ತಿಥಿ ಊಟದಲ್ಲಿ ‘ತುಪ್ಪದ ಮಾಲ್ಪುವಾ’ ನೀಡದ್ದಕ್ಕೆ 40ಕ್ಕೂ ಹೆಚ್ಚು ಕುಟುಂಬಗಳಿಗೆ ಬಹಿಷ್ಕಾರ!

Date:

ತಿಥಿ ಊಟದಲ್ಲಿ ತುಪ್ಪದಲ್ಲಿ ಕರಿದ ‘ಮಾಲ್ಪುವಾ’ ಸಿಹಿ ತಿಂಡಿ ನೀಡಲ್ಲವೆಂಬ ಕ್ಷುಲ್ಲಕ ಕಾರಣಕ್ಕಾಗಿ 40ಕ್ಕೂ ಹೆಚ್ಚು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಮಾಂಡ್ವರಿಯಾ ಗ್ರಾಮದ ಪಂಚಾಯತ್ ಮುಖ್ಯಸ್ಥರು ಹಾಗೂ ಕೆಲವು ಹಿರಿಯರು ಸೇರಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

- Advertisement -

ಗ್ರಾಮದ ನಿವಾಸಿಯೊಬ್ಬರ ಮನೆಯಲ್ಲಿ ಹಿರಿಯರ ತಿಥಿ ಕಾರ್ಯ (ಶ್ರಾದ್ಧ) ನಡೆದಿತ್ತು. ಸಾಂಪ್ರದಾಯಿಕ ನಿಯಮಗಳ ಪ್ರಕಾರ ಇಡೀ ಗ್ರಾಮಕ್ಕೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ಕುಟುಂಬದ ಆರ್ಥಿಕ ಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲದ ಕಾರಣ ಊಟದಲ್ಲಿ ತುಪ್ಪದಿಂದ ಮಾಡಿದ ಮಾಲ್ಪುವಾ ಬದಲಿಗೆ ಬೇರೆ ಸಿಹಿಯನ್ನು ಬಡಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಇದನ್ನೂ ಓದಿ: ಸಾಮಾಜಿಕ ಬಹಿಷ್ಕಾರ ಹಾಕಿದ್ರೆ ಕಂಬಿ ಎಣಿಸೋದು ಪಕ್ಕಾ!

ಊಟದ ಸಮಯದಲ್ಲಿ ತುಪ್ಪದ ಮಾಲ್ಪುವಾ ಇಲ್ಲದಿರುವುದನ್ನು ಗಮನಿಸಿದ ಗ್ರಾಮದ ಕೆಲವು ಪ್ರಭಾವಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇದರಿಂದಾಗಿ “ನಮ್ಮ ಸಂಪ್ರದಾಯಕ್ಕೆ ಮತ್ತು ಗ್ರಾಮದ ಗೌರವಕ್ಕೆ ಧಕ್ಕೆಯಾಗಿದೆ” ಎಂದು ವಾದಿಸಿ ಜಗಳಕ್ಕೆ ಇಳಿದಿದ್ದಾರೆ. ಈ ವೇಳೆ ಕೆಲವರು ತಿಥಿ ಕಾರ್ಯ ನಡೆಸಿದವರ ಬೆಂಬಲಕ್ಕೆ ನಿಂತಿದ್ದರು. ಆರ್ಥಿಕವಾಗಿ ಹಿಂದುಳಿದಿದ್ದಾರೆ, ಅಷ್ಟೊಂದು ದುಬಾರಿ ಸಿಹಿ ಹೇಗೆ ಹಾಕಿಸುವುದು ಎಂದು ಹೇಳಿದ್ದಾರೆ.

ಘಟನೆಯ ಬೆನ್ನಲ್ಲೇ ಗ್ರಾಮದ ಮುಖಂಡರು ತುರ್ತು ಸಭೆ ಕರೆದಿದ್ದಾರೆ. ತಿಥಿ ಕಾರ್ಯ ಆಯೋಜಿಸಿದ ಕುಟುಂಬವನ್ನು ಬೆಂಬಲಿಸಿದ ಹಾಗೂ ಊಟದಲ್ಲಿ ತುಪ್ಪದ ಮಾಲ್ಪುವಾ ಇಲ್ಲದಿರುವುದನ್ನು ವಿರೋಧಿಸದ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳನ್ನು ಗುರುತಿಸಿ ಅವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.

ಈ ಬಹಿಷ್ಕೃತ ಕುಟುಂಬಗಳೊಂದಿಗೆ ಗ್ರಾಮದ ಉಳಿದವರು ಯಾವುದೇ ರೀತಿಯ ವ್ಯವಹಾರ ಅಥವಾ ಮಾತುಕತೆ ನಡೆಸುವಂತಿಲ್ಲ. ಬಾವಿಯಿಂದ ನೀರೂ ತೆಗೆಯುವಂತಿಲ್ಲ, ಪಡಿತರವೂ ಖರೀದಿಸುವಂತಿಲ್ಲ. ಬಹಿಷ್ಕಾರದಿಂದ ಮುಕ್ತಿ ಪಡೆಯಬೇಕಾದರೆ ಪ್ರತಿ ಕುಟುಂಬವೂ ಭಾರಿ ಮೊತ್ತದ ದಂಡ ತೆರಬೇಕೆಂದು ಫರ್ಮಾನು ಹೊರಡಿಸಲಾಗಿದೆ. ಗ್ರಾಮದ ಶುಭ ಸಮಾರಂಭಗಳಿಗೆ ಈ ಕುಟುಂಬಗಳನ್ನು ಆಹ್ವಾನಿಸದಂತೆಯೂ ಆದೇಶಿಸಲಾಗಿದೆ. ಬಹಿಷ್ಕಾರ ಉಲ್ಲಂಘಿಸಿದರೆ 11 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಂತ್ರಸ್ತ ಕುಟುಂಬವು, “ಒಂದು ಸಿಹಿ ತಿಂಡಿಗಾಗಿ ಇಡೀ ಗ್ರಾಮವೇ ನಮ್ಮನ್ನು ಒಂಟಿ ಮಾಡುತ್ತದೆ ಎಂದು ನಾವು ಊಹಿಸಿರಲಿಲ್ಲ. ಬಡತನದ ನಮ್ಮ ಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ಈ ರೀತಿ ಬಹಿಷ್ಕಾರ ಹಾಕುವುದು ಕಾನೂನುಬಾಹಿರ” ಎಂದು ಹೇಳಿದ್ದಾರೆ.

ಸಂತ್ರಸ್ತರು ಜೂನ್ 20 ರಂದು ಬಾರ್ಲೂಟ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ನಿರ್ದಿಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ. ಗುರುವಾರ, ಎಲ್ಲ 43 ಕುಟುಂಬಗಳ ಸದಸ್ಯರು ಸಿರೋಹಿ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿದರು.

“ಸಂತ್ರಸ್ತ ಕುಟುಂಬಗಳು ಮನವಿ ಪತ್ರ ಸಲ್ಲಿಸಿದ್ದು, ಮುಂದಿನ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ” ಎಂದು ಜಿಲ್ಲಾಧಿಕಾರಿ ರೋಹಿತಾಶ್ವ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಸಿಜೆಪಿ ಪಟ್ಟು: ಹೋರಾಟಕ್ಕೆ ಸೋನಮ್ ವಾಂಗ್‌ಚುಕ್ ಬೆಂಬಲ

ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ಹೊಣೆಗಾರಿಕೆ ಮತ್ತು...

ಬೀದರ್‌ | ಸೆ.29ರಂದು ನೀರು, ಬರ, ಪರಿಸರ ಕುರಿತು ವಿಚಾರ ಸಂಕಿರಣ

ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ, ಸಿದ್ದಾರ್ಥ ಪದವಿ ಪೂರ್ವ ಕಾಲೇಜು, ಟೀಮ್...

ಬೀದರ್‌ | ಶಿಕ್ಷಕರು ಸಮಾಜದ ಭವಿಷ್ಯ ನಿರ್ಮಿಸುವ ಶಿಲ್ಪಿಗಳು: ಪುಣ್ಯವತಿ ವಿಸಾಜಿ

ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಜೊತೆಗೆ ಸಮಾಜದ...

ಬೀದರ್‌ | ಅಂಬೇಡ್ಕರ್ ಚಿಂತನೆ ವಿದ್ಯಾರ್ಥಿಗಳ ಬದುಕಿಗೆ ಮಾರ್ಗದರ್ಶನವಾಗಲಿ: ಸಿದ್ರಾಮ ಸಿಂಧೆ

ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು, ಸಾಧನೆ ಹಾಗೂ ಬರಹಗಳನ್ನು ವಿದ್ಯಾರ್ಥಿಗಳು ಆಳವಾಗಿ ಅಧ್ಯಯನ...