E20 ಪೆಟ್ರೋಲ್‌ ಬದಲಿಗೆ E10 ತರಲು ಇನ್ನೂ ನಿರ್ಧಾರವಾಗಿಲ್ಲ: BPCL ಸ್ಪಷ್ಟನೆ

Date:

ದೇಶದಲ್ಲಿ ಪ್ರಸ್ತುತ ಬಳಕೆಯಲ್ಲಿರುವ E20 ಪೆಟ್ರೋಲ್‌ ಅನ್ನು E10 ಪೆಟ್ರೋಲ್‌ನಿಂದ ಬದಲಿಸುವ ಯಾವುದೇ ನಿರ್ಧಾರವಾಗಿಲ್ಲ ಎಂದು ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (BPCL) ಸ್ಪಷ್ಟಪಡಿಸಿದೆ.

- Advertisement -

ಕಂಪನಿಯ ವಾರ್ಷಿಕ ಷೇರುದಾರರ ಸಭೆಯ ಬಳಿಕ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ BPCL ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂಜಯ್‌ ಖನ್ನಾ, E20 ಅನ್ನು E10 ಆಗಿ ಬದಲಾಯಿಸಲಾಗುತ್ತದೆ ಎಂದು ನಾನು ಎಂದೂ ಹೇಳಿಲ್ಲ. ಹಳೆಯ ವಾಹನಗಳಿಗೆ ಕಡಿಮೆ ಪ್ರಮಾಣದ ಎಥೆನಾಲ್‌ ಹೊಂದಿರುವ ಪೆಟ್ರೋಲ್‌ ಲಭ್ಯವಾಗುವಂತೆ ಮಾಡಬೇಕೇ ಎಂಬ ಕುರಿತು ಮಾತ್ರ ಚರ್ಚೆ ನಡೆಯುತ್ತಿದೆ. ಅದಕ್ಕಾಗಿ E20 ಸಂಪೂರ್ಣವಾಗಿ ಹೊರ ಹೋಗಿ E10 ಬರಲಿದೆ ಎಂದರ್ಥವಲ್ಲ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಪ್ರಸ್ತುತ E20 ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥೆನಾಲ್‌ ಮಿಶ್ರಣವಿದ್ದು, E10ನಲ್ಲಿ ಶೇ.10ರಷ್ಟು ಎಥೆನಾಲ್‌ ಇರುತ್ತದೆ. ದೇಶವು ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆ ಕಡಿಮೆ ಮಾಡುವುದು, ಇಂಗಾಲ ಹೊರಸೂಸುವಿಕೆ ತಗ್ಗಿಸುವುದು ಹಾಗೂ ದೇಶೀಯ ಎಥೆನಾಲ್‌ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಪೆಟ್ರೋಲ್‌ನಲ್ಲಿ ಎಥೆನಾಲ್‌ ಮಿಶ್ರಣವನ್ನು ಹಂತ ಹಂತವಾಗಿ ಹೆಚ್ಚಿಸುತ್ತಿದೆ. ಆದರೆ, ಕೆಲವು ಗ್ರಾಹಕರು ಹಾಗೂ ಉದ್ಯಮ ವಲಯದವರು ಹೆಚ್ಚಿನ ಪ್ರಮಾಣದ ಎಥೆನಾಲ್‌ ಮಿಶ್ರಣದಿಂದ ಹಳೆಯ ವಾಹನಗಳ ಕಾರ್ಯಕ್ಷಮತೆ ಹಾಗೂ ಬಿಡಿಭಾಗಗಳ ಮೇಲೆ ಪರಿಣಾಮ ಉಂಟಾಗಬಹುದು ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೂ E20 ಪೆಟ್ರೋಲ್‌ ವಾಹನಗಳ ಎಂಜಿನ್‌ಗಳಿಗೆ ವ್ಯಾಪಕ ಹಾನಿ ಉಂಟುಮಾಡುತ್ತದೆ ಎಂಬ ಆರೋಪಗಳಿಗೆ ಸಾಕಷ್ಟು ಪುರಾವೆಗಳಿಲ್ಲ ಎಂದು ಸರ್ಕಾರ ಹಲವು ಬಾರಿ ಹೇಳಿದೆ.

ಈ ನಡುವೆ, ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್‌ ಹಾಗೂ ಆರ್ಥಿಕ ವ್ಯವಹಾರಗಳ ಇಲಾಖೆಯ ಸಲಹೆಗಾರ ಆಕಾಶ್‌ ಪೂಜಾರಿ ಇತ್ತೀಚೆಗೆ ಪ್ರಕಟಿಸಿದ ಅಭಿಪ್ರಾಯ ಲೇಖನದಲ್ಲಿ, ಹಳೆಯ ವಾಹನಗಳನ್ನು ರಕ್ಷಿಸುವ ಉದ್ದೇಶದಿಂದ ಕಡಿಮೆ ಎಥೆನಾಲ್‌ ಮಿಶ್ರಣದ ಪೆಟ್ರೋಲ್‌ ಅನ್ನು ಮತ್ತೆ ಪರಿಚಯಿಸುವಂತೆ ಶಿಫಾರಸು ಮಾಡಿದ್ದರು. ಭಾರತದಲ್ಲಿ BS-IVಕ್ಕಿಂತ ಹಳೆಯದಾದ ಸುಮಾರು 7.5ರಿಂದ 8 ಕೋಟಿ ದ್ವಿಚಕ್ರ ವಾಹನಗಳು ಇವೆ. ಇವುಗಳಲ್ಲಿ ಹಲವು ಕಾರ್ಬ್ಯುರೇಟರ್‌ ಆಧಾರಿತವಾಗಿದ್ದು, E20ನಲ್ಲಿರುವ ಹೆಚ್ಚುವರಿ ಎಥೆನಾಲ್‌ನಿಂದ ಉಂಟಾಗುವ ಆಮ್ಲಜನಕ ಪ್ರಮಾಣಕ್ಕೆ ಅನುಗುಣವಾಗಿ ಇಂಧನ ಪೂರೈಕೆಯನ್ನು ಸ್ವಯಂಚಾಲಿತವಾಗಿ ಹೊಂದಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಎಂಜಿನ್‌ ಹೆಚ್ಚು ಬಿಸಿಯಾಗುವ ಸಾಧ್ಯತೆ ಇದೆ. ಹಳೆಯ ವಾಹನಗಳಲ್ಲಿನ ಎಥೆನಾಲ್‌ ನಿರೋಧಕವಲ್ಲದ ರಬ್ಬರ್‌ ಸೀಲ್‌ಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದೂ ಹೇಳಿದ್ದರು

“E20ನಿಂದ E10ಗೆ ಬದಲಾಯಿಸಬೇಕಾದ ಪರಿಸ್ಥಿತಿ ಬಂದರೆ, ಪೆಟ್ರೋಲ್‌ ಪೂರೈಕೆ ಮಾಡುವುದರಲ್ಲಿ ಯಾವುದೇ ದೊಡ್ಡ ತಾಂತ್ರಿಕ ಅಥವಾ ಕಾರ್ಯಾಚರಣೆಯ ಸವಾಲು ಇರುವುದಿಲ್ಲ. ಯಾವುದೇ ತೈಲ ಕಂಪನಿಗೂ E20ನಿಂದ E10ಗೆ ಬದಲಾಯಿಸುವಲ್ಲಿ ಸಮಸ್ಯೆ ಇರುವುದಿಲ್ಲ ಎಂದು ಖನ್ನಾ ತಿಳಿಸಿದರು.

ಇದನ್ನೂ ಓದಿ: ಪೆಟ್ರೋಲ್‌ಗೆ ಎಥೆನಾಲ್ ಅಲ್ಲ, ಎಥೆನಾಲ್‌ಗೇ ಪೆಟ್ರೋಲ್ ಮಿಕ್ಸ್: ಜೇಬಿಗೆ ಕತ್ತರಿ, ಎಂಜಿನ್‌ಗೆ ಕಂಟಕ!

ಆದರೆ E10 ಅನ್ನು E20ಗೆ ಪರ್ಯಾಯವಾಗಿ ತರುವುದಕ್ಕೂ, E10 ಮತ್ತು E20 ಎರಡನ್ನೂ ಏಕಕಾಲದಲ್ಲಿ ವಿಭಿನ್ನ ಗ್ರೇಡ್‌ಗಳಾಗಿ ಪೂರೈಸುವುದಕ್ಕೂ ವ್ಯತ್ಯಾಸವಿದೆ. ದೇಶದಾದ್ಯಂತ ಮತ್ತೊಂದು ಗ್ರೇಡ್‌ ಪೆಟ್ರೋಲ್‌ ಅನ್ನು ಪೂರೈಸುವುದು ಹೆಚ್ಚಿನ ಪ್ರಮಾಣದ ಲಾಜಿಸ್ಟಿಕ್ಸ್‌ ಸವಾಲುಗಳನ್ನು ಸೃಷ್ಟಿಸಬಹುದು. ದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಪೆಟ್ರೋಲ್‌ ಬಂಕ್‌ಗಳಿದ್ದು, ಅವುಗಳನ್ನು ರಿಫೈನರಿ, ಟರ್ಮಿನಲ್‌, ಡಿಪೋ ಹಾಗೂ ಪೈಪ್‌ಲೈನ್‌ಗಳ ವ್ಯಾಪಕ ಜಾಲದ ಮೂಲಕ ಸಂಪರ್ಕಿಸಲಾಗಿದೆ. ಒಂದೇ ವೇಳೆ ಶುದ್ಧ ಪೆಟ್ರೋಲ್‌, E10 ಹಾಗೂ E20 ಪೂರೈಸಬೇಕಾದರೆ ಹೆಚ್ಚುವರಿ ನಿರ್ವಹಣಾ ವೆಚ್ಚ, ಸಂಗ್ರಹಣೆ ಹಾಗೂ ವಿತರಣೆಯಲ್ಲಿ ಸಂಕೀರ್ಣತೆ ಉಂಟಾಗಬಹುದು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಈ ಹಿಂದೆ ಹೇಳಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಖನ್ನಾ, ಮತ್ತೊಂದು ಗ್ರೇಡ್‌ ಪೆಟ್ರೋಲ್‌ ಪೂರೈಸುವುದರಿಂದ ಎದುರಾಗಬಹುದಾದ ಸವಾಲುಗಳೇ ಸದ್ಯ ಚರ್ಚೆಯಲ್ಲಿರುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಮತ್ತೊಂದು ಗ್ರೇಡ್‌ ಪೆಟ್ರೋಲ್‌ ಪೂರೈಕೆಗೆ ಸಂಬಂಧಿಸಿದ ಸವಾಲುಗಳೇನು ಎಂಬುದು ಚರ್ಚೆಯಾಗುತ್ತಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಲಾಗುತ್ತಿದೆ. ಸದ್ಯಕ್ಕೆ ಯಾವುದನ್ನೂ ಅಂತಿಮಗೊಳಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿದ್ದರಾಮಯ್ಯ ‘ಸ್ಟಿಂಗ್’ ವಿವಾದದ ಅಸಲಿ ವೃತ್ತಾಂತವೇನು? ‘ಸತ್ಯಕ್ಕೇ ಜಯ’ ಎಂದು ಮಾಜಿ ಸಿಎಂ ಹೇಳಿದ್ದೇಕೆ?

ಕರ್ನಾಟಕ ರಾಜಕಾರಣದಲ್ಲಿ ಇದೀಗ ‘ಸ್ಟಿಂಗ್ ಆಪರೇಷನ್’ ಹೆಸರಿನಲ್ಲಿ ಹೊಸ ವಿವಾದ ಭುಗಿಲೆದ್ದಿದೆ....

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...