ಕೋವ್ಯಾಕ್ಸಿನ್ ಲಸಿಕೆ ಪಡೆದ ವರ್ಷದ ನಂತರ ಶೇ.30 ಮಂದಿಗೆ ಆರೋಗ್ಯ ಸಮಸ್ಯೆಗಳು

Date:

ಕೋವಿಡ್‌ ನಿರೋಧಕ ಕೋವ್ಯಾಕ್ಸಿನ್‌ ಲಸಿಕೆ ಪಡೆದ ಒಂದು ವರ್ಷದ ನಂತರ ಮೂರರಲ್ಲಿ ಒಬ್ಬರು ಎಇಎಸ್‌ಐ ಅಥವಾ ‘ಪ್ರಮುಖ ಸೆಲೆಯಲ್ಲಿ ಉಂಟಾಗುವ ಪ್ರತಿಕೂಲ ಪರಿಣಾಮಗಳು’ ಎಂಬ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ತಂಡವೊಂದು ಹಮ್ಮಿಕೊಂಡ ಅಧ್ಯಯನದಲ್ಲಿ ತಿಳಿದು ಬಂದಿದೆ.

ಒಂದು ವರ್ಷದ ನಂತರ ಕೋವ್ಯಾಕ್ಸಿನ್ ಪಡೆದ 926 ಮಂದಿಯನ್ನು ಅಧ್ಯಯನದಲ್ಲಿ ತೊಡಗಿಸಿಕೊಳ್ಳಲಾಗಿತ್ತು. ಇವರಲ್ಲಿ ಅರ್ಧದಷ್ಟು ಮಂದಿಗೆ ಶ್ವಾಸಕೋಶದ ಮೇಲ್ಭಾಗದಲ್ಲಿ ವೈರಲ್‌ ಸೋಂಕುಗಳು ಉಂಟಾಗಿವೆ.

ಎಇಎಸ್‌ಐ ಗಂಭೀರ ತೊಂದರೆಗಳಾದ ಪಾರ್ಶ್ವವಾಯುವಿನ ಹೊಡೆತ ಹಾಗೂ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಗುಲಿಯನ್‌ ಬಾರೆ ಸಿಂಡ್ರೋಮ್‌ ಕಾಯಿಲೆ ಕೂಡ ಶೇ. 1 ರಷ್ಟು ಜನರಲ್ಲಿ ದಾಖಲಾಗಿವೆ. ಗಂಭೀರ ಸಮಸ್ಯೆ ಉಂಟಾಗಿರುವವರಲ್ಲಿ ವಯಸ್ಕರು ಹಾಗೂ ಹದಿಹರೆಯದವರು ಸೇರಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರು, ಮಾಧ್ಯಮಗಳು ಮತ್ತು ಮೂರು ಕೊಲೆಗಳು

ಸಂಶೋಧನಾ ಅಧ್ಯಯನವನ್ನು ಜನವರಿ 2022 ರಿಂದ ಆಗಸ್ಟ್‌ 2023ರವರೆಗೆ ನಡೆಸಲಾಗಿದ್ದು, ಲಸಿಕೆ ಪಡೆದ ನಂತರ ಉಂಟಾದ ಸಮಸ್ಯೆಗಳಲ್ಲಿ ಚರ್ಮದ ಸಮಸ್ಯೆಗಳು, ನರ ಮಂಡಳ ಸಮಸ್ಯೆ ಹಾಗೂ ಸಾಮಾನ್ಯ ಅಸ್ವಸ್ಥತೆಗಳು ಹೆಚ್ಚಾಗಿ ಕಾಣಿಸಿಕೊಂಡಿವೆ.

ಕೋವ್ಯಾಕ್ಸಿನ್‌ ಪಡೆದ 635 ಹದಿಹರೆಯದವರು ಹಾಗೂ 291 ವಯಸ್ಕರಲ್ಲಿ ಅಧ್ಯಯನವನ್ನು ಕೈಗೊಳ್ಳಲಾಗಿತ್ತು. ಹದಿಹರೆಯದವರಲ್ಲಿ ಶೇ.10.5 ಮಂದಿಯಲ್ಲಿ ಚರ್ಮದ ಸಮಸ್ಯೆ, ಶೇ.10.2 ಮಂದಿಯಲ್ಲಿ ಸಾಮಾನ್ಯ ಅಸ್ವಸ್ಥತೆ ಹಾಗೂ ಶೇ.4.7 ಮಂದಿಗೆ ನರ ಮಂಡಲ ಅಸ್ವಸ್ಥತೆ ಉಂಟಾಗಿದೆ.

ವಯಸ್ಕರಲ್ಲಿ ಶೇ.8.9 ಮಂದಿಯಲ್ಲಿ ಸಾಮಾನ್ಯ ಅಸ್ವಸ್ಥತೆ, ಶೇ.5.8 ಮಂದಿಗೆ ಮೈಕೈ ನೋವಿನ ಅಸ್ವಸ್ಥತೆ ಹಾಗೂ ಶೇ.5.5 ಮಂದಿಗೆ ನರ ಮಂಡಲ ಅಸ್ವಸ್ಥತೆ ಉಂಟಾಗಿದೆ. ಮಹಿಳೆಯರೂ ಕೂಡ ಎಇಎಸ್‌ಐನ ಗಂಭೀರ ಸಮಸ್ಯೆಗಳಿಂದ ಬಾಧಿತರಾಗಿದ್ದಾರೆ ಎಂದು ಅಧ್ಯಯನ ಹೇಳಿದೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೀಟ್ ರದ್ದು ಮಾಡಿದರೆ ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಪರಿಣಾಮ: ಶಿಕ್ಷಣ ಸಚಿವ

ನೀಟ್‌ ವಿಚಾರವಾಗಿ ತೀವ್ರ ವಿವಾದ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ತನಿಖೆ...

ಜಗನ್ ರೆಡ್ಡಿ ಅವರ ವೈಎಸ್‌ಆರ್‌ ಕಾಂಗ್ರೆಸ್‌ನ ನಿರ್ಮಾಣ ಹಂತದಲ್ಲಿದ್ದ ಕೇಂದ್ರ ಕಚೇರಿ ಕೆಡವಿದ ಆಂಧ್ರ ಸರ್ಕಾರ

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಸೀತಾನಗರಂನಲ್ಲಿ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ...

ಮಹಿಳೆಯನ್ನು ಸಾರ್ವಜನಿಕವಾಗಿ ಥಳಿಸುತ್ತಿರುವ ವಿಡಿಯೋ ವೈರಲ್; ಓರ್ವನ ಬಂಧನ

ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಧಾರ್ ಜಿಲ್ಲೆಯಲ್ಲಿ ಪುರುಷರ ಗುಂಪೊಂದು ಮಹಿಳೆಯನ್ನು ಸಾರ್ವಜನಿಕವಾಗಿ...

ಕರ್ನಾಟಕದ ಬೆನ್ನಲ್ಲೇ ಗೋವಾದಲ್ಲೂ ಇಂಧನ ದರ ಏರಿಕೆ; ರಾಜ್ಯ ಬಿಜೆಪಿ ನಾಯಕರಿಗೆ ಶಾಕ್

ಕರ್ನಾಟಕ ಸರ್ಕಾರದ ಇಂಧನ ದರ ಏರಿಕೆಯನ್ನು ಟೀಕಿಸುತ್ತಿದ್ದ ರಾಜ್ಯ ಬಿಜೆಪಿ ನಾಯಕರಿಗೆ...