ಶೇ.85ರಷ್ಟು ಕಂಪನಿಗಳಲ್ಲಿ AI ಪಾರುಪತ್ಯ; ಸ್ಕಿಲ್‌ ಇಲ್ಲದಿದ್ದರೆ ನಿಮ್ಮ ಕೆಲಸಕ್ಕೂ ಕುತ್ತು!

Date:

ಕಂಪನಿಗಳ ದಿಢೀರ್ ಉದ್ಯೋಗ ಕಡಿತ ಮತ್ತು ರಾಜ್ಯ ಸರ್ಕಾರದ ಸಮೀಕ್ಷಾ ವರದಿಗಳು ಕಾಲಕ್ಕೆ ತಕ್ಕಂತೆ ನಮ್ಮಲ್ಲಿ ಕೌಶಲ್ಯಗಳಿಲ್ಲದಿದ್ದರೆ, ಸರ್ವೈವ್‌ ಆಗುವುದು ಸುಲಭವಲ್ಲ ಎಂದಿವೆ. ಉದ್ಯೋಗಿಗಳು ಕೇವಲ ಯಂತ್ರಗಳಂತೆ ಕೆಲಸ ಮಾಡುವುದನ್ನು ಬಿಟ್ಟು, ಯಂತ್ರಗಳನ್ನು ನಿರ್ವಹಿಸುವ ಮತ್ತು ಸೃಜನಾತ್ಮಕವಾಗಿ ಆಲೋಚಿಸುವ ಕೌಶಲ್ಯ ಬೆಳೆಸಿಕೊಂಡರೆ ಮಾತ್ರ ಈ AI ಯುಗದಲ್ಲಿ ಯಶಸ್ವಿಯಾಗಲು ಸಾಧ್ಯ.

- Advertisement -

ತಂತ್ರಜ್ಞಾನ ದೈತ್ಯ ಒರಾಕಲ್ ಕಾರ್ಪೊರೇಷನ್ ಜಾಗತಿಕವಾಗಿ ತನ್ನ ಒಟ್ಟು ಉದ್ಯೋಗಿಗಳ ಪೈಕಿ ಸುಮಾರು ಶೇ.19ರಷ್ಟು ಅಂದರೆ 30,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಬೃಹತ್ ಉದ್ಯೋಗ ಕಡಿತದ ಬಿಸಿ ಭಾರತದ ಐಟಿ ಉದ್ಯಮವನ್ನೂ ತಟ್ಟಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಕರ್ನಾಟಕ ಸರ್ಕಾರ ಕೂಡ ಅಧ್ಯಯನ ವರದಿಯೊಂದು ಬಿಡುಗಡೆ ಮಾಡಿದೆ. ರಾಜ್ಯದ ಸುಮಾರು 2,000 ಪ್ರಮುಖ ಕಂಪನಿಗಳ ಮುಖ್ಯಸ್ಥರನ್ನು ಸಂದರ್ಶಿಸಿ ಸಿದ್ಧಪಡಿಸಲಾದ ಈ ವರದಿ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಶೇಕಡಾ 85ರಷ್ಟು ಕಂಪನಿಗಳು ತಮ್ಮ ದೈನಂದಿನ ಮತ್ತು ಪುನರಾವರ್ತಿತ ಕೆಲಸಗಳನ್ನು ಸಂಪೂರ್ಣವಾಗಿ AI ಮೂಲಕವೇ ನಿರ್ವಹಿಸುವ ಗುರಿ ಹೊಂದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ನಿನ್ನೆ (ಏ.1) ಬೆಳಿಗ್ಗೆ 6 ಗಂಟೆಗೆ ಕಂಪನಿಯಿಂದ ಬಂದ ಒಂದು ಇ-ಮೇಲ್ ಸೇಲ್ಸ್, ಹೆಚ್‌ಆರ್, ಎಂಜಿನಿಯರಿಂಗ್ ಮತ್ತು ಡೆವಲಪರ್ ವಿಭಾಗದ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತೊಗೆದಿದೆ. 20 ವರ್ಷಗಳಿಂದ ಕಂಪನಿಗಾಗಿ ದುಡಿಯುತ್ತಿದ್ದವರನ್ನೂ ಯಾವ ಸೂಚನೆಯನ್ನೂ ನೀಡದೇ ಏಕಾಏಕಿ ಕೆಲಸದಿಂದ ತೆಗೆದುಹಾಕಿದೆ.

ಭಾರತದಲ್ಲಿ ಒರಾಕಲ್‌ ಒಟ್ಟು 30,000 ಉದ್ಯೋಗಿಗಳನ್ನು ಹೊಂದಿದೆ. ಒಟ್ಟು ಉದ್ಯೋಗ ಕಡಿತದಲ್ಲಿ ಭಾರತವೊಂದರಲ್ಲೇ ಸುಮಾರು 12,000 ರಿಂದ 15,000 ಜನ ಕೆಲಸ ಕಳೆದುಕೊಂಡಿದ್ದಾರೆ. ವಿಶೇಷವಾಗಿ ʼಒರಾಕಲ್ ಹೆಲ್ತ್ʼ, ʼAI ಸೆಕ್ಯುರಿಟಿ ಪ್ರೋಗ್ರಾಂʼ ಮತ್ತು ‘ʼಒರಾಕಲ್ ಹೆಲ್ತ್ ಫೌಂಡೇಶನ್’ʼ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದವರಿಗೆ ಹೊರನಡೆಯಲು ಸೂಚಿಸಲಾಗಿದೆ. ಏಪ್ರಿಲ್‌ ಅಂತ್ಯದ ಹೊತ್ತಿಗೆ ಮತ್ತಷ್ಟು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಕೆಲಸ ಕಳೆದುಕೊಂಡವರಿಗೆ ಕಂಪನಿಯು ನಾಲ್ಕು ವಾರಗಳ ಮೂಲ ಸಂಬಳ ಮತ್ತು ಅವರು ಸಲ್ಲಿಸಿದ ಪ್ರತಿ ವರ್ಷದ ಸೇವೆಗೆ ಹೆಚ್ಚುವರಿ ಒಂದು ವಾರದ ಸಂಬಳವನ್ನು ʼಸೆವೆರೆನ್ಸ್ ಪೇʼ (ಪರಿಹಾರ ಧನ) ಆಗಿ ನೀಡುವ ನಿರೀಕ್ಷೆಯಿದೆ.

image 2026 04 02T123922.939

ಭಾರತದಲ್ಲಿನ ಉದ್ಯೋಗಿಗಳು ಈ ಕಡಿತವನ್ನು ʼಧಿಡೀರ್ ಮತ್ತು ಆಘಾತಕಾರಿʼ ಎಂದು ಉದ್ಘರಿಸುತ್ತಿದ್ದಾರೆ. ಸತತವಾಗಿ ಹೊಸ ಕೌಶಲ್ಯಗಳನ್ನು ಕಲಿಯುತ್ತಿದ್ದರೂ (Reskilling) ತಮ್ಮ ಕೆಲಸಗಳು ಅನಗತ್ಯ ಎಂದು ಪರಿಗಣಿಸಲಾಗಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರೆ, ಇನ್ನು ಕೆಲವರನ್ನು ಕಂಪನಿಯ AI ಆದ್ಯತೆಗಳಿಗೆ ಅನುಗುಣವಾಗಿ ಉಳಿಸಿಕೊಳ್ಳಲಾಗಿದೆ ಎನ್ನುತ್ತಿದ್ದಾರೆ.

ತಂತ್ರಜ್ಞಾನ ವಿಶ್ಲೇಷಕರ ಪ್ರಕಾರ, ಈ ಕ್ರಮವು ಸಾಫ್ಟ್‌ವೇರ್ ಉತ್ಪನ್ನ ಉದ್ಯಮದಲ್ಲಿ, ವಿಶೇಷವಾಗಿ SaaS (ಸಾಫ್ಟ್‌ವೇರ್ ಆಸ್ ಎ ಸರ್ವಿಸ್) ಕಂಪನಿಗಳಲ್ಲಿ ಆಗುತ್ತಿರುವ ಬದಲಾವಣೆಯ ಸೂಚನೆಯಾಗಿದೆ. ಕಂಪನಿಗಳು ಈಗ ಉದ್ಯೋಗಿಗಳ ವೆಚ್ಚವನ್ನು ಕಡಿತಗೊಳಿಸಿ, ಆ ಹಣವನ್ನು AI ಆಧಾರಿತ ಬಂಡವಾಳ ಹೂಡಿಕೆಗೆ (Capex) ವರ್ಗಾಯಿಸುತ್ತಿವೆ. ಕೋವಿಡ್ ಅವಧಿಯಲ್ಲಿ ನೇಮಕ ಮಾಡಿಕೊಂಡಿದ್ದ ಉದ್ಯೋಗಿಗಳನ್ನು ಕಡಿಮೆ ಮಾಡಿ, ಸಂಸ್ಥೆಯನ್ನು ಹೆಚ್ಚು ಚುರುಕುಗೊಳಿಸುವ ಪ್ರಯತ್ನ ಇದಾಗಿದೆ. ಎಲಾನ್ ಮಸ್ಕ್ ಅವರ ʼXʼ ಕಂಪನಿಯು ಅತಿ ಕಡಿಮೆ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವಂತೆ ಒರಾಕಲ್ ಕೂಡ ಅಂತದ್ದೇ ʼಲೀನ್ ವರ್ಕ್‌ಫೋರ್ಸ್ʼ ಮಾದರಿಯನ್ನು ಅನುಸರಿಸುತ್ತಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

OpenAI ಜೊತೆಗಿನ ಬೃಹತ್ ಒಪ್ಪಂದದ ಹಿನ್ನೆಲೆಯಲ್ಲಿ ಒರಾಕಲ್ ತನ್ನ ಡೇಟಾ ಸೆಂಟರ್ ಸಾಮರ್ಥ್ಯವನ್ನೂ ಹೆಚ್ಚಿಸಬೇಕಿದೆ. ಕಳೆದ ಸೆಪ್ಟೆಂಬರ್‌ನಲ್ಲಿ OpenAI ಕಂಪನಿಯು AI ಮಾಡೆಲ್‌ಗಳನ್ನು ನಿರ್ಮಿಸಲು ಒರಾಕಲ್‌ನಿಂದ 300 ಬಿಲಿಯನ್ ಡಾಲರ್ ಮೌಲ್ಯದ ಕಂಪ್ಯೂಟಿಂಗ್ ಪವರ್ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಈ ಬದ್ಧತೆಯನ್ನು ಪೂರೈಸಲು ವೆಚ್ಚ ಕಡಿತಗೊಳಿಸಿ ಹಣವನ್ನು ಡೇಟಾ ಸೆಂಟರ್‌ಗಳ ಕಡೆಗೆ ತಿರುಗಿಸುವುದು ಕಂಪನಿಯ ಉದ್ದೇಶವಾಗಿದೆ.

“ಇ-ಮೇಲ್ ಬಂದಾಗ ಇದೊಂದು ಏಪ್ರಿಲ್ ಫೂಲ್ ಜೋಕ್ ಎಂದುಕೊಂಡಿದ್ದೆ, ಆದರೆ ಸಿಸ್ಟಮ್ ಲಾಗಿನ್ ಆಗದಿದ್ದಾಗ ಸತ್ಯ ತಿಳಿಯಿತು” ಎಂದು ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಡೆವಲಪರ್ ಒಬ್ಬರು ಸಾಮಾಜಿಕ ಮಾಧ್ಯಮದಲ್ಲಿ ನೋವು ಹಂಚಿಕೊಂಡಿರುವುದು ವರದಿಯಾಗಿದೆ. ಪ್ರಸ್ತುತ ಪ್ರಮುಖ SaaS ಕಂಪನಿಗಳಲ್ಲೇ ಒರಾಕಲ್ ಅತಿ ಹೆಚ್ಚು ನಿವ್ವಳ ಸಾಲ (82 ಬಿಲಿಯನ್ ಡಾಲರ್) ಹೊಂದಿದೆ ಎಂಬುದು ಗಮನಾರ್ಹ.

ಇನ್ನು ಕರ್ನಾಟಕ ಸರ್ಕಾರದ ಅಧ್ಯಯನದ ವರದಿ ಮುಂದಿನ ದಿನಗಳಲ್ಲಿ ಐಟಿ ಕ್ಷೇತ್ರದಲ್ಲಿ AI ಹೇಗೆ ತನ್ನ ಪಾರುಪತ್ಯ ಸಾಧಿಸಲು ಅಣಿಯಾಗಿದೆ ಎಂಬುದನ್ನು ಬಹಿರಂಗಪಡಿಸಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಈಗಾಗಲೇ ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಗ್ರಾಹಕ ಸೇವಾ (Customer Support) ವಿಭಾಗಗಳ ಉದ್ಯೋಗಗಳ ಮೇಲೆ ಪ್ರಭಾವ ಬೀರಿದೆ. ಮುಂದಿನ ಐದು ವರ್ಷಗಳಲ್ಲಿ ಶೇ.85ರಷ್ಟು ಐಟಿ ಕಂಪನಿಗಳ ದಿನನಿತ್ಯದ ಎಲ್ಲಾ ಕೆಲಸ ಕಾರ್ಯಗಳು (Routine operations) ಸಂಪೂರ್ಣವಾಗಿ ಸ್ವಯಂಚಾಲಿತಗೊಳ್ಳಲಿವೆ ಎಂದು ನಿರೀಕ್ಷಿಸಲಾಗುತ್ತಿದೆ. ಕರ್ನಾಟಕದ ಪ್ರಮುಖ ಕಂಪನಿಗಳ ಸಿ-ಸೂಟ್ (C-suite) ಅಧಿಕಾರಿಗಳು ಮತ್ತು ಡಿಜಿಟಲ್ ನಾಯಕರನ್ನು ಒಳಗೊಂಡಂತೆ ಸುಮಾರು 2,000 ಜನರು ಈ ʼAI ಸಿದ್ಧತೆ ಮತ್ತು ಪ್ರಭಾವದ ಸಮೀಕ್ಷೆʼಯಲ್ಲಿ (AI Readiness and Impact Survey) ಭಾಗವಹಿಸಿದ್ದರು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

image 2026 04 02T124426.022

ಉದ್ಯೋಗ ಕಡಿತಗಳು ನಡೆಯುತ್ತಿದ್ದರೂ, ಶೇ.75ರಷ್ಟು ಕಂಪನಿಗಳು ಮುಂದಿನ ದಿನಗಳಲ್ಲಿ ಹೊಸ ಉದ್ಯೋಗಗಳು ಸೃಷ್ಟಿಸಲಿವೆಯಂತೆ. ಶೇ.70ಕ್ಕೂ ಹೆಚ್ಚು ಕಂಪನಿಗಳು AI ಹಿನ್ನೆಲೆಯಲ್ಲಿ ಹೊಸ ನೇಮಕಾತಿ ಯೋಜನೆಗಳನ್ನು ಸಿದ್ಧಪಡಿಸುತ್ತಿವೆ. ಈ ಹೊಸ ಉದ್ಯೋಗಗಳು ಉದಯೋನ್ಮುಖ ತಂತ್ರಜ್ಞಾನಗಳ (Emerging technologies) ಕ್ಷೇತ್ರದಲ್ಲಿ ಸೃಷ್ಟಿಯಾಗಲಿವೆ. ಶೇ.95ರಷ್ಟು ಮಂದಿ ಉದ್ಯೋಗಿಗಳಿಗೆ ಮರು ಕೌಶಲ್ಯ (Reskilling) ಮತ್ತು ಕೌಶಲ್ಯದ ಉನ್ನತೀಕರಣದ (Upskilling) ಅಗತ್ಯವಿದೆ ಎಂದು ಸಮೀಕ್ಷೆ ಒತ್ತಿ ಹೇಳಿದೆ.

ಒರಾಕಲ್ ಕಂಪನಿಯ ಉದ್ಯೋಗ ಕಡಿತದ ಕುರಿತು ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್‌ ಖರ್ಗೆ, “ಅಲ್ಲಿ ಕೆಲಸ ಕಳೆದುಕೊಂಡವರು ಮಧ್ಯಮ ಹಂತದ ಅಥವಾ ಅದಕ್ಕಿಂತ ಕೆಳಹಂತದ ವ್ಯವಸ್ಥಾಪಕರು. ಯಾರಿಗೆ ಕೌಶಲ್ಯದ ಕೊರತೆ ಇದೆಯೋ ಅಂತಹವರ ಮೇಲೆ ಖಂಡಿತಾ ಪರಿಣಾಮ ಬೀರಲಿದೆ” ಎಂದು ಹೇಳಿದ್ದಾರೆ.

ರಾಜ್ಯದ ತಾಂತ್ರಿಕ ಕಾರ್ಯಪಡೆಗೆ ಮರು ಕೌಶಲ್ಯ ನೀಡಲು 2024ರ ಸೆಪ್ಟೆಂಬರ್‌ನಲ್ಲಿ 300 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಲಾದ ʼನಿಪುಣ ಕರ್ನಾಟಕʼ (Nipuna Karnataka) ಯೋಜನೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ. ಈ ಯೋಜನೆಯಡಿ ಉದ್ಯಮಕ್ಕೆ ಯಾವ ರೀತಿಯ ಕೌಶಲ್ಯ ಬೇಕಿದೆಯೋ ಅಂತಹ ತರಬೇತಿಯನ್ನು ನೀಡಲಾಗುತ್ತದೆ. ಉದಾಹರಣೆಗೆ, ಸಿಸ್ಕೋ (Cisco) ಕಂಪನಿಗೆ ಡಿಜಿಟಲ್ ಫೋರೆನ್ಸಿಕ್ಸ್‌ನಲ್ಲಿ 150 ಎಂಜಿನಿಯರ್‌ಗಳ ಅಗತ್ಯವಿದೆ. ಆ ಎಂಜಿನಿಯರ್‌ಗಳಿಗೆ ಬೇಕಾದ ಕೌಶಲ್ಯ ತರಬೇತಿ ನೀಡುವುದು ಯೋಜನೆಯ ಮುಖ್ಯ ಉದ್ದೇಶ.

ಕಳೆದ ತಿಂಗಳು ರಾಜ್ಯ ಸರ್ಕಾರ ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಅವರ ನೇತೃತ್ವದಲ್ಲಿ 13 ಸದಸ್ಯರ ʼರೆಸ್ಪಾನ್ಸಿಬಲ್ AIʼ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಉದ್ಯೋಗಗಳ ಮೇಲೆ AI ಪ್ರಭಾವವನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಅಧ್ಯಯನ ಮಾಡುತ್ತಿದೆ. ಇದರೊಂದಿಗೆ ಸರ್ಕಾರಿ ನೌಕರರಿಗೆ AI ಪರಿಚಯಿಸುವುದು, ಶಿಕ್ಷಕರಿಗೆ ತರಬೇತಿ ನೀಡುವುದು ಮತ್ತು ಮೈಕ್ರೋ ಲರ್ನಿಂಗ್ ಮಾಡ್ಯೂಲ್‌ಗಳನ್ನು ಅಭಿವೃದ್ಧಿಪಡಿಸುವ ಕೆಲಸಗಳೂ ನಡೆಯುತ್ತಿವೆ.

ಇದನ್ನೂ ಓದಿ: ಭಾರತದ AI ಕನಸಿನ ಕಾಲಿಗೆ ಕಚ್ಚಿದ ಚೀನಾದ ʼರೋಬೋ ನಾಯಿʼ

ಒರಾಕಲ್‌ನಂತಹ ದೈತ್ಯ ಸಾಫ್ಟ್‌ವೇರ್ ಕಂಪನಿಗಳ ದಿಢೀರ್ ಉದ್ಯೋಗ ಕಡಿತ ಮತ್ತು ಕರ್ನಾಟಕ ಸರ್ಕಾರದ ಸಮೀಕ್ಷಾ ವರದಿಗಳು ಕಾಲಕ್ಕೆ ತಕ್ಕಂತೆ ನಮ್ಮಲ್ಲಿ ಕೌಶಲ್ಯಗಳಿಲ್ಲದಿದ್ದರೆ, ಸರ್ವೈವ್‌ ಆಗುವುದು ಸುಲಭವಲ್ಲ ಎಂದಿವೆ. ಕೃತಕ ಬುದ್ಧಿಮತ್ತೆಯ (AI) ಅಬ್ಬರ ಉದ್ಯಮಗಳ ಕಾರ್ಯವೈಖರಿಯನ್ನೇ ಬದಲಿಸುವ ಶಕ್ತಿಯಾಗಿ ಹೊರಹೊಮ್ಮಿದೆ. ಕಂಪನಿಗಳು ಇಂದು ಮಾನವ ಸಂಪನ್ಮೂಲಕ್ಕಿಂತ ಹೆಚ್ಚಾಗಿ ತಂತ್ರಜ್ಞಾನದ ಮೂಲಸೌಕರ್ಯಗಳಿಗೆ (Capex) ಆದ್ಯತೆ ನೀಡುತ್ತಿರುವುದು, ಮುಂಬರುವ ದಿನಗಳಲ್ಲಿ ʼಬುದ್ಧಿವಂತ ಯಂತ್ರʼಗಳೇ ದೈನಂದಿನ ಕೆಲಸಗಳನ್ನು ನಿರ್ವಹಿಸಲಿವೆ ಎಂಬುದಕ್ಕೆ ಸಾಕ್ಷಿ. ಉದ್ಯೋಗಿಗಳು ಕೇವಲ ಯಂತ್ರಗಳಂತೆ ಕೆಲಸ ಮಾಡುವುದನ್ನು ಬಿಟ್ಟು, ಯಂತ್ರಗಳನ್ನು ನಿರ್ವಹಿಸುವ ಮತ್ತು ಸೃಜನಾತ್ಮಕವಾಗಿ ಆಲೋಚಿಸುವ ಕೌಶಲ್ಯ ಬೆಳೆಸಿಕೊಂಡರೆ ಮಾತ್ರ ಈ AI ಯುಗದಲ್ಲಿ ಯಶಸ್ವಿಯಾಗಲು ಸಾಧ್ಯ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...