ಲಿಂಗತ್ವ ಗುರುತಿಸುವಿಕೆಗೆ ಸರ್ಕಾರದ ಮಧ್ಯಸ್ಥಿಕೆ ಸಲ್ಲದು: ರಾಜಸ್ಥಾನ ಹೈ ಕೋರ್ಟ್

Date:

ರಾಜಸ್ಥಾನ ಹೈಕೋರ್ಟ್‌ ಲಿಂಗತ್ವ ಅಲ್ಪಸಂಖ್ಯಾತರ ರಕ್ಷಣಾ ಕಾಯ್ದೆಯ 2026ರ ತಿದ್ದುಪಡಿಯನ್ನು ತೀವ್ರವಾಗಿ ಟೀಕಿಸಿದೆ. ಪ್ರಸ್ತುತ ತಿದ್ದುಪಡಿಯು 2019ರ ತಿದ್ದುಪಡಿಯ ಲಿಂಗತ್ವದ ಸ್ವಯಂ ಗುರುತಿಸಿಕೊಳ್ಳುವಿಕೆ ಹಾಗೂ ಸ್ವಯಂ ಘೋಷಣೆಯ ಹಕ್ಕನ್ನು ಕಸಿದುಕೊಂಡಿದೆ.

- Advertisement -

ನ್ಯಾಯಮೂರ್ತಿ ಅರುಣ್‌ ಮೊಂಗ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಉಲ್ಲೇಖಿಸುವಾಗ ಲಿಂಗ ಅಲ್ಪಸಂಖ್ಯಾತರು ತಮ್ಮ ಲಿಂಗವನ್ನು ತಾವೇ ಗುರುತಿಸುವುದು ಸರ್ಕಾರ ಅಥವಾ ಯಾವುದೇ ಮಸೂದೆ ನೀಡುವ ವಿಶೇಷ ಸವಲತ್ತಲ್ಲ. ಬದಲಾಗಿ ಅದು ಅವರಿಗೆ ಸಲ್ಲಬೇಕಾದ ಹಕ್ಕು ಎಂದಿದ್ದಾರೆ. ಲಿಂಗತ್ವ ಗುರುತುಪಡಿಸುವುದನ್ನು ದಾಖಲೀಕೃತಗೊಳಿಸಿ. ಇವರು ಲಿಂಗತ್ವ ಅಲ್ಪಸಂಖ್ಯಾತರು ಎಂಬ ಪ್ರಮಾಣಪತ್ರ ನೀಡಿ ಧೃಡೀಕರಿಸಿಕೊಳ್ಳುವ ಈ ತಿದ್ದುಪಡಿಯು ಈ ಸಮುದಾಯಕ್ಕೆ ಸೇರಿದವರ ವೈಯಕ್ತಿಕ ಬದುಕಿನಲ್ಲಿ ಅವರ ಹಕ್ಕುಗಳನ್ನು ಪಡೆದುಕೊಳ್ಳಲು ಸರ್ಕಾರ ಮಧ್ಯವರ್ತಿಯ ಕೆಲಸ ಮಾಡಲು ಮುಂದಾಗಿದೆ ಎಂದು ಟೀಕಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...
1 63

2023ರ ರಾಜಸ್ಥಾನ ಹೈ ಕೋರ್ಟಿನ ಲಿಂಗತ್ವ ಅಲ್ಪಸಂಖ್ಯಾತರು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರುತ್ತಾರೆ ಎಂಬ ತೀರ್ಪಿನ ವಿರುದ್ಧ ಬಂದಿದ್ದ ಲಿಂಗತ್ವ ಅಲ್ಪಸಂಖ್ಯಾತರ ಅರ್ಜಿಯೊಂದರ ವಿಚಾರಣೆಯ ವೇಳೆ ನ್ಯಾಯಮೂರ್ತಿ ಮೊಂಗ ಈ ವಿಷಯವನ್ನು ಪ್ರಸ್ತಾಪಿಸಿದರು.

ಇದನ್ನೂ ಓದಿ ಮಸೂದೆ ಅಂಗೀಕಾರ: ರಾಷ್ಟ್ರೀಯ ಲಿಂಗತ್ವ ಅಲ್ಪಸಂಖ್ಯಾತರ ಮಂಡಳಿ ಸದಸ್ಯರು ರಾಜೀನಾಮೆ

ಮುಂದುವರಿದು ನ್ಯಾಯಮೂರ್ತಿ ಯೋಗೇಂದ್ರ ಕುಮಾರ್‌ ಪುರೋಹಿತ್‌ ನಿರ್ದೇಶಿಸಿದ್ದ ಹಿಂದುಳಿದ  ಲಿಂಗತ್ವ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಸಾರ್ವಜನಿಕ ಉದ್ಯೋಗ ವಲಯಗಳಲ್ಲಿ ಹಾಗೂ ಶೈಕ್ಷಣಿಕ ವಲಯದ ದಾಖಲಾತಿಯ ವೇಳೆ 3% ಗ್ರೇಡ್‌ ಅಂಕ ನೀಡಬೇಕು ಎಂಬ ಆದೇಶವನ್ನು ಎತ್ತಿ ಹಿಡಿದರು.

ಸಂವಿಧಾನದ 14,15,16 ಮತ್ತು 21ನೇ ವಿಧಿಯು ನಿರ್ದೇಶಿಸುವ ಪ್ರಕಾರ ವ್ಯಕ್ತಿಯು ತನ್ನ ಲಿಂಗತ್ವ ಗುರುತಿಸುವುದು, ನಿರ್ಧರಿಸುವುದು ಆತನ ಸ್ವ ಇಚ್ಛೆಯನ್ನು ಆಧರಿಸಿದೆ. ಇದು ವ್ಯಕ್ತಿಯ ವೈಯಕ್ತಿಕ ಬದುಕಿನ ಘನತೆ, ಸ್ವಾಯತ್ತತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತದೆ. NALSA ತೀರ್ಪಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಕನಿಷ್ಠ ಹಕ್ಕುಗಳ ಕುರಿತು ಬಹುದೊಡ್ಡ ಮೈಲಿಗಲ್ಲನ್ನು ಸುಪ್ರೀಂ ಈ ಮಸೂದೆಯ ಮೂಲಕ ಸಾಧಿಸಿತ್ತು.   

ಈಗ ಸಂಸತ್ತಿನಲ್ಲಿ ಮಂಡನೆಯಾಗಿರುವ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯ ತಿದ್ದುಪಡಿ ಮಸೂದೆಯು ಈ ಸಮುದಾಯದ ಹಿಜ್ರ, ಜೋಗತಿ, ಅರವಣಿ, ಕಿನ್ನರ್‌ ಸಮುದಾಯದವರನ್ನು ಬಿಟ್ಟು ಉಳಿದ ಕ್ವೀರ್‌, ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ, ಲಿಂಗತ್ವ ಅಲ್ಪಸಂಖ್ಯಾತ ಪುರುಷ ಮೊದಲಾದ ವರ್ಗದವರನ್ನು ಲಿಂಗತ್ವ ಅಲ್ಪಸಂಖ್ಯಾತರ ಪಟ್ಟಿಯಿಂದ ಹೊರತಾಗಿಸಿದೆ. ಈ ಕುರಿತು ಅಸಮಧಾನ ವ್ಯಕ್ತಪಡಿಸಿರುವ ಅರುಣ್‌ ಮೊಂಗೆ ಒಳಗೊಂಡ ರಾಜಸ್ಥಾನದ ವಿಭಾಗೀಯ ಪೀಠವು ಲಿಂಗತ್ವ ಅಲ್ಪಸಂಖ್ಯಾತರ ಘನತೆಯ ಬದುಕಿಗೆ ಸರ್ಕಾರದ ಮಧ್ಯಸ್ತಿಕೆಯು ಅಡ್ಡಿಪಡಿಸುತ್ತದೆ ಎಂದಿದ್ದಾರೆ.                              

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ದಸರಾ ಉದ್ಘಾಟನೆಗೆ ಅಭಿನವ ಗವಿಸಿದ್ದೇಶ್ವರ ಶ್ರೀಗೆ ಆಹ್ವಾನ

ಕೊಪ್ಪಳದ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಈ...

ಪತ್ರಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವೇ: ಮೋಶಾಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲೆ...