“ಮುಂದಿನ 5 ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ 75,000 ಹೊಸ ಸೀಟುಗಳನ್ನು ಪರಿಚಯಿಸಲು ಸರ್ಕಾರ ಯೋಜಿಸಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
78ನೇ ಸ್ವಾತಂತ್ರ್ಯ ದಿನದಂದು ದೇಶವನ್ನುದ್ದೇಶಿಸಿ ಮಾತನಾಡಿದ ಅವರು, “ಪ್ರತಿ ವರ್ಷ, ನಮ್ಮ ದೇಶದ ಅನೇಕ ಮಕ್ಕಳು ವೈದ್ಯಕೀಯ ಶಿಕ್ಷಣವನ್ನು ಪಡೆಯಲು ವಿದೇಶಕ್ಕೆ ಹೋಗುತ್ತಾರೆ. ಇದನ್ನು ಪರಿಹರಿಸಲು ಮುಂದಿನ ಐದು ವರ್ಷಗಳಲ್ಲಿ 75,000 ಹೊಸ ವೈದ್ಯಕೀಯ ಸೀಟುಗಳನ್ನು ಪರಿಚಯಿಸುತ್ತಿದ್ದೇವೆ. ಭಾರತಕ್ಕೆ ಭೇಟಿ ನೀಡಿ ಎಂದರೆ ‘ಆರೋಗ್ಯಕರ ಭಾರತ’ ಎಂದರ್ಥ” ಎಂದರು.
“ವಿಕ್ಷಿತ್ ಭಾರತ್ 2047 ಕೇವಲ ಭಾಷಣಕ್ಕೆ ಇರುವ ಒಂದು ಪದಗುಚ್ಛವಲ್ಲ. ಅದಕ್ಕಿಂತ ಹೆಚ್ಚಾಗಿದೆ. ಇದು ಗಮನಾರ್ಹ ಬದ್ಧತೆ ಮತ್ತು ಪ್ರಯತ್ನವನ್ನು ಪ್ರತಿನಿಧಿಸುತ್ತದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಮಯ ನಿಗದಿ, ದೆಹಲಿಗೆ ತೆರಳುವೆ: ಸಿದ್ದರಾಮಯ್ಯ
“40 ಕೋಟಿ ಜನರು ಸ್ವಾತಂತ್ರ್ಯ ಪಡೆಯಲು ಗುಲಾಮಗಿರಿಯ ಸಂಕೋಲೆಗಳನ್ನು ಮುರಿಯಲು ಸಾಧ್ಯವಾದರೆ, 140 ಕೋಟಿ ಜನರ ಸಂಕಲ್ಪದಿಂದ ಏನನ್ನು ಸಾಧಿಸಬಹುದು” ಎಂದರು.
ಇತ್ತೀಚಿನ ನೈಸರ್ಗಿಕ ವಿಕೋಪಗಳ ಬಗ್ಗೆ ಮಾತನಾಡಿದ ಅವರು, “ಈ ನೈಸರ್ಗಿಕ ವಿಕೋಪಗಳಲ್ಲಿ, ಜನರು ತಮ್ಮ ಕುಟುಂಬ ಮತ್ತು ಜೀವನವನ್ನು ಕಳೆದುಕೊಂಡಿದ್ದಾರೆ. ಇಂದು, ನಾನು ಎಲ್ಲಾ ಸಂತ್ರಸ್ತರಿಗೆ ನನ್ನ ಆಳವಾದ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ. ಈ ಕಷ್ಟದ ಸಮಯದಲ್ಲಿ ನಾವು ಅವರೊಂದಿಗೆ ನಿಲ್ಲುತ್ತೇವೆ ಎಂದು ಅವರಿಗೆ ಭರವಸೆ ನೀಡಲು ಬಯಸುತ್ತೇನೆ,” ಎಂದು ತಿಳಿಸಿದರು.