ಯಾವಾಗ ಓಡಲಿದೆ ತುಮಕೂರು–ರಾಯದುರ್ಗ ರೈಲು?

Date:

ಮಧುಗಿರಿ–ಕೊರಟಗೆರೆ ಜನರ ಕನಸು ನನಸಾಗುವ ದಿನ ದೂರವಿಲ್ಲ ಎಂಬ ಭರವಸೆಯೊಂದಿಗೆ, ಪ್ರದೇಶದ ಜನರ ಆಶಾಕಿರಣವಾಗಿರುವ ಈ ಯೋಜನೆಯು ಶೀಘ್ರದಲ್ಲಿ ಪೂರ್ಣಗೊಳ್ಳಬೇಕು. ರೈಲು ಸಂಚಾರ ಆರಂಭವಾಗುವುದಷ್ಟೇ ಅಲ್ಲ, ಅದು ಸುರಕ್ಷಿತ, ನಿಯಮಿತ ಮತ್ತು ಆರ್ಥಿಕವಾಗಿ ಲಾಭದಾಯಕವಾಗಿ ಸಂಚರಿಸುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ.

ತುಮಕೂರು–ರಾಯದುರ್ಗ ರೈಲು ಮಾರ್ಗ ಯೋಜನೆ ಘೋಷಣೆಯಾಗಿ ಸುಮಾರು ಎರಡು ದಶಕಗಳು, ಕಾಮಗಾರಿಗೆ ಚಾಲನೆ ನೀಡಿ 14 ವರ್ಷಗಳಾದರೂ ಮಧುಗಿರಿ ಮತ್ತು ಕೊರಟಗೆರೆ ಭಾಗದ ಜನರ ಪಾಲಿಗೆ ರೈಲು ಸಂಚಾರ ಇನ್ನೂ ಕನಸಾಗಿಯೇ ಉಳಿದಿದೆ.

- Advertisement -

206 ಕಿಲೋಮೀಟರ್ ಉದ್ದದ ಈ ಮಹತ್ವಾಕಾಂಕ್ಷಿ ಯೋಜನೆಗೆ 2012ರಲ್ಲಿ ಚಾಲನೆ ನೀಡಲಾಗಿತ್ತು. ಆದರೆ ಆಂಧ್ರಪ್ರದೇಶ ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡು ಪಾವಗಡದವರೆಗೂ ರೈಲು ಪ್ರಾಯೋಗಿಕ ಸಂಚಾರ ನಡೆಸಿದ್ದರೂ, ಕರ್ನಾಟಕದ ಮಧುಗಿರಿ–ಕೊರಟಗೆರೆ ಭಾಗದಲ್ಲಿ ಕಾಮಗಾರಿ ವರ್ಷಗಳ ಕಾಲ ನನೆಗುದಿಗೆ ಬಿದ್ದಿದೆ. ಅಳವಡಿಸಿದ್ದ ಕಂಬಿಗಳೇ ತುಕ್ಕು ಹಿಡಿದಿರುವ ದೃಶ್ಯಗಳು ಈ ಯೋಜನೆಯ ನಿರಾಸೆ ಮೂಡಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

2007ರಲ್ಲಿ ಅಂದಿನ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರನ್ನು ಭೇಟಿ ಮಾಡಿ ಮಡಕಶಿರಾ(ಹಿಂದಿನ ಅನಂತಪುರ) ಶಾಸಕ ರಘುವೀರರೆಡ್ಡಿ ಹಾಗೂ ಪಾವಗಡ ಶಾಸಕ ವೆಂಕಟರಮಣಪ್ಪ ಯೋಜನೆ ಜಾರಿಗೆ ಒತ್ತಾಯಿಸಿದ್ದರು. ಬಳಿಕ ರೈಲ್ವೆ ಪಿಂಕ್ ಬುಕ್‌ನಲ್ಲಿ 98 ಕೋಟಿ ರೂಪಾಯಿ ವೆಚ್ಚದೊಂದಿಗೆ ಯೋಜನೆಗೆ ಅನುಮೋದನೆ ದೊರೆತಿತ್ತು. ಆದರೆ ನೀರಾವರಿ ಸೌಲಭ್ಯಗಳ ಕೊರತೆ, ಕೈಗಾರಿಕೆಗಳ ಅಭಾವ ಮತ್ತು ಉದ್ಯೋಗ ಅವಕಾಶಗಳ ಅಭಾವದಿಂದ ಮಧುಗಿರಿ ಹಾಗೂ ಕೊರಟಗೆರೆ ಭಾಗದ ಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ವ್ಯಾಪಾರಸ್ಥರು ನಿತ್ಯವೂ ಬಸ್‌ಗಳಲ್ಲಿ ಸಂಚರಿಸಿ ಸಂಕಷ್ಟ ಅನುಭವಿಸುತ್ತಿದ್ದಾರೆ.

ತುಮಕೂರು–ಕೊರಟಗೆರೆ ಮಧ್ಯೆ ಬೆಳೆದರ ಸಮೀಪ ನಿರ್ಮಾಣವಾಗುತ್ತಿರುವ ರೈಲ್ವೆ ಸೇತುವೆ ಕಾಮಗಾರಿ ಕೂಡ ಈವರೆಗೆ ಪೂರ್ಣಗೊಂಡಿಲ್ಲ. ಇದರಿಂದ ಜನರ ಅಸಮಾಧಾನ ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ರೈಲ್ವೆ ಸಚಿವ ಹಾಗೂ ತುಮಕೂರು ಸಂಸದ ವಿ. ಸೋಮಣ್ಣ ಅವರಿಗೆ ಪ್ರಶ್ನೆ ಕೇಳಿರುವ ಪೋಸ್ಟ್‌ಗಳು ವೈರಲ್ ಆಗಿವೆ.

ರೈಲ್ವೆ ಅಧಿಕಾರಿಗಳ ಪ್ರಕಾರ, “ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೊರಟಗೆರೆಯಿಂದ ಮಡಕಶಿರಾವರೆಗೆ ಎಸ್‌ಆರ್‌ಸಿ ಕಂಪನಿಗೆ ಟೆಂಡರ್ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ” ಎಂದು ತಿಳಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಪ್ರತಿಕ್ರಿಯಿಸಿ, “ಪಾವಗಡದಿಂದ ತುಮಕೂರಿನವರೆಗಿನ ಬಾಕಿ ಕಾಮಗಾರಿಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ” ಎಂದು ಹೇಳಿದ್ದಾರೆ.

ಆದರೆ ವರ್ಷಗಳಿಂದ ಕಾಯುತ್ತಿರುವ ಜನರಲ್ಲಿ, “ಈ ಬಾರಿ ನಿಜವಾಗಿಯೂ ರೈಲು ಬರುತ್ತದೆಯೋ ಅಥವಾ ಮತ್ತೊಮ್ಮೆ ಭರವಸೆಗಳ ಹಳಿಯಲ್ಲೇ ನಿಂತು ಬಿಡುತ್ತದೆಯೋ….. ಎಂಬ ಪ್ರಶ್ನೆಗಳು ಕಾಡತೊಡಗಿದ್ದು, ಕೊರಟಗೆರೆ ಮತ್ತು ಮಧುಗಿರಿ ಭಾಗದ ಅಭಿವೃದ್ಧಿಗೆ ಜೀವನಾಡಿಯಾಗಬಹುದಾದ ಈ ಯೋಜನೆಯನ್ನು ಸರ್ಕಾರಗಳು ಆದ್ಯತೆಯಾಗಿ ಪರಿಗಣಿಸಿ ಶೀಘ್ರ ಪೂರ್ಣಗೊಳಿಸಬೇಕು” ಎಂದು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ತುಮಕೂರು–ರಾಯದುರ್ಗ ರೈಲು ಮಾರ್ಗ ಯೋಜನೆಯು ಘೋಷಣೆಯಾಗಿ ಎರಡು ದಶಕಗಳು ಮತ್ತು ಕಾಮಗಾರಿ ಪ್ರಾರಂಭವಾಗಿ 14 ವರ್ಷಗಳು ಕಳೆದರೂ, ಮಧುಗಿರಿ, ಕೊರಟಗೆರೆ, ಪಾವಗಡ ಸೇರಿದಂತೆ ಹಿಂದುಳಿದ ಪ್ರದೇಶಗಳ ಜನರಿಗೆ ಇನ್ನೂ ಕನಸಾಗಿಯೇ ಉಳಿದಿದೆ. ಭೂಸ್ವಾಧೀನ, ಅನುದಾನದ ಕೊರತೆ, ಅಂತಾರಾಜ್ಯ ಸಮನ್ವಯದ ಕೊರತೆಯಂತಹ ಸಮಸ್ಯೆಗಳು ಈ ಯೋಜನೆಯನ್ನು ಮುಂದೂಡುತ್ತಿವೆ. ಇದು ಕೇವಲ ರೈಲು ಮಾರ್ಗವಲ್ಲ; ಆರ್ಥಿಕ ಅಭಿವೃದ್ಧಿ, ಉದ್ಯೋಗ, ಕೃಷಿ ಉತ್ಪನ್ನಗಳ ಸುಲಭ ಸಾಗಣೆ ಮತ್ತು ಪ್ರದೇಶದ ಜನರ ಜೀವನಮಟ್ಟವನ್ನು ಉನ್ನತೀಕರಿಸುವ ಪ್ರಮುಖ ಸಂಪರ್ಕ ಕೊಂಡಿಯಾಗಿದೆ.

ಈಗ ಸರ್ಕಾರಗಳು(ಕೇಂದ್ರ ಮತ್ತು ರಾಜ್ಯ) ಮತ್ತು ರೈಲ್ವೆ ಇಲಾಖೆಯು ರಾಜಕೀಯ ತಂತ್ರಕ್ಕಿಂತ ಪ್ರಾದೇಶಿಕ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಯೋಜನೆಯನ್ನು ವೇಗಗೊಳಿಸಲು ಹೆಚ್ಚುವರಿ ಅನುದಾನ, ಗುತ್ತಿಗೆದಾರರ ಮೇಲೆ ಕಟ್ಟುನಿಟ್ಟಾದ ಮೇಲ್ವಿಚಾರಣೆ ಮತ್ತು ಭೂಮಿ ಸಮಸ್ಯೆಗಳನ್ನು ತ್ವರಿತವಾಗಿ ನಿವಾರಿಸುವುದು ಅಗತ್ಯ.

ಇದನ್ನೂ ಓದಿದ್ದೀರಾ? ಗಣಿನಾಡಿನ ವಿಪತ್ತು ನಿರ್ವಹಿಸುವರೇ ದೂರದ ಮುನಿಯಪ್ಪ?

ಮಧುಗಿರಿ–ಕೊರಟಗೆರೆ ಜನರ ಕನಸು ನನಸಾಗುವ ದಿನ ದೂರವಿಲ್ಲ ಎಂಬ ಭರವಸೆಯೊಂದಿಗೆ, ಪ್ರದೇಶದ ಜನರ ಆಶಾಕಿರಣವಾಗಿರುವ ಈ ಯೋಜನೆಯು ಶೀಘ್ರದಲ್ಲಿ ಪೂರ್ಣಗೊಳ್ಳಬೇಕು. ರೈಲು ಸಂಚಾರ ಆರಂಭವಾಗುವುದಷ್ಟೇ ಅಲ್ಲ, ಅದು ಸುರಕ್ಷಿತ, ನಿಯಮಿತ ಮತ್ತು ಆರ್ಥಿಕವಾಗಿ ಲಾಭದಾಯಕವಾಗಿ ಸಂಚರಿಸುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ.

WhatsApp Image 2024 08 09 at 10.52.48 1578a566
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆನಡಾದಲ್ಲಿ ಬೆಳ್ಳಿ ಪದಕ ಗೆದ್ದ ವಿಜಯಪುರದ ಸಚಿನ್ ತುಕಾರಾಮ್ ಸಾಲೊಂಕೆ

ಕೆನಡಾದ ವಿನ್ನಿಪೆಗ್‌ನಲ್ಲಿ ನಡೆದ ಪ್ರತಿಷ್ಠಿತ 2026 ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ...

ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಲಿ: ಇಸಿಐ ವಿವರಣೆ ತಿರಸ್ಕರಿಸಿದ ಸಿಪಿಐಎಂ; ಸಿಇಸಿ ಪದಚ್ಯುತಿಗೆ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ...

ಮುದ್ದೇಬಿಹಾಳ | ದಾಸೋಹಿ ರೈತ ಉತ್ಪಾದಕ ಸಹಕಾರಿ ಸಂಘದ ಆರ್ಥಿಕ ಚಟುವಟಿಕೆ: ಗವಿಸಿದ್ದೇಶ್ವರ ಶ್ರೀಗಳಿಂದ ಚಾಲನೆ

ರೈತರೇ ಮಾಲೀಕರಾಗಿ, ರೈತರ ಆರ್ಥಿಕ ಸಬಲೀಕರಣವನ್ನೇ ಕೇಂದ್ರವಾಗಿಟ್ಟುಕೊಂಡು ಅಸ್ತಿತ್ವಕ್ಕೆ ಬಂದಿರುವ ದಾಸೋಹಿ...

ಮಾನವೀಯತೆಯೇ ಎಲ್ಲ ಧರ್ಮಗಳ ಸಾರ: ಸಿದ್ದರಾಮಯ್ಯ

ಪ್ರವಾದಿ ಮುಹಮ್ಮದ್‌(ಸ) ಅವರು ಯಾವುದೇ ಒಂದು ಧರ್ಮ ಅಥವಾ ಸಮುದಾಯಕ್ಕೆ ಮಾತ್ರ...