ಜನಗಣತಿಯಲ್ಲಿ ಪಾಲ್ಗೊಳ್ಳಿ | ಸ್ವಯಂ ಗಣತಿಗೆ ಏ.15 ಕೊನೆಯ ದಿನ

Date:

2027ರ ಜನಗಣತಿಯ ಮೊದಲ ಹಂತವಾದ ‘ಮನೆಗಳ ಪಟ್ಟಿ ಮತ್ತು ವಸತಿ ಗಣತಿ’ (ಹೌಸ್ ಲಿಸ್ಟಿಂಗ್ ಆಪರೇಷನ್ಸ್) ಪ್ರಕ್ರಿಯೆ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

- Advertisement -

ಒಟ್ಟು ಈ ಆರು ತಿಂಗಳ ಅವಧಿಯೊಳಗೆ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿಗದಿಪಡಿಸುವ ನಿರ್ದಿಷ್ಟ  30 ದಿನಗಳಲ್ಲಿ ಮನೆಗಳ ಪಟ್ಟಿ ಕಾರ್ಯವನ್ನು ಕೈಗೊಳ್ಳಲಿದೆ. 30 ದಿನಗಳ ಪ್ರಕ್ರಿಯೆ ಆರಂಭವಾಗುವ ಮುನ್ನವೇ 15 ದಿನಗಳ ಕಾಲ ‘ಸೆಲ್ಫ್ ಎನುಮರೇಷನ್’ಗೆ ಅವಕಾಶ ಮಾಡಿಕೊಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಇನ್ನು, 1948ರ ಜನಗಣತಿ ಕಾಯ್ದೆಯ ನಿಬಂಧನೆಗಳು ಮತ್ತು 1990ರ ಜನಗಣತಿ ನಿಯಮಗಳ ಅನುಸಾರ ಈ ಅಧಿಸೂಚನೆ ಹೊರಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೆಲವು ವಾರಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಜನಗಣತಿ ಪ್ರಕ್ರಿಯೆಗೆ 11,718 ಕೋಟಿ ರೂ. ಅನುದಾನ ನೀಡುವ ಪ್ರಸ್ತಾವಕ್ಕೆ ಒಪ್ಪಿಗೆ ಸೂಚನೆ ನೀಡಲಾಗಿತ್ತು.

2026ರ ಏಪ್ರಿಲ್ನಿಂದ ಸೆಪ್ಟೆಂಬರ್‌ವರೆಗೆ ನಡೆಯುವ ಮೊದಲ ಹಂತದ ಜನಗಣತಿ ಸಂದರ್ಭದಲ್ಲಿ ಮನೆಗಳ ಗಣತಿ ನಡೆಯುತ್ತದೆ.

2021ರಲ್ಲಿ ನಡೆಯಬೇಕಿದ್ದ ಜನಗಣತಿ ಕೋವಿಡ್-19 ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಈಗ, ಮೊದಲ ಹಂತದ ಜನಗಣತಿಗೆ ವೇಳಾಪಟ್ಟಿ ಬಿಡುಗಡೆಯಾಗಿದೆ.

ಎರಡು ಹಂತಗಳಲ್ಲಿ ಈ ಗಣತಿಯನ್ನು ನಡೆಸಲಾಗುತ್ತದೆ. ಮೊದಲ ಹಂತದಲ್ಲಿ ಮನೆಗಳ ಪಟ್ಟಿ ಮಾಡಲಾಗುತ್ತದೆ ಮತ್ತು ವಸತಿ ಸಮೀಕ್ಷೆ ನಡೆಸಲಾಗುತ್ತದೆ. ಎರಡನೇ ಹಂತದಲ್ಲಿ ಜನಸಂಖ್ಯೆಯನ್ನು ಎಣಿಕೆ ಮಾಡಲಾಗುತ್ತದೆ. ಆದರೆ, ಲಡಾಖ್ ಕೇಂದ್ರಾಡಳಿತ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್ಗಳ ಕೆಲವು ಭಾಗಗಳಿಗೆ ಇದು ಅನ್ವಯವಾಗುವುದಿಲ್ಲ.

ಇದನ್ನೂ ಓದಿ : ಕೇರಳ ವಿಧಾನಸಭೆ | ಶೈಲಜಾ ಟೀಚರ್ ಸೋಲಬೇಕೆಂದೇ ಕೊಟ್ಟಿರುವುದೇ ಪೆರವೂರು ಟಿಕೆಟ್?

ಆನ್‌ಲೈನ್‌ ಮೂಲಕ ಭಾಗಿಯಾಗುವುದು ಹೇಗೆ ?
1) ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ
2) ಮೊಬೈಲ್‌ ಸಂಖ್ಯೆಯಿಂದ ಒಟಿಪಿ ಪಡೆದು ಲಾಗ್‌ ಇನ್‌ ಆಗಿ  
3) ಸ್ವಯಂ ಗಣತಿಯ ಐಕಾನ್‌ ಆಯ್ಕೆ ಮಾಡಿಕೊಳ್ಳಿ


ಭರ್ತಿ ಮಾಡುವುದು ಹೇಗೆ ?
1) ಮೊದಲು ಮನೆಯ ಪೂರ್ಣ ವಿವರ ಭರ್ತಿ ಮಾಡಿ
2) Add member ಒತ್ತಿ ಕುಟುಂಬದ ಸದಸ್ಯರ ಹೆಸರು ಸೇರಿಸಿ, ಅವರ ವಿವರಗಳನ್ನು ದಾಖಲಿಸಿ.
3) ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಿ, ಅರ್ಜಿ ಸಲ್ಲಿಕೆ ಮಾಡಿ
4) ಸಬ್ಮಿಟ್‌ ಮಾಡಿದ ಬಳಿಕ ಸಿಗುವ ರೆಫರೆನ್ಸ್‌ ನಂಬರ್‌ ಇಟ್ಟುಕೊಳ್ಳಿ ಅಥವಾ ಬರೆದಿಟ್ಟುಕೊಳ್ಳಿ.
5) ಗಣತಿದಾರರು ನಿಮ್ಮ ಮನೆಗೆ ಬಂದಾಗ ಈ ನಂಬರ್‌ ನೀಡಿದರೆ, ನಿಮ್ಮ ಗಣತಿ ಪೂರ್ಣವಾದಂತೆ.


ಈ ಬಗ್ಗೆ ಜಾಗೃತರಾಗಿರಿ:
1) ಒಂದು ಕುಟುಂಬದಿಂದ ಒಬ್ಬ ವ್ಯಕ್ತಿ ಮಾತ್ರ ಭರ್ತಿ ಮಾಡಬೇಕು.
2) ಗಣತಿಯಲ್ಲಿ ನಮೂದಿಸುವ ವೇಳೆ ತಪ್ಪು ಮಾಹಿತಿ ನೀಡಬೇಡಿ.
3) ಗಣತಿದಾರರಿಗೆ ಸ್ವಯಂ ಗಣತಿ ವೇಳೆ ಪಡೆದ ರೆಫರೆನ್ಸ್‌ ನಂಬರ್‌ ಒದಗಿಸಿ.
4) ಏ.15ರೊಳಗೆ ಸ್ವಯಂ ಗಣತಿಯಲ್ಲಿ ಭಾಗವಹಿಸುವುದಕ್ಕೆ ಅವಕಾಶ
5) ಗಣತಿ ವೇಳೆ ಈ ವೆಬ್‌ಸೈಟ್‌ ಲಿಂಕ್‌ ಅನ್ನು ಮಾತ್ರ ಬಳಸಿ :  https://se.census.gov.in  

ಬೇಕಾಗುವ ಮಾಹಿತಿ

1) ಮನೆಯ ಸಂಪೂರ್ಣ ವಿಳಾಸ.
2) ಮನೆಯ ಪ್ರಕಾರ : ವಿಸ್ತೀರ್ಣ/ ಅಪಾರ್ಟ್‌ಮೆಂಟ್‌ /ಒಂಟಿಮನೆ
3) ಮನೆಯಲ್ಲಿ ವಾಸಿಸುವ ಕುಟುಂಬದ ಸದಸ್ಯರ ಹೆಸರು ಮತ್ತು ವಯಸ್ಸು.
4) ಮನೆಯ ಪ್ರತಿ ಸದಸ್ಯರ ಉದ್ಯೋಗ, ಶಿಕ್ಷಣದ ಮಾಹಿತಿ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ದೇಶದ ನೌಕರಶಾಹಿ ಆತ್ಮಸಾಕ್ಷಿಯ ಕರೆಯನ್ನು ಆಲಿಸಬೇಕು.’ ಮಾಜಿ ಚುನಾವಣಾ ಆಯುಕ್ತ ಅಶೋಕ್‌ ಲವಾಸ ಹೇಳಿದ ಆತ್ಮಸಾಕ್ಷಿಯ ಕತೆ

ಸಾರ್ವಜನಿಕ ಸೇವೆಯಲ್ಲಿರುವ ಪ್ರತಿಯೊಬ್ಬರೂ ತಮ್ಮ ಕರ್ತವ್ಯದ ಹಾದಿಯಲ್ಲಿ ನೈತಿಕ ಸಂದಿಗ್ಧತೆಯನ್ನು ಎದುರಿಸಿದಾಗ,...

ವರ್ಷಗಳಿಂದ ನೀರಿಲ್ಲದೆ ಸೊರಗಿದ ಗ್ರಾಮ; ಹತಾಶೆಯಿಂದ ಊರನ್ನೇ ಬಿಕರಿಗಿಟ್ಟ ನಿವಾಸಿಗಳು

ಒಂದೆಡೆ ನೀರಾವರಿ ಯೋಜನೆ, ಇನ್ನೊಂದೆಡೆ ನೀರಿಗಾಗಿ ಪರದಾಡುವ ರೈತರು. ಯೋಜನೆ ಆರಂಭವಾಗಿ...

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ...

ಬೆಂಗಳೂರು | ಆನೆ ದಾಳಿಗೆ ವಾಕಿಂಗ್ ತೆರಳಿದ್ದ ವ್ಯಕ್ತಿ ಬಲಿ

ಇಂದು ಮುಂಜಾನೆ ವಾಕಿಂಗ್ ತೆರಳಿದ್ದ ವ್ಯಕ್ತಿಯೊಬ್ಬರು ಆನೆ ದಾಳಿಗೆ ಮೃತಪಟ್ಟಿರುವ ಘಟನೆ...