ಕೇರಳ ವಿಧಾನಸಭೆ ಚುನಾವಣೆ: ಸೋಲಿನ ಸುಳಿಗೆ ಸಿಲುಕಿದ ಪ್ರಮುಖ ನಾಯಕರುಗಳು

Date:

ಕೇರಳ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು ಈಗಾಗಲೇ ಯುಡಿಎಫ್ ಸರ್ಕಾರ ರಚನೆಯ ಸಿದ್ಧತೆ ಶುರು ಮಾಡಿದೆ. ಎಲ್‌ಡಿಎಫ್ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆಯಾಗಿದೆ. ಯುಡಿಎಫ್ ಸ್ಪಷ್ಟ ಬಹುಮತದತ್ತ ಮುನ್ನುಗುತ್ತಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂಪುಟದ ಹಲವು ಪ್ರಭಾವಿ ಸಚಿವರು, ಇತರೆ ನಾಯಕರುಗಳು ಸೋಲಿನ ಸುಳಿಗೆ ಸಿಲುಕಿದ್ದಾರೆ.

- Advertisement -

ಯುಡಿಎಫ್ ಅಧಿಕಾರ ಪಡೆಯುವತ್ತ ಹೆಜ್ಜೆ ಹಾಕಿದ್ದರೂ ಯುಡಿಎಫ್‌ನ ಅನೇಕ ಪ್ರಭಾವಿ ನಾಯಕರುಗಳು ಸೋಲುಂಡಿದ್ದಾರೆ. ಇನ್ನೊಂದೆಡೆ ಕನಿಷ್ಠ 10 ವಿಧಾನಸಭೆ ಕ್ಷೇತ್ರ ಗೆದ್ದೆ ಗೆಲ್ಲುತ್ತೇವೆ ಎಂದು ಹೇಳಿಕೊಂಡ ಬಿಜೆಪಿ ಮೂರು ಸ್ಥಾನಗಳನ್ನಷ್ಟೇ ಗೆದ್ದಿದೆ. ಆದರೆ ಕೇರಳದಲ್ಲಿ ಖಾತೆ ತೆರೆಯುವಲ್ಲಿ ಸಫಲವಾಗಿದೆ. ಬಿಜೆಪಿಯಲ್ಲಿಯೂ ಪ್ರಮುಖ ನಾಯಕರುಗಳು ಪರಾಭವಗೊಂಡಿದ್ದಾರೆ. ಈ ಚುನಾವಣೆಯಲ್ಲಿ ಪಿಣರಾಯಿ ವಿಜಯನ್ ಸಂಪುಟದ 21 ಸಚಿವರ ಪೈಕಿ 13 ಸಚಿವರು ಸೋಲನ್ನಪ್ಪಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಇದನ್ನು ಓದಿದ್ದೀರಾ? ಕೇರಳದಲ್ಲಿ ಎಡಕೋಟೆ ಕುಸಿತ: ಐದು ದಶಕಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಕಮ್ಯುನಿಸ್ಟ್ ಸರ್ಕಾರವಿಲ್ಲದ ಭಾರತ!

ಸೋಲುಂಡ ಸಚಿವರುಗಳು

  1. ವೀಣಾ ಜಾರ್ಜ್ (ಆರೋಗ್ಯ ಸಚಿವರು): ಅರನ್ಮುಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ವೀಣಾ ಜಾರ್ಜ್ ಕಾಂಗ್ರೆಸ್‌ನ ಅಬಿನ್ ವರ್ಕಿ ಕೊಡಯಾಟ್ಟು ಎದುರಲ್ಲಿ ಸೋಲನುಭವಿಸಿದ್ದಾರೆ.
  2. ಓ.ಆರ್. ಕೇಲು (ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ): ಮಾನಂತವಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಉಷಾ ವಿಜಯನ್ ವಿರುದ್ಧ ಸುಮಾರು 10,000ಕ್ಕೂ ಅಧಿಕ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.
  3. ಆರ್‌. ಬಿಂದು (ಉನ್ನತ ಶಿಕ್ಷಣ ಸಚಿವರು): ಇರಿಂಜಲಕುಡ ಕ್ಷೇತ್ರದಲ್ಲಿ ಕೇರಳ ಕಾಂಗ್ರೆಸ್‌ನ ಥಾಮಸ್ ಉನ್ನಿಯಾದನ್ ಎದುರು 10,212 ಮತಗಳ ಅಂತರದಲ್ಲಿ ಸೋತಿದ್ದಾರೆ.
  4. ವಿ.ಎನ್. ವಾಸವನ್ (ಸಹಕಾರ ಸಚಿವರು): ಏಟ್ಟುಮನೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ನಟ್ಟಕೋಮ್ ಸುರೇಶ್ ಎದುರು 19,752 ಮತಗಳಿಂದ ಪರಾಭವಗೊಂಡಿದ್ದಾರೆ.
  5. ರೋಶಿ ಆಗಸ್ಟಿನ್ (ಜಲಸಂಪನ್ಮೂಲ ಸಚಿವರು): ಇಡುಕ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಯ್ ಕೆ. ಪೌಲೋಸ್ ವಿರುದ್ಧ (23,822 ಮತಗಳ ಅಂತರ) ಸೋಲು ಕಂಡಿದ್ದಾರೆ.
  6. ಪಿ ರಾಜೀವ್ (ಕೈಗಾರಿಕೆ ಸಚಿವ): ಕಲಮಸ್ಸೆರಿ ಕ್ಷೇತ್ರದಲ್ಲಿ ವಿ ಇ ಅಬ್ದುಲ್ ಗಫೂರ್ ವಿರುದ್ಧ 16,312 ಮತಗಳ ಅಂತರದಲ್ಲಿ ಸೋಲುಂಡಿದ್ದಾರೆ.
  7. ಎಂ ಬಿ ರಾಜೇಶ್ (ಸ್ಥಳೀಯ ಸ್ವ-ಸರ್ಕಾರ ಸಚಿವರು): ತ್ರಿತಾಳದಲ್ಲಿ ವಿಟಿ ಬಲರಾಮ್ ಅವರ ಎದುರು 8,385 ಮತಗಳಿಂದ ಸೋಲು.
  8. ಎ ಕೆ ಸಸೀಂದ್ರನ್ (ಅರಣ್ಯ ಸಚಿವ): ಎಲತ್ತೂರ್ ಕ್ಷೇತ್ರದಲ್ಲಿ ವಿದ್ಯಾ ಬಾಲಕೃಷ್ಣನ್ ಎದುರು 12,162 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ.
  9. ಅಹಮದ್ ದೇವರಕೋವಿಲ್ (ಬಂದರು ಸಚಿವ): ಕೋಝಿಕ್ಕೋಡ್ ದಕ್ಷಿಣದಲ್ಲಿ ಫೈಸಲ್ ಬಾಬು ವಿರುದ್ಧ 10,795 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ.
  10. ಕದನ್ನಪಳ್ಳಿ ರಾಮಚಂದ್ರನ್ (ಪುರಾತತ್ವ ಮತ್ತು ಬಂದರು ಸಚಿವ): ಟಿ.ಒ. ಮೋಹನನ್ ವಿರುದ್ಧ ಕಣ್ಣೂರಿನಲ್ಲಿ 18,551 ಮತಗಳ ಅಂತರದಲ್ಲಿ ಸೋತಿದ್ದಾರೆ.
  11. ವಿ. ಶಿವನ್ ಕುಟ್ಟಿ (ಶಿಕ್ಷಣ ಸಚಿವ): ಸರ್ಕಾರದ ಪ್ರಭಾವಿ ಸಚಿವ ವಿ. ಶಿವನ್ ಕುಟ್ಟಿ ಅವರು ಅಚ್ಚರಿಯ ಸೋಲು ಕಂಡಿದ್ದಾರೆ. ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ವಿರುದ್ಧ ಪರಾಭವಗೊಂಡಿದ್ದಾರೆ.
  12. ಕೆ. ಬಿ. ಗಣೇಶ್ ಕುಮಾರ್ (ಸಾರಿಗೆ ಸಚಿವ): ಪಥನಾಪುರಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೇರಳ ಕಾಂಗ್ರೆಸ್ (ಬಿ) ನಾಯಕ ಮತ್ತು ಸಾರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿಕುಮಾರ್ ಚಮಕ್ಕಲ ಅವರ ವಿರುದ್ಧ ಪರಾಜಿತರಾಗಿದ್ದಾರೆ.
  13. ವಿ. ಅಬ್ದುರಹಿಮಾನ್ (ಕ್ರೀಡಾ ಸಚಿವ): IUML (ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್) ಅಭ್ಯರ್ಥಿ ಕುರುಕ್ಕೋಳಿ ಮೊಯಿದ್ದೀನ್ ಎದುರು ಕೇರಳದ ಕ್ರೀಡಾ ಸಚಿವರಾಗಿದ್ದ ವಿ. ಅಬ್ದುರಹಿಮಾನ್ ಸೋಲು ಕಂಡಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...