ಕ್ಷೇತ್ರ ಮರುವಿಂಗಡಣೆ ಮಸೂದೆಗೆ ‘ಅನೈತಿಕ’ ಬಹುಮತ ಹುಡುಕುತ್ತಿದ್ದಾರೆ ಮೋದಿ-ಶಾ: ಕಾಂಗ್ರೆಸ್ ಗಂಭೀರ ಆರೋಪ!

Date:

ಸಂಸತ್ತಿನ ಮುಂಗಾರು ಅಧಿವೇಶನವು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟು 100 ದಿನಗಳು ಕಳೆದಿದ್ದರೂ, ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಅಂಗೀಕರಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಅನೈತಿಕ’ (Supertainted) ಮೂರನೇ ಎರಡರಷ್ಟು ಬಹುಮತವನ್ನು ಪಡೆಯಲು ಇನ್ನೂ ಹುಡುಕಾಟ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

- Advertisement -

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “2026ರ ಸಂಸತ್ತಿನ ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಇಂದಿಗೆ 100 ದಿನಗಳಾಗಿವೆ. ಅಧಿವೇಶನವನ್ನು ಇನ್ನೂ ಅಧಿಕೃತವಾಗಿ ಮುಕ್ತಾಯಗೊಳಿಸಲಾಗಿಲ್ಲ. ಕಳೆದ ಏಪ್ರಿಲ್ 17ರಂದು ಹಳೆಯ ಮಸೂದೆಯು ಹೀನಾಯವಾಗಿ ಸೋಲನುಭವಿಸಿದ ನಂತರ, ಹೊಸ ಮಸೂದೆಯಲ್ಲಿ ಏನಿರಲಿದೆ ಎಂಬುದು ಯಾರಿಗೂ ತಿಳಿದಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಗೆ ನಾಲ್ಕು ಬಾರಿ ಪತ್ರ ಬರೆದಿದ್ದರೂ, ಈವರೆಗೆ ಸರ್ವಪಕ್ಷ ಸಭೆಯನ್ನು ಕರೆದಿಲ್ಲ. ಯಾವುದೇ ರಾಜಕೀಯ ಪಕ್ಷದೊಂದಿಗೆ ಗಂಭೀರವಾಗಿ ಮತ್ತು ವ್ಯವಸ್ಥಿತವಾಗಿ ಹೊಸ ಪ್ರಸ್ತಾವನೆಗಳ ಕುರಿತು ಚರ್ಚಿಸಿಲ್ಲ” ಎಂದು ಕಿಡಿಕಾರಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಈ ದಿನ ಕವಿತೆ | ನಾನು, ರಸ್ತೆ ಹಾಗೂ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಮರಾಠಿ ಕವಿ ವಸಂತ್ ಆಬಾಜಿ ದಹಾಕೆ ಅವರ "ನಾನು, ರಸ್ತೆ ಹಾಗೂ ಕಪ್ಪು ಹಕ್ಕಿ" ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ...

ಶಿವಮೊಗ್ಗ | 40 ವರ್ಷ ದುಡಿದರೂ ಗಜಾನನ ಸಂಸ್ಥೆ...

ಮಲೆನಾಡಿನ ಸಾರಿಗೆ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದ್ದ ಸಾಗರ ತಾಲೂಕಿನ ಹೆಸರಾಂತ ಗಜಾನನ ಬಸ್ ಸಂಸ್ಥೆ ಒಂದು ಕಾಲದಲ್ಲಿ ಸುಮಾರು 150ಕ್ಕೂ ಹೆಚ್ಚು ಬಸ್‌ಗಳ ಮೂಲಕ ಜನಪ್ರಿಯತೆ ಗಳಿಸಿತ್ತು. ಸಂಸ್ಥೆಯ ಬೆಳವಣಿಗೆಯಲ್ಲಿ...

ರಾಜಕೀಯ ಪಕ್ಷಗಳಿಗೆ ಪ್ರವೇಶವಿಲ್ಲ: ಚುನಾವಣೆ ಬಹಿಷ್ಕರಿಸಿದ ಹೊನ್ನಗುಂಡಿ ಗ್ರಾಮಸ್ಥರು!

ಅದೆಷ್ಟೋ ಚುನಾವಣೆ ನಡೆದು ಹೋದವು, ಆದರೆ ನಮ್ಮೂರಿಗೆ ಮೂಲಭೂತ ಸೌಕರ್ಯಗಳಿಲ್ಲ. ಕನಿಷ್ಠ ಸೌಲಭ್ಯವಾದ ಡಾಂಬರ್ ರಸ್ತೆ ಕಾಣದೆ ಅದೆಷ್ಟೋ ವರ್ಷ ಕಳೆದಿದೆ. ನಮ್ಮ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಯಾವ ರಾಜಕೀಯ ಪಕ್ಷಗಳು...

“ದೇಶದ ಮುಂದೆ ತಕ್ಷಣವೇ ಗಮನಹರಿಸಬೇಕಾದ ಅತ್ಯಂತ ಗಂಭೀರ ಆರ್ಥಿಕ, ರಾಜಕೀಯ, ಸಾಮಾಜಿಕ, ಮಿಲಿಟರಿ ಹಾಗೂ ವಿದೇಶಾಂಗ ನೀತಿಯ ಸವಾಲುಗಳಿವೆ. ಹೀಗಾಗಿ, ದೂರಗಾಮಿ ಪರಿಣಾಮ ಬೀರುವ ಸಮಗ್ರ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯನ್ನು ಸದ್ಯಕ್ಕೆ ಮುಂದೂಡಬಹುದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“1976ರಲ್ಲಿ ಇಂದಿರಾ ಗಾಂಧಿ ಅವರು ಕ್ಷೇತ್ರ ಪುನರ್‌ವಿಂಗಡಣೆಯನ್ನು 25 ವರ್ಷಗಳ ಕಾಲ ಮುಂದೂಡಿದ್ದರು. ನಂತರ 2001ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ 2026ರ ನಂತರದ ಮೊದಲ ಜನಗಣತಿಯ ಫಲಿತಾಂಶ ಪ್ರಕಟವಾಗುವವರೆಗೆ ಅಂದರೆ ಮತ್ತೆ 25 ವರ್ಷಗಳ ಕಾಲ ಇದನ್ನು ಮುಂದೂಡಿದ್ದರು. ಅವರಿಬ್ಬರೂ ದೂರದೃಷ್ಟಿಯುಳ್ಳ ಮತ್ತು ರಾಷ್ಟ್ರವಾದಿ ಪ್ರಧಾನಿಗಳಾಗಿದ್ದರು” ಎಂದು ರಮೇಶ್ ಸ್ಮರಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ ಹಿಂದಿನ ತರ್ಕವೇನು?

ನವೆಂಬರ್ 19ರಂದು ನಡೆದ ಫಿಕ್ಕಿ (FICCI) ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವುದನ್ನು ಉಲ್ಲೇಖಿಸಿರುವ ಜೈರಾಮ್ ರಮೇಶ್, “ಪ್ರಧಾನಿಯವರು ತೀವ್ರ ಆತಂಕದ ಮನಸ್ಥಿತಿಯಲ್ಲಿರುವಂತೆ ತೋರುತ್ತಿದೆ. ಕ್ಷೇತ್ರ ಪುನರ್‌ವಿಂಗಡಣೆಯಂತಹ ಸೂಕ್ಷ್ಮ ವಿಚಾರದ ಚರ್ಚೆಗೆ ಒತ್ತಡರಹಿತವಾದ ಶಾಂತ ಮನಸ್ಥಿತಿ ಮತ್ತು ವಿವಿಧ ಪಕ್ಷಗಳೊಂದಿಗೆ ಸಮಗ್ರ ಸಮಾಲೋಚನೆಯ ಅಗತ್ಯವಿದೆ. ಪ್ರಸ್ತುತ ಸನ್ನಿವೇಶದಲ್ಲಿ, ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿಯನ್ನು ಜಾರಿಗೊಳಿಸುವುದರೊಂದಿಗೆ ಈಗಿರುವ ಲೋಕಸಭಾ ಸ್ಥಾನಗಳ ಬಲ ಮತ್ತು ರಾಜ್ಯವಾರು ಸಂರಚನೆಯನ್ನೇ ಮುಂದುವರಿಸುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು. ಸರ್ಕಾರ ಬಹುವಾಗಿ ಪ್ರಚಾರ ಮಾಡುತ್ತಿರುವ ‘ವಿಕಸಿತ ಭಾರತ’ದ ಗುರಿ ಸಾಧನೆಯಾಗುವವರೆಗೂ ಈ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಇರಿಸಬೇಕು; ಏಕೆಂದರೆ ವಿಕಸಿತ ಭಾರತ ನನಸಾದ ವಾತಾವರಣದಲ್ಲಿ ಮಾತ್ರ ಹೊಸ ಕ್ಷೇತ್ರ ಪುನರ್‌ವಿಂಗಡಣೆಯ ಪರಿಣಾಮಗಳನ್ನು ಅತ್ಯುತ್ತಮವಾಗಿ ನಿರ್ವಹಿಸಲು ಸಾಧ್ಯ” ಎಂದು ಕಾಂಗ್ರೆಸ್ ನಾಯಕ ಪ್ರತಿಪಾದಿಸಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ |ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ: ರವಿ ಹಂಜ್ ವಿರುದ್ಧ ಕ್ರಮಕ್ಕೆ ದೂರು

ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ ಹಾಗೂ ತತ್ವಾದರ್ಶಗಳಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ,...

ಬೀದರ್‌ | ‘ಬಸವ ಮಂಟಪ’ ಕೃತಿ ಮುಟ್ಟುಗೋಲು ನಿರ್ಧಾರ ಸ್ವಾಗತ

ಲೇಖಕ ರವಿ ಹಂಜ್ ರಚಿಸಿರುವ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು...

ವಿಜಯಪುರ | 115 ಪ್ರಕರಣಗಳ ಪೈಕಿ 80ಕ್ಕೆ ಸ್ಥಳದಲ್ಲೇ ಇತ್ಯರ್ಥ

ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಎರಡು...

ವಿಜಯಪುರ |ಮಕ್ಕಳ ಭವಿಷ್ಯ ರೂಪಿಸುವಲ್ಲಿ ಬಾಲಭವನಗಳ ಪಾತ್ರ ಮಹತ್ವದ್ದು: ಉಪ ಲೋಕಾಯುಕ್ತ ಫಣೀಂದ್ರ

ಮಕ್ಕಳ ಶಿಕ್ಷಣ, ಸುರಕ್ಷತೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಬಾಲಭವನಗಳು ಮಹತ್ವದ ಕೇಂದ್ರಗಳಾಗಬೇಕು....