70 ತಾಸು ʼಜೀತʼ ಸೂತ್ರ; ಫ್ರಾನ್ಸ್‌ನಲ್ಲಿ ಇನ್ಫೋಸಿಸ್‌ಗೆ ₹1.9 ಕೋಟಿ ದಂಡ!

Date:

ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಪ್ರತಿಪಾದಿಸಿದ್ದ ವಾರಕ್ಕೆ 70 ಗಂಟೆ ಕೆಲಸದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಫ್ರಾನ್ಸ್‌ನ ಕಾರ್ಮಿಕ ಕಾನೂನುಗಳಿಗೆ ಅನುಗುಣವಾಗಿರದ ಉದ್ಯೋಗಿಗಳ ಕೆಲಸದ ಸಮಯ ದಾಖಲಿಸುವ (Time Tracking) ವ್ಯವಸ್ಥೆ ಹೊಂದಿದ್ದ ಕಾರಣಕ್ಕೆ ಇನ್ಫೋಸಿಸ್‌ಗೆ 1,75,000 ಯುರೋ (ಸುಮಾರು ₹1.9 ಕೋಟಿ) ದಂಡ ವಿಧಿಸಲಾಗಿದೆ.

- Advertisement -

ಫ್ರಾನ್ಸ್‌ನ ಪ್ರಾದೇಶಿಕ ಕಾರ್ಮಿಕ ಪ್ರಾಧಿಕಾರ DRIEETS Ile-de-France ನಡೆಸಿದ ಪರಿಶೀಲನೆಯಲ್ಲಿ, ಇನ್ಫೋಸಿಸ್ ಬಳಸುತ್ತಿದ್ದ ಉದ್ಯೋಗಿಗಳ ಕೆಲಸದ ಸಮಯ ದಾಖಲಿಸುವ ವ್ಯವಸ್ಥೆ ಅಲ್ಲಿನ ಕಾರ್ಮಿಕ ಕಾನೂನುಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂಬುದು ಬೆಳಕಿಗೆ ಬಂದಿದೆ. ವಿಶೇಷವಾಗಿ, ಕೆಲ ವರ್ಗದ ಉದ್ಯೋಗಿಗಳ ಕೆಲಸದ ಸಮಯದ ದಾಖಲಾತಿ ವ್ಯವಸ್ಥೆಯಲ್ಲಿ ವಿಶ್ವಾಸಾರ್ಹತೆ, ಪರಿಶೀಲನಾ ಸಾಮರ್ಥ್ಯ ಹಾಗೂ ಸಮರ್ಪಕ ಮೇಲ್ವಿಚಾರಣೆಯ ಕೊರತೆ ಕಂಡುಬಂದಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ಮೌಢ್ಯತೆಯೊಳಗೆ ನಾ ಕಂಡ ಭಾರತ

ಭಾರತವು ಏಕತೆಯಲ್ಲಿ ವೈವಿಧ್ಯತೆಯನ್ನು ಕಂಡ ದೇಶ. ಹಲವು ಭಾಷೆಗಳು, ಧರ್ಮಗಳು, ಸಂಸ್ಕೃತಿಗಳು, ಆಹಾರ ಪದ್ಧತಿಗಳು, ಜೀವನಶೈಲಿಗಳು ಮತ್ತು ಆಚರಣೆಗಳು ಇಲ್ಲಿನ ಸಾಮಾಜಿಕ ಬದುಕಿನ ವೈಶಿಷ್ಟ್ಯ. ಈ ವೈವಿಧ್ಯತೆಯೇ ಭಾರತದ ಶಕ್ತಿ. ಆದರೆ, ವೈವಿಧ್ಯತೆಯನ್ನು...

ಫ್ರಾನ್ಸ್‌ನಲ್ಲಿ ಕಂಪನಿಗಳು ಉದ್ಯೋಗಿಗಳ ಕೆಲಸದ ಸಮಯವನ್ನು ಕಡ್ಡಾಯವಾಗಿ ದಾಖಲಿಸಬೇಕು. ಉದ್ಯೋಗಿಗಳು ತಮ್ಮ ಕೆಲಸದ ಸಮಯದ ದಾಖಲೆಗಳನ್ನು ಯಾವಾಗ ಬೇಕಾದರೂ ಪರಿಶೀಲಿಸಬಹುದಾಗಿರಬೇಕು. ಜೊತೆಗೆ, ಅಗತ್ಯವಿದ್ದರೆ ಸರ್ಕಾರದ ಅಧಿಕಾರಿಗಳ ಮುಂದೆ ಕಂಪನಿಯು ಆ ದಾಖಲೆಗಳನ್ನು ಸಮರ್ಥಿಸಬೇಕಾಗುತ್ತದೆ. ಇನ್ಫೋಸಿಸ್ ಈ ನಿಯಮಗಳನ್ನು ಪೂರ್ಣ ಪ್ರಮಾಣದಲ್ಲಿ ಪಾಲಿಸಿಲ್ಲ ಎಂಬುದು ತನಿಖೆಯಲ್ಲಿ ಕಂಡುಬಂದಿದೆ.

ಆದರೆ, ಯಾವ ವರ್ಗದ ಉದ್ಯೋಗಿಗಳ ಕುರಿತು ಈ ಉಲ್ಲಂಘನೆ ಕಂಡುಬಂದಿದೆ ಎಂಬುದನ್ನು ಇನ್ಫೋಸಿಸ್ ಬಹಿರಂಗಪಡಿಸಿಲ್ಲ. ಅಲ್ಲದೆ, ತನ್ನ ಕೆಲಸದ ಸಮಯ ದಾಖಲಿಸುವ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಫ್ರಾನ್ಸ್ ಸರ್ಕಾರ ಸೂಚನೆ ನೀಡಿದೆಯೇ ಎಂಬ ಬಗ್ಗೆಯೂ ಸಂಸ್ಥೆ ಸ್ಪಷ್ಟನೆ ನೀಡಿಲ್ಲ.

ಈ ದಂಡವು ಕಂಪನಿಯ ಹಣಕಾಸು, ಕಾರ್ಯಾಚರಣೆ ಅಥವಾ ಇತರ ವ್ಯವಹಾರಗಳ ಮೇಲೆ ಯಾವುದೇ ಮಹತ್ವದ ಪರಿಣಾಮ ಬೀರುವುದಿಲ್ಲ ಎಂದು ಇನ್ಫೋಸಿಸ್ ತಿಳಿಸಿದೆ. ಈ ಕುರಿತು ಬಂದಿರುವ ಆದೇಶವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಕಂಪನಿ ಹೇಳಿದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಉದ್ಯೋಗಿಗಳು ಕಚೇರಿಯಲ್ಲಿ ಹೆಚ್ಚು ಸಮಯ ಕೆಲಸ ಮಾಡುವಂತೆ ಇನ್ಫೋಸಿಸ್ ಒತ್ತಾಯಿಸುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.

ಫ್ರಾನ್ಸ್‌ನಲ್ಲಿ ಪೂರ್ಣಾವಧಿ ಖಾಸಗಿ ಉದ್ಯೋಗಿಗಳಿಗೆ ವಾರಕ್ಕೆ 35 ಗಂಟೆಗಳ ಕೆಲಸವೇ ಕಾನೂನುಬದ್ಧ ಮಾನದಂಡವಾಗಿದೆ. ಕೆಲವು ಕ್ಷೇತ್ರಗಳಲ್ಲಿ ಇದನ್ನು ಗರಿಷ್ಠ 48 ಗಂಟೆಗಳವರೆಗೆ ವಿಸ್ತರಿಸಬಹುದಾದರೂ, 35 ಗಂಟೆ ಮೀರಿದ ಕೆಲಸಕ್ಕೆ ಹೆಚ್ಚುವರಿ ವೇತನ ನೀಡುವುದು ಕಡ್ಡಾಯವಾಗಿದೆ. ಮೊದಲ ಎಂಟು ಗಂಟೆಗಳ ಹೆಚ್ಚುವರಿ ಕೆಲಸಕ್ಕೆ ಶೇ.125ರಷ್ಟು ಹಾಗೂ ನಂತರದ ಗಂಟೆಗಳಿಗೆ ಶೇ.150ರಷ್ಟು ಹೆಚ್ಚುವರಿ ಸಂಭಾವನೆ ನೀಡಬೇಕು ಎಂದು ಅಲ್ಲಿನ ಕಾರ್ಮಿಕ ಕಾನೂನು ಹೇಳುತ್ತದೆ.

ಯುರೋಪಿಯನ್ ಒಕ್ಕೂಟದ ನ್ಯಾಯಾಲಯವೂ 2019ರ ತೀರ್ಪಿನಲ್ಲಿ, ಪ್ರತಿಯೊಬ್ಬ ಉದ್ಯೋಗಿಯ ದಿನನಿತ್ಯದ ಕೆಲಸದ ಸಮಯವನ್ನು “ವಸ್ತುನಿಷ್ಠ, ವಿಶ್ವಾಸಾರ್ಹ ಮತ್ತು ಎಲ್ಲರಿಗೂ ಲಭ್ಯವಾಗುವ” ವ್ಯವಸ್ಥೆಯ ಮೂಲಕ ದಾಖಲಿಸುವುದು ಕಡ್ಡಾಯ ಎಂದು ಹೇಳಿತ್ತು. ಫ್ರಾನ್ಸ್‌ನ ಉನ್ನತ ನ್ಯಾಯಾಲಯವೂ ಇದೇ ಮಾನದಂಡವನ್ನು ಹಲವು ಪ್ರಕರಣಗಳಲ್ಲಿ ಅನುಸರಿಸಿದೆ.

ಇದನ್ನೂ ಓದಿ: ವರಸೆ ಬದಲಿಸಿದ ಸರ್ಕಾರ; FIR ಹಿಂಪಡೆಯುವ ಭರವಸೆ ಎಲ್ಲರಿಗೂ ಅಲ್ಲ ಎಂದ ಕೇಂದ್ರ

ಇನ್ಫೋಸಿಸ್‌ಗೆ ದಂಡ ವಿಧಿಸಿರುವ ಸುದ್ದಿ ಹೊರಬಿದ್ದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ. “ಫ್ರಾನ್ಸ್ ತೆಗೆದುಕೊಂಡ ಕ್ರಮ ಸರಿಯಾಗಿದೆ. ಉದ್ಯೋಗಿಗಳ ಮಾನಸಿಕ ಆರೋಗ್ಯ ಮತ್ತು ಕುಟುಂಬ ಜೀವನವನ್ನು ಬಲಿಕೊಟ್ಟು ಅತಿಯಾದ ಕೆಲಸ ಮಾಡಿಸುವುದು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಕೆಲವರು, “ಈಗ ನಾರಾಯಣ ಮೂರ್ತಿ ಅವರು ತಮ್ಮ 70 ಗಂಟೆಗಳ ಕೆಲಸದ ಸಿದ್ಧಾಂತವನ್ನು ಫ್ರಾನ್ಸ್‌ಗೆ ವಿವರಿಸುತ್ತಾರೆಯೇ?” ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು, “72 ಗಂಟೆಗಳ ಕೆಲಸದ ನನ್ನ ಪ್ರಯೋಗ ವಿಫಲವಾಯಿತು. ಅತಿಯಾದ ಓವರ್‌ಟೈಮ್ ಎಂದರೆ ಅದು ಉತ್ತಮ ನಿರ್ವಹಣೆಯಲ್ಲ, ಸಿಬ್ಬಂದಿ ಕೊರತೆಯ ಲಕ್ಷಣ” ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, “ಇಂತಹ ಗುಲಾಮಗಿರಿಯ ಮನೋಭಾವವನ್ನು ಯುರೋಪ್ ಒಪ್ಪುವುದಿಲ್ಲ” ಎಂದು ಟೀಕಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿ: ಡಿಸಿ ಶಿಲ್ಪಾ ಶರ್ಮಾ

ಭಾರತದ ಸಂವಿಧಾನವು ವಿಶಿಷ್ಟ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದು, ಇಡೀ ವಿಶ್ವಕ್ಕೆ ಮಾದರಿಯಾಗಿದೆ....

SIR | ನ್ಯಾಯಾಲಯಕ್ಕೂ ಕೇರ್‌ ಮಾಡದ ಚುನಾವಣಾ ಆಯೋಗ; 72 ಸಾವಿರ ಮೇಲ್ಮನವಿಗಳ ರಹಸ್ಯ ಬಯಲು!

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗವು ನಡೆಸಿದ ಮತದಾರರ ಪಟ್ಟಿಯ 'ವಿಶೇಷ ತೀವ್ರ...

ಆತ್ಮಹತ್ಯೆ ಮಾಡಿಕೊಂಡ ರೈತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಬೇಡಿ: ಶಿವಸೇನೆ ಶಾಸಕನ ವಿವಾದಾತ್ಮಕ ಹೇಳಿಕೆ

ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರ ಅಂತ್ಯಕ್ರಿಯೆಯಲ್ಲಿ ಯಾರೂ ಪಾಲ್ಗೊಳ್ಳಬಾರದು, ಮೃತದೇಹಗಳನ್ನು ಪ್ರಾಣಿಗಳು...

ಅಸ್ಸಾಂ: ಬಾಲ್ಯವಿವಾಹದ ವಿರುದ್ಧ ಕಾರ್ಯಾಚರಣೆ ತೀವ್ರ, 500ಕ್ಕೂ ಹೆಚ್ಚು ಮಂದಿ ಬಂಧನ

ಅಸ್ಸಾಂನಲ್ಲಿ ಬಾಲ್ಯವಿವಾಹದ ವಿರುದ್ಧ ರಾಜ್ಯ ಸರ್ಕಾರವು ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಪ್ರಸ್ತುತ...