ಕಾಸರಗೋಡು ಜಿಲ್ಲೆಯಲ್ಲಿ “ಮನೆ ಮತದಾನ’ ಸೇವೆಯನ್ನು ಚುನಾವಣ ಅಧಿಕಾರಿಗಳು ಮತದಾರರ ಮನೆಗಳಿಗೆ ಭೇಟಿ ನೀಡಿ ಮತಗಳನ್ನು ನೋಂದಾಯಿಸು ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.
ಮನೆಯಿಂದಲೇ ಮತ ಚಲಾಯಿಸಲು ಅಂಗವಿಕಲರು ಮತ್ತು 85 ವರ್ಷ ಮೇಲ್ಪಟ್ಟ ವರಿಗೆ ಅವಕಾಶ ಕಲ್ಪಿಸಲಾಗಿದೆ.
ಇಬ್ಬರು ಮತಗಟ್ಟೆ ಅಧಿಕಾರಿಗಳು, ಮೈಕ್ರೋ ವೀಕ್ಷಕರು, ವೀಡಿಯೋಗ್ರಾಫರ್, ಪೊಲೀಸ್ ಅಧಿಕಾರಿ ಮತ್ತು ಬೂತ್ ಮಟ್ಟದ ಅಧಿಕಾರಿಯನ್ನು ಒಳಗೊಂಡ ತಂಡ ಮನೆ ಮತದಾನಕ್ಕೆ ಆಯ್ಕೆಯಾಗಿರುವ ಮತದಾರರ ಮನೆಗೆ ಆಗಮಿಸಲಿದೆ.
ಕಾಂಞಂಗಾಡ್ ಮತ್ತು ತ್ರಿಕರಿಪುರಕ್ಕೆ ತಲಾ 30, ಉದುಮಕ್ಕೆ 25 ಮತ್ತು ಕಾಸರಗೋಡು ಮತ್ತು ಮಂಜೇಶ್ವರ ಕ್ಷೇತ್ರಗಳಿಗೆ ತಲಾ 17 ಚುನಾವಣ ತಂಡಗಳನ್ನು ಮನೆ ಮತದಾನ ವ್ಯವಸ್ಥೆಗೆ ನಿಯೋಜನೆ ಮಾಡಲಾಗಿದೆ.
ಕಾಸರಗೋಡು ಮತ್ತು ಮಂಜೇಶ್ವರ ಕ್ಷೇತ್ರಗಳ ಮತದಾನ ಸಾಮಗ್ರಿ ವಿತರಣ ಕೇಂದ್ರವಾದ ಕಾಸರಗೋಡು ಸರಕಾರಿ ಕಾಲೇಜು ಮತ್ತು ಉದುಮ ಕ್ಷೇತ್ರದ ತನಿ°ಹುಲ್ ಇಸ್ಲಾಂ ಹೈಯರ್‌ಸೆಕೆಂಡರಿ ಶಾಲೆಗೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅವರು ಭೇಟಿ ನೀಡಿ ಚುನಾವಣ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.
This video cannot be played in your browser. Open the video directly





