ಶಬರಿಮಲೆ ಪ್ರಕರಣ | ಧಾರ್ಮಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಿದರೆ ಧರ್ಮಕ್ಕೆ ಅಡ್ಡಿಯಾಗಬಹುದು: ಸುಪ್ರೀಂ ಕೋರ್ಟ್

Date:

ಧರ್ಮ ಮತ್ತು ಧಾರ್ಮಿಕ ಆಚರಣೆಗಳ ವಿಷಯಗಳಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವುದರಿಂದಾಗಿ ಧರ್ಮಗಳಿಗೆ ಅಡ್ಡಿಪಡಿಸಿದಂತಾಗಬಹುದು. ಆದ್ದರಿಂದ ಅಂತಹ ಪ್ರಕರಣಗಳನ್ನು ನಿರ್ವಹಿಸುವಾಗ ಎಚ್ಚರಿಕೆ ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಶಬರಿಮಲೆಗೆ ಮಹಿಳೆಯರ ಪ್ರವೇಶ ಸೇರಿದಂತೆ ಇತರೆ ಪ್ರಕರಣಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಗುರುವಾರ 13ನೇ ದಿನದ ವಿಚಾರಣೆಯಾಗಿದೆ.

- Advertisement -

ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶವು ದೇಶದ ಇತಿಹಾಸದಲ್ಲೇ ಒಂದು ವಿವಾದಾದ್ಮಕ ಹೋರಾಟವಾಗಿಯೇ ಉಳಿದಿದೆ. 2018ರಲ್ಲಿ ಶಬರಿಮಲೆಗೆ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ನೀಡಿ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದರೆ ಇದನ್ನು ಪ್ರಶ್ನಿಸಿ ಅರ್ಜಿಗಳು ಸಲ್ಲಿಕೆಯಾಗಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಷ್ಟ್ರೀಯ ಶಿಕ್ಷಣ ದಿನ | ಶಿಕ್ಷಣ ಕ್ರಾಂತಿಯ ಹರಿಕಾರ-ಮೌಲಾನ...

ಮೌಲಾನಾ ಅಬುಲ್ ಕಲಾಂ ಆಜಾದ್ ಇದು ಅಪರೂಪದ ರಾಷ್ಟ್ರೀಯ ವ್ಯಕ್ತಿತ್ವ. ಅವರ ಹೆಸರು ಆಜಾದ್. ಅವರ ಕನಸು ಸ್ವತಂತ್ರ ಭಾರತ. ಅವರ ಹೋರಾಟ ರಾಷ್ಟ್ರೀಯ ಏಕತೆ. ಅವರ ನಂಬಿಕೆ ಶಿಕ್ಷಣ. ಅವರ ವೈಚಾರಿಕ...

ಕಿವೀಸ್ ಕೋಟೆಯಲ್ಲಿ ಇತಿಹಾಸ ಬರೆಯುವತ್ತ ಶುಭಮನ್ ಗಿಲ್ ಪಡೆ:...

ನವೆಂಬರ್ 13 ಮತ್ತು 15ರಂದು ನಡೆಯಲಿರುವ ಕಿವೀಸ್ ವಿರುದ್ಧದ ನಾಲ್ಕು ಹಾಗೂ ಐದನೇ ಏಕದಿನ ಪಂದ್ಯಗಳಲ್ಲಿ ನಾಯಕ ಶುಭಮನ್ ಗಿಲ್ ಅವರ ನಾಯಕತ್ವದ ಕೌಶಲ ಮತ್ತೊಮ್ಮೆ ಒರೆಗಲ್ಲಿಗೆ ಹಚ್ಚಲ್ಪಡಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ...

ತುರ್ತುಪರಿಸ್ಥಿತಿ ಸರಿಯೇ- ತಪ್ಪೇ? ಸೋನಿಯಾ ತಮ್ಮ ಆತ್ಮಕಥೆಯಲ್ಲಿ ಏನಂತಾರೆ?

The Guardian ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತುರ್ತುಪರಿಸ್ಥಿತಿ ಘೋಷಣೆಯೇ ತಪ್ಪು ನಿರ್ಧಾರವಾಗಿತ್ತು ಎಂದು ಸೋನಿಯಾ ಅಭಿಪ್ರಾಯಪಟ್ಟಿದ್ದಾರೆ. ರಾಜೀವ್ ಗಾಂಧಿ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಮುಂದಿನ ಚುನಾವಣೆಯವರೆಗೆ ಕಾಯುವಂತೆ ಇಂದಿರಾ ಗಾಂಧಿಯವರಿಗೆ ಸಲಹೆ...

ಇದನ್ನು ಓದಿದ್ದೀರಾ? ಮಹಿಳೆಯರಿಗೆ ಮತ್ತೆ ಮುಚ್ಚಲಿವೆಯೇ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಬಾಗಿಲುಗಳು?

ಈ ಹಿಂದೆ ಬರೀ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ್ದ ಈ ಪ್ರಕರಣವು ಇಂದು ಬರೀ ಒಂದು ದೇವಾಲಯದ ಪ್ರಕರಣವಾಗಿ ಉಳಿದಿಲ್ಲ. ಬದಲಾಗಿ ಮುಸ್ಲಿಂ ಮಹಿಳೆಯರ ಮಸೀದಿ ಪ್ರವೇಶ, ಪಾರ್ಸಿ ಮಹಿಳೆಯರ ಅಗ್ನಿ ದೇವಾಲಯ ಪ್ರವೇಶ ಮೊದಲಾದವುಗಳ ವಿಚಾರಣೆ ಆಗಿಯೂ ಮಾರ್ಪಟ್ಟಿದೆ. ಸದ್ಯ 9 ನ್ಯಾಯಮೂರ್ತಿಗಳು ಈ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದಾರೆ.

ಈ 9 ನ್ಯಾಯಮೂರ್ತಿಗಳ ಪೀಠದಲ್ಲಿರುವ ಏಕೈಕ ಮಹಿಳೆ ಬಿ.ವಿ. ನಾಗರತ್ನ, “ಪ್ರತಿಯೊಬ್ಬರೂ ಸಾಂವಿಧಾನಿಕ ನ್ಯಾಯಾಲಯದ ಮುಂದೆ ಕೆಲವು ಧಾರ್ಮಿಕ ಆಚರಣೆಗಳು ಅಥವಾ ಧರ್ಮದ ವಿಷಯಗಳನ್ನು ಪ್ರಶ್ನಿಸಲು ಪ್ರಾರಂಭಿಸಿದರೆ, ಧರ್ಮವು ದೇಶದ ಸಮಾಜದೊಂದಿಗೆ ನಿಕಟ ಸಂಪರ್ಕ ಹೊಂದಿರುವ ಈ ನಾಗರಿಕತೆಗೆ ಏನಾಗುತ್ತದೆ? ಈ ಹಕ್ಕು, ಆ ಹಕ್ಕು, ದೇವಾಲಯಗಳನ್ನು ತೆರೆಯುವುದು, ದೇವಾಲಯಗಳನ್ನು ಮುಚ್ಚುವುದು… ನಾವು ಇದರ ಬಗ್ಗೆ ತುಂಬಾ ಜಾಗೃತರಾಗಿದ್ದೇವೆ” ಎಂದು ಹೇಳಿದರು.

“ದೇಶದ ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯವಾಗಿ ಉಳಿದಿದ್ದರೂ ಬಹುತ್ವ ಮತ್ತು ವೈವಿಧ್ಯತೆಗಳಿಂದ ಗುರುತಿಸಲ್ಪಟ್ಟ ನಾಗರಿಕತೆಯಾಗಿದೆ. ಧರ್ಮವು ದೇಶದಲ್ಲಿ ಎಲ್ಲರಿಗೂ ಆಳವಾಗಿ ನಿಕಟವಾಗಿದೆ. ಇದು ನಮಗೆ ತೊಂದರೆ ಕೊಡುತ್ತಿದೆ. ನಾವು, ಒಂಬತ್ತು ನ್ಯಾಯಮೂರ್ತಿಗಳು ನಾವು ಒಂದು ನಾಗರಿಕತೆಗಾಗಿ, ಅದು ಭಾರತಕ್ಕಾಗಿ ಇರುವುದು. ಭಾರತ ಪ್ರಗತಿ ಹೊಂದಬೇಕು. ಅಭಿವೃದ್ಧಿ, ಆರ್ಥಿಕತೆ ಪ್ರಗತಿ ಎಲ್ಲವೂ ಇದ್ದರೂ ನಮ್ಮಲ್ಲಿ ಒಂದು ಸ್ಥಿರತೆ ಇದೆ. ನಾವು ಆ ಸ್ಥಿರತೆಯನ್ನು ಮುರಿಯಲು ಸಾಧ್ಯವಿಲ್ಲ. ಅದೇ ನಮಗೆ ತೊಂದರೆ ನೀಡುತ್ತಿದೆ” ಎಂದರು.

ಇನ್ನು ಗುರುವಾರದ ವಿಚಾರಣೆಯ ಸಂದರ್ಭದಲ್ಲಿ, ದಾವೂದಿ ಬೊಹ್ರಾ ಸಮುದಾಯದ ಕೆಲವು ವಿಭಾಗಗಳಲ್ಲಿ ಸ್ತ್ರೀ ಜನನಾಂಗ ಛೇದನ (Female Genital Mutilation – FGM) ಪದ್ಧತಿಯ ಬಗ್ಗೆ ನ್ಯಾಯಾಲಯವು ಕಳವಳ ವ್ಯಕ್ತಪಡಿಸಿದೆ. ಸ್ತ್ರೀ ಜನನಾಂಗ ಛೇದನವನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳನ್ನು ನ್ಯಾಯಾಲಯವು ಶಬರಿಮಲೆ ಪ್ರಕರಣಕ್ಕೆ ಸೇರಿಸಿತು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೋನಿಯಾ ಪುಸ್ತಕ: ಸಿಖ್ಖರ ಗಾಯಗಳ ಮೇಲೆ ಉಪ್ಪು ಎರಚಿದ್ದಾರೆಂದ ಅಕಾಲಿಗಳು

‘ಆಪರೇಷನ್ ಬ್ಲೂ ಸ್ಟಾರ್’ ಬಳಿಕ ದೆಹಲಿಯ ಬೀದಿಗಳಲ್ಲಿ ಸಿಖ್ಖರ ಕಗ್ಗೊಲೆ ನಡೆಸುವಂತೆ...

1984ರ ಸಿಖ್‌ ವಿರೋಧಿ ಹಿಂಸೆ ಐತಿಹಾಸಿಕ ದುರಂತ, ನಾಚಿಕೆಗೇಡಿನ ಅಧ್ಯಾಯ: ಸೋನಿಯಾ ಗಾಂಧಿ

ಕಾಂಗ್ರೆಸ್ ಮತ್ತು ಕಾಂಗ್ರೆಸ್ಸೇತರ ಸರ್ಕಾರಗಳ ಅವಧಿಯಲ್ಲಿ ಹಲವು ವಿಚಾರಣಾ ಆಯೋಗಗಳನ್ನು ರಚಿಸಲಾಯಿತು....

ಬರ ಪರಿಹಾರ: ಅರ್ಹ ರೈತರಿಗೆ ಕನಿಷ್ಠ 5,000 ರೂ. ಇನ್‌ಪುಟ್ ಸಬ್ಸಿಡಿ ಖಾತರಿ; ವಿಪತ್ತು ನಿರ್ವಹಣೆ ಆಯುಕ್ತೆ ಸ್ಪಷ್ಟನೆ

2026ರ ಮುಂಗಾರು ಋತುವಿನ ಬರಗಾಲದಿಂದಾದ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ರೈತರಿಗೆ ವಿತರಿಸಲಾಗುತ್ತಿರುವ...

ಕಲಬುರಗಿ | ವಿದ್ಯುತ್ ತಂತಿ ತಗುಲಿ ಕಟ್ಟಡ ಕಾರ್ಮಿಕ ಸ್ಥಳದಲ್ಲೇ ಸಾವು

ಶಹಾಬಾದ್: ಕೈಗಾರಿಕಾ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕನಿಗೆ ವಿದ್ಯುತ್...