ಪೆಟ್ರೋಲ್‌ಗೆ ಎಥೆನಾಲ್ ಅಲ್ಲ, ಎಥೆನಾಲ್‌ಗೇ ಪೆಟ್ರೋಲ್ ಮಿಕ್ಸ್: ಜೇಬಿಗೆ ಕತ್ತರಿ, ಎಂಜಿನ್‌ಗೆ ಕಂಟಕ!

Date:

ದೇಶದಲ್ಲಿ ಇತ್ತೀಚೆಗೆ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿರುವುದು ಎಥೆನಾಲ್ ಮಿಶ್ರಣ. ಈವರೆಗೆ ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಮಾಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಹಾಗಲ್ಲ. “ಎಥೆನಾಲ್‌ಗೇ ಪೆಟ್ರೋಲ್ ಮಿಶ್ರಣ” ಮಾಡಲಾಗುತ್ತದೆ. ಅಂದರೆ ಶೇ.100ರಷ್ಟು ಎಥೆನಾಲ್ ಅಥವಾ ಅತ್ಯಧಿಕ ಪ್ರಮಾಣದ ಎಥೆನಾಲ್ ಇಂಧನದಿಂದ ಗಾಡಿ ಓಡಲಿವೆ.

- Advertisement -

ಇಂಧನ ಸ್ವಾವಲಂಬನೆ ಸಾಧಿಸಲು ಮತ್ತು ಕಚ್ಚಾ ತೈಲ ಆಮದು ವೆಚ್ಚವನ್ನು ಕಡಿಮೆ ಮಾಡಲು ಈ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಪದೇ ಪದೇ ಹೇಳುತ್ತಲೇ ಇದೆ. ಆದರೆ ಎಥೆನಾಲ್‌ ಉತ್ಪಾದನೆಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಕುಟುಂಬಕ್ಕೂ ಇರುವ ನಂಟು ಜಗಜ್ಜಾಹೀರು. ಇವೆಲ್ಲವುದಕ್ಕೂ ಮುಖ್ಯವಾಗಿ ಎಥೆನಾಲ್ ಬಳಕೆಯ ಅಡ್ಡಪರಿಣಾಮದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೊಳಗಿಸಿದ್ದ ಮತ ಹಕ್ಕಿನ ಕೂಗಿಗೆ...

ಮತದಾನ ಕೇವಲ ಹಕ್ಕಲ್ಲ, ಅದು ಪ್ರಜೆಯೊಬ್ಬನ ಘನತೆ ಹಾಗೂ ಅಸ್ತಿತ್ವದ ಸಂಕೇತ. 131 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಇದೇ ಮತಾಧಿಕಾರಕ್ಕಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಇಂದು ಸ್ವತಂತ್ರ ಭಾರತದಲ್ಲಿ...

ಇದನ್ನೂ ಓದಿ: ವಾಹನಗಳಲ್ಲಿ ಶೇ.100 ಎಥೆನಾಲ್: ರೈತರಿಗೆ ಲಾಭ ನೆಪ; ಗಡ್ಕರಿ ಮಕ್ಕಳ ಕಂಪನಿಗೆ ಲಾಟರಿ!

ಎಥೆನಾಲ್ ಬಳಕೆಯು ಮುಖ್ಯವಾಗಿ ಹಳೆಯ ವಾಹನಗಳಿಗೆ ದೊಡ್ಡ ಸವಾಲಾಗಿದೆ. ಎಥೆನಾಲ್ ಮೂಲತಃ ಆಲ್ಕೋಹಾಲ್. ಅದು ತೇವಾಂಶವನ್ನು (ನೀರನ್ನು) ತನ್ನತ್ತ ಬೇಗನೆ ಆಕರ್ಷಿಸುತ್ತದೆ. ಎಥೆನಾಲ್‌ನಲ್ಲಿರುವ ತೇವಾಂಶದಿಂದಾಗಿ ಇಂಧನ ಟ್ಯಾಂಕ್, ಪೈಪ್‌ಗಳು ಮತ್ತು ಎಂಜಿನ್‌ನ ಒಳಗಿನ ಲೋಹದ ಭಾಗಗಳು ಬೇಗನೆ ತುಕ್ಕು ಹಿಡಿಯುತ್ತವೆ ಎಂಬುದು ಈಗ ವಾಹನ ಸವಾರರ ಆತಂಕವಾಗಿದೆ.

ಇದಕ್ಕೂ ಮುಖ್ಯವಾಗಿ ಹಳೆಯ ವಾಹನಗಳಲ್ಲಿರುವ ರಬ್ಬರ್ ಟ್ಯೂಬ್‌ಗಳು ಮತ್ತು ಪ್ಲಾಸ್ಟಿಕ್ ಬಿಡಿಭಾಗಗಳು ಎಥೆನಾಲ್ ಪ್ರಭಾವದಿಂದಾಗಿ ಸವೆದುಹೋಗುತ್ತವೆ ಅಥವಾ ಕರಗಲು ಆರಂಭಿಸುತ್ತವೆ. 2023ಕ್ಕಿಂತ ಮುಂಚೆ ತಯಾರಾದ ವಾಹನಗಳ ಎಂಜಿನ್‌ಗಳು ಎಥೆನಾಲ್ ತಡೆದುಕೊಳ್ಳುವಂತೆ ವಿನ್ಯಾಸಗೊಂಡಿಲ್ಲ. ಹೀಗಾಗಿ ಅವುಗಳ ಇಂಧನ ದಹನ ಕ್ರಿಯೆಯಲ್ಲಿ ಏರುಪೇರಾಗಿ ಎಂಜಿನ್ ಬಾಳಿಕೆ ಕಡಿಮೆಯಾಗುವ ಸಾಧ್ಯತೆ ಹೆಚ್ಚು ಎಂದು ಹಲವು ಬಾರಿ ಆಟೋಮೊಬೈಲ್ ತಜ್ಞರು ಎಚ್ಚರಿಸಿದ್ದಾರೆ.

ಜನರ ಜೇಬಿಗೆ ಕತ್ತರಿ ಬೀಳುವುದು ಹೇಗೆ?

“ಕಡಿಮೆ ಬೆಲೆಯ ಎಥೆನಾಲ್‌ಗೆ ಪೆಟ್ರೋಲ್ ಮಿಶ್ರಣ ಮಾಡುವುದರಿಂದ ಪೆಟ್ರೋಲ್ ಬೆಲೆ ಕಡಿಮೆಯಾಗಬೇಕು” ಎನ್ನುವುದು ಜನರ ನಿರೀಕ್ಷೆ. ಆದರೆ ವಾಸ್ತವದಲ್ಲಿ ಸವಾರರಿಗೆ ಎರಡು ರೀತಿಯಲ್ಲಿ ಆರ್ಥಿಕ ನಷ್ಟವಾಗುತ್ತಿದೆ. ಒಂದು ಮೈಲೇಜ್ ಇಳಿಕೆ ಮತ್ತೊಂದು ದುಬಾರಿ ನಿರ್ವಹಣಾ ವೆಚ್ಚ.

ಎಥೆನಾಲ್‌ನ ಶಕ್ತಿ ಸಾಂದ್ರತೆಯು ಶುದ್ಧ ಪೆಟ್ರೋಲ್‌ಗಿಂತ ಸುಮಾರು ಶೇ. 30 ರಷ್ಟು ಕಡಿಮೆಯಿರುತ್ತದೆ. ಇದರರ್ಥ E20 ಪೆಟ್ರೋಲ್ ಬಳಸಿದಾಗ ಇಂಧನ ಬೇಗನೆ ಖಾಲಿಯಾಗುತ್ತದೆ. ತಜ್ಞರ ಪ್ರಕಾರ, E20 ಇಂಧನದಿಂದ ವಾಹನಗಳ ಮೈಲೇಜ್‌ನಲ್ಲಿ ಶೇಕಡ 6ರಿಂದ 7 ರಷ್ಟು ಇಳಿಕೆ ಕಂಡುಬರುತ್ತದೆ. ಅಂದರೆ ನೀವು ಅಷ್ಟೇ ಹಣ ಕೊಟ್ಟರೂ ವಾಹನ ಚಲಿಸುವ ದೂರ ಕಡಿಮೆಯಾಗುತ್ತದೆ. ಎಥೆನಾಲ್ ಬಳಕೆಯಿಂದ ಎಂಜಿನ್‌ನಲ್ಲಿ ತುಕ್ಕು ಅಥವಾ ಫ್ಯುಯೆಲ್ ಪಂಪ್‌ಗಳು ಹಾನಿಗೊಳಗಾದರೆ, ಗ್ಯಾರೇಜ್‌ಗಳಲ್ಲಿ ದುರಸ್ತಿಗಾಗಿ ಭಾರಿ ಹಣ ವೆಚ್ಚ ಮಾಡಬೇಕಾಗುತ್ತದೆ.

ಪರಿಸರದ ಮೇಲೂ ಪ್ರಭಾವ

ಸರ್ಕಾರದ ಪ್ರಕಾರ, ಎಥೆನಾಲ್ ಬಳಕೆಯಿಂದ ವಾಹನಗಳಿಂದ ಹೊರಹೊಮ್ಮುವ ಕಾರ್ಬನ್ ಮಾನಾಕ್ಸೈಡ್ ಮತ್ತು ಹೈಡ್ರೋಕಾರ್ಬನ್ ಮಾಲಿನ್ಯ ಕಡಿಮೆಯಾಗುತ್ತದೆ. ಇದು ನಿಜವಾದರೂ, ಇದರ ಇನ್ನೊಂದು ಮಗ್ಗುಲು ಆತಂಕಕಾರಿ. ಎಥೆನಾಲ್ ಅನ್ನು ಪ್ರಮುಖವಾಗಿ ಕಬ್ಬು ಮತ್ತು ಧಾನ್ಯಗಳಿಂದ (ಮೆಕ್ಕೆಜೋಳ, ಮುರಿದ ಅಕ್ಕಿ) ತಯಾರಿಸಲಾಗುತ್ತದೆ. ಒಂದು ಲೀಟರ್ ಎಥೆನಾಲ್ ತಯಾರಿಸಲು ಸಾವಿರಾರು ಲೀಟರ್ ನೀರು ಬೇಕಾಗುತ್ತದೆ. ಇದು ಅಂತರ್ಜಲದ ಮೇಲೆ ಭಾರಿ ಒತ್ತಡ ಹೇರುತ್ತದೆ. ಇಂಧನಕ್ಕಾಗಿ ಕಬ್ಬು ಮತ್ತು ಧಾನ್ಯಗಳನ್ನು ಅತಿಯಾಗಿ ಬಳಸುವುದರಿಂದ, ಭವಿಷ್ಯದಲ್ಲಿ ಆಹಾರ ಧಾನ್ಯಗಳ ಬೆಲೆ ಏರಿಕೆಯಾಗುವ ಮತ್ತು ಭೂಮಿಯ ಬಳಕೆಯಲ್ಲಿ ಸಮತೋಲನ ತಪ್ಪುವ ಅಪಾಯವಿದೆ ಎಂದು ಪರಿಸರ ಮತ್ತು ಆರ್ಥಿಕ ತಜ್ಞರು ಹೇಳುತ್ತಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ ಪ್ರತಿಮೆ ತಲುಪಿದ ರೋಚಕ ಇತಿಹಾಸ!

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ...

ಅ.4ರಿಂದ ವಿಜಯಪುರ – ತಿರುಪತಿ ದಸರಾ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭ

ದಸರಾ ಹಬ್ಬದ ಹಿನ್ನೆಲೆಯಲ್ಲಿ ತಿರುಪತಿ–ವಿಜಯಪುರ ನಡುವೆ ಪ್ರಯಾಣಿಕರ ಅನುಕೂಲಕ್ಕಾಗಿ ಸಾಪ್ತಾಹಿಕ ವಿಶೇಷ...

ತಮಿಳುನಾಡು | ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವಿಸ್ತರಣೆ: ಬಸ್ ಕಂಡಕ್ಟರ್ ಆಗಿ ಟಿಕೆಟ್ ನೀಡಿದ ಸಿಎಂ ವಿಜಯ್

ತಮಿಳುನಾಡು ಸರ್ಕಾರವು ಮಹಿಳೆಯರಿಗಾಗಿ ಜಾರಿಗೆ ತಂದಿರುವ ಉಚಿತ ಬಸ್ ಪ್ರಯಾಣ ಯೋಜನೆಯನ್ನು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ ಮತ್ತು ಮೇಕೆ

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು...