ಕೇರಳ ಚುನಾವಣೆ | ಎಲ್‌ಡಿಎಫ್ ಪ್ರಣಾಳಿಕೆ ಬಿಡುಗಡೆ: ಮಾಸಿಕ 3,000 ರೂ. ಪಿಂಚಣಿ, ಉದ್ಯೋಗ ಭರವಸೆ

Date:

ಕೇರಳ ವಿಧಾನಸಭೆ ಚುನಾವಣೆಗೂ ಮುನ್ನ ಆಡಳಿತಾರೂಢ ಸಿಪಿಐಎಂ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಗುರುವಾತ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮಾಸಿಕ ಪಿಂಚಣಿಯನ್ನು ಮೂರು ಸಾವಿರ ರೂಪಾಯಿಗೆ ಏರಿಸುವ, ಯುವಕರಿಗೆ ಉದ್ಯೋಗ ನೀಡುವ ಭರವಸೆಯನ್ನು ನೀಡಿದೆ. ರಾಜ್ಯಾದ್ಯಂತ ಜನರ ಜೀವನವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಕಲ್ಯಾಣ ಮತ್ತು ಅಭಿವೃದ್ಧಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

- Advertisement -

140 ಸ್ಥಾನಗಳನ್ನು ಹೊಂದಿರುವ ಕೇರಳ ವಿಧಾನಸಭೆ ಚುನಾವಣೆ ಏಪ್ರಿಲ್ 9ರಂದು ನಡೆಯಲಿದ್ದು ಮೇ 4ರಂದು ಫಲಿತಾಂಶ ಹೊರಬೀಳಲಿದೆ. ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಲ್‌ಡಿಎಫ್‌ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಇದನ್ನು ಓದಿದ್ದೀರಾ? ಕೇರಳ ಚುನಾವಣೆಗೂ ಮುನ್ನ ಪಕ್ಷಗಳ ಸಂಕಟ: ಬಂಡಾಯ- ಪಕ್ಷಾಂತರ- ಉಚ್ಚಾಟನೆ ಸಂಕಷ್ಟ

ರಾಜ್ಯದಲ್ಲಿ ಸಂಪೂರ್ಣ ಬಡತನವನ್ನು ತೊಡೆದುಹಾಕುವ ಬದ್ಧತೆ, ಪಿಂಚಣಿಗಳನ್ನು ತಿಂಗಳಿಗೆ ರೂ. 3,000 ಗೆ ಹೆಚ್ಚಿಸುವುದು ಮತ್ತು ಸ್ಥಳೀಯ ಮಟ್ಟದಲ್ಲಿ ಸರಿಯಾದ ಆರೋಗ್ಯ, ಬೆಂಬಲ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳುವ ಮೊದಲಾದ ಭರವಸೆಗಳನ್ನು ಪ್ರಣಾಳಿಕೆ ಒಳಗೊಂಡಿದೆ.

ಎಡ ಸರ್ಕಾರ ಇತ್ತೀಚೆಗೆ ರಾಜ್ಯದಲ್ಲಿ ಕಡು ಬಡತನವನ್ನು ನಿರ್ಮೂಲನೆ ಮಾಡಲಾಗಿದೆ ಎಂದು ಘೋಷಿಸಿತ್ತು. ಪಿಂಚಣಿಯನ್ನು ರೂ. 1600ರಿಂದ ರೂ. 2000 ಕ್ಕೆ ಹೆಚ್ಚಿಸಿತ್ತು. ಇದೀಗ ತನ್ನ ಪ್ರಸ್ತುತ ಪ್ರಣಾಳಿಕೆಯಲ್ಲಿ, ಐದು ಲಕ್ಷ ಬಡ ಕುಟುಂಬಗಳನ್ನು ಗುರುತಿಸಿ, ಬೆಂಬಲ ನೀಡಿ ಬಡತನದಿಂದ ಮೇಲೇರಲು ಸಹಾಯ ಮಾಡಲು ಯೋಜಿಸಿದೆ ಎಂದು ಹೇಳಿದೆ.

ಪರಿಶಿಷ್ಟ ಜಾತಿಗಳು, ಮೀನುಗಾರರಂತಹ ದುರ್ಬಲ ಗುಂಪುಗಳಿಗೆ ವಿಶೇಷ ಗಮನ ನೀಡಲಾಗುವುದು ಎಂದು ಹೇಳಿದೆ. ಹಾಗೆಯೇ ವೃದ್ಧ ರೋಗಿಗಳಿಗೆ ಉತ್ತಮ ಆರೈಕೆ ನೀಡುವ ಭರವಸೆಯನ್ನೂ ನೀಡಿದೆ. ಹಾಗೆಯೇ ಉದ್ಯೋಗಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಶೇಕಡ 50ಕ್ಕೆ ಹೆಚ್ಚಿಸುವ ಗುರಿಯನ್ನು ಎಲ್‌ಡಿಎಫ್ ಹೊಂದಿದೆ. ಮಹಿಳೆಯರು ಉದ್ಯೋಗ ಪಡೆಯಲು ಸಹಾಯ ಮಾಡಲು ಸುರಕ್ಷಿತ ಪ್ರಯಾಣ, ಮಕ್ಕಳ ಆರೈಕೆ ಮತ್ತು ಕೌಶಲ್ಯ ತರಬೇತಿಯಂತಹ ಬೆಂಬಲ ವ್ಯವಸ್ಥೆಗಳನ್ನು ಬಲಪಡಿಸಲಾಗುವುದು ಎಂದು ತಿಳಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜನರೇ ತೀರ್ಮಾನಿಸುತ್ತಾರೆ, ಇಸಿಐ ಅಲ್ಲ: ಗ್ಯಾನೇಶ್ ಕುಮಾರ್ ವಿರುದ್ಧ ಒಂದಾದ ಠಾಕ್ರೆ ಸಹೋದರರು

ಕೇಂದ್ರ ಚುನಾವಣಾ ಆಯೋಗ (ಇಸಿಐ) ಜಾರಿಗೆ ತಂದಿರುವ ಮತದಾರರ ಪಟ್ಟಿ ವಿಶೇಷ...

SIR | ಸತ್ಯ ಹೇಳದೇ ಸಹಿ ಪಡೆದರು; ಎಫ್‌ಐಆರ್ ದಾಖಲಾಗುತ್ತಿದ್ದಂತೆ ತಮ್ಮ ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ (ಡಿಲಿಷನ್) ಪ್ರಕ್ರಿಯೆ...

ಶರತ್ತುಗಳು ಈಡೇರುವವರೆಗೆ ಹಾರ್ಮುಜ್ ಜಲಸಂಧಿ ತೆರೆಯುವುದಿಲ್ಲ: ಇರಾನ್ ಸ್ಪಷ್ಟನೆ

ತನ್ನ ಎಲ್ಲ ಶರತ್ತುಗಳು ಸಂಪೂರ್ಣವಾಗಿ ಈಡೇರುವವರೆಗೆ ಜಾಗತಿಕ ತೈಲ ಮತ್ತು ಅನಿಲ...

ದೆಹಲಿ ಪ್ರತಿಭಟನೆ ವೇಳೆ ಪೊಲೀಸರಿಂದ ಲೈಂಗಿಕ ಕಿರುಕುಳ: ಮೂವರು ಪತ್ರಕರ್ತೆಯರ ಆರೋಪ

ದೇಶದ ರಾಜಧಾನಿ ದೆಹಲಿಯ ಜಂತರ್ ಮಂತರ್ ಬಳಿ ನಡೆದ ಪ್ರತಿಭಟನೆಯ ವರದಿಗಾರಿಕೆಯಲ್ಲಿ...