ಬಿಜೆಪಿ ವಿರುದ್ಧ ಉತ್ತರದಲ್ಲಿ ನಡೆಯಲಿದೆ ‘ಜನ ಚೇತನ ಯಾತ್ರೆ’

Date:

ಬಿಜೆಪಿಯ ಕೋಮು ರಾಜಕಾರಣದ ವಿರುದ್ಧ ಮತ್ತು ಪ್ರಜಾಪ್ರಭುತ್ವ ಭಾರತಕ್ಕಾಗಿ ಎಲ್ಲರನ್ನು ಬೆಸೆಯಲು ಡಿಸೆಂಬರ್ 6ರಿಂದ ‘ಜನ ಚೇತನ ಯಾತ್ರೆ’ ನಡೆಸಲು ಹಲವಾರು ಸಂಘಟನೆಗಳು ಮುಂದಾಗಿವೆ.

- Advertisement -

ಬಾಬರಿ ಮಸೀದಿ ಧ್ವಂಸಗೊಂಡ ದಿನವಾದ ಡಿಸೆಂಬರ್ 6ರಂದು ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಯಾತ್ರೆ ಆರಂಭವಾಗಲಿದೆ. ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಬಿಹಾರದ ಮೂಲಕ ಹಾದು ಡಿಸೆಂಬರ್ 20ರಂದು ಉತ್ತರ ಪ್ರದೇಶದ ಬನಾರಸ್‌ಗೆ ಯಾತ್ರೆ ತಲುಪಲಿದೆ ಎಂದು ಸಂಘಟನೆಗಳು ತಿಳಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ರಾಜಕೀಯದಲ್ಲಿ ಮಹಿಳೆಯರ ಮೇಲೆ ಗಂಡಾಳ್ವಿಕೆಯ ಸಾಂಸ್ಕೃತಿಕ ರಾಜಕಾರಣ

ರಾಜಕೀಯದ ಮೇಲೆ ಪುರುಷ ಪ್ರಧಾನ ಹಿಡಿತ ಹೇಗೆ ನಿರ್ಮಾಣವಾಯಿತು? ರಾಜಕೀಯವೆಂದರೆ, ಜನರ ಬದುಕಿನ ಮೇಲೆ ನಿರ್ಧಾರ ತೆಗೆದುಕೊಳ್ಳುವ ಸಾರ್ವಜನಿಕ ಕ್ಷೇತ್ರ. ಆದರೆ ಶತಮಾನಗಳ ಕಾಲ ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆ ಅದನ್ನು...

ಕೋಮುವಾದದ ವಿರುದ್ಧ ಪ್ರತಿಜ್ಞೆಯನ್ನು ಕೈಗೊಳ್ಳುವುದು, ಪ್ರಜಾಪ್ರಭುತ್ವ ಭಾರತಕ್ಕಾಗಿ ಪ್ರಗತಿಪರ ಧ್ವನಿಗಳನ್ನು ಬಲಪಡಿಸುವುದು ಹಾಗೂ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ದಾಳಿಯನ್ನು ಎತ್ತಿ ತೋರಿಸುವುದು ಯಾತ್ರೆಯ ಉದ್ದೇಶವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಆರ್‌ಎಸ್‌ಎಸ್-ಬಿಜೆಪಿಯ ಹೆಚ್ಚುತ್ತಿರುವ ಫ್ಯಾಸಿಸ್ಟ್ ಆಕ್ರಮಣ, ದೇಶದ ಸಾಮಾನ್ಯ ಜನರ ಮೇಲಿನ ನವ ಉದಾರವಾದಿ ದಾಳಿಗಳು, ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ದ್ವೇಷ ಮತ್ತು ಹಿಂಸೆಗಳು,
ಜನರ ಮೇಲಿನ ಎಲ್ಲ ರೀತಿಯ ಶೋಷಣೆ, ದಬ್ಬಾಳಿಕೆ ಮತ್ತು ದಮನಗಳ ವಿರುದ್ಧ ದನಿಯನ್ನು ಒಗ್ಗೂಡಿಸುವುದು ಕಾರ್ಯ ಯಾತ್ರೆಯಲ್ಲಿ ನಡೆಯಲಿದೆ ಎಂದು ಯಾತ್ರೆಯ ನೇತಾರರು ತಿಳಿಸಿದ್ದಾರೆ.

ಯಾತ್ರೆಯಲ್ಲಿ ಅಖಿಲ್ ಹಿಂದ್ ಫಾರ್ವರ್ಡ್ ಬ್ಲಾಕ್ (ಕ್ರಾಂತಿಕಾರಿ), ಆಜಾದ್ ಗಾನ ಮೋರ್ಚಾ, ಬಿಎಎಫ್‌ಆರ್‌ಬಿ, ಬಿಹಾರ ನಿರ್ಮಾಣ ಮತ್ತು ಅಸಂಗತಿತ್ ಶ್ರಮಿಕ್ ಯೂನಿಯನ್, ಸಿಬಿಎಸ್‌ಎಸ್ (ಚಾಯ್ ಬಗನ್ ಸಂಗ್ರಾಮ್ ಸಮಿತಿ), ಸಿಸಿಐ, ಸಿಪಿಐ-ಎಂಎಲ್, ಸಿಪಿಐ-ಎಂಎಲ್(ಎನ್‌ಡಿ), ಸಿಪಿಐ-ಎಂಎಲ್, ಜನವಾಡಿ ಲೋಕ ಮಂಚ್, ಮಾರ್ಕ್ಸ್‌ವಾದಿ ಸಮನ್ವಯ ಸಮಿತಿ, ಎಂಕೆಪಿ, ನಾಗರಿಕ್ ಅಧಿಕಾರ ರಕ್ಷಾ ಮಂಚ್ ಸೇರಿದಂತೆ ಹಲವಾರು ಸಂಘಟನೆಗಳು ಭಾಗಿಯಾಗಲಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಂದೋರ್‌ನಲ್ಲಿ 1.36 ಲಕ್ಷ ಮತದಾರರ ಹೆಸರು ಡಿಲೀಟ್‌: ‘ದಾಖಲೆಗಳೇ ಇಲ್ಲ’ ಎಂದ ಅಧಿಕಾರಿಗಳು, ‘ಆರ್‌ಟಿಐ’ ಉತ್ತರದಲ್ಲಿ ಬಹಿರಂಗ

ಮಧ್ಯಪ್ರದೇಶದ ಇಂದೋರ್‌ ಜಿಲ್ಲೆಯಲ್ಲಿ ಒಟ್ಟು 1.36 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು...

SIR ಅಕ್ರಮ: ಲೋಕಸಭೆ, ವಿಧಾನಸಭೆಗಳ ವಿಸರ್ಜನೆಗೆ ಖರ್ಗೆ ಒತ್ತಾಯ; ತಕ್ಷಣ ಹೊಸ ಚುನಾವಣೆಗೆ ಆಗ್ರಹ

ಪ್ರಸ್ತುತ ದೇಶಾದ್ಯಂತ ನಡೆದಿರುವ ಹಾಗೂ ಮುಗಿದಿರುವ ಚುನಾವಣೆಗಳ ಸಿಂಧುತ್ವವನ್ನೇ ಪ್ರಶ್ನಿಸಿರುವ ಕಾಂಗ್ರೆಸ್...

ನಯಾರಾ ಎನರ್ಜಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ; ಪೆಟ್ರೋಲ್ ₹5, ಡೀಸೆಲ್ ₹3 ದುಬಾರಿ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಹಾಗೂ ಸಂಸ್ಕರಿಸಿದ ಇಂಧನ ಉತ್ಪನ್ನಗಳ ಬೆಲೆ...