ದೆಹಲಿ | ಅಮೆರಿಕ ಮಾಡೆಲ್‌ ಹೆಸರಿನಲ್ಲಿ 700 ಯುವತಿಯರಿಗೆ ವಂಚನೆ; ಆರೋಪಿ ಬಂಧನ

Date:

ಹಗಲಿನ ವೇಳೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ರಾತ್ರಿ ವೇಳೆ ಅಮೆರಿಕದ ಮಾಡೆಲ್‌ ಸೋಗಿನಲ್ಲಿ ನಟಿಸುತ್ತಿದ್ದ ಹಾಗೂ ವಂಚಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಅಮೆರಿಕದ ಮಾಡೆಲ್ ಹೆಸರಿನಲ್ಲಿ ಡೇಟಿಂಗ್ ಆ್ಯಪ್‌ ಮೂಲಕ ಸುಮಾರು 700 ಯುವತಿಯರಿಗೆ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

- Advertisement -

ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಟೆಕ್ನಿಕಲ್ ರಿಕ್ರೂಟರ್ ಆಗಿ ಕೆಲಸ ಮಾಡುತ್ತಿದ್ದ 23 ವರ್ಷದ ತುಷಾರ್ ಸಿಂಗ್ ಬಿಶ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆತ ರಾತ್ರಿಯ ವೇಳೆ ಸೈಬರ್‌ ಕ್ರೈಮ್‌ನಲ್ಲಿ ತೊಡಗಿದ್ದ ಎಂದು ವರದಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳೆ ಮಾಡುತ್ತಿರುವ ಬಿಟ್ಟಿ ಚಾಕರಿಗಳೇನೇನು? ಇದನ್ನೇಕೆ ಅರಿಯಲು ಮುಂದಾಗಿದೆ...

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಗುರಿಗೆ ಒಂದು ದೊಡ್ಡ ಅಡ್ಡಿ ಎದುರಾಗಿದೆ. ಅದೇನೆಂದರೆ; ಸಾಕಷ್ಟು ಸಂಖ್ಯೆಯ ಮಹಿಳೆಯರನ್ನು ಉದ್ಯೋಗ ಕ್ಷೇತ್ರಕ್ಕೆ ತರುವುದು. ವಿಶ್ವಬ್ಯಾಂಕ್ ಪ್ರಕಾರ, 2047ರ ವೇಳೆಗೆ...

ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ...

ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಮುನ್ನೆಲೆಗೆ ತಂದಿದೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳ ಆಗಮನ ಮತ್ತು ನಿರ್ಗಮನದ ಭದ್ರತೆಯನ್ನು ನಿರ್ಬಂಧಕ್ಕೆ ಕಾರಣವೆಂದು ಸಮರ್ಥಿಸಲಾಗುತ್ತಿದ್ದರೆ, ಅದಕ್ಕೂ ಸಮಗ್ರ ವಿವರಣೆ ಬೇಕಾಗುತ್ತದೆ. ಪ್ರಧಾನಿ...

ನಿಜಕ್ಕೂ ಭಾರತದ ಬಡತನ 16%ಗೆ ಇಳಿದಿದೆಯೇ? ವಾಸ್ತವ ಹೇಳುವುದೇನು?

ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಬಡತನ 16.1%ಗೆ ಮತ್ತು ತೀವ್ರ ಬಡತನ 2.6%ಗೆ ಇಳಿದಿದೆ. ಇದೇ ಅಂಕಿಅಂಶವನ್ನು ಬಳಸಿಕೊಂಡು ತಮ್ಮ ಸಾಧನೆ ಎಂಬಂತೆ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿದೆ. ಆದರೆ, ದೇಶದ ಸುಮಾರು 80...

ಆರೋಪಿ ತುಷಾರ್, ವರ್ಚುವಲ್ ಅಂತರಾಷ್ಟ್ರೀಯ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಡೇಟಿಂಗ್ ಆ್ಯಪ್‌ಗಳಲ್ಲಿ ಪ್ರೊಫೈಲ್‌ಗಳನ್ನು ರಚಿಸಿದ್ದಾನೆ. ಬ್ರೆಜಿಲಿಯನ್ ಮಾಡೆಲ್‌ನ ಫೋಟೋಗಳು ಮತ್ತು ಸ್ಟೋರಿಗಳನ್ನು ಕದ್ದು ತಾನು ಅಮೆರಿಕದ ಮಾಡೆಲ್‌ ಎಂದು ಬಿಂಬಿಸಿಕೊಂಡಿದ್ದಾನೆ. 18-30 ವರ್ಷದ ಯುವತಿಯೊಂದಿಗೆ ಸ್ನೇಹ ಬಳಸಿ, ಅವರಿಗೆ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಯುವತಿಯರ ಸ್ನೇಹವನ್ನು ಗಳಿಸಿದ ಬಳಿಕ, ಅವರ ಫೋನ್‌ ನಂಬರ್‌, ಖಾಸಗಿ ಫೋಟೋಗಳು ಮತ್ತು ವಿಡಿಯೋಗಳನ್ನು ಕಳಿಸುವಂತೆ ತುಷಾರ್ ಯುವತಿಯನ್ನು ಕೇಳುತ್ತಿದ್ದ. ಆತನ ಮಾತುಗಳಿಗೆ ಮರಳಾಗುತ್ತಿದ್ದ ಯುವತಿಯರು ತಮ್ಮ ಫೋಟೋಗಳು ಮತ್ತು ವಿಡಿಯೋಗಳನ್ನು ಕಳಿಸುತ್ತಿದ್ದರು. ಆರಂಭದಲ್ಲಿ ವೈಯಕ್ತಿಕ ಚಟಕ್ಕಾಗಿ ಫೋಟೋ-ವಿಡಿಯೋ ಕೇಳುತ್ತಿದ್ದ ತುಷಾರ್, ನಂತರದಲ್ಲಿ ಅವುಗಳನ್ನು ಸುಲಿಗೆ ಮಾಡಲು ಆರಂಭಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿಯರ ಖಾಸಗಿ ದೃಶ್ಯಗಳನ್ನು ಇಟ್ಟುಕೊಂಡು ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದ. ಸಂತ್ರಸ್ತೆಯರು ಹಣ ನೀಡಲು ನಿರಾಕರಿಸಿದರೆ, ಯುವತಿಯರ ಫೋಟೋ-ವಿಡಿಯೋಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಅಥವಾ ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವರದಿ ಓದಿದ್ದೀರಾ?: 2024ರಲ್ಲಿ ರಾಜಕೀಯ ಪ್ರವೇಶ, ಸದ್ದು ಮಾಡಿದ ಪ್ರಬಲ ಮಹಿಳಾ ರಾಜಕಾರಣಿಗಳಿವರು

ಆರೋಪಿ ತುಷಾರ್ 700ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದ್ದಾನೆ. ಆತನ ವಂಚಿಸುತ್ತಿರುವುದನ್ನು ತಿಳಿದ ದೆಹಲಿ ವಿವಿಯ ವಿದ್ಯಾರ್ಥಿಯೊಬ್ಬರು 2024ರ ಡಿಸೆಂಬರ್ 13ರಂದು ದೆಹಲಿ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ, ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣ ದಾಖಲಿಸಿಕೊಂಡ ದೆಹಲಿ ಸೈಬರ್ ಕ್ರೈಮ್ ವಿಭಾಗವು ಪ್ರಕರಣದ ತನಿಖೆಗಾಗಿ ಎಸಿಪಿ ಅರವಿಂದ್ ಯಾದವ್ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿತ್ತು. ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.  ಆರೋಪಿಯ ಮೊಬೈಲ್ ಫೋನ್, ಅಪರಾಧಕ್ಕಾಗಿ ಬಳಸಿದ ವರ್ಚುವಲ್ ಅಂತರರಾಷ್ಟ್ರೀಯ ಮೊಬೈಲ್ ಸಂಖ್ಯೆ ಮತ್ತು 13 ಕ್ರೆಡಿಟ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, 60ಕ್ಕೂ ಹೆಚ್ಚು ಯುವತಿಯರೊಂದಿಗೆ ಆತನ ನಡೆಸಿರುವ ವಾಟ್ಸ್‌ಆ್ಯಪ್ ಚಾಟ್‌ಗಳ ದಾಖಲೆಗಳನ್ನು ಮರುಸಂಗ್ರಹ ಮಾಡಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೀವು ಆ ಕುರ್ಚಿಗೆ ಅರ್ಹರಲ್ಲ: ಸುಪ್ರೀಂನಲ್ಲಿ ಸಿಜೆಐ ವಿರುದ್ಧ ವಕೀಲರ ಆಕ್ರೋಶ; ಲೈವ್ ಪ್ರಸಾರ ಕಟ್

ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಅತ್ಯಂತ ಅಸಾಧಾರಣ ಮತ್ತು ಗಂಭೀರ ಬೆಳವಣಿಗೆಯೊಂದು ನಡೆದಿದೆ....

ಕುಟುಂಬದ ಬಗ್ಗೆ ಹಬ್ಬಿರುವ ‘ಅವಾಸ್ತವಿಕ’ ಕಥೆಗಳಿಗೆ ಉತ್ತರಿಸಲು ಆತ್ಮಚರಿತ್ರೆ ಬರೆದೆ: ಸೋನಿಯಾ ಗಾಂಧಿ

ತಮ್ಮ ಕುಟುಂಬದ ಬಗ್ಗೆ ಹಲವಾರು 'ಅವಾಸ್ತವಿಕ' ಮತ್ತು ಸತ್ಯಕ್ಕೆ ದೂರವಾದ ಕಥೆಗಳನ್ನು...

ಮಣಿಪುರ ಹಿಂಸಾಚಾರ | ಹತ್ಯೆಯಾಗಿ ಆರು ತಿಂಗಳ ಬಳಿಕ ಆರು ನಾಗಾ ಯುವಕರ ಅಂತ್ಯಕ್ರಿಯೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯ ಲೈಲಾನ್ ವೈಫೇಯ್ ಗ್ರಾಮದಿಂದ ಕಳೆದ ಮೇ 13...

ಅಂಕಿತಾ ಭಂಡಾರಿ ಹತ್ಯೆ: ಸಂತ್ರಸ್ತೆಯ ಖಾಸಗಿ ಚಾಟ್ ಬಹಿರಂಗಪಡಿಸಿದ ಹಂತಕನ ತಂದೆ, ಬಿಜೆಪಿ ಮಾಜಿ ಮುಖಂಡ ವಿರುದ್ಧ ದೂರು

ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಉತ್ತರಾಖಂಡದ ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ...