ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ಅಕ್ರಮ ಪತ್ತೆಹಚ್ಚಿದ ಶಿಕ್ಷಕ ದೂರಿನಲ್ಲಿ ವಿವರಿಸಿದ್ದೇನು?

Date:

ನೀಟ್ (NEET) ಪತ್ರಿಕೆ ಸೋರಿಕೆ ಹಗರಣವನ್ನು ಮೊದಲು ಪತ್ತೆಹಚ್ಚಿ, ಬಹಿರಂಗ ಪಡಿಸಿದ ರಾಜಸ್ಥಾನದ ಸಿಕಾರ್ ಮೂಲದ ಶಿಕ್ಷಕರೊಬ್ಬರು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (NTA) ದೂರು ನೀಡಿದ್ದಾರೆ. ಆ ದೂರಿನಲ್ಲಿ ಅತ್ಯಂತ ಸ್ಪೋಟಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

- Advertisement -

ಮೇ 3ರಂದು ಪರೀಕ್ಷೆ ನಡೆದ ದಿನವೇ ಈ ಪತ್ರಿಕೆ ಸೋರಿಕೆಯ ಸುಳಿವು ಅವರಿಗೆ ಸಿಕ್ಕಿತ್ತು. ಅಂದು ಸಂಜೆ ತಮ್ಮ ಮನೆಯ ಮಾಲೀಕರು ನೀಡಿದ ಕೈಬರಹದ ಪಿಡಿಎಫ್ ಫೈಲ್ ಅನ್ನು ಅವರು ಪರಿಶೀಲಿಸಿದಾಗ, ಅದರಲ್ಲಿ ನೀಟ್ ಪ್ರಶ್ನೆಪತ್ರಿಕೆಗೆ ಯಥಾವತ್ ಹೋಲುವ ಪ್ರಶ್ನೆಗಳಿರುವುದು ಕಂಡುಬಂದಿತ್ತು ಎಂದು ವರದಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಈ ಪಿಡಿಎಫ್‌ನಲ್ಲಿ ಸುಮಾರು 410 ಪ್ರಶ್ನೆಗಳಿದ್ದು, ಅದರಲ್ಲಿ 120ಕ್ಕೂ ಹೆಚ್ಚು ಪ್ರಶ್ನೆಗಳು ಅಸಲಿ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳೇ ಆಗಿದ್ದವು ಎಂಬುದನ್ನು ಶಿಕ್ಷಕ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.

“ನನ್ನ ಬಳಿ ಸುಮಾರು 60 ಪುಟಗಳ ಕೈಬರಹದ ಪಿಡಿಎಫ್ ಫೈಲ್ ಇದೆ. ಇದರಲ್ಲಿ ಕೆಮಿಸ್ಟ್ರಿಯ 90 ಪ್ರಶ್ನೆಗಳು ಮತ್ತು ಜೀವಶಾಸ್ತ್ರಕ್ಕೆ ಸಂಬಂಧಿಸಿದ 7-8 ಪುಟಗಳ ಪ್ರಶ್ನೆಗಳಿವೆ. ಈ ಪೇಪರ್‌ನಲ್ಲಿರುವ ಸುಮಾರು 120 ಪ್ರಶ್ನೆಗಳನ್ನು (ಕೆಲವು ವರದಿಗಳ ಪ್ರಕಾರ 135) ಪರೀಕ್ಷಾ ಪ್ರಶ್ನೆಪತ್ರಿಕೆಯೊಂದಿಗೆ ಹೋಲಿಸಿ ನೋಡಿದಾಗ, ಪ್ರಶ್ನೆಗಳ ಕ್ರಮ ಸಂಖ್ಯೆ ಮಾತ್ರವಲ್ಲದೆ ಆಯ್ಕೆಗಳೂ ಕೂಡ ಬದಲಾಗಿಲ್ಲ. ಎಲ್ಲ ಪ್ರಶ್ನೆಗಳು ಅಸಲಿ ನೀಟ್ ಪರೀಕ್ಷೆಯಲ್ಲಿ ಬಂದಿರುವ ಪ್ರಶ್ನೆಗಳೇ ಆಗಿವೆ” ಎಂದು ಶಿಕ್ಷಕ ವಿವರಿಸಿದ್ದಾರೆ.

ದೂರು ನೀಡಿದ ನಂತರ ಶಿಕ್ಷಕರು ಪೊಲೀಸರ ವಿಚಾರಣೆಯನ್ನೂ ಎದುರಿಸಿದ್ದಾರೆ. ಆರಂಭದಲ್ಲಿ ತನಿಖಾ ಸಂಸ್ಥೆಗಳು ಇವರ ಮೇಲೆ ಅನುಮಾನ ವ್ಯಕ್ತಪಡಿಸಿದರೂ, ಶಿಕ್ಷಕರು ತಾವು ಪರೀಕ್ಷೆ ಮುಗಿದ ನಂತರವೇ ಈ ದಾಖಲೆಗಳನ್ನು ಪಡೆದಿರುವುದಾಗಿ ಸಾಕ್ಷಿ ಸಮೇತ ವಿವರಿಸಿದ್ದಾರೆ.

“ಲಕ್ಷಾಂತರ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಈ ಅಕ್ರಮವು ಗಂಭೀರ ಪರಿಣಾಮ ಬೀರುತ್ತದೆ. ನಾನು ಶಿಕ್ಷಕನಾಗಿ ಈ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾನು ನನ್ನ ಮೊಬೈಲ್ ಫೋನ್ ಅನ್ನು ಫೋರೆನ್ಸಿಕ್ ತನಿಖೆಗೆ ನೀಡಲು ಸಿದ್ಧನಿದ್ದೇನೆ” ಎಂದು ಅವರು ದೂರಿನಲ್ಲಿ ಧೈರ್ಯವಾಗಿ ಬರೆದಿದ್ದಾರೆ.

ಶಿಕ್ಷಕ ನೀಡಿದ ದೂರು ಮತ್ತು ಒದಗಿಸಿದ ದಾಖಲೆಗಳೇ ಅಂತಿಮವಾಗಿ ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ಪಡೆಯು (SOG) ಈ ಹಗರಣದ ಮೂಲಗಳನ್ನು ಹುಡುಕಲು ನೆರವಾಗಿದೆ. ಪರೀಕ್ಷೆಗೂ ಮೊದಲೇ ಪ್ರಶ್ನೆಪತ್ರಿಕೆಯು ಅಕ್ರಮವಾಗಿ ಹೊರಬಂದಿದೆ ಎಂಬ ಸತ್ಯವನ್ನು ಸಾಬೀತುಪಡಿಸುವಲ್ಲಿ ಈ ಶಿಕ್ಷಕರ ದೂರು ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದೆ.

ಈಗ, ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಪರೀಕ್ಷೆಯ ಮರುಮೌಲ್ಯಮಾಪನ ಮತ್ತು ಮರುಪರೀಕ್ಷೆಯಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹಿಳೆಯರಿಲ್ಲದ ಸಂಪುಟ; ಮಾತು ತಪ್ಪಿತೇ ಕಾಂಗ್ರೆಸ್?

ರಾಜ್ಯದ ಮಹಿಳೆಯರು ಜನಸಂಖ್ಯೆಯಲ್ಲಿ ಸರಿಸುಮಾರು ಅರ್ಧದಷ್ಟಿದ್ದರೂ, ಅಧಿಕಾರದ ವಿಚಾರ ಬಂದಾಗ ಅವರು...

ಬೀದರ್‌ | ಜನವರಿಯಲ್ಲಿ ಅಗ್ನಿವೀರ ಸೇನಾ ಭರ್ತಿ ರ‍್ಯಾಲಿ

ಬೀದರ್‌ ನಗರದಲ್ಲಿ 2027ರ ಜನವರಿ ತಿಂಗಳಲ್ಲಿ 15 ದಿನಗಳ ಕಾಲ ಅಗ್ನಿವೀರ...

ದೇವಿಯಿಂದ ಕತ್ತಿ ಪಡೆದ ರಾಜರ ಕಥೆಗಳು ಶಾಲಾ ಪಠ್ಯದಲ್ಲಿ; NCERTಯಿಂದ ಮತ್ತೊಂದು ವಿವಾದ?

"ಭಾರತದಲ್ಲಿ ದೇವಿಯರ ಆರಾಧನೆಗೂ, ಯುದ್ಧಕ್ಕೂ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಪ್ರಾಚೀನ...

‘INDIA’ ಮೈತ್ರಿಕೂಟದ ಸಭೆಗಾಗಿ ದೆಹಲಿಗೆ ಮಮತಾ ಪ್ರಯಾಣ: ‘ದಿಮಾಗಿ ನಕ್ಸಲರ’ ಜತೆ ಸಮಾಲೋಚನೆ ಎಂದ ಸುವೇಂದು ಅಧಿಕಾರಿ

ಬುಧವಾರ ನಡೆಯಲಿರುವ 'INDIA' ಮೈತ್ರಿಕೂಟದ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ಪಶ್ಚಿಮ ಬಂಗಾಳದ...