ಇದಕ್ಕೆ ಪ್ರತಿಯಾಗಿ ಬಾಗೇಶ್ವರ ಧಾಮದ ಬೆಂಬಲಿಗರು ಬ್ರಿಜ್‌ಪುರ ಬಳಿ ರಾಷ್ಟ್ರೀಯ ಹೆದ್ದಾರಿ-39 ಅನ್ನು ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಹೆದ್ದಾರಿಯ ಎರಡೂ ಬದಿಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸೋನಿಯಾ ಗಾಂಧಿ ಎಂಬ ಸೋಜಿಗ! ರಾಜಕೀಯ ನಾಯಕತ್ವದ ಹಿಂದಿನ...

ದಿನೇಶ್ ಅಮೀನ್ ಮಟ್ಟು ಅವರು ಪ್ರಸ್ತಾಪಿಸಿದ ನಾಲ್ಕು ಆಯಾಮಗಳು ನನ್ನನ್ನು ವೈಯಕ್ತಿಕವಾಗಿ ಬಹಳವಾಗಿ ಪ್ರಭಾವಿಸಿದವು. ಸೋನಿಯಾ ಗಾಂಧಿ ಒಬ್ಬ ಮಹಿಳೆಯಾಗಿ, ಒಬ್ಬ ವಿಧವೆಯಾಗಿ, ಅಲ್ಪಸಂಖ್ಯಾತ ಕ್ರಿಶ್ಚಿಯನ್ ಧಾರ್ಮಿಕ ಹಿನ್ನೆಲೆಯ ಮಹಿಳೆಯಾಗಿ ಮತ್ತು ವಿದೇಶಿ...

ಬಿತ್ತನೆ ಗುರಿ ಅರ್ಧದಷ್ಟೂ ಮುಟ್ಟದ ಕೃಷಿ ಚಟುವಟಿಕೆ; ಜೋಳದ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟದಿಂದ ಕಂಗೆಟ್ಟ ಅನ್ನದಾತರಿಗೆ ಹಿಂಗಾರು ಹಂಗಾಮಿನಲ್ಲಾದರೂ ಮಳೆ ಆಸರೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ರೈತರ ಆ ನಿರೀಕ್ಷೆಯೂ ಹುಸಿಯಾಗಿದೆ. ಮುಂಗಾರಿನ ಬೆನ್ನಲ್ಲೇ ಹಿಂಗಾರು ಹಂಗಾಮಿನಲ್ಲೂ ಮಳೆ ಕೈಕೊಟ್ಟಿರುವುದರಿಂದ...

ಧಾರವಾಡದ ‘ಲಲಿತಕಲಾ ಅಕಾಡೆಮಿ’ಗೆ ದುಸ್ಥಿತಿ: ಕಲಾವಿದರಿಂದಲೇ ದೂರವಾದ ಪ್ರಾದೇಶಿಕ...

ಕಲಾವಿದರ ಬಹುದಿನಗಳ ಬೇಡಿಕೆಯಂತೆ ಸ್ಥಾಪನೆಯಾದ ಕೇಂದ್ರಕ್ಕೆ ಮೂರೇ ವರ್ಷಗಳಲ್ಲಿ ದುಸ್ಥಿತಿ; ಸಂಚಾಲಕರ ಏಕಪಕ್ಷೀಯ ಧೋರಣೆ, ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಕಲಾ ಚಟುವಟಿಕೆಗಳ ಕೊರತೆಯ ವಿರುದ್ಧ ಹಿರಿಯ ಕಲಾವಿದರ ಆಕ್ರೋಶ. ಸಲಹಾ ಸಮಿತಿ...

ಸ್ಥಳದಲ್ಲಿ ಜಮಾಯಿಸಿದ ಧಾಮದ ಬೆಂಬಲಿಗರು ಕೋಲು, ಚಪ್ಪಲಿಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಯಾದವ ಮಹಾಸಭಾದ ನಾಯಕ ದಾಮೋದರ್ ಯಾದವ್ ಅವರ ಪ್ರತಿಕೃತಿಗಳನ್ನು ಪ್ರದರ್ಶಿಸಿದರು. ಮತ್ತೊಂದೆಡೆ, ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ ಮುನ್ನುಗ್ಗಲು ಯತ್ನಿಸಿದ ಯಾದವ ಮಹಾಸಭಾದ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಘರ್ಷಣೆ ತಡೆಯಲು ಜಿಲ್ಲಾಡಳಿತವು ಹೊರ ಜಿಲ್ಲೆಗಳ ಪೊಲೀಸ್ ಪಡೆಗಳು ಸೇರಿದಂತೆ ಭಾರಿ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ. ಸಿಸಿಟಿವಿ ಮತ್ತು ಡ್ರೋನ್ ಕ್ಯಾಮೆರಾಗಳ ಮೂಲಕ ಪರಿಸ್ಥಿತಿಯ ಮೇಲೆ ಹದ್ದಿನ ಕಣ್ಣಿಡಲಾಗಿದೆ.

“ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಬಹುಹಂತದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದವರ ವಿರುದ್ಧವೂ ಕ್ರಮ ಕೈಗೊಂಡು ನೋಟಿಸ್ ಜಾರಿ ಮಾಡಲಾಗಿದೆ.” ಎಂದು ಛತರ್‌ಪುರ ಎಸ್‌ಪಿ ರಜತ್ ಸಕ್ಲೇಚಾ ತಿಳಿಸಿದ್ದಾರೆ. 

ವಿವಾದದ ಹಿನ್ನೆಲೆ ಏನು?

ಅಕ್ಟೋಬರ್ 29ರಂದು ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಕರೇರಾದಲ್ಲಿ ನಡೆದ ‘ರಾಮಕಥಾ’ ಕಾರ್ಯಕ್ರಮದಲ್ಲಿ ಧೀರೇಂದ್ರ ಶಾಸ್ತ್ರಿ  ಶ್ರೀರಾಮ ಮತ್ತು ಶ್ರೀಕೃಷ್ಣನ ಗುಣಲಕ್ಷಣಗಳನ್ನು ಹೋಲಿಸಿ ಮಾತನಾಡಿದ್ದರು. ಈ ವಿಡಿಯೋ ನವೆಂಬರ್ 1ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

“ನಿಮ್ಮ ಠಾಕೂರ್‌ಜಿ (ಶ್ರೀಕೃಷ್ಣ) ಪ್ರತಿಯೊಂದು ಫೋಟೋದಲ್ಲೂ ಸುತ್ತಲೂ ನೋಡುತ್ತಿರುವಂತೆ ಕಾಣುತ್ತಾರೆ. ನಿಂತಾಗಲೂ ಮೂರು ಕಡೆ ಬಗ್ಗಿದ್ದಾರೆ (ತ್ರಿಭಂಗಿ). ಕಾಲುಗಳು ಅಡ್ಡಲಾಗಿವೆ, ನಡುವಿನ ಭಾಗ ಎಲ್ಲೋ ಬಾಗಿದೆ, ಕುತ್ತಿಗೆ ಬಗ್ಗಿಸಿ ಕೊಳಲು ಬಾರಿಸುತ್ತಾರೆ. ಆದರೆ ನಮ್ಮ ರಾಮ ಹಾಗಲ್ಲ, ಆತ ನೇರವಾಗಿ ನಿಲ್ಲುತ್ತಾನೆ, ಆತನ ಹೆಸರು ನೇರ, ನೋಟ ನೇರ, ನಡಿಗೆಯೂ ನೇರ. ನಿಮ್ಮವನು ಡೊಂಕು, ಆತನ ನೋಟ ಮತ್ತು ನಡಿಗೆಯೂ ಡೊಂಕು,” ಎಂದು ವಿವರಿಸಿದ್ದರು.  “ಕೊಳಲು ಬಾರಿಸುವುದು ಒಂದು ಆಟವಷ್ಟೇ. ನಮ್ಮ ವೇದಿಕೆಯ ಮೇಲಿರುವ ಕಲಾಕಾರನೂ ಕೊಳಲು ಬಾರಿಸುತ್ತಾನೆ. ಆದರೆ ಧನುಸ್ಸು ಹಿಡಿಯುವುದು ಆಟವಲ್ಲ,” ಎನ್ನುವ ಮೂಲಕ ಶ್ರೀಕೃಷ್ಣನ ಕೊಳಲನ್ನು ಹಗುರವಾಗಿ ಕಂಡಿದ್ದರು.

ಹಸು ಮೇಯಿಸುವುದು ಯಾರಾದರೂ ಮಾಡಬಹುದು, ಆದರೆ ಕಪಿಗಳನ್ನು ಆಡಿಸುವುದು ಸಾಮಾನ್ಯವಲ್ಲ ಎಂದು ಹೇಳಿದ್ದಲ್ಲದೆ, ಅಯೋಧ್ಯೆ ಮತ್ತು ಬೃಂದಾವನ ಹಾಗೂ ‘ನಮ್ಮ ರಾಮ’ ಮತ್ತು ‘ನಿಮ್ಮ ಕೃಷ್ಣ’ ಎಂಬ ಪದ ಬಳಕೆಯ ಮೂಲಕ ಭಕ್ತರ ನಡುವೆಯೇ ‘ನಾವು-ನೀವು’ ಎಂಬ ಭೇದಭಾವ ಸೃಷ್ಟಿಸಲು ಯತ್ನಿಸಿದ್ದರು.

ಶಾಸ್ತ್ರಿಯವರ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ದೇಶದ ವಿವಿಧ ಮೂಲೆಯ ಧಾರ್ಮಿಕ ಮುಖಂಡರು, ಮಥುರಾ-ಬೃಂದಾವನದ ಸಂತರು ಹಾಗೂ ಶ್ರೀಕೃಷ್ಣನ ಭಕ್ತರು ತೀವ್ರವಾಗಿ ಖಂಡಿಸುತ್ತಿದ್ದಾರೆ.  ಈ ಹೇಳಿಕೆಯು ಹಿಂದೂ ದೇವತೆಗಳ ನಡುವೆ ತಾರತಮ್ಯ ಸೃಷ್ಟಿಸುತ್ತಿದೆ ಎಂದು ಮಥುರಾ, ವೃಂದಾವನದ ಭಕ್ತರು ಹಾಗೂ ಯಾದವ ಸಮುದಾಯ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕೂಡ ಶಾಸ್ತ್ರಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು.

ವಿವಾದ ತೀವ್ರಗೊಳ್ಳುತ್ತಿದ್ದಂತೆ ನವೆಂಬರ್ 2ರಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ಧೀರೇಂದ್ರ ಶಾಸ್ತ್ರಿ  ಕ್ಷಮೆಯಾಚಿಸಿದ್ದಾರೆ. “ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಗೋಪಿಕೆಯರು ಮತ್ತು ಸಂತರು ಕೃಷ್ಣನ ಮೇಲೆ ತೋರುವ ಪ್ರೀತಿಯ ಸಲುಗೆಯ ಧಾಟಿಯಲ್ಲಿ ನಾನು ಮಾತನಾಡಿದ್ದೇನೆಯೇ ಹೊರತು, ರಾಮ-ಕೃಷ್ಣರ ನಡುವೆ ಭೇದಭಾವ ಮಾಡುವ ಉದ್ದೇಶವಿರಲಿಲ್ಲ. ನಾನೂ ಕೂಡ ಬ್ರಜ್ ಮತ್ತು ಠಾಕೂರ್ ಜಿ ಭಕ್ತ. ಯಾರಿಗಾದರೂ ನೋವಾಗಿದ್ದರೆ ಮನಃಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ” ಎಂದು ತಿಳಿಸಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

UGC-NET ಕೀ-ಉತ್ತರ ವಿವಾದ; 4 ಪ್ರಶ್ನೆಗಳ ಮರುಪರಿಶೀಲನೆಗೆ ದೆಹಲಿ ಹೈಕೋರ್ಟ್ ಆದೇಶ!

ಸ್ಪರ್ಧಾತ್ಮಕ ಪರೀಕ್ಷೆಗಳ ಕೀ-ಉತ್ತರಗಳ ವಿವಾದಗಳಲ್ಲಿ ನ್ಯಾಯಾಂಗದ ಸಂಯಮವು ಸಂಪೂರ್ಣವಾದುದಲ್ಲ. ಯಾವುದೇ ತರ್ಕ...

ನಟ ದರ್ಶನ್‌ಗೆ ಮತ್ತಷ್ಟು ಸಂಕಷ್ಟ ತಂದಿಟ್ಟ ಆ 2 ನಿಮಿಷಗಳ ಮಾತು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಮತ್ತು...

ಗೋಕುಲ್ ಡೇರಿ ಚುನಾವಣೆಯಲ್ಲಿ ಮೋಸದ ಗೆಲುವು ಬಿಜೆಪಿಗೆ ಮುಳುವಾಗುವುದೇ?

ಮಹಾರಾಷ್ಟ್ರದ ಅತಿದೊಡ್ಡ ಡೇರಿಗಳಲ್ಲಿ ಒಂದಾದ 'ಗೋಕುಲ್'ನ ನಿಯಂತ್ರಣ ಸಾಧಿಸಲು ಆಡಳಿತಾರೂಢ 'ಮಹಾಯುತಿ'...

ಬಿಜೆಪಿ ಶಾಸಕನ ಸಂಬಂಧಿ ಕಾರು ಡಿಕ್ಕಿ: ರ‍್ಯಾಪಿಡೋ ಪ್ರಯಾಣಿಕ ಸಾವು; ತನಿಖೆ ಬಗ್ಗೆ ಅನುಮಾನ!

ಬುಧವಾರ ಬೆಳಿಗ್ಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ವೇಗವಾಗಿ ಬಂದ ರೇಂಜ್ ರೋವರ್ ಕಾರೊಂದು...