ಆರ್‌ಜಿ ಕರ್ ಅತ್ಯಾಚಾರ ಸಂತ್ರಸ್ತೆ ತಾಯಿಗೆ ಟಿಕೆಟ್: ಹಾಥರಸ್ ಯುವತಿ, ಅಂಕಿತಾ ಪೋಷಕರಿಗೆ ಬಿಜೆಪಿ ಟಿಕೆಟ್ ಘೋಷಿಸಲಿ

Date:

ವಾಸ್ತವದಲ್ಲಿ ಆರ್‌ಜಿ ಕರ್ ಪ್ರಕರಣದಲ್ಲಿ ಬಿಜೆಪಿ ತೋರುತ್ತಿರುವ ಆಸಕ್ತಿಯು ಮಾನವೀಯತೆಯಲ್ಲ, ಪಶ್ಚಿಮ ಬಂಗಾಳದಲ್ಲಿ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳುವ ಕಾರ್ಯತಂತ್ರದ ಭಾಗ ಎಂಬುದು ಸ್ಪಷ್ಟ.

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ತಾಯಿ ರತ್ನಾ ದೇಬ್ನಾಥ್ ಅವರಿಗೆ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿರುವುದು ಈ ಹಿಂದೆಯೇ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿರುವ ವಿಷಯ. ಸದ್ಯ ದೇಬ್ನಾಥ್ ಗೆಲುವಿನ ಹಾದಿ ಹಿಡಿದಿದ್ದಾರೆ. ಈ ನಡುವೆ ನಮ್ಮ ದೃಷ್ಟಿ ಕೊಂಚ ಹಾಥರಸ್, ಅಂಕಿತಾ ಭಂಡಾರಿ ಮೊದಲಾದ ಅತ್ಯಾಚಾರ ಪ್ರಕರಣದೆಡೆ ಹಾಯುತ್ತಿದೆ. ಹಾಥರಸ್ ಯುವತಿ, ಅಂಕಿತಾ ಪೋಷಕರಿಗೂ ಬಿಜೆಪಿ ಟಿಕೆಟ್ ಘೋಷಿಸಬೇಕೆಲ್ಲವೇ?

- Advertisement -

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 2024ರ ಆಗಸ್ಟ್ 9ರಂದು ತರಬೇತಿ ನಿರತ ಮಹಿಳಾ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ನಡೆದಿದೆ. ಈ ಪ್ರಕರಣವು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಕೋಲ್ಕತ್ತಾ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾಯ್ ಎಂಬ ಸಿವಿಕ್ ವಾಲಂಟಿಯರ್‌ನನ್ನು ಬಂಧಿಸಿದ್ದರು. ಅದಾದ ಬಳಿಕ ಕೋಲ್ಕತ್ತಾ ಹೈಕೋರ್ಟ್ ನಿರ್ದೇಶನದಂತೆ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ. ಜನವರಿ 20ರಂದು ವಿಚಾರಣಾ ನ್ಯಾಯಾಲಯವು ಆರೋಪಿ ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಆದರೆ, ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಕೋರಿ ಪಶ್ಚಿಮ ಬಂಗಾಳ ಸರ್ಕಾರವು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಸದ್ಯ ಈ ವಿಚಾರಣೆ ನಡೆಯುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳದ ಸುಂದರಬನಗಳ ‘ವ್ಯಾಘ್ರ ವಿಧವೆ’ಯರ ನೆರಳು ಚುನಾವಣೆ ಮೇಲೆ ಚಾಚಿತೇ?

ಇವೆಲ್ಲವುದರ ನಡುವೆ ಸಂತ್ರಸ್ತೆ ವೈದ್ಯೆಯ ತಾಯಿ ರತ್ನ ಅವರಿಗೆ ಬಿಜೆಪಿ ಟಿಕೆಟ್ ನೀಡಿತು. ಪಾಣಿಹಟಿ ಕ್ಷೇತ್ರದಿಂದ ರತ್ನ ಸ್ಪರ್ಧಿಸಿದರು. ಸದ್ಯ ಗೆಲುವಿನ ಹಾದಿ ಹಿಡಿದಿದ್ದಾರೆ. ಈ ವೇಳೆ ಇತರೆ ಅತ್ಯಾಚಾರ, ಕೊಲೆ ಸಂತ್ರಸ್ತರ ತಾಯಿಯಂದಿರಿಗೂ ಬಿಜೆಪಿ ಟಿಕೆಟ್ ನೀಡಬಹುದಿತ್ತಲ್ಲವೇ? ಆರ್‌ಜಿ ಕರ್ ಪ್ರಕರಣದ ಸಂತ್ರಸ್ತೆ ತಾಯಿಗೆ ಮಾತ್ರ ಟಿಕೆಟ್ ನೀಡಿದ್ದು ಯಾಕೆ ಎಂಬ ಪ್ರಶ್ನೆಗಳಿವೆ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ವಿರುದ್ಧ ಮಹಿಳಾ ಸುರಕ್ಷತೆ ಎಂಬುದು ಪ್ರಬಲ ಅಸ್ತ್ರವನ್ನು ಇಟ್ಟುಕೊಂಡೇ ಬಿಜೆಪಿ ಆರ್‌ಜಿ ಕರ್ ಅತ್ಯಾಚಾರ ಸಂತ್ರಸ್ತೆ ತಾಯಿಗೆ ಟಿಕೆಟ್ ನೀಡಿರುವುದು. ಸಂತ್ರಸ್ತೆಯ ಕುಟುಂಬಕ್ಕೆ ಟಿಕೆಟ್ ನೀಡಿ ಬಿಜೆಪಿ ಆಕ್ರೋಶದ ಕೇಂದ್ರಬಿಂದು ಆಗಲು ಮತ್ತು ಮತವನ್ನು ತನ್ನತ್ತ ಸೆಳೆಯುವ ಎಲ್ಲ ಪ್ರಯತ್ನ ಮಾಡಿದೆ. ಟಿಕೆಟ್ ನೀಡುವುದನ್ನೇ ಸಂತ್ರಸ್ತರಿಗೆ ಅಧಿಕಾರ ನೀಡುವುದು ಎಂಬಂತೆ ಬಿಜೆಪಿ ಬಿಂಬಿಸಿದೆ.

ಅಷ್ಟಕ್ಕೂ ಬಿಜೆಪಿ ಅತ್ಯಾಚಾರ-ಕೊಲೆಯಾದ ಸಂತ್ರಸ್ತರ ಪರವಾಗಿ ನಿಲ್ಲುವ ನಿಟ್ಟಿನಲ್ಲಿ ಸಂತ್ರಸ್ತೆ ತಾಯಿಗೆ ಟಿಕೆಟ್ ನೀಡಿದೆ ಎಂದು ಹೇಳಿಕೊಳ್ಳುವುದಾದರೆ ಈ ನಿಲುವು ಉತ್ತರ ಪ್ರದೇಶ ಅಥವಾ ಉತ್ತರಾಖಂಡ ಮೊದಲಾದ ರಾಜ್ಯಗಳಲ್ಲಿ ಅನ್ವಯವಾಗುವುದಿಲ್ಲವೇ? ರಾಜ್ಯದಿಂದ ರಾಜ್ಯಕ್ಕೆ ಬಿಜೆಪಿ ನಿಲುವು ಬದಲಾಗುವುದೇ? ಉತ್ತರ ಪ್ರದೇಶದ ಹಾಥರಸ್, ಅಂಕಿತಾ ಭಂಡಾರಿ ಮೊದಲಾದ ಅತ್ಯಾಚಾರ-ಕೊಲೆ ಪ್ರಕರಣಗಳಲ್ಲಿ ಬಿಜೆಪಿ ವಿಭಿನ್ನವಾಗಿ ನಡೆದುಕೊಂಡಿದ್ದು ಯಾಕೆ? ಬಿಜೆಪಿಯ ಈ ಮಹಿಳಾಪರ ನಿಲುವು ವಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯದಲ್ಲಿ ಮಾತ್ರ ಅನ್ವಯವಾಗುವುದೇ?

ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ ಚುನಾವಣೆ | ಆರ್‌ಜಿಕರ್ ಪ್ರಕರಣದ ಸಂತ್ರಸ್ತೆಯ ತಾಯಿಯನ್ನೇ ಕಣಕ್ಕಿಳಿಸಿದ ಬಿಜೆಪಿ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ವಿರೋಧ ಪಕ್ಷದಲ್ಲಿದೆ. ಇಲ್ಲಿ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುವುದು ಬಿಜೆಪಿಗೆ ಲಾಭದಾಯಕ. ಅದೇ ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಆಡಳಿತ ಪಕ್ಷವಾಗಿರುವ ಬಿಜೆಪಿಗೆ ಈ ಅತ್ಯಾಚಾರ ಸಂತ್ರಸ್ತೆಯರ ಕುಟುಂಬ ಕಾಣುವುದಿಲ್ಲವೇ? ಇಲ್ಲಿ ಸಂತ್ರಸ್ತರ ಪೋಷಕರಿಗೆ ಟಿಕೆಟ್ ನೀಡಿದರೆ, ಅದು ಪರೋಕ್ಷವಾಗಿ ತಮ್ಮದೇ ಸರ್ಕಾರದ ವೈಫಲ್ಯವನ್ನು ಒಪ್ಪಿಕೊಂಡಂತೆ ಆಗುತ್ತದೆ ಎಂಬ ಆತಂಕ ಬಿಜೆಪಿಗೆ ಇರಬಹುದೇನೋ!

ಏನೇ ಆದರೂ ಹಾಥರಸ್ ಅಥವಾ ಗಾಜೀಪುರದ ಪೋಷಕರಿಗೂ ಬಿಜೆಪಿ ಟಿಕೆಟ್ ನೀಡಲು ಸಿದ್ಧವಾಗಬೇಕು. ಈ ಮೂಲಕ ಬಿಜೆಪಿಯ ಮಹಿಳಾಪರ ನಿಲುವು ಎತ್ತಿ ತೋರಿಸಲಿ! ವಾಸ್ತವದಲ್ಲಿ ಆರ್‌ಜಿ ಕರ್ ಪ್ರಕರಣದಲ್ಲಿ ಬಿಜೆಪಿ ತೋರುತ್ತಿರುವ ಆಸಕ್ತಿಯು ಮಾನವೀಯತೆಯಲ್ಲ, ಬಂಗಾಳದಲ್ಲಿ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳುವ ಕಾರ್ಯತಂತ್ರದ ಭಾಗ ಎಂಬುದು ಸ್ಪಷ್ಟ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...